
ಅಮಾವಾಸ್ಯೆ ( Amavasya ) ಶುಭ ಅಲ್ಲ, ಕೆಲ ಕೆಲಸಗಳನ್ನು ಅಂದು ಮಾಡಬಾರದು, ಒಂದಿಷ್ಟು ವಿಷಯಗಳನ್ನು ಪಾಲಿಸಬೇಕು ಎಂದು ಹೇಳಲಾಗುವುದು. ಹಾಗಾದರೆ ಅಮಾವಾಸ್ಯೆ ದಿನ ಏನು ಕೊಡಬಾರದು ಎಂದು ಗೋಪಾಲಕೃಷ್ಣ ಗುರೂಜಿ ಅವರು ಹೇಳಿದ್ದಾರೆ. ಯಾರಾದರೂ ಏನಾದರೂ ಕೇಳಿದರೆ, ಯಾವ ದಿನ, ಯಾವ ಸಂದರ್ಭ ಅಂತ ನೋಡದೆ ಕೊಡುತ್ತೇವೆ. ಕೇಳುವವರು ಕೂಡ ದಿನವನ್ನು ನೋಡದೆ ಕೇಳುತ್ತಾರೆ.
ಅಮಾವಾಸ್ಯೆ ದಿನ ಯಾರಿಗೂ ಹಣ ಕೊಡಬೇಡಿ. ಆ ಹಣ ಮತ್ತೆ ಮರಳಿ ಬರೋದಿಲ್ಲ. ಕೈ ಎತ್ತಿ ನೀವು ಕೊಟ್ಟ ಹಣ ನಿಮಗೆ ಮತ್ತೆ ಸಿಗೋದಿಲ್ಲ.
ಉಪ್ಪು ಎನ್ನೋದು ಒಂದು ರೀತಿಯ ಋಣ, ಉಪ್ಪು ಕೊಟ್ಟರೆ ಋಣ ವೃದ್ಧಿ ಆಗುವುದು, ಋಣ ಮುಕ್ತಿ ಸಿಗೋದಿಲ್ಲ
ಬಡವರು ಅಂತ ಬಟ್ಟೆ ಕೊಡಬೇಡಿ. ಕೆಲವೊಮ್ಮೆ ನಿಮ್ಮ ಬಟ್ಟೆಗಳು, ಪಾದರಕ್ಷೆಗಳನ್ನು ಕದ್ದುಕೊಂಡು ಹೋಗುವುದುಂಟು. ಇದು ನಿಮ್ಮ ಕಷ್ಟದ ದಿನಗಳ ಆರಂಭ ಅಂತ ಸೂಚನೆ ಕೊಡುವುದು
ಅಮಾವಾಸ್ಯೆ ದಿನ ನೀವು ಬೈಕ್, ಕಾರ್, ಸೈಕಲ್ ಕೊಟ್ಟರೆ ಅಪಘಾತ ಆಗುವುದು.
ಕುಂಕುಮ, ಅರಿಷಿಣ ಕುಟುಂಬ ಕೊಟ್ಟರೆ ನಿಮ್ಮ ಸೌಭಾಗ್ಯ ಹೊರಟು ಹೋಗುವುದು.
“ಪ್ರತಿ ತಿಂಗಳು ನೀವು ಅಮಾವಾಸ್ಯೆ ದಿನ ಲಕ್ಷ್ಮೀ ಪೂಜೆ ಮಾಡಿದರೆ ಶ್ರೀಮಂತಿಕೆ ಬರುವುದು. ಹಿಂದಿನ ಕಾಲದಲ್ಲಿ ಅಮಾವಾಸ್ಯೆ ದಿನ ಹುಟ್ಟಿದವರು ದೊಡ್ಡ ರಾಜ ಆಗ್ತಾನೆ ಅಥವಾ ದೊಡ್ಡ ಕಳ್ಳ ಆಗ್ತಾನೆ ಅಂತ ಜನರು ಹೇಳುತ್ತಿದ್ದರು. ಇದು ಶಾಸ್ತ್ರದಲ್ಲಿ ಇಲ್ಲ. ಅಮಾವಾಸ್ಯೆಯಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿ ಇರುತ್ತದೆ. ಅಮಾವಾಸ್ಯೆಯಲ್ಲಿ ನಿಮ್ಮ ಮನೆಯಲ್ಲಿರುವ ಗಾಡಿಗಳನ್ನು ವಾಶ್ ಮಾಡಿ. ಇಡೀ ದೇವರ ಮನೆಯನ್ನು ಸ್ವಚ್ಛ ಮಾಡಿ. ಅಮಾವಾಸ್ಯೆ ದಿನ ಒಂದು ಬಾಳೆಕಾಯಿ, ಅಕ್ಕಿ ದಾನ ಮಾಡಿದರೆ ಒಳ್ಳೆಯದಾಗುತ್ತದೆ” ಎಂದು ಹರೀಶ್ ಶಾಸ್ತ್ರೀ ಅವರು ಹೇಳಿದ್ದಾರೆ.
“ಸೂರ್ಯ ಹುಟ್ಟಿದ ನಂತರ ಏಳಬಾರದು. ಅಮಾವಾಸ್ಯೆ ದಿನ ತಲೆ ಸ್ನಾನ ಮಾಡಿ, ಆದರೆ ಎಣ್ಣೆ ಹಚ್ಚಿಕೊಂಡು ತಲೆ ಸ್ನಾನ ಮಾಡಿ. ಈ ದಿನ ಹೊಸ ಬಟ್ಟೆ ಧರಿಸಬೇಡಿ, ಧರಿಸಿದ್ರೆ ದರಿದ್ರ ಬರುವುದು. ಹೊಸ ಬಟ್ಟೆ ಖರೀದಿ ಕೂಡ ಮಾಡಬೇಡಿ. ರಾತ್ರಿ ಊಟ ಮಾಡಬೇಡಿ. ಅಮಾವಾಸ್ಯೆ ದಿನ ಉಗುರು ಕಟ್ ಮಾಡುವುದು, ಗಡ್ಡ ತೆಗೆಯೋದು, ಕೂದಲು ಕಟ್ ಮಾಡೋದು ಮಾಡಬೇಡಿ” ಎಂದು ಹರೀಶ್ ಶಾಸ್ತ್ರೀ ಅವರು ಹೇಳಿದ್ದಾರೆ.
ಹುಣ್ಣಿಮೆ ಕಳೆದು ಹದಿನೈದು ದಿನಕ್ಕೆ ಬರುವ ದಿನವನ್ನು ಅಮಾವಾಸ್ಯೆ ಎಂದು ಹೇಳಲಾಗುವುದು. ಅಂದು ಚಂದ್ರನನ್ನು ಸೂರ್ಯ ಸುತ್ತುವರಿಯುತ್ತಾನೆ. ಸೂರ್ಯ ಹಾಗೂ ಚಂದ್ರ ಒಟ್ಟಿಗೆ ಬರುವ ದಿನವನ್ನು ಅಮಾವಾಸ್ಯೆ ಎನ್ನಲಾಗುವುದು.