ಇಂದು ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಗಣೇಶ ಪೂಜೆಗೆ ಇರಿಸಲಾದ ಹಣ್ಣು, ಲಡ್ಡು, ಕೊರಳಲ್ಲಿನ ಹಾರ, ತೆಂಗಿನ ಕಾಯಿ ಸೇರಿದಂತೆ ಅನೇಕ ವಸ್ತುಗಳು ಹರಾಜು ಮಾಡಲಾಯಿತು. ವಿಶೇಷ ಎಂದರೆ ಗಣೇಶ ಎದುರು ಪೂಜೆಗೆ ಇಟ್ಟಿದ್ದ ಆಂಧ್ರಪ್ರದೇಶದಲ್ಲಿ ತಯಾರಾದ ಲಡ್ಡು ಒಂದು ಭಾರಿ ಮೊತ್ತಕ್ಕೆ ಸೇಲ್ ಆಗಿದೆ. 1.50 ಲಕ್ಷಕ್ಕೆ ಭಕ್ತನೊಬ್ಬ ಗಣೇಶನ ಲಡ್ಡು ಖರೀದಿ ಮಾಡಿದ್ದಾನೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ 21) : ಗಣೇಶ ಚತುರ್ಥಿಯಂದು ಸಾರ್ವಜನಿಕವಾಗಿ ಗಣೇಶನನ್ನ ಕೂರಿಸೋದು, 5-7-9-11-21 ದಿನಗಳ ಕಾಲ ಆರಾಧನೆ ಮಾಡೋದು ವಾಡಿಕೆ. ದೇಶ ಹಲವಾರು ರಾಜ್ಯಗಳಲ್ಲಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ. ಹಾಗೆಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಳಿಕ ಗಣೇಶನಿಗೆ ಇಷ್ಟವಾದ ಲಡ್ಡು, ಹಣ್ಣುಗಳನ್ನ ಇರಿಸಲಾಗುತ್ತೆ. ಗಣೇಶ ವಿಸರ್ಜನೆಯ ದಿನ ಲಡ್ಡು, ಹಣ್ಣುಗಳನ್ನ ಭಕ್ತರಿಗೆ ಹರಾಜು ಮಾಡಿ ನೀಡಲಾಗುತ್ತೆ. ಹೀಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲ್ವತವಾಡದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನಿಗೆ ನೈವೇದ್ಯವಾಗಿ ಇಡಲಾಗಿದ್ದ ಲಡ್ಡು ಹರಾಜಿನಲ್ಲಿ ಲಕ್ಷಕ್ಕು ಅಧಿಕ ದರಕ್ಕೆ ಸೇಲ್ ಆಗಿದೆ.
1.5 ಲಕ್ಷ ನೀಡಿ ಗಣೇಶನ ಲಡ್ಡು ಖರೀದಿಸಿದ ಭಕ್ತ:
ಹೌದು, ಆಂಧ್ರ ಪ್ರದೇಶದಲ್ಲಿ ತಯಾರಾದ ವಿಶೇಷ ಗಣೇಶನ ಲಡ್ಡು ಭಾರಿ ಮೊತ್ತಕ್ಕೆ ಹರಾಜಾಗಿದೆ.1.5 ಲಕ್ಷಕ್ಕೆ ಗಣೇಶನ ಲಡ್ಡುವನ್ನ ಭಕ್ತನೊಬ್ಬ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾನೆ. ನಾಲ್ವತವಾಡದ ಬಳಿಯ ಬಂಗಾರಗುಂಡ-ಕಪನೂರ ಗ್ರಾಮದ ಹೊರವಲಯದಲ್ಲಿ ಆಂಧ್ರ ಪ್ರದೇಶದ ವಲಸೆ ರೈತರು 14 ಅಡಿಗಳ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮೂರ್ತಿ ಎದುರು ಗಣೇಶನ ಇಷ್ಟ ತಿಂಡಿ-ತಿನಿಸುಗಳನ್ನ ಇಟ್ಟು ಭರ್ಜರಿ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಚಿನ್ನದ ಗದೆ ಉಂಗುರ, ಸರ... ಲಾಲ್ಬಗುಚಾ ರಾಜ ಗಣಪನಿಗೆ ದುಬಾರಿ ಗಿಫ್ಟ್ ನೀಡಿದ ಭಕ್ತರು
ಇಂದು ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಗಣೇಶ ಪೂಜೆ(Ganesh chaturthi pooja)ಗೆ ಇರಿಸಲಾದ ಹಣ್ಣು, ಲಡ್ಡು, ಕೊರಳಲ್ಲಿನ ಹಾರ, ತೆಂಗಿನ ಕಾಯಿ ಸೇರಿದಂತೆ ಅನೇಕ ವಸ್ತುಗಳು ಹರಾಜು ಮಾಡಲಾಯಿತು. ವಿಶೇಷ ಎಂದರೆ ಗಣೇಶ ಎದುರು ಪೂಜೆಗೆ ಇಟ್ಟಿದ್ದ ಆಂಧ್ರಪ್ರದೇಶದಲ್ಲಿ ತಯಾರಾದ ಲಡ್ಡು ಒಂದು ಭಾರಿ ಮೊತ್ತಕ್ಕೆ ಸೇಲ್ ಆಗಿದೆ. 1.50 ಲಕ್ಷಕ್ಕೆ ಭಕ್ತನೊಬ್ಬ ಗಣೇಶನ ಲಡ್ಡು ಖರೀದಿ ಮಾಡಿದ್ದಾನೆ.
ಗಣೇಶನ ಲಡ್ಡು ಖರೀದಿಸಿದ ಆಂಧ್ರದ ರೈತ!
ಆಂಧ್ರ ಪ್ರದೇಶ ಮೂಲದ ರೈತ ನಿರಂಜನರಾವ್ ರೆಡ್ಡಿ 1.50 ಲಕ್ಷಕ್ಕೆ ಗಣೇಶನ ಲಡ್ಡು ಖರೀದಿ ಮಾಡಿ ಗಮನ ಸೆಳೆದಿದ್ದಾರೆ. ಒಟ್ಟು 10 ಕೆ.ಜಿಯ ಲಡ್ಡು ಇದಾಗಿದ್ದು, ಇದನ್ನ ಲಕ್ಷಕ್ಕು ಅಧಿಕ ಹಣ ನೀಡಿ ಖರೀದಿಸಿ ಭಕ್ತಿ ಮೇರದಿದ್ದಾನೆ.
ಉಳಿದ ವಸ್ತುಗಳು ಭಾರಿ ಮೊತ್ತಕ್ಕೆ ಸೇಲ್!
ಇನ್ನು ಲಡ್ಡು ಅಷ್ಟೇ ಅಲ್ಲ, ಗಣೇಶನಿಗೆ ಪ್ರಸಾದವಾಗಿಟ್ಟ ಹಣ್ಣು, ಹಾರ, ಸಾಮಗ್ರಿಗಳು ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಸೇಲ್ ಆಗಿವೆ. ಇನ್ನೊಂದು ಲಡ್ಡುವನ್ನು ಸದಾಶಿವ ರೆಡ್ಡಿ ಎಂಬಾತ ಆಂಧ್ರಮ ಮೂಲದ ರೈತ 25 ಸಾವಿರಕ್ಕೆ ಖರೀದಿ ಮಾಡಿದ್ದಾನೆ.. ಇನ್ನೂ ಗಣಪತಿಯ ಕೊರಳಲ್ಲಿ ಹಾಕಲಾಗಿದ್ದ 100 ರೂಪಾಯಿ ಮುಖ ಬೆಲೆಯ 15 ನೋಟುಗಳಿದ್ದ ಗಣೇಶನ ಹಾರವನ್ನು ಸಹ 21 ಸಾವಿರಕ್ಕೆ ಆಂಧ್ರ ಮೂಲದ ಗಂಟ್ ಗೌತಮಿ ಎನ್ನುವ ಮಹಿಳೆ ಹರಾಜಿನಲ್ಲಿ ಖರೀದಿದ್ದಾಳೆ.
ಅಂಬಾನಿ ಪಾರ್ಟಿ: ರಶ್ಮಿಕಾ ಮಂದಣ್ಣರನ್ನು ಇಗ್ನೋರ್ ಮಾಡಿದ ಶ್ರದ್ಧಾ ಕಪೂರ್, ದೀಪಿಕಾ!
ಹರಾಜಿನ ಬಳಿಕ ಭವ್ಯ ಮೆರವಣಿಗೆ!
ಈ ಹರಾಜಿನಲ್ಲಿ ಆಂಧ್ರ ಪ್ರದೇಶದ ರೈತರೆ ಪಾಲ್ಗೊಳ್ಳುವುದು ವಿಶೇಷ. ಮುದ್ದೇಬಿಹಾಳ ತಾ. ನಾಲ್ವತವಾಡಕ್ಕೆ ಗಡಿಯ ಆಂಧ್ರ ಮೂಲದ ರೈತರು ಕೆಲಸಕ್ಕೆ ಬರ್ತಾರೆ. ಈ ರೈತರು ಪ್ರತಿ ವರ್ಷ ಗಣೇಶನನ್ನ ಕೂರಿಸಿ ಹೀಗೆ ಹರಾಜು ಕೂಗೋದು ವಾಡಿಕೆಯಾಗಿದೆ. ಹರಾಜಿನ ಬಳಿಕ ಗಣೇಶ ವಿಸರ್ಜನೆಗು ಭವ್ಯ ಮೆರವಣಿಗೆ ನಡೆಯಿತು. ಬಂಗಾರಗುಂಡ-ಕಪನೂರ ಗ್ರಾಮದಿಂದ ಗಣಪತಿ ಮೂರ್ತಿಯನ್ನು ಆಂಧ್ರಪ್ರದೇಶದ ರೈತರು ಅದ್ದೂರಿಯಾಗಿ ಮೆರವಣಿಗೆ ಮಾಡಿಕೊಂಡು, ನಾಲತವಾಡ ಪಟ್ಟಣದಿಂದ ನಾರಾಯಣಪೂರ ಎಡದಂಡೆ ಕಾಲುವೆಯಲ್ಲಿ ವಿಸರ್ಜನೆ ಮಾಡಿದರು. ಗಜಾನನ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿದ್ದವು.