ಅಚ್ಚರಿಯಾದ್ರೂ ಸತ್ಯ, ಈ ರಾಶಿಯವರು ಹುಟ್ಟುತ್ತಲೇ ಪ್ರಬುದ್ಧರಾಗಿರುತ್ತಾರೆ!

By Suvarna News  |  First Published Sep 21, 2023, 3:01 PM IST

ನಾವು ಚೆನ್ನಾಗಿರಬೇಕೆಂದರೆ, ಭಾವನಾತ್ಮಕವಾಗಿ ಸೂಕ್ಷ್ಮತೆ ಹೊಂದಿರುವ ಜತೆಗೆ, ಕಷ್ಟದ ಸಮಯದಲ್ಲೂ ಶಾಂತಿ, ಸ್ಥಿರತೆ ಕಾಪಾಡಿಕೊಳ್ಳುವುದು, ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುವುದು, ಪ್ರೀತಿಪಾತ್ರರನ್ನು ಗೌರವಿಸುವ ಜತೆಗೆ ತಮ್ಮ ಮಾನಸಿಕ ಸ್ವಾಸ್ಥ್ಯವನ್ನೂ ಕಾಯ್ದುಕೊಳ್ಳುವುದು ಅಗತ್ಯ. ಇವೆಲ್ಲವೂ ಸೇರಿದಾಗ ಅದು ಪ್ರಬುದ್ಧತೆ ಎನಿಸಿಕೊಳ್ಳುತ್ತದೆ. ಕೆಲ ರಾಶಿಗಳ ಜನರಲ್ಲಿ ಈ ಗುಣ ಜನ್ಮದತ್ತವಾಗಿರುತ್ತದೆ. 
 


ಭಾವನಾತ್ಮಕವಾಗಿ ಪ್ರಬುದ್ಧರಾಗಿರುವ ಜನ ತಾವೂ ಸುಖಿಯಾಗಿರುತ್ತಾರೆ, ಇತರರನ್ನೂ ಸುಖಿಯಾಗಿಡಬಲ್ಲರು. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಭಾವನಾತ್ಮಕ ಪ್ರಬುದ್ಧತೆ ಎನ್ನುವುದು ಎಲ್ಲರಲ್ಲೂ ಅಪೇಕ್ಷಣೀಯ ಗುಣವಾಗಿದೆ. ಭಾವನಾತ್ಮಕ ಪ್ರಬುದ್ಧತೆ ಇದ್ದಾಗಲೇ ಜೀವನವನ್ನು ಆಸ್ವಾದಿಸಲು ಸಾಧ್ಯ, ಸಂಬಂಧಗಳನ್ನು ಚೆನ್ನಾಗಿಟ್ಟುಕೊಳ್ಳಲು ಸಾಧ್ಯ ಹಾಗೂ ಕಷ್ಟದ ಸಮಯವನ್ನು ಹೆಚ್ಚು ಯಾತನೆಯಿಲ್ಲದೆ ಗೆಲ್ಲಲು ಸಾಧ್ಯ. ಹೀಗಾಗಿ, ಭಾವನಾತ್ಮಕವಾಗಿ ಮೆಚ್ಯುರಿಟಿ ಹೊಂದಿರುವುದು ಸಿಕ್ಕಾಪಟ್ಟೆ ಅಗತ್ಯ. ಸಂಬಂಧಗಳಲ್ಲಂತೂ ಪ್ರಬುದ್ಧತೆಯಿಂದ ವರ್ತಿಸುವುದು ಇನ್ನೂ ಅಗತ್ಯ. ಆದರೆ, ಈ ಗುಣ ಎಲ್ಲರಲ್ಲೂ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳಲ್ಲಿ ಈ ಗುಣ ಕಂಡುಬರುತ್ತದೆ. ಪ್ರತಿಯೊಂದು ರಾಶಿಯೂ ತಮ್ಮದೇ ಸಕಾರಾತ್ಮಕ ಗುಣ, ನಕಾರಾತ್ಮಕ ಗುಣ, ಶಕ್ತಿ-ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಹೊಂದಿರುತ್ತದೆ. ಕೆಲವು ಜನ ಅತಿ ತೀವ್ರತೆ, ಏರಿಳಿತದ ಮನಸ್ಥಿತಿ ಹೊಂದಿರುತ್ತಾರೆ. ಅವರಲ್ಲಿ ಭಾವನಾತ್ಮಕ ಪ್ರಬುದ್ಧತೆಯ ಕೊರತೆ ಕಂಡುಬರುತ್ತದೆ. ಆದರೆ, ಕೆಲವು ರಾಶಿಗಳ ಜನ ಸಂಬಂಧಗಳಲ್ಲಿ ಪ್ರಬುದ್ಧತೆ ತೋರುತ್ತಾರೆ. 

•    ವೃಷಭ (Taurus)
ಬದ್ಧತೆ (Commitment) ಮತ್ತು ತಾಳ್ಮೆಗೆ (Patience) ಹೆಸರಾಗಿರುವ ವೃಷಭ ರಾಶಿಯ ಜನ ಸಂಬಂಧಗಳಲ್ಲಿ ದೃಢತೆ ಪ್ರದರ್ಶಿಸುತ್ತಾರೆ. ಜೀವನದ ಸುಖ, ಕಂಫರ್ಟ್ ಬಯಸುತ್ತ, ನಿತ್ಯಕ್ರಮಗಳಲ್ಲೇ ಮುಳುಗಿರುತ್ತಾರಾದರೂ ಹೃದಯದ (Heart) ವಿಚಾರ ಬಂದಾಗ ಸಾಕಷ್ಟು ಪ್ರಬುದ್ಧತೆಯನ್ನು (Maturity) ಪ್ರದರ್ಶಿಸುತ್ತಾರೆ. ವೃಷಭದ ಜನ ಯಾವುದಾದರೊಂದು ವಿಷಯದ ಕಡೆಗೆ ಗಡಿಬಿಡಿಯಿಂದ ನುಗ್ಗುವುದಿಲ್ಲ. ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಸಂಗಾತಿಯನ್ನು (Partner) ಅರ್ಥ ಮಾಡಿಕೊಳ್ಳುತ್ತಾರೆ. ಸ್ಥಿರತೆ ಬಯಸುವ ಇವರು ಸಂಗಾತಿಗೆ ನೋವು ಉಂಟುಮಾಡುವ ಶಬ್ದಗಳನ್ನಾಡುವುದು ಕಡಿಮೆ. 

Tap to resize

Latest Videos

ಮದುವೆ ವಯಸ್ಸಾದ್ರು ಹೆಣ್ಣು ಸಿಗ್ತಿಲ್ವಾ? ಹಾಗಾದ್ರೆ ನಿಮಗೆ ಮಂಗಳ ದೋಷ ಇರಬಹುದು, ಈ ರೀತಿ ಮಾಡಿ

•    ಮಿಥುನ (Gemini)
ಅಂದಾಜಿಗೇ ಸಿಗದ, ಬದಲಾವಣೆಯಾಗುತ್ತಲೇ (Change) ಇರುವ ಮಿಥುನ ರಾಶಿಯ ಜನರಲ್ಲಿ ಭಾವನಾತ್ಮಕ (Emotional) ಪ್ರಬುದ್ಧತೆ ಇರುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ, ಇವರ ಭಾವನೆಗಳು (Feelings) ಸರಿಯಾದ ದಿಕ್ಕಿನಲ್ಲಿ ಪ್ರವಹಿಸಿದರೆ ಸಂಬಂಧದಲ್ಲಿ ಪ್ರಬುದ್ಧತೆಯಿಂದ ವರ್ತಿಸುತ್ತಾರೆ. ಅತ್ಯಂತ ಚುರುಕಾಗಿ ವಿಷಯ ಗ್ರಹಿಸುವ ಇವರಲ್ಲಿ ಹೊಸತನ್ನು ಅಡಾಪ್ಟ್ ಮಾಡಿಕೊಳ್ಳುವ ಶಕ್ತಿ ಅಗಾಧವಾಗಿರುತ್ತದೆ. ವಿಭಿನ್ನ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಂಡು, ಯಾವುದೋ ಒಂದೇ ನಿಲುವಿಗೆ ಗಂಟು ಬೀಳದೆ ಎಲ್ಲ ರೀತಿಯಲ್ಲೂ ಯೋಚಿಸಿ, ಎಲ್ಲರಿಗೂ ಸಂಬಂಧಿಸುವಂತೆ ಸಾಮಾನ್ಯ ಪರಿಹಾರಗಳನ್ನು ಗುರುತಿಸುವುದು ಇವರ ಸಾಮರ್ಥ್ಯ. ಹಾಗೆಯೇ, ಇವರಲ್ಲಿ ಸಂವಹನ (Communication) ಸಮರ್ಥವಾಗಿರುತ್ತದೆ. ಮಾತುಕತೆಯೆಂದರೆ ಇವರಿಗೆ ಭಾರೀ ಇಷ್ಟ. ಮಾತನಾಡುವುದರಿಂದ ತಪ್ಪು ಗ್ರಹಿಕೆಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಈ ರಾಶಿಯ ಜನರಿಗೆ ಆಳವಾದ, ಅರ್ಥಪೂರ್ಣ ಮಾತುಕತೆಯಲ್ಲಿ ಭಾಗಿಯಾಗುವ ಸಂಗಾತಿಯ ಅಗತ್ಯವಿರುತ್ತದೆ.

•    ಮಕರ (Capricorn)
ಶ್ರಮ ಪಡುವ ಹಾಗೂ ವಿಶಿಷ್ಟ ಚಿಂತನೆಯುಳ್ಳ ಮಕರ ರಾಶಿಯ ಜನರನ್ನು ಓಲ್ಡ್ ಸೋಲ್ (Old Soul) ಜನ ಎನ್ನಲಾಗುತ್ತದೆ. ಅಂದರೆ, ವಯಸ್ಸಿಗೂ ಮೀರಿದ ಪ್ರಬುದ್ಧತೆ ಇವರಲ್ಲಿರುತ್ತದೆ. ಶಿಸ್ತು (Discipline), ಮಹತ್ವಾಕಾಂಕ್ಷೆ (Ambition) ಹಾಗೂ ಜೀವನದ ಕುರಿಯಾದ ವಾಸ್ತವಿಕ ನಿಲುವಿನಿಂದಾಗಿ ಸಂಬಂಧಗಳಲ್ಲಿ ಸಾಕಷ್ಟು ಭಾವನಾತ್ಮಕ ಪ್ರಬುದ್ಧತೆ ಪ್ರದರ್ಶಿಸುತ್ತಾರೆ. ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಸುಮ್ಮನೆ ಆಕರ್ಷಣೆಗಳಲ್ಲಿ ಮುಳುಗುವುದಿಲ್ಲ. ಆಳವಾದ, ಬದ್ಧತೆಯುಳ್ಳ, ದೀರ್ಘಾವಧಿ ಸ್ಥಿರತೆಯ ಸಂಬಂಧಕ್ಕಾಗಿ ಹಾತೊರೆಯುತ್ತಾರೆ. ಸಂಬಂಧ ಚೆನ್ನಾಗಿರಲು ಪ್ರಯತ್ನಿಸುತ್ತಾರೆ. ಅತ್ಯಂತ ಕಷ್ಟದ ಸಮಯದಲ್ಲಿ ಸಂಗಾತಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. 

ಈ ಚಿಹ್ನೆ ಇದ್ದರೆ ಒಲಿಯುವುದು ರಾಜಯೋಗ,ನಿಮಗಿದೆಯೇ ಈ ಯೋಗ..?

•    ಮೇಷ (Aries)
ದುಡುಕು (Impulse) ಪ್ರವೃತ್ತಿಯ, ಬೆಂಕಿಯಂತೆ ಕಿಡಿಕಾರುವ, ಹಿಂದೆ ಮುಂದೆ ಯೋಚಿಸದೆ ಮುನ್ನುಗ್ಗುವ ಮೇಷ ರಾಶಿಯ ಜನರಲ್ಲೂ ಭಾವನಾತ್ಮಕ ಪ್ರಬುದ್ಧತೆ ಇರುತ್ತದೆ ಎಂದರೆ ಅಚ್ಚರಿಯಾಗಬಹುದು. ಸರಿಯಾದ ದಿಕ್ಕಿನಲ್ಲಿ ತಮ್ಮ ಉತ್ಸಾಹವನ್ನು ಹರಿಸಿದರೆ ಮೇಷ ರಾಶಿಯ ಜನ ಸಂಬಂಧಗಳಲ್ಲಿ ಆಳವಾದ ಭಾವನಾತ್ಮಕ ಪ್ರಬುದ್ಧತೆ ಪ್ರದರ್ಶಿಸಬಲ್ಲರು. ಇವರು ಸಂಬಂಧಕ್ಕೆ (Relationship) ಆದ್ಯತೆ ನೀಡುತ್ತಾರೆ. ಆರೈಕೆ ಮಾಡುವ ಗುಣ ಹೊಂದಿರುತ್ತಾರೆ. ದುಡುಕು ಪ್ರವೃತ್ತಿಯಿಂದ ಜಗಳಕ್ಕಿಳಿದರೂ, ಮುಂದೆ ದ್ವೇಷಿಸುವ ಪ್ರವೃತ್ತಿ ತೋರುವುದಿಲ್ಲ. ತಮ್ಮ ಭಾವನೆ, ಹತಾಶೆಗಳನ್ನು ಎದುರಿಗೇ ಪ್ರದರ್ಶಿಸುವ ಮೂಲಕ ತೆರೆದ ಪುಸ್ತಕದಂತಿರುತ್ತಾರೆ. 
 

click me!