ಕೆಲವರು ಮನಸ್ಸಿದ್ದರೂ ಪ್ರೇಮ ವ್ಯಕ್ತಪಡಿಸೋದಿಲ್ಲ. ಆದರೆ ಈ ಐದು ರಾಶಿಯವರು ಮಾತ್ರ ಎಂಥಾ ಮನಸ್ಥಿತಿಯವರನ್ನೂ ಲಬಕ್ಕನೆ ಲವ್ವಲ್ಲಿ ಬೀಳೋ ಹಾಗೆ ಮಾಡ್ತಾರೆ. ಹಾಗಂತ ಇವ್ರನ್ನು ಪೂರ್ತಿ ನಂಬೋದೂ ಕಷ್ಟ. ಯಾಕೆ ಗೊತ್ತಾ?
ಪ್ರೇಮ ಅನ್ನೋದು ಬದುಕಲ್ಲಿ ಒಮ್ಮೆಯೇ ಬರುತ್ತೆ ಅಂತ ಬಲ್ಲವರು ಹೇಳ್ತಾರೆ. ಆದರೆ ರಿಯಲ್‌ನಲ್ಲಿ ಲವ್ ಬೇರೆ, ಕ್ರಶ್ ಬೇರೆ, ಅಟ್ರಾಕ್ಷನ್ ಬೇರೆ. ಇಲ್ಲಿ ಹೆಸರಿಸಿರೋ ರಾಶಿಯವರು ಲಬಕ್ಕನೆ ಪ್ರೇಮದಲ್ಲಿ ಬಿದ್ದಿದ್ದೀವಿ ಅಂದ್ಕೊಂಡು ಬಿಡ್ತಾರೆ. ಬೇರೆಯವ್ರನ್ನೂ ಬೀಳಿಸ್ತಾರೆ. ಆದರೆ ಅದು ರಿಯಲ್ ಲವ್ವಾ ಬರೀ ಆಕರ್ಷಣೆಯೇ ಅನ್ನೋದು ಗೊತ್ತಾಗೋವಾಗ ಹೊತ್ತಾಗಿರುತ್ತೆ. ಅಂಥ ರಾಶಿಗಳ ಡೀಟೇಲ್ಸ್ ಇಲ್ಲಿದೆ.
ಮೇಷ ರಾಶಿ (Aries)
ತಾನ್ ಹೇಳಿದ್ದೇ ನಡೀಬೇಕು ಅನ್ನೋ ಮನಸ್ಥಿತಿಯ ಈ ರಾಶಿಯವರು ಪ್ರೇಮದ ವಿಷಯಕ್ಕೆ ಬಂದರೆ ಮಾತ್ರ ಯಾವ ಲೆವೆಲ್‌ಗೂ ಇಳಿಯಬಲ್ಲರು. ಇವರದು ಕೆಲವೊಮ್ಮೆ ಉಸಿರುಗಟ್ಟಿಸುವ ಪ್ರೀತಿ ಅನಿಸುತ್ತೆ. ಕೆಲವೊಮ್ಮೆ ಗಾಢ ಪ್ರೀತಿ ಅಂತಲೂ ಅನಿಸಬಹುದು.
ಮೇಷ ರಾಶಿಯು ತನ್ನ ಧೈರ್ಯ ಮತ್ತು ಉತ್ಸಾಹಕ್ಕೆ ಹೆಸರುವಾಸಿಯಾಗಿದೆ. ಮೇಷ ರಾಶಿಯವರು ಸಾಮಾನ್ಯವಾಗಿ ಭಾವೋದ್ರಿಕ್ತ ಮತ್ತು ಸಾಹಸಮಯ ಮನೋಭಾವದಿಂದ ಹತ್ತಿರವಾಗುತ್ತಾರೆ, ತ್ವರಿತವಾಗಿ ತೀವ್ರವಾದ ಸಂಪರ್ಕಗಳನ್ನು ರೂಪಿಸುತ್ತಾರೆ. ಇವರ ಹಠಾತ್ ಸ್ವಭಾವ ಮತ್ತು ತಮ್ಮ ಆಸಕ್ತಿಗಳನ್ನು ಉತ್ಸಾಹದಿಂದ ಮುಂದುವರಿಸುವ ಬಯಕೆಯು ಅಲ್ಪಾವಧಿಯಲ್ಲಿ ಬಲವಾದ ಭಾವನೆಗಳನ್ನು ಬೆಳೆಸಿಕೊಳ್ಳಲು ಕಾರಣವಾಗಬಹುದು. ಮೇಷ ರಾಶಿಯ ವ್ಯಕ್ತಿಗಳು ಮನಸ್ಸಿನ ವಿಷಯಗಳಿಗೆ ಬಂದಾಗ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಹೀಗಾಗಿ ಇವರ ಸಹವಾಸ ಕಟು, ಆದರೆ ಗಾಢ.
Mars Transit : ಸೆಪ್ಟೆಂಬರ್ 24 ರಿಂದ ಈ 5 ರಾಶಿಯವರಿಗೆ ಜೀವನದಲ್ಲಿ ಸಂಕಷ್ಟ..!
ಸಿಂಹರಾಶಿ (Leo)
ಇವರು ತಾವು ಪ್ರಾಕ್ಟಿಕಲ್ (practicle) ಅಂತ ಹೇಳ್ತಲೇ ಲವ್ವಲ್ಲಿ ಬೀಳ್ತಾರೆ. ಇವರ ಆತ್ಮವಿಶ್ವಾಸ ಮತ್ತು ಆತ್ಮೀಯತೆ ಎಂಥವರನ್ನೂ ಪ್ರೀತಿಯಲ್ಲಿ ಬೀಳೋ ಹಾಗೆ ಮಾಡುತ್ತದೆ. ಸಿಂಹ ರಾಶಿಯವರು ಹೆಚ್ಚಾಗಿ ಸಂಬಂಧಗಳನ್ನು ಭವ್ಯತೆ ಮತ್ತು ಪ್ರಣಯದ ಪ್ರಜ್ಞೆಯೊಂದಿಗೆ ನಿರೂಪಿಸುತ್ತಾರೆ, ಇದು ಬೇಗನೆ ಪ್ರೀತಿಯ ಆಳವಾದ ಭಾವನೆಗಳನ್ನು ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಇವರ ಮೋಡಿ ಮಾಡುವ ಸ್ವಭಾವ, ವಾತ್ಸಲ್ಯ ಮತ್ತು ಮೆಚ್ಚುಗೆಯ ಅಭಿವ್ಯಕ್ತಿ ಇತರರು ಬೇಗ ಇವರ ಜೊತೆ ಪ್ರೀತಿಯಲ್ಲಿ ಬೀಳುವ ಹಾಗೆ ಮಾಡುತ್ತೆ. ಸಿಂಹ ರಾಶಿಯವರ ಅಭಿವ್ಯಕ್ತಿ ಮತ್ತು ಪ್ರೀತಿಯ ಸ್ವಭಾವವು ಇವರನ್ನು ತೀವ್ರವಾದ ಭಾವನಾತ್ಮಕ ಬಂಧಗಳನ್ನು ರೂಪಿಸುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ. ಇವರದು ಡಾಮಿನೇಟಿಂಗ್ ಬುದ್ಧಿಯೂ ಆಗಿರುವ ಕಾರಣ ಎಚ್ಚರ ಅಗತ್ಯ.
ತುಲಾ ರಾಶಿ (Libra)
ಇವರದು ಪ್ರತಿಯೊಂದರಲ್ಲೂ ಲೆಕ್ಕಾಚಾರ. ತಕ್ಕಡಿಯಲ್ಲಿ ತೂಗಿಯೇ ಪ್ರೀತಿಯನ್ನೂ ಕೆಲವೊಮ್ಮೆ ಅಳೆಯುತ್ತಾರೆ ಅನಿಸುತ್ತೆ. ಮಹಾ ಬುದ್ಧಿವಂತರು. ಆದರೆ ಆ ಬುದ್ಧೀವಂತಿಕೆಯ ಪ್ರಯೋಜನ ಸಿಗೋದು ಕಡಿಮೆ. ಸ್ನೇಹಮಯಿಗಳು, ಸ್ಫುರದ್ರೂಪಿಗಳು. ಹೀಗಾಗಿ ಬಹಳ ಬೇಗ ಇತರರನ್ನು ಲವ್ವಲ್ಲಿ ಬೀಳಿಸುತ್ತಾರೆ. ಆದರೆ ಇತರರು ಪ್ರೊಪೋಸ್ (propose) ಮಾಡಿದಾಗ ಒಪ್ಪಿಕೊಳ್ಳಲು ಸಮಯ ತಗೊಳ್ತಾರೆ. ಇನ್ನೊಂದು ಕಡೆ ತುಲಾ ರಾಶಿಯವರು ಸಂಬಂಧಗಳಲ್ಲಿ ಒಡನಾಟ ಮತ್ತು ಸಾಮರಸ್ಯವನ್ನು ಗೌರವಿಸುವ ನೈಸರ್ಗಿಕ ಪ್ರೇಮಿಗಳು. ಸಮತೋಲಿತ ಮತ್ತು ಪ್ರೀತಿಯ ಸಂಪರ್ಕಗಳನ್ನು ರಚಿಸುವ ಇವರ ಬದ್ಧತೆಯು ಬೇಗನೆ ಪ್ರೀತಿಯ ಭಾವನೆಗಳನ್ನು ಬೆಳೆಸಿಕೊಳ್ಳಲು ಕಾರಣವಾಗಬಹುದು. ತುಲಾ ರಾಶಿಯವರು ಇತರರಲ್ಲಿ ಸೌಂದರ್ಯ ಮತ್ತು ಸಾಮರ್ಥ್ಯವನ್ನು ನೋಡುವ ಸ್ವಭಾವವು ಇವರ ಪ್ರೀತಿಯಲ್ಲಿ ಬೀಳುವ ವೇಗವನ್ನು ಹೆಚ್ಚಿಸುತ್ತದೆ.
ಈ ಮೂರು ರಾಶಿಯವರಲ್ಲೂ ವಿಶೇಷವಾಗಿರೋ ಗುಣ ಅಂದರೆ ಅಧಿಕಾರ ಚಲಾವಣೆ. ತಾನು ಗ್ರೇಟ್ (great) ಅನ್ನುವ ಮನಸ್ಥಿತಿ. ಆದರೆ ಈ ಥರದವರ ಜೊತೆಗೆ ಆರಂಭಿಕ ಹಂತದ ಬದುಕು, ಪ್ರೇಮ (love) ಚೆನ್ನಾಗಿಯೇ ಇರುತ್ತದೆ. ಬಹಳ ಸಿಹಿಯಾಗಿ ಮಾತನಾಡುತ್ತಾ, ಪ್ರೇಮಕ್ಕಾಗಿ ತಾನೆಂಥಾ ಬಲಿದಾನಕ್ಕೂ ಸಿದ್ಧ ಅನ್ನೋ ರೀತಿ ಪೋಸ್ ನೀಡೋದು ಈ ರಾಶಿಯವರ ಒಂದು ಗುಣ. ಹಾಗಂತ ಲೈಫ್‌ಲಾಂಗ್ ಹೀಗೇ ಇರುತ್ತೆ ಅನ್ನೋದಕ್ಕಾಗದು. ದುರ್ಬಲ ರಾಶಿಯವರಾದರೆ ಇವರ ಅಧಿಕಾರ ಚಲಾಯಿಸುವಿಕೆ ನಿಮ್ಮ ಆತ್ಮವಿಶ್ವಾಸವನ್ನು ತುಳಿದು ಹಾಕಬಹುದು. ಹೀಗಾಗಿ ಈ ರಾಶಿಯವರ ಜೊತೆ ಲವ್ವಲ್ಲಿ ಬೀಳೋ ಮೊದಲು ಯೋಚಿಸಿ ಮುಂದುವರಿಯಿರಿ.
ಶನಿಯಿಂದ ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!