ಈ ಬಾರಿ ನೀವು ಶ್ರೀ ಗಣೇಶನ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದರೆ, ಅದನ್ನು ವೀಸರ್ಜಿಸುವ ಮೊದಲು, ನೀವು ಅದರ ಪೂಜಾ ವಿಧಾನವನ್ನು ತಿಳಿದುಕೊಳ್ಳಬೇಕು. ಗಣೇಶನನ್ನು ಬರ ಮಾಡಿಕೊಂಡಷ್ಟೇ ವಿಧಾನಬದ್ಧವಾಗಿ ಕಳುಹಿಸಿಕೊಡಬೇಕು.
ಗಣಪತಿ ಬಪ್ಪ ಅವರನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ಮನೆಮನೆಗಳಲ್ಲೂ ಮಣ್ಣಿನ ಗಣೇಶ ಬಂದು ಕುಳಿತು ಪೂಜೆ ಮಾಡಿಸಿಕೊಂಡಿದ್ದಾನೆ. ಆತನಿಗಾಗಿ ಬಗೆಬಗೆಯ ಭಕ್ಷ್ಯಗಳು ತಯಾರಾಗಿವೆ. ಗಣೇಶನ ಪೂಜೆ ಮುಗಿದ ಬಳಿಕ, ರಾತ್ರಿಯಿಂದ ಆತನನ್ನು ವಿಸರ್ಜಿಸುವ ಕಾರ್ಯ ಆರಂಭವಾಗುತ್ತದೆ. ಸಾಮಾನ್ಯವಾಗಿ ಗಣೇಶನನ್ನು ಮುಂದಿನ 10 ದಿನಗಳವರೆಗೆ ಅಂದರೆ ಅನಂತ ಚತುರ್ಥಿಯವರೆಗೆ ಕೂರಿಸಬಹುದು. ಕೆಲವರು ಇಂದೇ ರಾತ್ರಿ ವಿಸರ್ಜಿಸಿದರೆ ಮತ್ತೆ ಕೆಲವರು ಮೂರು ದಿನದ ಬಳಿಕ, ಐದು, ಏಳು, ಒಂಬತ್ತು ಅಥವಾ ಹತ್ತು ದಿನಗಳ ಕಾಲ ಗಣೇಶನನ್ನು ಕೂರಿಸಿಕೊಂಡು ಕಡೆಗೆ ವಿಸರ್ಜಿಸುತ್ತಾರೆ. ಗಣಪತಿ ಬಪ್ಪನಿಗೆ ಎಷ್ಟು ದಿನ ಭಕ್ತಿಯಿಂದ ಸೇವೆ ಸಲ್ಲಿಸಬಹುದು ಎಂಬುದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಿಗದಿತ ಸಮಯದ ನಂತರ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಹೀಗೆ ಗಂಗೆಯ ಮೂಲಕ ಕೈಲಾಸಕ್ಕೆ ಗಣೇಶನನ್ನು ಹಿಂದಿರುಗಿಸುವುದೇ ಗಣೇಶ ವಿಸರ್ಜನೆ.
ಗಣೇಶ ವಿಸರ್ಜನೆ ಎಂದರೆ ಸುಮ್ಮನೆ ವಿಗ್ರಹವನ್ನು ತೆಗೆದುಕೊಂಡು ಹೋಗಿ ನೀರಿಗೆ ಹಾಕುವುದಲ್ಲ. ಗಣೇಶನನ್ನು ಎಷ್ಟು ಪ್ರೀತಿಯಿಂದ ಬರ ಮಾಡಿಕೊಂಡಿರೋ ಅಷ್ಟೇ ಪ್ರೀತಿಯಿಂದ ಕಳುಹಿಸಿಕೊಡಬೇಕು.
ಗಣೇಶ ಚತುರ್ಥಿಯ ದಿನದಂದು ಗಣೇಶನನ್ನು ಸ್ಥಾಪಿಸಲಾಗುತ್ತದೆ, ಇದುಮುಂದುವರಿಯುತ್ತದೆ.ಈ ಸಮಯದಲ್ಲಿ, ಒಬ್ಬರು ಒಂದೂವರೆ ದಿನಗಳವರೆಗೆ ಗಣೇಶನ ಪೂಜೆಯನ್ನು ಮಾಡಿದರೆ, ಕೆಲವರು ಅದನ್ನು ಮೂರು, ಐದು, ಏಳು, ಒಂಬತ್ತು ಅಥವಾ ಹತ್ತು ದಿನಗಳವರೆಗೆ ಮಾಡುತ್ತಾರೆ. ಗಣೇಶನ ನಿಮಜ್ಜನದ ಮಂಗಳಕರ ಸಮಯ ಮತ್ತು ವಿಧಾನವನ್ನು ತಿಳಿಯಿರಿ. ಗಣೇಶ ವಿಸರ್ಜನೆಯಲ್ಲಿ ಹಲವು ಪೂಜಾ ನಿಯಮಗಳನ್ನು ಪಾಲಿಸಬೇಕು.
ಗಣೇಶನನ್ನು ವಿಸರ್ಜಿಸುವುದು ಹೇಗೆ?