15 ಆಗಸ್ಟ್ 2022ರ ದಿನವು ಸ್ವಾತಂತ್ರ್ಯೋತ್ಸವವಷ್ಟೇ ಅಲ್ಲ, ಧಾರ್ಮಿಕ ದೃಷ್ಟಿಕೋನದಿಂದಲೂ ಬಹಳ ಮುಖ್ಯವಾಗಿದೆ. ಪಂಚಾಂಗದ ಪ್ರಕಾರ, ಯಾವ ವಿಶೇಷ ಯೋಗಗಳು ಅಂದು ನಿರ್ಮಾಣವಾಗುತ್ತವೆ ನೋಡೋಣ.
ಆಗಸ್ಟ್ 15 ಎಂದರೆ ಭಾರತೀಯರಿಗೆಲ್ಲ ಹಬ್ಬದ ದಿನ. ಸ್ವಾತಂತ್ರೋತ್ಸವದ ಸಂಭ್ರಮ. ಈ ದಿನ ಎಲ್ಲೆಡೆ ಸ್ವಾತಂತ್ರ್ಯ ಸಂಭ್ರಮ ಕಾಣಬಹುದು. ಧಾರ್ಮಿಕ ದೃಷ್ಟಿಯಿಂದ ನೋಡಿದಾಗಲೂ ಈ ಬಾರಿಯ ಆಗಸ್ಟ್ 15 ಬಹಳ ವಿಶೇಷವಾಗಿದೆ. ಏಕೆಂದರೆ ಈ ದಿನ ಅನೇಕ ಶುಭ ಕಾಕತಾಳೀಯಗಳು ಸಂಭವಿಸುತ್ತಿವೆ.
15 ಆಗಸ್ಟ್ 2022ರ ಪಂಚಾಂಗ
ಆಗಸ್ಟ್ 15, ಸೋಮವಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ. ಉತ್ತರಾಭಾದ್ರಪದ ನಕ್ಷತ್ರವು ಈ ದಿನ ಉಳಿಯುತ್ತದೆ. ಸೋಮವಾರದ ಪಂಚಾಂಗದ ಪ್ರಕಾರ ರಾತ್ರಿ 11.22ರವರೆಗೆ ಧೃತಿ ಯೋಗವಿರುತ್ತದೆ.
ಮೀನ ರಾಶಿಯಲ್ಲಿ ಗಜ ಕೇಸರಿ ಯೋಗ
ಪಂಚಾಂಗದ ಪ್ರಕಾರ ಆಗಸ್ಟ್ 15ರಂದು ಮೀನ ರಾಶಿಯಲ್ಲಿ ಬಹಳ ಶುಭ ಯೋಗವು ರೂಪುಗೊಳ್ಳುತ್ತದೆ. ಇದು ಈ ದಿನದ ಮಂಗಳಕರತೆಯನ್ನು ಹೆಚ್ಚಿಸುತ್ತಿದೆ. ದೇವಗುರು ಗುರುವು ಮೀನ ರಾಶಿಯಲ್ಲಿ ಸ್ಥಿತರಿದ್ದು, ಆಗಸ್ಟ್ 15, 2022ರಂದು ಚಂದ್ರನ ಸಂಚಾರದಿಂದ ಈ ರಾಶಿಯಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ವಿಶೇಷವೆಂದರೆ ಗುರುವು ಮೀನ ರಾಶಿಯ ಅಧಿಪತಿಯೂ ಹೌದು.
ಗಜಕೇಸರಿ ಯೋಗವು ಜ್ಯೋತಿಷ್ಯದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಮತ್ತು ಚಂದ್ರನ ಸಂಯೋಗವಿರುವಾಗ ಜನ್ಮ ಕುಂಡಲಿಯಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಗುರು ಮತ್ತು ಚಂದ್ರ ಸಂಬಂಧ ಮಾಡಿದರೆ ಗಜಕೇಸರಿ ಯೋಗ ಉಂಟಾಗುತ್ತದೆ. ಈ ಯೋಗದ ಅರ್ಥ ಗಜ ಎಂದರೆ ಆನೆ ಮತ್ತು ಕೇಸರಿ ಎಂದರೆ ಚಿನ್ನ. ಇಲ್ಲಿ ಗಜ ಎಂದರೆ ಶಕ್ತಿ ಮತ್ತು ಚಿನ್ನ ಎಂದರೆ ಸಮೃದ್ಧಿ. ಈ ಯೋಗವು ರೂಪುಗೊಂಡಾಗ, ಶಕ್ತಿ ಮತ್ತು ಸಮೃದ್ಧಿಯಲ್ಲಿ ಅಪಾರ ಹೆಚ್ಚಳವಾಗುತ್ತದೆ.
ಶನಿ ಚಂದ್ರ ಯುತಿಯಿಂದ ವಿಷಯೋಗ! ಇಲ್ಲಿದೆ ಪರಿಹಾರ..
ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ದೇವರ ಗುರು ಎಂಬ ಹೆಗ್ಗಳಿಕೆ ಇದರದು. ಮತ್ತೊಂದೆಡೆ, ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಇದು ತಂಪು ನೀಡುತ್ತದೆ.
ಇಲ್ಲಿ ಗಜ ಎಂದರೆ ಕೈ, ಕೇಸರಿ ಎಂದರೆ ಚಿನ್ನ ಎಂದು ಹೇಳಲಾಗುತ್ತದೆ. ಅಂದರೆ ಅಧಿಕಾರ ಮತ್ತು ಹಣಕ್ಕೆ ಸಂಬಂಧಿಸಿದ ಯೋಗವಿದೆ. ಅದೇನೆಂದರೆ, ಯಾರ ಜಾತಕದಲ್ಲಿ ಗಜಕೇಸರಿ ಯೋಗವಿದೆಯೋ, ಅವರಿಗೆ ಯಾವಾಗಲೂ ಲಕ್ಷ್ಮಿಯ ಶಕ್ತಿ, ಗಂಭೀರತೆ ಮತ್ತು ಆಶೀರ್ವಾದ ಇರುತ್ತದೆ. ಅಂಥ ಜನರು ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಸಾಧಿಸುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನದ ಜೊತೆಗೆ ಗೌರವವೂ ಸಿಗುತ್ತದೆ.
ಮದ್ವೆಯಾಗ್ತಿಲ್ವಾ? ಬಯಸಿದ ಸಂಗಾತಿ ಪಡೆಯಲು ಈ ಮಂತ್ರಗಳನ್ನು ಹೇಳಿಕೊಳ್ಳಿ..
ಸಂಕಷ್ಟಿ ಚತುರ್ಥಿ
ಈ ದಿನದ ಮತ್ತೊಂದು ವಿಶೇಷವೆಂದರೆ ಗಣೇಶನಿಗೆ ಸಮರ್ಪಿತವಾದ ಸಂಕಷ್ಟಿ ಚತುರ್ಥಿಯ ಹಬ್ಬವಿದೆ. ಗಣೇಶನನ್ನು ವಿಘ್ನನಿವಾರಕ, ಗಜಾನನ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಗಣೇಶನು ಸಮೃದ್ಧಿ ಮತ್ತು ಬುದ್ಧಿವಂತಿಕೆಯ ಸಂಕೇತವೂ ಹೌದು. ಈ ದಿನದಂದು ಭಕ್ತರು ಗಣೇಶನನ್ನು ಪೂಜಿಸುತ್ತಾರೆ ಮತ್ತು ದಿನವಿಡೀ ಉಪವಾಸವನ್ನು ಆಚರಿಸುತ್ತಾರೆ. ರಾತ್ರಿ ಚಂದ್ರನನ್ನು ನೋಡಿದ ನಂತರ ಉಪವಾಸವನ್ನು ಮುರಿಯಲಾಗುತ್ತದೆ. 'ಸಂಕಷ್ಟಿ' ಎಂಬ ಪದವು ಸಂಸ್ಕೃತ ಮೂಲವನ್ನು ಹೊಂದಿದೆ ಮತ್ತು ಇದು 'ಕಷ್ಟದ ಸಮಯದಲ್ಲಿ ವಿಮೋಚನೆ' ಎಂದು ಸೂಚಿಸುತ್ತದೆ. 'ಚತುರ್ಥಿ' ಎಂದರೆ 'ನಾಲ್ಕನೇ ದಿನ ಅಥವಾ ಗಣೇಶನ ದಿನ'. ಒಟ್ಟಿಗೆ ಅನೇಕ ಕಾಕತಾಳೀಯಗಳ ರಚನೆಯಿಂದಾಗಿ ಈ ದಿನದ ಪ್ರಾಮುಖ್ಯತೆಯು ಬಹುಪಟ್ಟು ಹೆಚ್ಚಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.