ಶನಿ ಚಂದ್ರ ಯುತಿಯಿಂದ ವಿಷಯೋಗ! ಇಲ್ಲಿದೆ ಪರಿಹಾರ..

By Suvarna News  |  First Published Aug 11, 2022, 10:47 AM IST

ಶನಿ ಮತ್ತು ಚಂದ್ರನ ಸಂಯೋಜನೆಯಿಂದ ವಿಶೇಷ ಯೋಗವು ರೂಪುಗೊಳ್ಳುತ್ತದೆ, ಇದನ್ನು ಜ್ಯೋತಿಷ್ಯದಲ್ಲಿ ವಿಷ ಯೋಗ ಎಂದು ಕರೆಯಲಾಗುತ್ತದೆ. ಒಂದು ವೇಳೆ ಜಾತಕದಲ್ಲಿ ವಿಷಯೋಗವಿದ್ದರೆ ಈ ಪರಿಹಾರಗಳನ್ನು ಮಾಡಿ..


ಜ್ಯೋತಿಷ್ಯದಲ್ಲಿ ಶನಿ ಮತ್ತು ಚಂದ್ರರನ್ನು ವಿಶೇಷ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಶನಿಯ ಚಲನೆಯು ತುಂಬಾ ನಿಧಾನವಾಗಿರುತ್ತದೆ ಮತ್ತು ರಾಶಿಚಕ್ರವನ್ನು ಬದಲಾಯಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಚಂದ್ರನು ಸುಮಾರು ಎರಡೂವರೆ ದಿನಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ.

ಜಾತಕದಲ್ಲಿ ಶನಿ ಮತ್ತು ಚಂದ್ರನ ಸಂಯೋಗವು ರೂಪುಗೊಂಡರೆ, ವಿಶೇಷ ರೀತಿಯ ಯೋಗವು ರೂಪುಗೊಳ್ಳುತ್ತದೆ. ವಿಶೇಷವಾಗಿ ಶನಿಯು ಕರ್ಕಾಟಕದಲ್ಲಿ ಪುಷ್ಯ ನಕ್ಷತ್ರದಲ್ಲಿದ್ದಾಗ ಮತ್ತು ಚಂದ್ರನು ಮಕರ ರಾಶಿಯಲ್ಲಿ ಶ್ರವಣ ನಕ್ಷತ್ರದಲ್ಲಿದ್ದಾಗ ಅಥವಾ ಚಂದ್ರ ಮತ್ತು ಶನಿ ವಿರುದ್ಧ ಸ್ಥಾನದಲ್ಲಿದ್ದಾಗ ಮತ್ತು ಇಬ್ಬರೂ ತಮ್ಮ ತಮ್ಮ ಸ್ಥಳಗಳಿಂದ ಪರಸ್ಪರ ನೋಡುತ್ತಿರುವಾಗ ವಿಷ ಯೋಗದ ಸ್ಥಿತಿಯು ರೂಪುಗೊಳ್ಳುತ್ತದೆ. ಇದಲ್ಲದೇ ಎಂಟನೇ ಮನೆಯಲ್ಲಿ ರಾಹು ಇದ್ದರೆ ಮತ್ತು ಶನಿಯು (ಮೇಷ, ಕರ್ಕ, ಸಿಂಹ, ವೃಶ್ಚಿಕ) ಲಗ್ನದಲ್ಲಿದ್ದರೆ ಕೂಡ ಈ ಯೋಗ ಉಂಟಾಗುತ್ತದೆ.
ಇದನ್ನು ವಿಷ ಯೋಗ ಎಂದು ಕರೆಯಲಾಗುತ್ತದೆ. ಹೆಸರೇ ಭಯ ಹುಟ್ಟಿಸುವ ಈ ಯೋಗವಿದ್ದಾಗ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಈ ಯೋಗದ ಬಗ್ಗೆ ಎರಡೂ ರೀತಿಯ ಫಲಿತಾಂಶಗಳನ್ನು ಹೇಳಲಾಗಿದೆ. ಆದರೆ ಇದನ್ನು ಅಶುಭ ಯೋಗದ ವರ್ಗದಲ್ಲಿ ಇಡಲಾಗಿದೆ.

Tap to resize

Latest Videos

ರಕ್ಷಾ ಬಂಧನ ದಿನದ ಶುಭಾಶಯಗಳು

ಶನಿ ಮತ್ತು ಚಂದ್ರ ಸಂಯೋಗ
ಜ್ಯೋತಿಷ್ಯದಲ್ಲಿ, ಶನಿಗ್ರಹವನ್ನು ಕ್ರೂರ ಮತ್ತು ನ್ಯಾಯಯುತ ಗ್ರಹದ ವರ್ಗದಲ್ಲಿ ಇರಿಸಲಾಗಿದೆ, ಆದರೆ ಚಂದ್ರನು ಮನಸ್ಸಿನ ಅಂಶವೆಂದು ಹೇಳಲಾಗುತ್ತದೆ. ಚಂದ್ರನಿಗೂ ತಾಯಿಗೂ ಸಂಬಂಧವಿದೆ. ಚಂದ್ರನ ಸ್ವಭಾವವು ಚಂಚಲವಾಗಿದೆ. ಈ ಎರಡು ಗ್ರಹಗಳು ಜಾತಕದಲ್ಲಿ ಒಟ್ಟಿಗೆ ಯಾವುದೇ ರೀತಿಯ ಸಂಬಂಧವನ್ನು ರೂಪಿಸಿದಾಗ, ವಿಷ ಯೋಗದ ಸ್ಥಿತಿಯು ಸೃಷ್ಟಿಯಾಗುತ್ತದೆ.

ವಿಷ ಯೋಗದಲ್ಲಿ ಏನಾಗುತ್ತದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ರೂಪುಗೊಂಡ ಈ ಯೋಗವು ಜೀವನದುದ್ದಕ್ಕೂ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಯೋಗವು ಜಾತಕದಲ್ಲಿ ಇರುವಾಗ ಅಂಥವರು ಸಾಕು ನಾಯಿಗೆ ಬ್ರೆಡ್ ತಿನ್ನಿಸಿದರೂ ಅದು ಒಂದಲ್ಲ ಒಂದು ದಿನ ಕಚ್ಚುತ್ತದೆ ಎಂದು ಈ ಯೋಗದ ಬಗ್ಗೆ ಹೇಳಲಾಗುತ್ತದೆ. ಈ ಯೋಗದ ಅತ್ಯಂತ ಅಶುಭ ಫಲಿತಾಂಶವೆಂದರೆ ಅಂಥ ವ್ಯಕ್ತಿಯು ಸ್ನೇಹಿತರು ಮತ್ತು ಸಂಬಂಧಿಕರಿಂದ ಮೋಸ ಹೋಗುತ್ತಾನೆ. ಜೀವನದ ಸಂತೋಷ ಕಳೆದುಕೊಂಡು ಸಾಕಷ್ಟು ದುಃಖ ಅನುಭವಿಸುತ್ತಾನೆ. ಶನಿ-ಚಂದ್ರನ ಈ ವಿಷ ಯೋಗದಿಂದಾಗಿ, ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಈ ಯೋಗದಿಂದ ವ್ಯಕ್ತಿಯ ಮಾನಸಿಕ ಸ್ಥಿತಿಯು ಹುಚ್ಚನಂತೆ ಆಗುತ್ತದೆ. ಇದಲ್ಲದೆ, ವ್ಯಕ್ತಿಯು ಸಾವು, ಭಯ, ದುಃಖ, ವೈಫಲ್ಯ, ರೋಗ, ಬಡತನ, ಸೋಮಾರಿತನ ಮತ್ತು ಸಾಲವನ್ನು ಎದುರಿಸಬೇಕಾಗುತ್ತದೆ. ಈ ಯೋಗದಿಂದ ಬಳಲುತ್ತಿರುವ ವ್ಯಕ್ತಿಯ ಮನಸ್ಸಿನಲ್ಲಿ ಸದಾ ನಕಾರಾತ್ಮಕ ಆಲೋಚನೆಗಳು ಬರುತ್ತಲೇ ಇರುತ್ತವೆ, ಹಾಗೆಯೇ ಅವನ ಕೆಲಸವೂ ಕೆಡತೊಡಗುತ್ತದೆ.

ದಿನಭವಿಷ್ಯ: ಈ ರಾಶಿಗೆ ಆತುರದ ನಿರ್ಧಾರ ಅಪಾಯಕ್ಕೆ ಆಹ್ವಾನ

ವಿಷ ಯೋಗ ಪರಿಹಾರ

  • ತಮ್ಮ ಜಾತಕದಲ್ಲಿ ವಿಷ ಯೋಗವಿರುವವರು ಪ್ರತಿ ಶನಿವಾರದಂದು ಶನಿದೇವನನ್ನು ಪೂಜಿಸಬೇಕು ಮತ್ತು ಅಶ್ವತ್ಥ ಮರದ ಕೆಳಗೆ ತೆಂಗಿನಕಾಯಿ ಒಡೆಯಬೇಕು.
  • ಜ್ಯೇಷ್ಠ ಮಾಸದಲ್ಲಿ ಶನಿ ಅಥವಾ ಹನುಮಾನ್ ದೇವಸ್ಥಾನಕ್ಕೆ ನೀರು ತುಂಬಿದ ಹೂಜಿಯನ್ನು ದಾನ ಮಾಡಿದರೆ ಲಾಭವಾಗುತ್ತದೆ. ಹನುಮಂತನನ್ನು ಪೂಜಿಸುವುದರಿಂದ ವಿಷಯೋಗವೂ ದೂರವಾಗುತ್ತದೆ.
  • ಶನಿವಾರದಂದು ಬಾವಿಗೆ ಹಸಿ ಹಾಲನ್ನು ಸುರಿಯುವುದರಿಂದಲೂ ಈ ಯೋಗದ ಪರಿಣಾಮ ದೂರವಾಗುತ್ತದೆ.
  • ಇನ್ನು ಚಂದ್ರನಿಗಾಗಿ ಸೋಮವಾರ ಮತ್ತು ಶನಿಗಾಗಿ ಶನಿವಾರ ಉಪವಾಸ ಆಚರಿಸಿ, ಬಡವರಿಗೆ ಆಹಾರ ದಾನ ಮಾಡುವುದರಿಂದ ಈ ಎರಡೂ ಗ್ರಹಗಳು ಶಾಂತವಾಗುತ್ತವೆ.
click me!