ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂನ್ 15) : ಅಪ್ಪು ನಮ್ಮನ್ನ ಅಗಲಿ ಎಷ್ಟೊ ತಿಂಗಳುಗಳೇ ಕಳೆದು ಹೋಗಿವೆ. ಆದ್ರೆ ಅಪ್ಪು ನೆನಪು ಮಾತ್ರ ಮರೆಯಾಗ್ತಾನೆ ಇಲ್ಲ. ಇಂದಿಗೂ ಅಭಿಮಾನಿಗಳು ಅಪ್ಪುರನ್ನ ನೆನೆದು ಕಣ್ಣೀರು ಇಡುತ್ತಲೆ ಇದ್ದಾರೆ. ಆಗಾಗ ಕಾಡುವ ಅಪ್ಪು ನೆನಪನ್ನ ಚಿರಸ್ಥಾಯಿಯಾಗಿಸಲು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪುನೀತರನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ಅಪ್ಪು ಅಭಿಮಾನಿ ರೈತನೊಬ್ಬ ತನ್ನ ನೆಚ್ಚಿನ ಎತ್ತಿನ ಮೇಲೆ ಅಪ್ಪು ಭಾವಚಿತ್ರ ಬಿಡಿಸಿ ಕಾರ ಹುಣ್ಣಿಮೆಯ ದಿನ ಮೆರವಣಿಗೆ ಮಾಡಿದ್ದಾನೆ.
undefined
ಕಾರ ಹುಣ್ಣಿಮೆಯಂದು ಕಾಡಿದ ಅಪ್ಪು ನೆನಪು..!
ಕಾರ ಹುಣ್ಣಿಮೆಯಂದು ಎತ್ತುಗಳನ್ನ ಸಿಂಗರಿಸಿ ಮೆರವಣಿಗೆ ಮಾಡೋದು ವಾಡಿಕೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲು ಎತ್ತುಗಳನ್ನ ಊರ ತುಂಬೆಲ್ಲ ಮೆರವಣಿಗೆ ಮಾಡಿ ರೈತರು ಸಂತಸ ಪಡುತ್ತಾರೆ. ಆದ್ರೆ ವಿಜಯಪುರದಲ್ಲಿ ಅಪ್ಪು ಅಭಿಮಾನಿಯೊಬ್ಬ ನೆಚ್ಚಿನ ಎತ್ತಿನ ಮೇಲೆ ಅಪ್ಪು ಚಿತ್ರ ಬಿಡಿಸಿ ಮೆರವಣಿಗೆ ಮಾಡಿದ್ದಾನೆ. ಈ ಮೂಲಕ ಕಾರಹುಣ್ಣಿಮೆಯಂದು ಅಪ್ಪುರನ್ನ ನೆನಪಿಸಿಕೊಂಡು ತನ್ನ ಅಭಿಮಾನ ಮೆರೆದಿದ್ದಾನೆ.
ಕಾರಹುಣ್ಣಿಮೆ ಓಡಿದ ಅಪ್ಪು ಎತ್ತು!
ಬಬಲೇಶ್ವರ ತಾಲೂಕಿನ ಶಿರಬೂರು ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಕಾರ ಹುಣ್ಣಿಮೆಯನ್ನ ಭರ್ಜರಿಯಾಗಿ ಆಚರಿಸಲಾಗಿದೆ. ಅಪ್ಪಟ ಅಪ್ಪು ಅಭಿಮಾನಿಯಾಗಿರುವ ರೈತ ಯಮನಪ್ಪ ಕುಂಬಾರ್ ತನ್ನ ನೆಚ್ಚಿನ ಎತ್ತನ್ನು ಅದ್ದೂರಿಯಾಗಿ ರೆಡಿ ಮಾಡಿದ್ದಾನೆ. ಎತ್ತಿನ ಮೇಲೆ ಅಪ್ಪು ಭಾವಚಿತ್ರವನ್ನ ಬಿಡಿಸಿ ತನ್ನ ಅಭಿಮಾನವನ್ನ ಮೆರೆದಿದ್ದಾರೆ. ಅಷ್ಟೆ ಅಲ್ಲದೆ ಕಾರ ಹುಣ್ಣಿಮೆ ಎತ್ತುಗಳ ಮೆರವಣಿಗೆಯಲ್ಲಿ ಅಪ್ಪು ಭಾವಚಿತ್ರ ಬಿಡಿಸಿದ ಎತ್ತನ್ನ ತಂದು ಮೆರವಣಿಗೆ ಸಹ ಮಾಡಿದ್ದಾನೆ..
ಕಾರಹುಣ್ಣಿಮೆ ಸಂಭ್ರಮ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ವಿಜಯಪುರ..!
ಅಪ್ಪು ಕಟ್ಟಾ ಅಭಿಮಾನಿ ಈ ಯುವ ರೈತ..!
ಅಪ್ಪಟ ಅಪ್ಪು ಅಭಿಮಾನಿಯಾಗಿರುವ ಯಮನಪ್ಪ ಕುಂಬಾರ್, ಅಪ್ಪು ನಿಧನರಾದಾಗ ಚಿಂತೆಗೀಡಾಗಿದ್ದರು. ನೆಚ್ಚಿನ ನಟ ಅಷ್ಟೇ ಅಲ್ಲದೆ ಸಮಾಜಕ್ಕೆ ಮಾದರಿ ಎನ್ನುವಂತಿದ್ದ ಅಪ್ಪುರನ್ನ ಕಳೆದುಕೊಂಡಾಗ ಬಹಳ ದುಃಖಿತರಾಗಿದ್ದರು. ಆಗಾಗ್ಗ ಅಪ್ಪು ಕಾಡುತ್ತಿದ್ದ ಅಪ್ಪು ನೆನಪಲ್ಲೆ ಕಾಲ ಕಳೆಯುತ್ತಿದ್ದಾರೆ. ಸಧ್ಯ ನೆನಪನ್ನ ಚಿರಸ್ಥಾಯಿಗೊಳಿಸಲು, ಅಭಿಮಾನಕ್ಕೆ ಸಾಕ್ಷಿರೂಪವಾಗಿ ನಿಲ್ಲಲ್ಲು ತನ್ನ ನೆಚ್ಚಿನ ಎತ್ತಿನ ಮೇಲೆ ಅಪ್ಪು ಭಾವಚಿತ್ರ ಬಿಡಿಸಿದ್ದಾರೆ.
ನಗರದಲ್ಲು ಸೇರಿದ ಎತ್ತಿನ ಬಂಡಿಗಳು
ಕಾರ ಹುಣ್ಣಿಮೆಯಂದು ಹಳ್ಳಿಗಳನ್ನ ಬಂಡಿಗಳು ಸೇರುವುದು, ಸ್ಪರ್ಧೆಗಳು ನಡೆಯೋದು ಕಾಮನ್, ಆದ್ರೆ ವಿಜಯಪುರ ನಗರದಲ್ಲು 50ಕ್ಕು ಅಧಿಕ ಬಂಡಿಗಳು ಓಟದಲ್ಲಿ ಸೇರಿದ್ದವು. ತೆರೆದ ಬಂಡಿಗಳನ್ನ ತಂದ ನಗರದ ಸುತ್ತಮುತ್ತಲಿರುವ ಜನರು ರಾಸುಗಳನ್ನ ಓಡಿಸಿ ಖುಷಿ ಪಟ್ಟರು.
ಹುಚ್ಚೆದ್ದು ಓಡಿದ ಎತ್ತುಗಳು
ಜಿಲ್ಲಾ ಪಂಚಾಯತ್ ಗ್ರೌಂಡ್‌ನಲ್ಲಿ ಎತ್ತುಗಳನ್ನ ಒಂದಾದ ನಂತರ ಒಂದರಂತೆ ಓಡಿಸಿದ್ರೆ ಜನರು ನೋಡಿ ಸಂಭ್ರಮ ಪಟ್ಟರು. ಎತ್ತುಗಳು ಜೋರಾಗಿ ಓಡಲಿ ಎಂದು ಬಂಡಿ ಸವಾರರು ಬೆದರಿಸುತ್ತಿದ್ದ ದೃಶ್ಯಗಳು ಕಂಡು ಬಂದ್ವು. ಕೆಲವರು ಎತ್ತುಗಳು ಜೋರಾಗಿ ಓಡಲಿ ಎಂದು ಬಾರಕೋಲಿನಿಂದ ಹೊಡೆದದ್ದು ಕಂಡು ಬಂತು. ಎತ್ತುಗಳನ್ನ ಬೆದರಿಸಿದ್ದರಿಂದ, ಗ್ರೌಂಡ್ ತುಂಬೆಲ್ಲ ಎತ್ತುಗಳು ಹುಚ್ಚಿದ್ದು ಓಡಾಡಿ, ಜನರ ಮೇಲೆ ಹೋದ ಘಟನೆಗಳು ನಡೆದವು. ಆದ್ರೆ ಯಾವುದೇ ಅಪಾಯ ಉಂಟಾಗಿಲ್ಲ.