ಜಾತಕದಲ್ಲಿ ಕೇತು ದೋಷವಿದ್ದರೆ ವ್ಯಕ್ತಿಯು ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ, ಎಲ್ಲ ಕೆಲಸದಲ್ಲೂ ಅಡೆತಡೆಗಳು ಉಂಟಾಗುತ್ತವೆ. ಕೇತುವನ್ನು ಶಾಂತಗೊಳಿಸುವ ಮಾರ್ಗಗಳನ್ನು ಇಲ್ಲಿ ಕೊಡಲಾಗಿದೆ.
ಕೇತು(Ketu)ವು ಕ್ರೂರ ಗ್ರಹ. ಹಾಗಿದ್ದೂ ಕೇತುವಿನ ಕೃಪೆಯಿದ್ದಾಗ ವ್ಯಕ್ತಿಯ ಅಂತಃಪ್ರಜ್ಞೆ ಹೆಚ್ಚುತ್ತದೆ. ವ್ಯಕ್ತಿಯು ಸದ್ಗುಣಶೀಲ ಮತ್ತು ಆಧ್ಯಾತ್ಮಿಕ(Spiritual)ವಾಗಿ ಜ್ಞಾನಿಯಾಗುತ್ತಾನೆ. ವಿದ್ಯಾರ್ಥಿಯು ಹೆಚ್ಚು ಓದದೆಯೇ ಪುಸ್ತಕದ ಪೂರ್ಣ ಜ್ಞಾನ ಗ್ರಹಿಸಲು ಸಾಧ್ಯವಾಗುತ್ತದೆ. ಒಳ್ಳೆಯ ಕೇತು ಹಿಂದಿನ ಜನ್ಮಗಳಲ್ಲಿ ಕಲಿತ ಜ್ಞಾನವನ್ನು ನಿರ್ವಹಿಸುತ್ತಾನೆ. ಹಾಗಾಗಿಯೇ, ಕೇತುವಿನ ಆಶೀರ್ವಾದವಿದ್ದಾಗ ವ್ಯಕ್ತಿಯು ಹೆಚ್ಚು ಓದದೆ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಬಹುದು ಮತ್ತು ಬರೆಯಬಹುದು.
ಅದೇ ಜಾತಕ(Horoscope)ದಲ್ಲಿ ಕೇತು ದೋಷವಿದ್ದಾಗ ವ್ಯಕ್ತಿಯು ನಲುಗಿ ಹೋಗುತ್ತಾನೆ. ಜಾತಕದಲ್ಲಿ ಕೇತುವು ಮಹಾದಶಾದಲ್ಲಿದ್ದರೆ, ಅವನು ವಿವಿಧ ಸವಾಲುಗಳನ್ನು ಹಾಕುತ್ತಾನೆ. ಕೇತು ದೋಷ ಜಾತಕದಲ್ಲಿದ್ದಾಗ ವ್ಯಕ್ತಿಯು ಅನೇಕ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾನೆ, ತೀರಾ ಕೆಳಮಟ್ಟಕ್ಕಿಳಿಯುತ್ತಾನೆ. ರಾಹುಕೇತು ಕೆಟ್ಟ ಸ್ಥಿತಿಯಲ್ಲಿದ್ದಾಗ ಕಾಳ ಸರ್ಪದೋಷ(Kala Sarpa Dosha)ವೂ ಕಾಡಿಸುತ್ತದೆ. ಕೇತುವು ವ್ಯಕ್ತಿಯ ತರ್ಕ, ಬುದ್ಧಿವಂತಿಕೆ, ಜ್ಞಾನಕ್ಕೆ ತಡೆಯೊಡ್ಡಿ ಎಲ್ಲ ಕೆಲಸಗಳಲ್ಲಿ ನಿರಾಸಕ್ತಿ, ಅಡಚಣೆ ಉಂಟು ಮಾಡುತ್ತನೆ. ಅಲ್ಲದೆ ಕೇತು ದೋಷವಿದ್ದಾಗ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.
ಮಿಥುನ ರಾಶಿಯಲ್ಲಿ ಸೂರ್ಯ ಸಂಕ್ರಮಣ: ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ?
ಈ ಸಂದರ್ಭದಲ್ಲಿ ಚರ್ಮದ ಕಾಯಿಲೆ(Skin diseases)ಯ ಅಪಾಯ, ಕೀಲುನೋವು, ದೇಹದ ಭಾಗಗಳ ನರಗಳಲ್ಲಿ ದೌರ್ಬಲ್ಯ, ಶ್ರವಣ ನಷ್ಟ, ಆಗಾಗ್ಗೆ ಕೆಮ್ಮುವುದು, ಹೆರಿಗೆಯಲ್ಲಿ ತೊಂದರೆಗಳು, ಬೆನ್ನುಹುರಿಯ ಸಮಸ್ಯೆ ಇತ್ಯಾದಿ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿದ್ದು ತಲೆಗೆ ಹತ್ತುವುದಿಲ್ಲ. ಏಕಾಗ್ರತೆ(Concentration) ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ವ್ಯಕ್ತಿಯು ಅದರ ದುಷ್ಪರಿಣಾಮಗಳನ್ನು ತೊಡೆದುಹಾಕಲು ಮಾರ್ಗಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಕೇತು ದೋಷ ಪರಿಹಾರ ಮಾರ್ಗಗಳು(Remedies)