ಹಣೆಯ ರೇಖೆ ಹೇಳುತ್ತೆ ನಿಮ್ಮ ಭವಿಷ್ಯವನ್ನು.!

By Suvarna NewsFirst Published Sep 29, 2020, 5:28 PM IST
Highlights

ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜೀವನದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಜಾತಕದಿಂದ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಆಗು-ಹೋಗುಗಳನ್ನು ತಿಳಿಯಬಹುದು. ಅಷ್ಟೇ ಅಲ್ಲದೆ ಮನುಷ್ಯನ ಶರೀರದ ಮೇಲಿರುವ ಮಚ್ಚೆ, ಚಿಹ್ನೆ, ರೇಖೆ ಗುರುತುಗಳೂ ಜೀವನದಲ್ಲಿ ವ್ಯಕ್ತಿಯು ಅನುಭವಿಸಬೇಕಾದ ಕಷ್ಟ-ನಷ್ಟಗಳು ಮತ್ತು ಸುಖ-ಸಂತೋಷವನ್ನು ತಿಳಿಸುತ್ತವೆ. ಹಾಗೆಯೇ ಹಸ್ತ ರೇಖೆ, ಮಣಿ ಕಟ್ಟಿನ ರೇಖೆಗಳಿಂದ ಹೇಗೆ ಭವಿಷ್ಯ ಮತ್ತು ಅದೃಷ್ಟ ಬಗ್ಗೆ ತಿಳಿಯಬಹುದೋ ಹಾಗೆಯೇ ಹಣೆಯ ಮೇಲೆ ಮೂಡುವ ರೇಖೆಯು ವ್ಯಕ್ತಿಯ ಭವಿಷ್ಯದ ವಿಚಾರವನ್ನು ತಿಳಿಸುತ್ತವೆ. ಹಾಗಾದರೆ ಆ ರೇಖೆಗಳ ಅರ್ಥವೇನೆಂದು ತಿಳಿಯೋಣ...

ಭವಿಷ್ಯದಲ್ಲಿ ಆಗುವ ವಿಚಾರಗಳನ್ನು ತಿಳಿಯಲು ಎಲ್ಲರಿಗೂ ಕುತೂಹಲವಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ಪರಿಶೀಲಿಸಿ ಭವಿಷ್ಯ ಮತ್ತು ವರ್ತಮಾನದಲ್ಲಿ ಘಟಿಸಬಹುದಾದ ವಿಚಾರಗಳನ್ನು ತಿಳಿಸುತ್ತಾರೆ. ಹಾಗೆಯೇ ಶರೀರದಲ್ಲಿರುವ ಚಿಹ್ನೆ ಮತ್ತು ಮಚ್ಚೆಗಳ ಆಧಾರದ ಮೇಲೆ ಅದೃಷ್ಟದ ಬಗ್ಗೆ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿರುವ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹಸ್ತದಲ್ಲಿರುವ ರೇಖೆಗಳನ್ನು ಗಮನಿಸಿ ಭವಿಷ್ಯದ ವಿಚಾರವನ್ನು ಹೇಳಲಾಗುತ್ತದೆ.

ಹಾಗೆಯೇ ಮಣಿಕಟ್ಟಿನ ರೇಖೆ, ಪಾದಗಳ ಮೇಲಿರುವ ರೇಖೆಗಳಿಂದ ಸಹ ಅದೃಷ್ಟ ಯೋಗಗಳನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೇ ಹಣೆಯ ಮೇಲೆ ಬರುವ ರೇಖೆಗಳು ವ್ಯಕ್ತಿಯ ಅದೃಷ್ಟವನ್ನು ತಿಳಿಸುತ್ತವೆ. ಹೌದು ಹಣೆಯಲ್ಲಿನ ರೇಖೆಯಿಂದ ಭೂತ, ವರ್ತಮಾನ ಮತ್ತು ಭವಿಷ್ಯದ ವಿಷಯಗಳಲ್ಲದೇ, ಅದೃಷ್ಟ, ಸಂಪತ್ತುಗಳ ಬಗ್ಗೆ ತಿಳಿಯಬಹುದಾಗಿದೆ. ಹಣೆಯ ಮೇಲಿರುವ ರೇಖೆಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯೋಣ..

ಇದನ್ನು ಓದಿ: ಮಾರ್ಗಿಯಾಗುತ್ತಿರುವ ಶನಿ; ಯಾವ ರಾಶಿಗಳ ಮೇಲೆ ಯಾವ ಪರಿಣಾಮ..!

ಮೊದಲನೇ ರೇಖೆ ಹಣದ ಸೂಚಕ
ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹಣೆಯ ಮೇಲಿರುವ ರೇಖೆಗಳಿಗೆ ವಿಶಿಷ್ಟವಾದ ಮಹತ್ವವಿದೆ. ಹಣೆಯಲ್ಲಿರುವ ಮೊದಲನೇ ರೇಖೆಗೂ  ಹಣಕ್ಕೂ ನೇರ ಸಂಬಂಧವಿದೆ. ಹುಬ್ಬುಗಳಿಗೆ ಹತ್ತಿರವಿರುವ ಈ ರೇಖೆಯನ್ನು ಧನರೇಖೆ ಎಂದು ಸಹ ಕರೆಯುತ್ತಾರೆ. ವ್ಯಕ್ತಿಯ ಹಣೆಯಲ್ಲಿ ಮೂಡುವ ಈ ರೇಖೆಯು ಅತ್ಯಂತ ಸ್ಪಷ್ಟವಾಗಿದ್ದರೆ ಅಂಥವರು ಧನವಂತರಾಗುತ್ತಾರೆ. ಹಾಗೆಯೇ ಈ ರೇಖೆ ಸ್ಪಷ್ಟವಾಗಿಲ್ಲದಿದ್ದರೆ ಅಂಥ ವ್ಯಕ್ತಿಯು ಭವಿಷ್ಯದಲ್ಲಿ ಹೆಚ್ಚಿನ ಧನಲಾಭವನ್ನು ಪಡೆಯುವುದಿಲ್ಲ ಎಂಬ ಅರ್ಥವನ್ನು ನೀಡುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದಾದರೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಆರ್ಥಿಕ ಸ್ಥಿತಿ ಸುಧಾರಣೆ ಕಾಣದೇ ಏರು-ಪೇರಾಗುತ್ತಲೇ ಇರುತ್ತದೆ. ಹಾಗಾಗಿ ಮೊದಲಿನ ರೇಖೆಯಿಂದ ವ್ಯಕ್ತಿಯ ಆರ್ಥಿಕ ಸ್ಥಿತಿಯ ಬಗ್ಗೆ ಅಲ್ಪ ಮಟ್ಟಿಗೆ ಅರಿಯಬಹುದು.



ಆರೋಗ್ಯದ ವಿಚಾರ ತಿಳಿಸುತ್ತೆ ಹಣೆಯ ಎರಡನೇ ರೇಖೆ
ಆರೋಗ್ಯವೇ ಭಾಗ್ಯ, ಹಾಗಾಗಿ ಹಣೆಯಲ್ಲಿ ಮೂಡುವ ಎರಡನೇ ರೇಖೆಯು ಅತ್ಯಂತ ಮಹತ್ವದ ವಿಚಾರವನ್ನು ಹೇಳುತ್ತದೆ. ವ್ಯಕ್ತಿಗೆ ಸಂಬಂಧಪಟ್ಟ ಹಲವು ವಿಷಯಗಳನ್ನು ಈ ರೇಖೆ ತಿಳಿಸುತ್ತದೆ. ಅದರಲ್ಲೂ ಮುಖ್ಯವಾಗಿ ಸ್ವಾಸ್ಥ್ಯವನ್ನು ಸೂಚಿಸುತ್ತದೆ. ಹುಬ್ಬಿನ ಹತ್ತಿರದ ರೇಖೆಯ ಅಂದರೆ ಧನರೇಖೆಯ ಮೇಲಿನ ರೇಖೆಯೇ ಆರೋಗ್ಯ ಸೂಚಕ ರೇಖೆ. ಈ ರೇಖೆಯು ಸ್ಪಷ್ಟ ಮತ್ತು ದಪ್ಪವಾಗಿ ಇದ್ದರೆ ಅಂಥವರು ಹೆಚ್ಚು ಆರೋಗ್ಯವಾಗಿರುತ್ತಾರೆ. ಆರೋಗ್ಯ ಸಮಸ್ಯೆಗಳು ಅಷ್ಟಾಗಿ ಇವರನ್ನು ಬಾಧಿಸುವುದಿಲ್ಲ. ಯಾವಾಗಲೂ ಸ್ವಾಸ್ಥ್ಯವಾಗಿರುತ್ತಾರೆ. ರೇಖೆಯಲ್ಲಿ ಸ್ಪಷ್ಟತೆ ಇಲ್ಲದಿದ್ದಲ್ಲಿ ಅಂಥವರು ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ: ಬುಧವಾರ ಈ ವಸ್ತುಗಳನ್ನು ಮನೆಗೆ ತಂದರೆ ಶುಭ

ಅದೃಷ್ಟ ಪರಿಕ್ಷೀಸಲು ಮೂರನೇ ರೇಖೆ
ಆರೋಗ್ಯ ಸೂಚಕ ರೇಖೆಯ ಮೇಲಿನ ರೇಖೆಯೇ ಅದೃಷ್ಟ ರೇಖೆ. ಈ ರೇಖೆಯು ಎಲ್ಲರಿಗೂ ಇರುವುದಿಲ್ಲ, ಕೆಲವರಿಗೆ ಸ್ಪಷ್ಟವಾಗಿರುವುದಿಲ್ಲ. ಕೆಲವರಿಗೆ ಮಾತ್ರ ಈ ರೇಖೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಹಣೆಯ ಮೇಲಿನ ಮೂರನೇ ರೇಖೆಯಲ್ಲಿ ಸ್ಪಷ್ಟತೆ ಇದ್ದರೆ ಅಂಥವರು ಹೆಚ್ಚು ಅದೃಷ್ಟವಂತರಾಗಿರುತ್ತಾರೆ. ಈ ರೇಖೆಯನ್ನು ಹೊಂದಿದವರು ಜೀವನದಲ್ಲಿ ಹೆಚ್ಚು ಸುಖವಾಗಿರುತ್ತಾರೆ, ಸಮಸ್ಯೆಗಳು ಇವರನ್ನು ಅಷ್ಟಾಗಿ ಕಾಡುವುದಿಲ್ಲ.

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..!​​​​​​​

ಜೀವನದ ಏರು-ಪೇರುಗಳನ್ನು ತಿಳಿಯಲು ನಾಲ್ಕನೇ ರೇಖೆ
ಈ ನಾಲ್ಕನೇ ರೇಖೆಯಿಂದ ಜೀವನದಲ್ಲಿ ಎಷ್ಟರ ಮಟ್ಟಿಗೆ ಏರು-ಪೇರುಗಳನ್ನು ಎದುರಿಸಬೇಕೆಂದು ತಿಳಿಯಬಹುದು. ಈ ರೇಖೆಯು ಸ್ಪಷ್ಟವಾಗಿಲ್ಲದಿದ್ದರೆ ಅಂಥವರು ಹೆಚ್ಚು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಸದಾ ಸಂಕಷ್ಟಗಳ ಸುಳಿಯಲ್ಲಿ ಒದ್ದಾಡಬೇಕಾದ ಪರಿಸ್ಥಿತಿ ಇರುತ್ತದೆ. ಮುಖ್ಯವಾಗಿ ಈ ರೇಖೆಯು 26ನೇ ವರ್ಷದಿಂದ 40 ವರ್ಷಗಳ ವರೆಗಿನ ಪರಿಸ್ಥಿತಿಯನ್ನು ಮತ್ತು ಎದುರಿಸುವ ಸಂಕಷ್ಟವನ್ನು ಇದು ಸೂಚಿಸುತ್ತದೆ. 40 ವರ್ಷದ ನಂತರ ಹಲವರು ಸಫಲತೆಯನ್ನು ಕಾಣುತ್ತಾರೆ ಹಾಗೂ ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪುತ್ತಾರೆ. 

click me!