ನೌಕರಿ ಪಡೆಯುವುದೆಂದರೆ ಸುಲಭದ ಮಾತಲ್ಲ. ಯೋಗ್ಯತೆ ಇದ್ದು, ಶಕ್ತಿ ಮೀರಿ ಪ್ರಯತ್ನಿಸಿದರೂ ಕೆಲವೊಮ್ಮೆ ಉದ್ಯೋಗ ದೊರಕುವುದಿಲ್ಲ. ದೇವರ ಪೂಜೆ, ಆರಾಧನೆ ಎಲ್ಲವನ್ನು ಮಾಡಿದ್ದರೂ ಉದ್ಯೋಗ ದೊರಕುತ್ತಿಲ್ಲವೆಂಬ ಚಿಂತೆ ಸದಾ ಕಾಡುತ್ತದೆ. ಪ್ರತಿಭೆ ಇದ್ದವರು, ಹೆಚ್ಚು ಅಂಕ ಗಳಿಸಿದವರು ಸಹ ಈ ರೀತಿ ಉದ್ಯೋಗಕ್ಕಾಗಿ ಅಲೆದಾಡಿರುವ ನಿದರ್ಶನಗಳಿವೆ. ಈ ಸಮಸ್ಯೆಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ. ಆ ಉಪಾಯಗಳು ಯಾವುದೆಂದು ತಿಳಿಯೋಣ...
ಕೋವಿಡ್ 19 ಬಂದ ಮೇಲೆ ಎಲ್ಲ ಪರಿಸ್ಥಿತಿಗಳೂ ಬದಲಾಗಿವೆ. ಅದರಲ್ಲೂ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ದುಸ್ತರವಾಗಿದೆ. ಇನ್ನು ಉದ್ಯೋಗವನ್ನಂತೂ ಕೇಳುವುದೇ ಬೇಡ. ಕೆಲವರಿಗೆ ಸಂಬಳದಲ್ಲಿ ಶೇಕಡಾವಾರು ಕಡಿತ ಮಾಡಿದರೆ, ಮತ್ತೆ ಕೆಲವರನ್ನು ಮನೆಗೆ ಕಳುಹಿಸಲಾಗಿದೆ. ಹೀಗಾಗಿ ಕೆಲಸ ಕಳೆದುಕೊಂಡವರು, ಇನ್ನೂ ಕೆಲಸ ಸಿಕ್ಕದವರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೌಕರಿ ಸಿಗುವುದು ಬಹಳವೇ ಕಷ್ಟ. ಎಷ್ಟೇ ಪ್ರತಿಭೇ ಇದ್ದರೂ ಅದೃಷ್ಟ ಇಲ್ಲದಿದ್ದರೆ ಕೆಲಸ ಸಿಗುವುದು ಬಹಳವೇ ಕಷ್ಟ. ಕೆಲವರು ಯಾವ ಪ್ರತಿಭೆ ಇಲ್ಲದೆಯೂ ಒಳ್ಳೆಯ ಕೆಲಸವನ್ನು ಗಿಟ್ಟಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವು ಶಕ್ತಿಗಳೂ ಸಹ ಕೆಲಸ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕೆ ವಾಸ್ತು ಶಾಸ್ತ್ರವೂ ಹೊರತಾಗಿಲ್ಲ. ಸಮರ್ಪಕವಾಗಿ ವಾಸ್ತುವನ್ನು ಹೊಂದಿದ್ದರೆ ಅದರ ಶಕ್ತಿಯಿಂದ ನೌಕರಿ ಸಿಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ವಾಸ್ತ್ರು ಶಾಸ್ತ್ರವನ್ನು ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಕೆಲವು ಉಪಾಯಗಳನ್ನು ಅನುಸರಿಸಿದ್ದೇ ಆದಲ್ಲಿ ನಿಮಗೆ ನೌಕರಿ ಸಿಗಲಿದೆ ಎನ್ನುತ್ತದೆ ವಾಸ್ತ್ರು ಶಾಸ್ತ್ರ.
ಇದನ್ನು ಓದಿ: ಹಣೆಯ ರೇಖೆ ಹೇಳುತ್ತೆ ನಿಮ್ಮ ಭವಿಷ್ಯವನ್ನು.!
ಮನೆಯಲ್ಲಿ ಜೇಡರ ಬಲೆ ಇರಕೂಡದು
ಮನೆಯಲ್ಲಿ ಯಾವುದೇ ಕಾರಣಕ್ಕೂ ಜೇಡರ ಬಲೆ ಕಟ್ಟಬಾರದು. ಇದು ಕುಟುಂಬದ ಸದಸ್ಯರ ಯಶಸ್ಸಿಗೆ ಅಡಚಣೆಯನ್ನುಂಟು ಮಾಡುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರಿಂದ ಯಶಸ್ಸು ಕುಂಠಿತವಾಗುತ್ತದೆ. ಹೀಗಾಗಿ ಜೇಡರ ಬಲೆ ಇದ್ದರೆ ಮೊದಲು ತೆಗೆದುಬಿಡಿ.
ಬಾಳೆ ಗಿಡಕ್ಕೆ ಪೂಜೆ ಮಾಡಿ
ಬಾಳೆ ಗಿಡಕ್ಕೆ ಪೂಜೆ ಮಾಡಿದರೆ ಶುಭ ಫಲ ಲಭಿಸುತ್ತದೆ. ಜೊತೆಗೆ ಧನಾತ್ಮಕ ಅಂಶಗಳು ಉಂಟಾಗಿ ನೌಕರಿ ಸಿಗಲು ಅನುಕೂಲವಾಗುತ್ತದೆ. ಯಾರು ಬಾಳೆ ಗಿಡಕ್ಕೆ ಪೂಜೆ ಮಾಡುತ್ತಾರೋ ಅವರ ಯಶಸ್ಸಿನ ದಾರಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಹೀಗೆ ಉತ್ತಮ ನೌಕರಿ ಪಡೆಯಬೇಕೆಂಬ ಕನಸುವುಳ್ಳವರು ದಿನವೂ ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನು ಓದಿ: ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..!
ಈಶಾನ್ಯ ದಿಕ್ಕಿಗೆ ಹಳದಿ ಬಣ್ಣವಿರಲಿ
ಮನೆಯಲ್ಲಿ ಬಣ್ಣ ಬಳಿಯುವಾಗಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ ಮನೆಯ ಈಶಾನ್ಯ ದಿಕ್ಕಿನ ಗೋಡೆಗೆ ಹಳದಿ ಬಣ್ಣವನ್ನು ಲೇಪನ ಮಾಡಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಉದ್ಯೋಗಕ್ಕೆ ಹಳದಿ ಬಣ್ಣ ಆಗಿಬರುತ್ತದೆ. ಈಶಾನ್ಯ ದಿಕ್ಕು ಮನೆಯ ಸದಸ್ಯರ ವ್ಯವಸಾಯ, ವ್ಯಾಪಾರ ಹಾಗೂ ಉದ್ಯೋಗಕ್ಕೆ ಅನುಕೂಲವನ್ನುಂಟು ಮಾಡುತ್ತದೆ.
ಸಂದರ್ಶನಕ್ಕೆ ಹೋಗುವ ಮುನ್ನ ಈ ಉಪಾಯ ಮಾಡಿ
ಸಂದರ್ಶನಕ್ಕೆ ಮನೆಯಿಂದ ಹೊರಡುವ ಮುಂಚೆ ಮನೆಯ ದೇವರಿಗೆ ಹಾಗೂ ಗುರುಗಳಿಗೆ ವಂದಿಸಬೇಕು. ತಂದೆ-ತಾಯಿ ಹಾಗೂ ಮನೆಯ ಹಿರಿಯರ ಆಶೀರ್ವಾದ ಪಡೆಯಬೇಕು. ನಿಮ್ಮ ಕರವಸ್ತ್ರದಲ್ಲಿ ಒಂದು ಚಿಟಿಕೆ ಅರಿಶಿಣವನ್ನು ಇಟ್ಟುಕೊಂಡು ಪರೀಕ್ಷೆ ಎದುರಿಸಿದರೆ ಆಯಿತು.
ಮನೆಗೆ ಗಣೇಶನ ಪ್ರತಿಮೆ ತನ್ನಿ
ಉದ್ಯೋಗದ ಸಮಸ್ಯೆಗಳಿದ್ದರೆ ಇಲ್ಲವೇ ಉದ್ಯೋಗಕ್ಕೆ ಒಂದರಿಂದ 2 ಇಂಚಿನ ಗಣೇಶನ ಮೂರ್ತಿ ಇಲ್ಲವೇ ಪ್ರತಿಮೆಯನ್ನು ಮನೆಗೆ ತರಬೇಕು. ಇದನ್ನು ಮನೆಯ ಪೂರ್ವ ದಿಕ್ಕಿಗೆ ಮುಖವಾಡಿ ಹಳಿ ವಸ್ತ್ರದ ಮೇಲೆ ಇಡಬೇಕು. ದಿನವೂ ದೂರ್ವೆ (ಗರಿಕೆ)ಯನ್ನು ಅರ್ಪಿಸಿ, ಶೀಘ್ರದಲ್ಲೇ ನೌಕರಿ ಸಿಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು.
ಮನಿಪ್ಲಾಂಟ್ ಅನ್ನು ಹೀಗೆ ಇಡಿ
ಉತ್ತಮ ಅವಕಾಶಕ್ಕಾಗಿ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ಉತ್ತರ ದಿಕ್ಕಿನಲ್ಲಿಡಬೇಕು. ಹೀಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುವುದಲ್ಲದೆ, ನೌಕರಿ ಸಿಗುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ.
ಇದನ್ನು ಓದಿ: ಮಾರ್ಗಿಯಾಗುತ್ತಿರುವ ಶನಿ; ಯಾವ ರಾಶಿಗಳ ಮೇಲೆ ಯಾವ ಪರಿಣಾಮ...!
ಮನೆ ಮುಂದೆ ಸಂಜೆಗೆ ದೀಪ ಉರಿಯಲಿ
ಸಂಜೆ ಆಯಿತೆಂದರೆ ಸಾಕು ಎಲ್ಲರೂ ಮನೆ ಸೇರಿಕೊಳ್ಳುತ್ತಾರೆ. ಮನೆಯೊಳಗೆ ನೀವಿದ್ದರೂ ಮನೆಯ ಹೊರಗಡೆ ಕೆಂಪು ಬಣ್ಣದ ಬಲ್ಬ್ ಅನ್ನು ಹಾಕಿಡಬೇಕು.