ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!

By Suvarna News  |  First Published May 27, 2020, 4:49 PM IST

ಸಂತಾನ ಫಲವನ್ನು ಕಾಣಲು ಎಲ್ಲರೂ ಹಂಬಲಿಸುತ್ತಾರೆ. ಗರ್ಭ ಧರಿಸಲು ಸಮಸ್ಯೆಯನ್ನು ಎದುರಿಸಿ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದರೂ ಕೆಲವು ಬಾರಿ ಸಂತಾನ ಪ್ರಾಪ್ತಿಯಾಗುವುದಿಲ್ಲ. ಅದಕ್ಕೆ ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ಹೇಳಿದ್ದಾರೆ. ಆದರೆ, ಈ ಕ್ರಮಗಳನ್ನು ವೈಜ್ಞಾನಿಕ ತಳಹದಿ ಮೇಲೆ ನೋಡಲು ಹೋದರೆ ಯಾವುದೇ ತರ್ಕ ಅಥವಾ ಆಧಾರಕ್ಕೆ ಸಿಲುಕುವುದಿಲ್ಲ. ಹೀಗಿದ್ದರೂ, ಜ್ಯೋತಿಷ್ಯವನ್ನು ನಂಬುವವರಿಗೆ ಇದು ಖಂಡಿತವಾಗಿಯೂ ಫಲ ಕೊಡುತ್ತದೆ. ನಂಬಿಕೆ ಹಾಗೂ ದೃಢವಿಶ್ವಾಸವಿದ್ದರೆ ಎಲ್ಲವೂ ಸಫಲವಾಗುತ್ತದೆ.


ತಾಯಿಯಾಗಬೇಕೆಂಬ ಬಯಕೆ ಪ್ರತಿ ಹೆಣ್ಣಿಗೂ ಇರುತ್ತದೆ. ಮದುವೆಯ ನಂತರದ ಮೆಟ್ಟಿಲು ಗರ್ಭಧರಿಸುವುದು. ಹೆಣ್ತನಕ್ಕೆ ಸಾರ್ಥಕತೆ ಸಿಗುವುಗು ಆಕೆ ತಾಯಿಯಾದಾಗ ಮಾತ್ರ ಎಂಬ ಮಾತಿದೆ. ಹಾಗೇಯೇ ಹೆಣ್ಣಿಗೆ ತಾಯ್ತತನದ ಎಲ್ಲ ಸುಖಗಳನ್ನು ಅನುಭವಿಸಬೇಕೆಂಬ ಉತ್ಕಟ ಬಯಕೆ ಇರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸಂತಾನ ಫಲ ಸಿಗುವುದಕ್ಕೆ ಸಮಯವಾಗಬಹುದು. ಆದರೆ, ಎಲ್ಲದಕ್ಕೂ ಪರಿಹಾರ ಇರುವಂತೆ ಇದಕ್ಕೂ ಪರಿಹಾರ ಇದೆ.

ನಾಲ್ಕು ಮಕ್ಕಳಿದ್ದರೂ ಕನ್ಯತ್ವ ಕಳೆದುಕೊಳ್ಳದ ತಾಯಿ

ವೈಜ್ಞಾನಿಕ ತಳಹದಿಯಲ್ಲೇ ನೋಡಲು ಹೋದಾಗ ವೈದ್ಯರ ಬಳಿ ಎಲ್ಲ ರೀತಿಯ ಪರೀಕ್ಷೆ ಮಾಡಿಸಿಕೊಂಡ ದಂಪತಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಂತಾನ ಭಾಗ್ಯಕ್ಕೆ ಇರಬೇಕಾದ ಎಲ್ಲವೂ ಸರಿಯಾಗಿಯೇ ಇರುತ್ತದೆ. ಹೀಗಿದ್ದರೂ ಮಕ್ಕಳಾಗುತ್ತಿರುವುದಿಲ್ಲ. ಇದಕ್ಕೆ ಜಾತಕದ ದೋಷಗಳೂ ಇರಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದರಿಂದಾಗಿಯೇ ಗರ್ಭಧರಿಸುವಲ್ಲಿ ತೊಂದರೆಯಾಗಿರಬಹುದು. ಇನ್ನೂ ಹತ್ತು ಹಲವಾರು ಸಮಸ್ಯೆಗಳು ಎದುರಾಗಿ ತಾಯಿಯಾಗುವ ಕನಸು, ಕನಸಾಗಿಯೇ ಉಳಿಯಬಹುದು ಎಂದು ಕೊರಗುವುದಕ್ಕಿಂತ ಇದಕ್ಕೆ ಇರುವ ಪರಿಹಾರದತ್ತ ಗಮನಹರಿಸಿ ಅದರ ಅನುಷ್ಠಾನಕ್ಕೆ ಪ್ರಯತ್ನಿಸಿ ಸಂತಾನ ಫಲ ಪಡೆಯಿರಿ ಎಂದು ಜ್ಯೋತಿಷ್ಯ ಹೇಳುತ್ತದೆ.

ಮನಸ್ಸಿನಲ್ಲಿ ಬಲವಾದ ಛಲವಿದ್ದರೆ, ನಕಾರಾತ್ಮಕ ಯೋಚನೆಗಳಿಗೆ ಮನಸ್ಸನ್ನು ಹರಿಬಿಡದೇ, ಸದಾ ಒಳ್ಳೆಯದನ್ನು ಆಲೋಚಿಸಿದರೆ, ಅಂದುಕೊಂಡದ್ದು ಈಡೇರುತ್ತದೆ. ಹಾಗೇಯೇ ಸಂತಾನ ಫಲವನ್ನು ಅಪೇಕ್ಷಿಸುವವರು ಭಗವಂತನ ಶಕ್ತಿಯ ಮೇಲೆ ಮೊದಲು ನಂಬಿಕೆ ಇಡಬೇಕು. ನಮ್ಮಲ್ಲಿ ಭಕ್ತಿ ಇದ್ದರೆ ದೇವರ ಶಕ್ತಿ ಅರ್ಥವಾಗುತ್ತದೆ. ಸಂತಾನ ಪಡೆಯುವ ಹಾದಿಯಲ್ಲಿ ವೈದ್ಯರ ಸಲಹೆ ಸೂಚನೆಗಳು ಎಷ್ಟು ಮುಖ್ಯವೋ, ಜ್ಯೋತಿಷ್ಯಾಧಾರಿತ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವುದೂ ಅಷ್ಟೇ ಮುಖ್ಯ. ಸಂತಾನ ಫಲವನ್ನು ಎದುರು ನೋಡುತ್ತಾ, ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಜ್ಯೋತಿಷ್ಯ ಶಾಸ್ತ್ರವು ಹೇಳಿದ ಕೆಲವು ಪರಿಹಾರಗಳನ್ನು ತಿಳಿಯೋಣ.

ಇದನ್ನು ಓದಿ: ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

ಸಂತಾನ ದೋಷವಿದ್ದಾಗ
ಸಮಯಕ್ಕೆ ಸರಿಯಾಗಿ ಗರ್ಭಧರಿಸದಿದ್ದಾಗ, ಜಾತಕವನ್ನೊಮ್ಮೆ ಪರೀಶೀಲಿಸಿ, ಸಂತಾನ ದೋಷವಿದೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪಿತೃದೋಷವಿದ್ದರೂ ಸಂತಾನಕ್ಕೆ ಸಮಸ್ಯೆಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದಾಗ ಪಿತೃದೋಷವನ್ನು ಪರಿಹರಿಸಿಕೊಂಡಲ್ಲಿ ಸಂತಾನ ದೋಷ ನಿವಾರಣೆಯಾಗುತ್ತದೆ.

ಸಮಸ್ಯೆಗಳಿದ್ದರೆ
ಗರ್ಭಧರಿಸುವಲ್ಲಿ ಸಮಸ್ಯೆಗಳು ಎದುರಾದರೆ ಅಥವಾ ಗರ್ಭಪಾತದಂಥ ತೊಂದರೆಗಳನ್ನು ಅನುಭವಿಸಿದರೆ, ಅಂಥವರು ಕೆಂಪು ಹಸು ಮತ್ತು ಕರುವಿನ ಸೇವೆ ಮಾಡಬೇಕು. ಕೆಂಪು ಅಥವಾ ಕಂದು ಬಣ್ಣದ ಶ್ವಾನವನ್ನು ಸಾಕಿದರೂ ಶುಭವಾಗುವುದು. ಇದರಿಂದ ಸೂರ್ಯ ಮತ್ತು ಮಂಗಳ ಗ್ರಹವು ಬಲವಾಗುತ್ತದೆ. ಸೂರ್ಯ ಮತ್ತು ಮಂಗಳನಿಗೆ ಸಂಬಂಧಿಸಿದ ಶರೀರದ ಅಂಗಗಳ ತೊಂದರೆ ಇದ್ದರೆ ಪರಿಹಾರವಾಗುತ್ತದೆ.ಮದುವೆಯಾಗಿ ಹಲವು ವರ್ಷಗಳು ಕಳೆದರೂ ಸಂತಾನ ಭಾಗ್ಯ ಪ್ರಾಪ್ತಿಯಾಗದವರು ಶುಕ್ರವಾರ ಎಕ್ಕದ ಗಿಡದ ಬೇರನ್ನು ಕಿತ್ತು ಸೊಂಟಕ್ಕೆ ಕಟ್ಟಿಕೊಳ್ಳಬೇಕು. ಇದರಿಂದ ಗರ್ಭವತಿಯಾಗುವ ಸಂಭವ ಅಧಿಕವಾಗಿರುತ್ತದೆ.

ಇದನ್ನು ಓದಿ: ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಗರ್ಭಪಾತದ ಭಯದಿಂದ ದೂರಾಗಿ
ಗರ್ಭ ಧರಿಸಿದ ಸಂದರ್ಭದಲ್ಲಿ ಯಾವುದಾದರೊಂದು ಗುರುವಾರ ಪತಿ ಮತ್ತು ಪತ್ನಿ ಇಬ್ಬರೂ ರಾಧಾಕೃಷ್ಣ ದೇವಸ್ಥಾನಕ್ಕೆ ಹೋಗಿ ಬೆಳ್ಳಿಯ ಕೊಳಲನ್ನು ಅರ್ಪಿಸಿದರೆ ಗರ್ಭಪಾತದ ಭಯವಿರುದಿಲ್ಲ ಎಂಬುದು ಹಿರಿಯರ ನಂಬಿಕೆ. ಇನ್ನು ಗರ್ಭ ನಿಲ್ಲದೇ ತೊಂದರೆಯನ್ನು ಅನುಭವಿಸುತ್ತಿರುವವರು ಶುಕ್ರವಾರದ ದಿನ ಒಂದು ಗೋಮತಿ ಚಕ್ರವನ್ನು ಕೆಂಪು ವಸ್ತ್ರದಲ್ಲಿ ಹೊಲಿದು ಗರ್ಭವತಿ ಮಹಿಳೆಯ ಸೊಂಟಕ್ಕೆ ಕಟ್ಟಬೇಕು ಇದರಿಂದ ಗರ್ಭನಿಲ್ಲುತ್ತದೆ ಎಂಬ ನಂಬಿಕೆ ಇದೆ.

ಮಂಗಳವಾರ ಈ ರೀತಿ ಮಾಡಿ
ಕೆಲವರಿಗೆ ಗರ್ಭಧರಿಸುವಲ್ಲಿ ಸಮಸ್ಯೆಯಾದರೆ, ಇನ್ನು ಕೆಲವರಿಗೆ ಪ್ರಸವವಾದ ನಂತರ ಶಿಶು ಬದುಕುಳಿಯುವುದಿಲ್ಲ ಈ ಸಂದರ್ಭದಲ್ಲಿ ಮಂಗಳವಾರ ಮಣ್ಣಿನ ಮಡಿಕೆಯಲ್ಲಿ ಜೇನುತುಪ್ಪವನ್ನು ತುಂಬಿ, ಅದನ್ನು ಸ್ಮಶಾನದಲ್ಲಿ ಹೂತಿಡಬೇಕು. ಜ್ಯೋತಿಷ್ಯದ ಪ್ರಕಾರ ಹೀಗೆ ಮಾಡುವುದರಿಂದ ಬೇಗ ಸಂತಾನ ಪ್ರಾಪ್ತಿಯಾಗುತ್ತದೆ.

ಈ ಮಂತ್ರಗಳನ್ನು ಪಠಿಸಿರಿ
ಸಂತಾನ ಪ್ರಾಪ್ತಿಗೆ ಮನಸ್ಸು ನಿರ್ಮಲವಾಗಿರಬೇಕು. ಉದ್ವೇಗಗಳಿಂದ ಕೂಡಿರಬಾರದು. ಪ್ರತಿದಿನ ಕೆಲವು ಮಂತ್ರಗಳನ್ನು ನಿಯಮಿತವಾಗಿ ಪಠಿಸಬೇಕು.
ಮಂತ್ರಗಳು
ಓಂ ನಮೋ ಭಗವತೇ ಜಗತ್ಪ್ರಸೂತಯೇ ನಮಃ, ಓಂ ಕ್ಲೀಂ ಗೋಪಾಲ ವೇಗಘಟಾಯ ವಾಸುದೇವಾಯ ಹ್ಮೂಂ ಫಟ್ ಸ್ವಾಹಾ, ಓಂ ನಮಃ ಶಕ್ತಿ ರೂಪಾಯ ಮಮ ಗೃಹೇ ಪುತ್ರ ಕುರು ಕುರು ಸ್ವಾಹಾ, ದೇವಕಿ ಸುತ ಗೋವಿಂದ ವಾಸುದೇವ ಜಗತ್ಪತೇ ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ, ಇವುಗಳಲ್ಲಿ ಯಾವ ಮಂತ್ರವನ್ನಾದರೂ ಹೇಳಬಹುದು. ಆದರೆ ವಿಶ್ವಾಸವಿಟ್ಟು ಶ್ರದ್ಧೆಯಿಂದ ಪಠಿಸಿದರೆ ಮಾತ್ರ ಫಲ ಸಿಗುತ್ತದೆ ಎನ್ನಲಾಗಿದೆ.

ಇದನ್ನು ಓದಿ: ಅಪಮೃತ್ಯುವಿನಿಂದ ಪಾರಾಗಲು ಹೀಗ್ ಸ್ನಾನ ಮಾಡಿ.

ಲಡ್ಡು ಗೋಪಾಲನ ಚಿತ್ರ ನೋಡಿ
ಬಾಲ ಗೋಪಾಲನ ಚಿತ್ರವನ್ನು ಕೋಣೆಯಲ್ಲಿರಿಸಿ ನೋಡುತ್ತಿರುವುದು ಶುಭವೆಂದು ಹೇಳಲಾಗುತ್ತದೆ. ಲಡ್ಡು ಗೋಪಾಲನ ಚಿತ್ರ ಅಥವಾ ಮೂರ್ತಿಯನ್ನು ನೋಡುತ್ತಾ ಸಂತಾನ ಗೋಪಾಲ ಮಂತ್ರವನ್ನು ಪಠಿಸಿದರೆ ಸಂತಾನ ಭಾಗ್ಯ ಸಿಗುತ್ತದೆ. ಬಾಲಕೃಷ್ಣನ ಚಿತ್ರ ಮನೆಯಲ್ಲಿರುವುದು ಶುಭಕರವೆಂದೂ ಹೇಳಲಾಗುತ್ತದೆ.

Tap to resize

Latest Videos

click me!