ಬಂದ ಸಂಬಳ ಕಣ್ಣಿಗೆ ಕಾಣದೆ ಹೋಗುತ್ತೆ, ಜೀವನ ನಿರ್ವಹಣೆ ಕಷ್ಟ. ಇದು ಪ್ರತಿಯೊಬ್ಬರ ಮಾತು. ಸಂಬಳ ಹೆಚ್ಚಾಗ್ಬೇಕು, ಖರ್ಚು ಕಡಿಮೆಯಾಗ್ಬೇಕು ಎನ್ನುವವರು ಸಂಬಳ ಬಂದ ನಂತ್ರ ಕೆಲಸವೊಂದನ್ನು ತಪ್ಪದೆ ಮಾಡಬೇಕು.
ಉದ್ಯೋಗಸ್ಥರಿಗೆ ತಿಂಗಳ ಮೊದಲ ದಿನ ಖುಷಿಯಿರುತ್ತದೆ. ಯಾಕೆಂದ್ರೆ ಅಂದು ಸಂಬಳ ಬರುವ ದಿನ. ಇಡೀ ತಿಂಗಳು ಕೆಲಸ ಮಾಡಿದ ಉದ್ಯೋಗಸ್ಥರು ಸಂಬಳಕ್ಕೆ ಕಾಯ್ತಿರುತ್ತಾರೆ. ಸಂಬಳದಿಂದಲೇ ಅವರ ಜೀವನ ನಡೆಯೋದು. ಸಂಬಳದ ಪ್ರಕಾರವೇ ಖರ್ಚು ಮಾಡ್ತಾರೆ. ಆದ್ರೆ ಅನೇಕ ಬಾರಿ ಸಂಬಳಕ್ಕಿಂತ ಖರ್ಚು ಹೆಚ್ಚಿರುತ್ತದೆ. ಇದ್ರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಖರ್ಚು ನಿಯಂತ್ರಣ ಮಾಡೋದು ಇಲ್ಲಿ ಬಹಳ ಮುಖ್ಯ. ಸಂಬಳ ಹೆಚ್ಚಾಗ್ಬೇಕು, ಖರ್ಚು ಕಡಿಮೆ ಮಾಡ್ಬೇಕು, ಸದಾ ಕೈನಲ್ಲಿ ಹಣವಿರಬೇಕು ಎಂದು ಎಲ್ಲರೂ ಬಯಸ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ, ಸಂಬಳ ಬಂದ ತಕ್ಷಣ ಕೆಲ ಕೆಲಸವನ್ನು ತಪ್ಪದೆ ಮಾಡಿ.
ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಖರ್ಚು ಕಡಿಮೆಯಾಗೋದಲ್ಲದೆ ನಿಮ್ಮ ಸಂಬಳ (Salary) ಕ್ಕೆ ಯಾವುದೇ ಸಮಸ್ಯೆಯಾಗದೆ ಇರಬೇಕೆಂದ್ರೆ ಏನು ಮಾಡ್ಬೇಕು ಎನ್ನುವ ಬಗ್ಗೆ ಹೇಳಲಾಗಿದೆ.
ಮನೆ ಬಾಡಿಗೆಗೆ ಪಡೆಯಲು ಯೋಚಿಸುತ್ತಿದ್ರೆ, ವಾಸ್ತು ಬಗ್ಗೆ ತಿಳಿಯಿರಿ
ಸಂಬಳ ಬಂದ ತಕ್ಷಣ ಈ ಕೆಲಸ ಮಾಡಿ :
ದಾನ (Donation) ಮಾಡೋದನ್ನು ಮರೆಯಬೇಡಿ : ನಮಗೆ ಸಂಬಳ ಸಾಲುತ್ತಿಲ್ಲ, ಇನ್ನು ದಾನ ಮಾಡೋದು ಎಲ್ಲಿಂದ ಅಂಥ ನೀವು ಪ್ರಶ್ನೆ ಕೇಳಬಹುದು. ಆದ್ರೆ ದಾನ ಮಾಡೋದು ಬಹಳ ಮುಖ್ಯ. ಸಂಬಳ ಬಂದ ಕೂಡಲೇ ಮೊದಲು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಂದಿಷ್ಟು ದಾನ ಮಾಡಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ದಾನ ಮಾಡುವುದರಿಂದ ವ್ಯಕ್ತಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ದಾನದಿಂದ ಹಿರಿಯರ ಆಶೀರ್ವಾದ ಸಿಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ದಾನವನ್ನು ದೊಡ್ಡ ಸದ್ಗುಣವೆಂದು ಪರಿಗಣಿಸಲಾಗಿದೆ. ದಾನಕ್ಕಿಂತ ದೊಡ್ಡ ಧರ್ಮವಿಲ್ಲ ಎಂದು ಹೇಳಲಾಗುತ್ತದೆ.
ತಿಂಗಳ ಮೊದಲ ದಿನ ನಿಮ್ಮ ಕೈಗೆ ಸಂಬಳ ಬರ್ತಾ ಇದ್ದಂತೆ ನೀವು ಅಕ್ಕಿ, ಬಟ್ಟೆ, ಧಾನ್ಯ ಸೇರಿದಂತೆ ನಿಮಗೆ ಸಾಧ್ಯವಾಗುವ ಯಾವುದೇ ವಸ್ತುವನ್ನಾದ್ರೂ ನೀವು ನಿರ್ಗತಿಕರಿಗೆ ದಾನ ಮಾಡಬೇಕು. ಇದ್ರಿಂದ ಮಂಗಳಕರ ಫಲಿತಾಂಶ ನಿಮ್ಮದಾಗುತ್ತದೆ. ದಾನ ಮಾಡುವಾಗ ಯಾವಾಗ್ಲೂ ಹಸಿದ, ಬಡವ, ಅಗತ್ಯವಿರುವವರಿಗೆ ಮಾಡಬೇಕೆ ಹೊರತು ತೋರಿಕೆಗೆ ದಾನ ಮಾಡಬಾರದು. ಹಾಗೆಯೇ ಬಳಸಿದ, ಹಳೆಯ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ.
ದಾನದ ವಿಶೇಷ ಮಹತ್ವವನ್ನು ಧಾರ್ಮಿಕ ಪುರಾಣಗಳಲ್ಲಿಯೂ ಹೇಳಲಾಗಿದೆ. ಪುರಾಣಗಳಲ್ಲಿ ಎಲ್ಲವನ್ನೂ ದಾನ ಮಾಡಿದ ಉದಾಹರಣೆಗಳಿವೆ. ದಾನದ ವಿಷ್ಯ ಬಂದಾಗ ಮೊದಲು ರಾಜಾ ಸತ್ಯ ಹರಿಶ್ಚಂದ್ರನ ಹೆಸರು ಕೇಳಿ ಬರುತ್ತದೆ. ತನ್ನ ಸಂಪೂರ್ಣ ರಾಜ್ಯವನ್ನು ದಾನ ಮಾಡಿದ್ದ ರಾಜಾ ಹರಿಶ್ಚಂದ್ರ. ಇನ್ನೊಬ್ಬ ರಾಜ ಬಲಿ. ವಾಮನನಿಗೆ ಮೂರು ಹೆಜ್ಜೆ ಭೂಮಿಯನ್ನು ದಾನ ಮಾಡಿದ್ದ ಕಥೆ ನಿಮಗೆಲ್ಲ ತಿಳಿದಿರುತ್ತದೆ. ಮನುಷ್ಯ ತನ್ನ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ದಾನ ಮಾಡುತ್ತಲೇ ಇರಬೇಕು. ಇದರಿಂದ ದೇವತೆಗಳ ಆಶೀರ್ವಾದ ಸಿಗುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.
ನೀಮ್ ಕರೋಲಿ ಬಾಬಾಗೆ ಡ್ರಗ್ಸ್ ತಿನ್ನಿಸಿದ ಹಾರ್ವರ್ಡ್ ಪ್ರೊಫೆಸರ್! ಆಮೇಲೇನಾಯಿತು?
ಹಸುವಿಗೆ ಆಹಾರ (Feed Cows) ನೀಡಿ : ಧರ್ಮಗ್ರಂಥಗಳಲ್ಲಿ ಹಸುವನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಸಂಬಳ ಬಂದ ದಿನ ಮಾತ್ರವಲ್ಲ ಪ್ರತಿದಿನ ಹಸುವಿಗೆ ಬೆಲ್ಲದ ಜೊತೆ ರೊಟ್ಟಿ ತಿನ್ನಿಸುವ ರೂಢಿ ಮಾಡಿಕೊಳ್ಳಿ. ಇದ್ರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಸುವಿಗೆ ಮಾತ್ರವಲ್ಲ ನೀವು ನಾಯಿಗೆ ಕೂಡ ಆಹಾರ ನೀಡಿದ್ರೆ ರಾಹು, ಕೇತು ಮತ್ತು ಶನಿ ಈ ಮೂರು ಗ್ರಹಗಳ ಅಶುಭ ಪರಿಣಾಮ ಕಡಿಮೆಯಾಗಿ ಶುಭ ಪ್ರಾಪ್ತಿಯಾಗುತ್ತದೆ.
ಅಗ್ನಿಗೆ ಆಹಾರ ನೀಡಿ : ಎಷ್ಟೇ ಹಣ ಸಂಪಾದನೆ ಮಾಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಅಂಥವರು ಸಂಬಳ ಬಂದ ದಿನ ಹಾಗೂ ಪ್ರತಿ ದಿನ ಅಡುಗೆ ಮಾಡುವ ಸಂದರ್ಭದಲ್ಲಿ ಒಂದು ಕೆಲಸ ಮಾಡಬೇಕು. ಅಡುಗೆ ಮಾಡಿದ ತಕ್ಷಣ ಸ್ವಲ್ಪ ಭಾಗವನ್ನು ಅಗ್ನಿಗೆ ಹಾಕಬೇಕು. ಹೀಗೆ ಮಾಡಿದ್ರೆ ಒಂದು ಭಾಗ ದೇವತೆಗಳಿಗೆ ತಲುಪುತ್ತದೆ. ಇದ್ರಿಂದ ದೇವಾನುದೇವತೆಗಳ ಆಶೀರ್ವಾದ ನಿಮಗೆ ಲಭಿಸುತ್ತದೆ.