ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಅನ್ನಪೂಣೇಶ್ವರಿ ಸನ್ನದಿಯಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ. ನಾಲ್ಕನೇ ದಿನ ಕಾರ್ಯಕ್ರಮದಲ್ಲಿ ಶ್ರೀ ಸನ್ನದಿಯಲ್ಲಿ ಆದಿತ್ಯಾದಿ ನವಗ್ರಹ ಹೋಮ ಹಾಗೂ ಧಾರ್ಮಿಕ ಸಭೆ ನಡೆಯಿತು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.25) : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಅನ್ನಪೂಣೇಶ್ವರಿ ಸನ್ನದಿಯಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ. ನಾಲ್ಕನೇ ದಿನ ಕಾರ್ಯಕ್ರಮದಲ್ಲಿ ಶ್ರೀ ಸನ್ನದಿಯಲ್ಲಿ ಆದಿತ್ಯಾದಿ ನವಗ್ರಹ ಹೋಮ ಹಾಗೂ ಧಾರ್ಮಿಕ ಸಭೆ ನಡೆಯಿತು.
undefined
ನಮ್ಮ ಸಂಸ್ಕಾರ ಚೆನ್ನಾಗಿದ್ದರೆ ಮಾತ್ರ ನಮ್ಮ ಸಂಸ್ಕೃತಿ :
ನಮ್ಮ ಸಂಸ್ಕಾರ ಚೆನ್ನಾಗಿದ್ದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಶ್ರೀ ಮದಚ್ಯುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನ ಭೀಮಕಟ್ಟೆಯ ಶ್ರೀ ರಘುವರೇಂದ್ರತೀರ್ಥ ಮಹಾಸ್ವಾಮಿಗಳು ಹೇಳಿದರು.
ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಹೊರನಾಡಿನಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಇಂದು ನಡೆದ ನಾಲ್ಕನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಮಹಾರಥೋತ್ಸವ
ಧರ್ಮ ಬೆಳೆಯಬೇಕಾದರೆ ನಾವು ಧರ್ಮದ ಬಗ್ಗೆ ಅರಿಯಬೇಕು. ಅಕ್ರಮ ಸಂಪಾದನೆ ಮಾನಸೀಕ ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ಪ್ರಕೃತಿಯನ್ನು ವಿರೂಪಗೊಳಿಸುವುದು ನಮ್ಮ ಸನಾತನ ಧರ್ಮವಲ್ಲ ಎಂದು ಹೇಳಿದರು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ(Ravi hegde) ಮಾತನಾಡಿ ಹಿಂದೂ ಧರ್ಮಕ್ಕೆ ಸ್ಥಾಪಕರಿಲ್ಲ ಇದು ಒಂದು ವಿಜ್ಞಾನ, ಧರ್ಮ ಅಲ್ಲ ಇದು ಜೀವನ ಶಾಸ್ತ್ರ.ಜೀವನ ಕ್ರಮ ಮನುಷ್ಯನ ವಿಕಾಸ ಹೊಂದುವಂತಹ ಜ್ಞಾನದ ಶಾಸ್ತ್ರವೇ ಹಿಂದೂ ಧರ್ಮ. ದೇವಸ್ಥಾನಗಳಲ್ಲಿ ಸಾಮಾಜಿಕ ಕೈಂಕರ್ಯಗಳ ಜೊತೆಗೆ ವೈಜ್ಞಾನಿಕ ಕೈಂಕರ್ಯಗಳು ಕೂಡ ನಡೆಯಬೇಕು ಎಂದು ಹೇಳಿದರು. ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸೇವಾ ಸಾಧಕರಾದ ಇವರನ್ನು ಗೌರವಿಸಲಾಯಿತು.
ಆದಿತ್ಯಾದಿ ನವಗ್ರಹ ಹೋಮದ ಪೂರ್ಣಾಹುತಿ
ಧಾರ್ಮಿಕ ಕಾರ್ಯಕ್ರಮದ ಮುಂಚಿತವಾಗಿ ಶ್ರೀ ಆದಿತ್ಯಾದಿ ನವಗ್ರಹ ದೇವರುಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶ್ರೀ ಆದಿತ್ಯಾದಿ ನವಗ್ರಹ ಹೋಮದ ಪೂರ್ಣಾಹುತಿ ಶ್ರೀ ರಘುವರೇಂದ್ರತೀರ್ಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಅಮಿತ್ ನಾಡಿಗ್ ಮತ್ತು ತಂಡ ಬೆಂಗಳೂರು ಇವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.
ಚುನಾವಣೆ ಹಿನ್ನೆಲೆ ದೇವರ ಮೊರೆ ಹೋದ ವಿಜಯೇಂದ್ರ, ಹೊರನಾಡಿನಲ್ಲಿ ಪತ್ನಿ ಸಮೇತ ವಿಶೇಷ ಪೂಜೆ
ನಾಳೆ ಹೊರನಾಡಿನಲ್ಲಿ ರುದ್ರ ಹೋಮದ ಪೂರ್ಣಾಹುತಿ
ಹೊರನಾಡಿಲ್ಲಿ(Horanadu) ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಾಳೆ ನಡೆಯುವ ಕಾರ್ಯಕ್ರಮ ಆಂಜನೇಯ ಸ್ವಾಮಿ ಸನ್ನಿಧಿಯ ರುದ್ರ ಹೋಮ(Rudra homa)ದ ಪೂರ್ಣಾಹುತಿ ಮತ್ತು ಕುಂಭಾಭಿಕ ಸುಬ್ರಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಸಭೆಯಲ್ಲಿ ಅರಳುಮಲ್ಲಿಗೆ ಪಾರ್ಥಸಾರಥಿ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಮಂತ್ ವಶಿಷ್ಠ ಮತ್ತು ಸಂಗಡಿಗರಿಂದ ದಾಸವಾಣಿ ಮತ್ತು ಸುಗಮ ಸಂಗೀತ