Home Vastu: ಮನೆಯಲ್ಲಿ ಈ ಲಕ್ಕಿ ಕ್ಯಾಟ್ ಇಟ್ನೋಡಿ, ಲಕ್ ಖುಲಾಯಿಸೋದು ಗ್ಯಾರಂಟಿ

Published : Sep 05, 2022, 04:14 PM IST
Home Vastu: ಮನೆಯಲ್ಲಿ ಈ ಲಕ್ಕಿ ಕ್ಯಾಟ್ ಇಟ್ನೋಡಿ, ಲಕ್ ಖುಲಾಯಿಸೋದು ಗ್ಯಾರಂಟಿ

ಸಾರಾಂಶ

ವಾಸ್ತು ಅಂದ್ರೆ ಗೋಡೆ ಒಡೆದು ಮತ್ತೊಂದು ಗೋಡೆ ನಿರ್ಮಾಣ ಮಾಡೋದಲ್ಲ. ಕೆಲವೊಂದು ವಸ್ತುಗಳು ಕೂಡ ವಾಸ್ತುದೋಷ ದೂರ ಮಾಡುತ್ವೆ. ಅದ್ರಲ್ಲಿ ಫೆಂಗ್ ಶೂಯಿ ಲಕ್ಕಿ ಕ್ಯಾಟ್ ಕೂಡ ಸೇರಿದೆ. ಮನೆಯ ಎಲ್ಲ ಸಮಸ್ಯೆಗೆ ಇದ್ರಲ್ಲಿ ಪರಿಹಾರವಿದೆ.  

ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕೆಂದ್ರೆ ವಾಸ್ತು ಕೂಡ ಮುಖ್ಯವಾಗುತ್ತದೆ. ಮನೆಯ ವಾಸ್ತು ಸರಿಯಾಗಿದ್ದರೆ ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಭಾರತೀಯರು ವಾಸ್ತು ಶಾಸ್ತ್ರದ ಜೊತೆ ಫೆಂಗ್ ಶೂಯಿ ಶಾಸ್ತ್ರವನ್ನು ಕೂಡ ನಂಬ್ತಾರೆ. ಚೀನಾದ ವಾಸ್ತು ಶಾಸ್ತ್ರವಾಗಿರುವ ಫೆಂಗ್ ಶೂಯಿ ಸಲಹೆಯನ್ನು ಅನೇಕರು ಪಾಲನೆ ಮಾಡ್ತಾರೆ. ಫೆಂಗ್ ಶೂಯಿಯಲ್ಲಿ ನೀವು ಲಾಫಿಂಗ್ ಬುದ್ಧ, ವಿಂಡ್ ಚೈಮ್ ಮತ್ತು ಲಕ್ಕಿ ಕ್ಯಾಟ್ ನೋಡ್ಬಹುದು. ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ನೆರವಾಗುವ ಜಪಾನಿನ ಲಕ್ಕಿ ಕ್ಯಾಟ್ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡ್ತೇವೆ. 

ಲಕ್ಕಿ ಕ್ಯಾಟ್ (Lucky Cat) ನಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ? :
ಸಮಸ್ಯೆ ದೂರ ಮಾಡುತ್ತೆ ಜಪಾನಿ ಬೆಕ್ಕು (Japanese Cat) :
ಭಾರತದಲ್ಲಿ ಬೆಕ್ಕನ್ನು ಅಪಶಕುನ ಎನ್ನುತ್ತಾರೆ. ಫೆಂಗ್ ಶೂಯಿಯಲ್ಲಿ ಬೆಕ್ಕಿಗೆ ಮಹತ್ವದ ಸ್ಥಾನವಿದೆ. ಜಪಾನಿನ ಬೆಕ್ಕು, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿ ನಿಯಮ ಪಾಲನೆ ಮಾಡುವ ಜನರು ಜಪಾನಿನ ಬೆಕ್ಕನ್ನು ತಮ್ಮ ಮನೆ ಅಥವಾ ಕಚೇರಿಯಲ್ಲಿ ಇಡ್ತಾರೆ. ಮನೆ ಹಾಗೂ ಕಚೇರಿಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗೆ ಇದು ಪರಿಹಾರವೆಂದು ಅವರು ಪರಿಗಣಿಸಿದ್ದಾರೆ. ಇದನ್ನು ಲಕ್ಕಿ ಕ್ಯಾಟ್ ಜೊತೆ ಮನಿ ಕ್ಯಾಟ್ ಎಂದೂ ಕರೆಯುತ್ತಾರೆ.  

ಲಕ್ಕಿ ಕ್ಯಾಟನ್ನು ಈ ಜಾಗದಲ್ಲಿ ಇಡಿ : ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ನೀವು ಈಶಾನ್ಯ ದಿಕ್ಕಿನಲ್ಲಿ ಹಸಿರು ಬೆಕ್ಕಿನ ಮೂರ್ತಿಯನ್ನು ಇಡಬಹುದು. ಇದರಿಂದ ನಿಮ್ಮ ಮನೆಯ ಅದೃಷ್ಟ ಬದಲಾಗುತ್ತದೆ. ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ.

Astrology Tips : ಗೆಸ್ಟ್ ಬರ್ತಾರೆ ಅನ್ನೋದ್ರಿಂದ ಹಿಡಿದು ಅನಾಹುತದವರೆಗೆ ಸೂಚನೆ ನೀಡುತ್ತೆ ಜೇಡ

ಹಣದ ಸಮಸ್ಯೆಗೆ (Financial Problem) ಲಕ್ಕಿ ಕ್ಯಾಟ್ ಪರಿಹಾರ : ಹಣದ ಸಮಸ್ಯೆ ಯಾರಿಗೆ ಇಲ್ಲ? ಪ್ರತಿಯೊಬ್ಬರಿಗೂ ಹಣದ ಸಮಸ್ಯೆ ಇದ್ದೇ ಇದೆ. ಆರ್ಥಿಕ ಸಮಸ್ಯೆ ಕಾಡಬಾರದು ಎನ್ನುವವರು ಅಂಗಡಿ ಅಥವಾ ಕಚೇರಿಯ ಪಶ್ಚಿಮ ದಿಕ್ಕಿನಲ್ಲಿ ಲಕ್ಕಿ ಕ್ಯಾಟ್ ಇಡಬೇಕು. ಈ ಲಕ್ಕಿ ಕ್ಯಾಟ್ ನಿಮ್ಮ ಲಕ್ಕು ಬದಲಿಡುತ್ತದೆ. ಇದ್ರಿಂದ ಹಣದ ಹೊಳೆ ಹರಿಯುತ್ತದೆ. ಮುಂದೆ ಬಂಗಾರದ ಬೆಕ್ಕನ್ನು ಇಟ್ಟುಕೊಳ್ಳುವ ಅದೃಷ್ಟ ನಿಮ್ಮದಾಗುತ್ತದೆ.   

ನೀಲಿ ಬೆಕ್ಕನ್ನು (Blue Cat) ಮನೆಯಲ್ಲಿಟ್ಟು ನೋಡಿ : ಇದಲ್ಲದೆ ನೀವು ಹಣಕಾಸಿನ ಲಾಭ ಪಡೆಯಬೇಕು ಎಂದಾದ್ರೆ ಮನೆಯಲ್ಲಿ ನೀಲಿ ಬೆಕ್ಕನ್ನು ಇಟ್ಟುಕೊಳ್ಳಬಹುದು. ಈ ಬೆಕ್ಕನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ನೀಲಿ ಬೆಕ್ಕನ್ನು ಭಗವಾನ್ ಕುಬೇರನ ದಿಕ್ಕಾದ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ನೀಲಿ ಬೆಕ್ಕನ್ನು ಇಟ್ಟರೆ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಅದೃಷ್ಟ (Luck) ಬದಲಿಸಲು ಈ ಬೆಕ್ಕು ಬೆಸ್ಟ್ : ನಿಮ್ಮ ಮನೆಯ ಅದೃಷ್ಟವನ್ನು ಹೆಚ್ಚಿಸಲು ನೀವು ಚಿನ್ನದ ಬಣ್ಣದ ಅದೃಷ್ಟದ ಬೆಕ್ಕನ್ನು ಇಟ್ಟುಕೊಳ್ಳಬಹುದು. ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಭಾಗದಲ್ಲಿ ನೀವು ಚಿನ್ನದ ಬಣ್ಣದ ಬೆಕ್ಕನ್ನು ಇಡಬೇಕು. ಇದು ಮನೆಯಲ್ಲಿ ಸಂತೋಷವನ್ನು ತರುತ್ತದೆ. ಮನೆ ಅದೃಷ್ಟ ಬದಲಿಸುತ್ತದೆ. ಮನೆಯಲ್ಲಿ ಆರೋಗ್ಯ, ಸುಖವನ್ನು ಹೆಚ್ಚಿಸುತ್ತದೆ. 

ನಕಾರಾತ್ಮಕ ಶಕ್ತಿಗೆ (Negative Energy) ಸಿಗಲಿದೆ ಮುಕ್ತಿ : ಮನೆಯ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ರೆ ನೀವು ಲಕ್ಕಿ ಬೆಕ್ಕನ್ನು ಮನೆಗೆ ತನ್ನಿ. ಮನೆಯವರಿಗೆ ದೃಷ್ಟಿ ಬಿದ್ದಿದೆ ಎಂದಾದ್ರೆ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದೆ ಎನ್ನುವವರು, ಮನೆಗೆ ನೀಲಿ ಬೆಕ್ಕನ್ನು ತರಬೇಕು. ಇದು ಎಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ. 

ಹವನದ ಭಸ್ಮ ಬಳಸಿ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಿವಾರಿಸಿ

ದಾಂಪತ್ಯ ಪ್ರೀತಿಗೆ (Married Life Love) ಇದು ಬೆಸ್ಟ್ : ಸಂಗಾತಿಯೊಂದಿಗೆ ನೀವು ಸದಾ ಜಗಳವಾಡ್ತಿರಿ ಎಂದಾದ್ರೆ ಅದಕ್ಕೂ ಜಪಾನಿ ಬೆಕ್ಕಿನಲ್ಲಿ ಪರಿಹಾರವಿದೆ. ಮಲಗುವ ಕೋಣೆಯಲ್ಲಿ ನೀವು ಕೆಂಪು ಬಣ್ಣದ ಬೆಕ್ಕನ್ನು ಇಡಬೇಕು. ಮಲಗುವ ಕೋಣೆಯ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ನೀವು ಕೆಂಪು ಬೆಕ್ಕನ್ನು ಇಟ್ಟರೆ ಇದರಿಂದ ಪತಿ-ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ.
 

PREV
Read more Articles on
click me!

Recommended Stories

Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!
ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌