Surya Gochar: ಮೇ 15ರ ನಂತರ ಈ ಐದು ರಾಶಿಗಳಿಗೆ ಭಲೇ ಅದೃಷ್ಟ!

By Suvarna News  |  First Published May 7, 2022, 9:27 AM IST

ಸೂರ್ಯನ ಪಥ ಬದಲಾವಣೆಯಿಂದ ಈ ಐದು ರಾಶಿಯವರ ಬದುಕೇ ಬದಲಾಗಬಹುದು. ಆರೋಗ್ಯ, ಐಶ್ವರ್ಯ, ನೆಮ್ಮದಿ ಎಲ್ಲವನ್ನೂ ಪಡೆಯುವ ಈ ಐದು ರಾಶಿಗಳ ಅದೃಷ್ಟವಂತರು ನೀವಾ? ಚೆಕ್‌ ಮಾಡಿ.


ಸೂರ್ಯ ಗೋಚಾರ್ (Surya Ghochar)ಅನ್ನೋದು ಜ್ಯೋಷಿಷ್ಯದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತೆ. ಮೇ 15 ರಂದು ಸೂರ್ಯ (Sun) ಮೇಷ ರಾಶಿ ತೊರೆದು ವೃಷಭ ರಾಶಿ ಪ್ರವೇಶಿಸುತ್ತಾನೆ. ಸೂರ್ಯನ ಚಲನೆಯ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಸೂರ್ಯನ ಪ್ರಭಾವದಿಂದ ವ್ಯಕ್ತಿಯ ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳು ಹೆಚ್ಚುತ್ತವೆ. ಸೂರ್ಯ ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 15 ರಂದು, ಸೂರ್ಯನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 15 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ 6 ರಾಶಿಯನ್ನು ಹೊಂದಿರುವ ವ್ಯಕ್ತಿಗಳಿಗೆ ತುಂಬಾ ಮಂಗಳಕರ ಪರಿಣಾಮಗಳಾಗುತ್ತವೆ. ಬಹಳ ಮುಖ್ಯವಾಗಿ ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ.

ಮೇಷ ರಾಶಿ (Aries)

Tap to resize

Latest Videos

ವೃಷಭ ರಾಶಿಗೆ ಸೂರ್ಯನ ಪ್ರವೇಶವು ಮೇಷ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಆಸ್ತಿ ಖರೀದಿಸಬಹುದು.ಮಾತ್ರವಲ್ಲ, ಆದಾಯದ ಬಹು ಪಾಲನ್ನು ಉಳಿಸುವುದು ಕೂಡಾ ಸಾಧ್ಯವಾಗುತ್ತದೆ. ಹಣದ ಬಗ್ಗೆ ಈ ರಾಶಿಯವರಿಗೆ ಬಹಳ ವ್ಯಾಮೋಹವಿದೆ. ಇದೀಗ ಬಯಸಿದಷ್ಟು ಹಣ ಕೈ ಸೇರಿ ಖುಷಿ ಹೆಚ್ಚಾಗುತ್ತದೆ. ಈಗಾಗಲೇ ಬದುಕಿನಲ್ಲಿ ಸಾಕಷ್ಟು ಹೊಡೆತ ತಿಂದಿರುವ ಕಾರಣ ಹಣ ಬಂದ ಕೂಡಲೇ ಅಹಂಕಾರ ಬಾಧಿಸಲಾರದು. ಹಣವನ್ನು ಹೂಡಿಕೆ ಮಾಡುವ ಮೂಲಕ ಇದರಿಂದ ಹೆಚ್ಚಿನ ಲಾಭವನ್ನು ಈ ರಾಶಿಯವರು ಪಡೆಯಲಿದ್ದಾರೆ.

ರುದ್ರಾಕ್ಷಿಯಿಂದ ಸುಖ – ಸಂಪತ್ತು ಆರೋಗ್ಯ.. ಯಾವ ವಿಧ ನಿಮಗೆ ಒಳ್ಳೆಯದು?

ವೃಷಭ ರಾಶಿ (Taurus)

ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದು, ಈ ರಾಶಿಯವರಿಗೆ ದೊಡ್ಡ ಲಾಭವನ್ನೇ ನೀಡಲಿದ್ದಾನೆ. ಈ ರಾಶಿಯವರು ಕೆಲಸದಲ್ಲಿ ದೊಡ್ಡ ಸ್ಥಾನವನ್ನು ಪಡೆಯಬಹುದು. ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಪಡೆಯಬಹುದು. ಆದಾಯದಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ವೃತ್ತಿ ಬದುಕಿನಲ್ಲಾಗುವ ಈ ಮಹತ್ವದ ಬದಲಾವಣೆಯಿಂದ ಬದುಕು ದೊಡ್ಡ ತಿರುವು ಪಡೆದುಕೊಳ್ಳಲಿದೆ. ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ. ಮನೆ ಕಟ್ಟುವ, ಉದ್ಯಮದಲ್ಲಿ ಪಾಲುದಾರಿಕೆ ಮಾಡುವ ಸಂಭವವಿದೆ. ಹಣದ ಹೂಡಿಕೆಯಲ್ಲೂ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ.

ಕಟಕ ರಾಶಿ (Cancer)

ಸೂರ್ಯನ ಸಂಚಾರದಿಂದ ಕಟಕ ರಾಶಿಯವರಿಗೆ ಆರ್ಥಿಕ ಲಾಭ ಸಿಗಬಹುದು. ಉದ್ಯೋಗವಿರಲಿ, ವ್ಯಾಪಾರವಿರಲಿ ಎರಡರಲ್ಲಿಯೂ ಪ್ರಗತಿಯನ್ನು ಪಡೆಯುತ್ತಾರೆ. ಹಣಕಾಸಿನ ಹೂಡಿಕೆ ಪ್ರಯೋಜನಕಾರಿಯಾಗಲಿದೆ. ಗೌರವ ಹೆಚ್ಚಾಗಲಿದೆ. ಪ್ರಯಾಣವನ್ನು ಬಹಳ ಇಷ್ಟ ಪಡುವ ಈ ರಾಶಿಯವರಿಗೆ ಕನಸಿನ ಪ್ರಯಾಣಕ್ಕೆ ಹಣ ಕೂಡಿಡುವುದು ಸಾಧ್ಯವಾಗುತ್ತದೆ. ಭವಿಷ್ಯದ ಬಗೆಗಿನ ಆತಂಕಗಳೆಲ್ಲ ಮಂಜಿನಂತೆ ಮಾಯವಾಗಬಹುದು. ಸುರಕ್ಷತಾ ಭಾವ ಮನಸ್ಸನ್ನು ಆವರಿಸಬಹುದು. ಈ ಹಣಕಾಸಿನ ಚೈತನ್ಯ ಈ ರಾಶಿಯವರನ್ನು ಹೊಸ ಹೊಸ ಸಾಹಸಗಳಲ್ಲಿ ತೊಡಗುವಂತೆ ಮಾಡಬಹುದು. ಇದರಿಂದ ಹಣದ ಲಾಭವಿಲ್ಲದಿದ್ದರೂ ಮನಸ್ಸಿಗೆ ಸಂತೋಷವಂತೂ ಆಗುತ್ತದೆ.

ಸಿಂಹ ರಾಶಿ (leo)

ಸೂರ್ಯನ ರಾಶಿಯ ಬದಲಾವಣೆಯು ಸಿಂಹ ರಾಶಿಯವರಿಗೆ ಗೌರವ, ಹಣ, ಸ್ಥಾನಮಾನವನ್ನು ತರುತ್ತದೆ. ಪ್ರಯಾಣ ಬೆಳೆಸುವ ಅವಕಾಶವಿರುತ್ತದೆ. ಪ್ರಯಾಣವು ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಉದ್ಯೋಗದಲ್ಲಿ ದಿಢೀರ್ ಭತ್ಯೆ ಹೆಚ್ಚಾಗಬಹುದು. ಭಡ್ತಿ ಸಿಕ್ಕಿ ದೊಡ್ಡ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಅಂದುಕೊಂಡ ಆಸೆಗಳೆಲ್ಲ ಈಡೇರುವವು. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ಈ ಹಣಕಾಸನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವಿರಿ. ವಿದ್ಯಾರ್ಥಿಗಳಾಗಿದ್ದರೆ ತಮ್ಮ ಶಿಕ್ಷಣಕ್ಕೆ ಬಳಸುವಿರಿ. ಬಡ ವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡುವಿರಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಉತ್ತಮ ಹೆಸರು, ಕೀರ್ತಿ ಬರಲಿದೆ. ನಿಮ್ಮ ಲೆಕ್ಕಾಚಾರದ ಮನಸ್ಥಿತಿಯಿಂದ ಹಣದ ಉಳಿಕೆಯೂ ಆಗುವುದು.

Name Astrology: ಈ ಹೆಸರಿನ ಹುಡುಗರು ಪತ್ನಿಯನ್ನು ಪ್ರೀತಿಯ ಕಡಲಲ್ಲೇ ತೇಲಿಸುತ್ತಾರೆ!

ಕನ್ಯಾರಾಶಿ (Virgo)

ಕನ್ಯಾ ರಾಶಿಯ ಜನರು ಸೂರ್ಯನ ರಾಶಿಚಕ್ರದ ಚಿಹ್ನೆಯ ಬದಲಾವಣೆಯೊಂದಿಗೆ ಅದೃಷ್ಟವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಈ ಒಂದು ತಿಂಗಳಲ್ಲಿ ಅದೃಷ್ಟವು ಉಜ್ವಲವಾಗಿ ಬೆಳಗುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಲಭಿಸುತ್ತದೆ. ಜೀವನದಲ್ಲಿ ಸಂತೋಷ ಬರುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳೆಲ್ಲ ಸುಗಮವಾಗಿ ಆಗುತ್ತದೆ. ಮನೆ ಕಟ್ಟುವ, ಖರೀದಿ ಮಾಡುವ ಸಾಧ್ಯತೆ ಇದೆ. ಆದರೆ ಹಣವನ್ನು ಇತರರಿಗೆ ಸಾಲ ರೂಪದಲ್ಲಿ ಕೊಡುವಾಗ ಎಚ್ಚರ ಇರಲಿ. ಹಣ ಬಂತು ಅಂತ ಖರ್ಚು ಮಾಡಿದರೆ ಮುಂದೆ ಅನಿವಾರ್ಯ ಬಿದ್ದಾಗ ಹಣವಿಲ್ಲದೇ ಪರಿತಪಿಸಬಹುದು. ಹೀಗಾಗಿ ಖರ್ಚಿನಲ್ಲಿ ಎಚ್ಚರ ಅತ್ಯಗತ್ಯ.

click me!