ಆದಾಯ ಹೆಚ್ಚಿಸುವ ಏಕಮುಖಿ ರುದಾಕ್ಷಿ, ಈ ರಾಶಿಗೆ ಧಾರಣೆಯ ವಿಶೇಷ ಫಲ

By Suvarna NewsFirst Published May 11, 2022, 12:53 PM IST
Highlights

ರುದ್ರಾಕ್ಷಿ ಎಂದರೆ ಶಿವನ ಕಣ್ಣೀರು ಎನ್ನುತ್ತವೆ ಪುರಾಣ. ರುದ್ರಾಕ್ಷಿಗೆ ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನವಿದೆ. ನಮ್ಮ ಸಮಸ್ಯೆಗಳ ಬಗೆಹರಿಸುವಲ್ಲಿ ರುದ್ರಾಕ್ಷಿಯು ದೊಡ್ಡ ಪಾತ್ರ ವಹಿಸುತ್ತದೆ. ಏಕಮುಖಿ ರುದ್ರಾಕ್ಷಿಯ ಲಾಭಗಳೇನು? ಯಾವ ರಾಶಿಯವರು ಧರಿಸಬೇಕು?

ಬಹಳ ಹಿಂದಿನಿಂದಲೂ ರುದ್ರಾಕ್ಷಿ(Rudraksha)ಯನ್ನು ಆಭರಣದಂತೆ ಧರಿಸಲಾಗುತ್ತದೆ. ರುದ್ರಾಕ್ಷಿ ಎಂದರೆ ಪರಮೇಶ್ವರನ ಕಣ್ಣೀರು ಎಂಬ ನಂಬಿಕೆ ಇದೆಯ ಶಿವ ಮಹಾಪುರಾಣ(Shiva Mahapuran)ದಲ್ಲಿ ರುದ್ರಾಕ್ಷಿಯ ವಿಧಗಳು, ಅವುಗಳ ಧಾರಣೆಯ ಲಾಭಗಳು, ಪ್ರಾಮುಖ್ಯತೆ ಎಲ್ಲವನ್ನೂ ವಿವರಿಸಲಾಗಿದೆ. ಅದರಂತೆ 16 ಬಗೆಯ ರುದ್ರಾಕ್ಷಿಗಳಿವೆ. ಇಂದು ಏಕ ಮುಖಿ ರುದ್ರಾಕ್ಷಿ(Ek Mukhi Rudraksha) ಎಂದರೇನು, ಅದರ ಲಾಭಗಳೇನು, ಧಾರಣೆಯು ಯಾವ ರಾಶಿಯವರಿಗೆ ಲಾಭ ತಂದು ಕೊಡಲಿದೆ ಎಲ್ಲವನ್ನೂ ತಿಳಿಯೋಣ. 

ಮೊದಲಿಗೆ ಏಕಮುಖಿ ರುದ್ರಾಕ್ಷಿಯ ಲಾಭಗಳೇನು ತಿಳಿಯೋಣ.

ರೋಗಗಳಿಂದ ಮುಕ್ತಿ
ನೀವು ಆರೋಗ್ಯ(Health) ಸಮಸ್ಯೆ ಎದುರಿಸುತಿದ್ದರೆ ಇದನ್ನು ಧರಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಮತ್ತೊಂದೆಡೆ, ವ್ಯಕ್ತಿಯ ಜಾತಕ(Horoscope)ದಲ್ಲಿ ಸೂರ್ಯನು ದುರ್ಬಲ ಸ್ಥಾನದಲ್ಲಿದ್ದರೂ ಸಹ ಏಕಮುಖಿ ರುದ್ರಾಕ್ಷಿಯನ್ನು ಧರಿಸುವುದು ಸೂಕ್ತವಾಗಿದೆ. ಇದು ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. 

ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

ಧನಲಾಭಕ್ಕಾಗಿ
ಬ್ರಹ್ಮಾಂಡದ ಕಲ್ಯಾಣ ವಸ್ತುಗಳಲ್ಲಿ ಏಕ ಮುಖದ ರುದ್ರಾಕ್ಷಿಯ ಹೆಸರು ಮೊದಲು ಬರುತ್ತದೆ. ಈ ರುದ್ರಾಕ್ಷಿಯ ಪ್ರಭಾವದಿಂದ, ಒಬ್ಬ ವ್ಯಕ್ತಿಯು ತನ್ನ ಇಂದ್ರಿಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಏಕ ಮುಖಿ ರುದ್ರಾಕ್ಷಿಯು ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ವಿದ್ಯಾರ್ಥಿಗಳಿಗೆ ಏಕಾಗ್ರತೆ(concentration) ಒದಗಿಸಿಕೊಡುತ್ತದೆ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಕೂಡಾ ಏಕ ಮುಖಿ ರುದ್ರಾಕ್ಷಿಯನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಧ್ಯಾನದಲ್ಲಿ ಮನಸ್ಸು ನಿಲ್ಲುತ್ತಿಲ್ಲ ಎಂದರೆ ಅಂಥವರು ಏಕ ಮುಖಿ ರುದ್ರಾಕ್ಷಿ ಧರಿಸುವುದರಿಂದ ಏಕಾಗ್ರತೆ ಸಾಧಿಸಬಹುದು. ಸಾಮೂಹಿಕ ಜನರೊಂದಿಗಿರುವವರು, ಸಂಘಟನೆ, ಗುಂಪಿನ ಮುಂದಾಳತ್ವ ವಹಿಸುವವರು ಏಕ ಮುಖಿ ರುದ್ರಾಕ್ಷಿ ಧರಿಸಿದರೆ ಅವರ ನಾಯಕತ್ವ ಶಕ್ತಿ ಹಿಗ್ಗುತ್ತದೆ. 

ಈ ರಾಶಿಯವರಿಗೆ ಏಕಮಖಿ ರುದ್ರಾಕ್ಷಿಯಿಂದ ವಿಶೇಷ ಫಲ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಕಮುಖಿ ರುದ್ರಾಕ್ಷಿಯನ್ನು ಯಾವುದೇ ವ್ಯಕ್ತಿ ಧರಿಸಬಹುದು. ಆದರೆ ಸೂರ್ಯನೊಂದಿಗಿನ ಅದರ ಸಂಬಂಧದಿಂದಾಗಿ, ಏಕಮುಖಿ ರುದ್ರಾಕ್ಷಿಯು ಸಿಂಹ ರಾಶಿ(Leo)ಯ ಜನರಿಗೆ ವಿಶೇಷವಾಗಿ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ. ಇತರ ರಾಶಿಚಕ್ರ ಚಿಹ್ನೆಗಳ ಜನರು ಒಮ್ಮೆ ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸಿದ ನಂತರವೇ ಏಕಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಅಸಲಿ, ನಕಲಿ(Fake) ಗುರುತಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ನಕಲಿ ರುದ್ರಾಕ್ಷಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದರಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂದು ಗುರುತಿಸುವುದೇ ಕಷ್ಟಕರವಾಗಿದೆ. ನಕಲಿ ರುದ್ರಾಕ್ಷಿಯನ್ನು ಧರಿಸುವುದರಿಂದ, ವ್ಯಕ್ತಿಯು ಪೂರ್ಣ ಫಲಿತಾಂಶವನ್ನು ಪಡೆಯುವುದಿಲ್ಲ. ಹಾಗಿದ್ರೆ ಏಕ ಮುಖಿ ರುದ್ರಾಕ್ಷಿಯ ವಿಷಯಕ್ಕೆ ಬಂದಾಗ ಅಸಲಿ ಯಾವುದು, ನಕಲಿ ಯಾವುದು ಎಂದು ಗುರುತಿಸುವುದು ಹೇಗೆ?

ವಾರದ ಈ ದಿನ ಹೂಡಿಕೆ ಮಾಡಿದ್ರೆ ಕೈ ಸುಟ್ಟುಕೊಳ್ಳೋದು ನಿಶ್ಚಿತ!

ಏಕಮುಖಿ ರುದ್ರಾಕ್ಷಿಗೆ ಒಂದೇ ಪಟ್ಟೆ ಇರುತ್ತದೆ. ಅದು ಅರ್ಧ ಚಂದ್ರದಂತಿರುತ್ತದೆ ಮತ್ತು ಅದರ ಆಕಾರ ಗೋಡಂಬಿಯಂತಿರುತ್ತದೆ. ನೀವು ಅದು ನಕಲಿಯೋ ಎಂದು ಪರೀಕ್ಷಿಸಬೇಕೆಂದರೆ ಮೊದಲು ಏಕ ಮುಖಿ ರುದ್ರಾಕ್ಷಿಯನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ. ಮೊದಲ ಬಣ್ಣಕ್ಕಿಂತ ಗಾಢವಾಗಿ ಕಂಡರೆ ಅದು ನಿಜವಾದ ರುದ್ರಾಕ್ಷಿ ಎಂದರ್ಥ. ಇನ್ನೊಂದು ವಿಧಾನವೆಂದರೆ ಏಕ ಮುಖಿ ರುದ್ರಾಕ್ಷಿಯನ್ನು ಕುದಿವ ನೀರಿಗೆ ಹಾಕಿಡುವುದು. ಅದು ಬಣ್ಣ ಬಿಟ್ಟಿತೆಂದರೆ ನಕಲಿ ರುದ್ರಾಕ್ಷಿ ಎಂದು ತಿಳಿಯಬೇಕು. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!