ಈದ್ ಉಲ್ ಫಿತ್ರ್: ದೇವರ ಮೇಲಿನ ಭಯ, ಭಕ್ತಿ, ವಿಶ್ವಾಸ ಸಾರುವ ಹಬ್ಬ

By Suvarna NewsFirst Published Jun 29, 2023, 11:14 AM IST
Highlights

ಅನೇಕ ಸತ್ವ ಪರೀಕ್ಷೆಗಳನ್ನು ಎದುರಿಸಿ, ದೇವರ ಆದೇಶವನ್ನು ಪಾಲಿಸಿದ ಪ್ರವಾದಿ ಇಬ್ರಾಹಿಂ ಅವರು ಸೃಷ್ಟಿಗಳು ದೇವನಾಗಲು ಸಾಧ್ಯವಿಲ್ಲ ಸೃಷ್ಟಿಕರ್ತನೆ ಆರಾಧನೆಗೆ ಅರ್ಹನು ಎಂಬುದನ್ನು ಆ ಜನತೆಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದರು. ಅದಕ್ಕೆ ಅವರಿಗೆ ಅಗ್ನಿಕುಂಡ ಕಸಿಯೋ ಶಿಕ್ಷೆ ಜಾರಿಗೊಳಿಸಲಾಯಿತು.

-ಸಬೀಹಾ ಫಾತಿಮಾ ಮಂಗಳೂರು.

ಇಂದಿಗೆ ಸರಿಸುಮಾರು 4000 ವರ್ಷಗಳ ಹಿಂದೆ ಇರಾಕಿನ ಉರ್ ಎಂಬ ಪಟ್ಟಣದಲ್ಲಿ ಪ್ರವಾದಿ ಇಬ್ರಾಹಿಮರ ಜನನವಾಗುತ್ತದೆ. ಅಬ್ರಹಾ ಎಂದು ಬೈಬಲ್‌ನಲ್ಲಿ ಕರೆಯಲ್ಪಟ್ಟಿರುವ ಪ್ರವಾದಿಯೇ ಇಬ್ರಾಹಿಂ. ತಂದೆ ಆಝರ್ ಅಂದಿನ ನಿರಂಕುಶ ಚಕ್ರಾಧಿಪತಿ ನಮ್ರೂದನ ಆಸ್ಥಾನದಲ್ಲಿ ದೊಡ್ಡ ಪುರೋಹಿತನಾಗಿದ್ದ .ಆದರೆ ಬಾಲಕ ಇಬ್ರಾಹಿಮರಿಗೆ ಆರಂಭದ ದಿನಗಳಿಂದಲೇ ತಂದೆಯವರ ವರ್ತನೆ ನಮ್ರೂದನ ಧಿಕ್ಕಾರ ಮತ್ತು ಮನುಷ್ಯ ವಿರೋಧಿ ನಡವಳಿಕೆ ಇಷ್ಟವಾಗುತ್ತಿರಲಿಲ್ಲ. ಆದುದರಿಂದ ಜೀವನದಾದ್ಯಂತ  ಅವರು ತಂದೆಯವರನ್ನು ಧಿಕ್ಕಾರಿ ರಾಜನನ್ನು ಎದುರು ಹಾಕಿಕೊಂಡರು.

ಏಕದೇವತ್ವದ ಪರವಾಗಿ ನಿಂತ ಏಕೈಕ ಕಾರಣಕ್ಕಾಗಿ ಮನೆಯಿಂದಲೂ ಸ್ವದೇಶದಿಂದಲೂ ಹೊರಕ್ಕಟ್ಟಲ್ಪಟ್ಟರು. ಮನೆಯಿಂದ ಹೊರ ಹೋಗುವುದು ಕುಟುಂಬದಿಂದ ದೂರ ಉಳಿಯುವುದು ದೇಶಾಂತರ ಹೋಗುವುದು ಹೆಚ್ಚು ಪ್ರಯಾಸದ ಕೆಲಸ. ಆದರೆ ತಾನು ನಂಬಿದ್ದ ಸೃಷ್ಟಿಕರ್ತನ ಮೇಲೆ ಭಾರ ಹಾಕಿ ಇಬ್ರಾಹಿಮರು ಅದಕ್ಕೆ ಸಿದ್ಧರಾದರು. ಪರೀಕ್ಷೆಗಳನ್ನು ಎದುರಿಸಿ ಬೆಂಕಿಯಲ್ಲಿ ಕಾದ ಅಪ್ಪಟ ಚಿನ್ನದಂತೆ ಪರಮ ಪರಿಶುದ್ಧರಾಗಿ ಎಲ್ಲದರಲ್ಲೂ ವಿಜಯಿಯಾದರು. ದೇವರ ಆಪ್ತಮಿತ್ರ ಎಂಬ ಬಿರುದಿಗೆ ಭಾಜನರಾದರು.

Latest Videos

ರಾಜ ನಮ್ರೋದನು ಸ್ವತಃ ತನ್ನನ್ನೆ ದೇವನೆಂದು ನಂಬಿ ಆರಾಧಿಸಬೇಕೆಂದು ಘೋಷಿಸಿದ್ದ. ಸೃಷ್ಟಿಗಳು ದೇವನಾಗಲು ಸಾಧ್ಯವಿಲ್ಲ ಸೃಷ್ಟಿಕರ್ತನೆ ಆರಾಧನೆಗೆ ಅರ್ಹನು ಎಂಬುದನ್ನು ಆ ಜನತೆಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ ಇಬ್ರಾಹಿಮರಿಗೆ ಅಗ್ನಿಕುಂಡ ಕಸಿಯೋ ಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಊರಿನ ಜನರೆಲ್ಲ ತಮ್ಮ ಪಾಲಿನ ಕಟ್ಟಿಗೆಯನ್ನು ತಂದು ಉರಿಯುವ ಅಗ್ನಿಕುಂಡ ದಗದಗಿಸಲು ತಮ್ಮ ಕಾಣಿಕೆಯನ್ನು ಅರ್ಪಿಸಿದರು. ಮೈಲುಗಳ ದೂರದಲ್ಲಿ ಕಾಣಿಸುವಷ್ಟು ಎತ್ತರದಲ್ಲಿ ಅಗ್ನಿ ಹೊತ್ತಿ ಉರಿಯುವಾಗ ಅಲ್ಲಿಂದಲೇ ದೊಡ್ಡದೊಂದು ಜೋಕಾಲಿ ನಿರ್ಮಿಸಿ ಜೀಕಿ ದೂರಕ್ಕೆ ತಳ್ಳಿ ಅವರನ್ನು ಕೊಂದು ಮುಗಿಸುವ ಉದ್ದೇಶ ಅವರದಾಗಿತ್ತು. ಆದರೆ ದೇವನು ಪವಾಡ ಸದೃಶವಾಗಿ ಒಂದು ಕೂದಲು ಕೂಡ ಕರಟಿ ಹೋಗದಂತೆ ಅವರನ್ನು ಅಗ್ನಿಕುಂಡದಿಂದ ಹೊರ ತಂದನು. ಯಾವ ಬೆಂಕಿಗೆ ಉರಿಯುವ ಶಕ್ತಿಯನ್ನು ದೇವನು ನೀಡಿದ್ದನೋ ಅದೇ ಅಗ್ನಿಕುಂಡವು ದೇವನ ಆದೇಶದಂತೆ ಇಬ್ರಾಹಿಮರ ಪಾಲಿಗೆ ತಂಪಾಯಿತು. ಪವಿತ್ರ ಕುರಾನ್ ಮತ್ತು ಬೈಬಲ್ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖಗಳು ಇವೆ.

ಬಕ್ರೀದ್‌ ಕುರ್ಬಾನಿ: ಲಕ್ಷಕ್ಕೆ ಬಿಕರಿಯಾದ ಟಗರು, ಹೋತಗಳು ಇಲ್ಲಿವೆ ನೋಡಿ..

ಪ್ರವಾದಿ ಇಬ್ರಾಹಿಮರ ಸತ್ವ ಪರೀಕ್ಷೆ:
ಪ್ರವಾದಿ ಇಬ್ರಾಹಿಮರ ಪರೀಕ್ಷೆ ಇಲ್ಲಿಗೆ ನಿಲ್ಲುವುದಿಲ್ಲ. ಮುಂದುವರಿದು ಪ್ರಿಯ ಪತ್ನಿ ಹಾಜಿರ ಮತ್ತು ಎದೆಹಾಲು ಉಣ್ಣುವ ಹಸಿಗೂಸು ಇಸ್ಮಾಯಿಲರನ್ನು ದೂರದ ಮಕ್ಕಾ ಪಟ್ಟಣದಲ್ಲಿ ಬಿಟ್ಟು ಬರಲು ದೇವನ ಆದೇಶ ಸಿಗುತ್ತದೆ. ಪ್ರವಾದಿ ಇಬ್ರಾಹಿಮರು ಆ ಸತ್ವ ಪರೀಕ್ಷೆಗೂ ಮುಂದಾಗುತ್ತಾರೆ. ಪತ್ನಿ ಮಗುವನ್ನು ನಿರ್ಜನ ಮರುಭೂಮಿಯಲ್ಲಿ ಬಿಟ್ಟು, ಹಿಂದಿರುಗುವಾಗ ಪಿತೃ ಹೃದಯ ಕಂಪಿಸುತ್ತದೆ. ಆದರೆ ದೇವಾದೇಶದ ಮುಂದೆ ಶಿರಭಾಗಿ ತನ್ನ ಕರ್ತವ್ಯ ನೆರವೇರಿಸುತ್ತದೆ ಪ ತ್ನಿ ಹಾಜರ ಕೂಡ ಅವರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಾರೆ. ಬಹಳ ದೃಢವಾದ ಸ್ವರದೊಂದಿಗೆ 'ಇದು ಸೃಷ್ಟಿಕರ್ತನ ಆದೇಶವಾಗಿದ್ದರೆ ನೀವು ವಿಚಲಿತರಾಗಬೇಕಾದ ಅಗತ್ಯವಿಲ್ಲ, ಮರಳಿ ಹೋಗಿರಿ. ದೇವರು ನಮ್ಮೊಂದಿಗಿದ್ದಾನೆ,' ಎಂಬ ಮಾತು ಅವರ ಅಪಾರವಾದ ದೇವ ವಿಶ್ವಾಸವನ್ನು ಸಾಬೀತುಪಡಿಸುತ್ತದೆ. ಇದುವೇ ಅವರನ್ನು ಜೀವನದುದ್ದಕ್ಕೂ ಕಾಪಾಡುತ್ತದೆ. ಮರುಭೂಮಿಯನ್ನು ದೇವನು ನೀರು ಮತ್ತು ಆಹಾರ ವಸ್ತುಗಳಿಂದ ಸಮೃದ್ಧಗೊಳಿಸುತ್ತಾನೆ. ಜನವಾಸವು ಆರಂಭವಾಗುತ್ತದೆ. ಇಂದು ಮಕ್ಕ ಜಗತ್ತಿನ ಕೇಂದ್ರ ಸ್ಥಾನದಲ್ಲಿದೆ.

ಮಗನ ಬಲಿಗಾಗಿ ದೇವರ ಆದೇಶ:
ಪರೀಕ್ಷೆಗಳ ಸರಮಾಲೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಬಾಲಕ ಇಸ್ಮಾಯಿಲ್ ಮತ್ತು ಪ್ರೀತಿಯ ಪತ್ನಿಯನ್ನು ಭೇಟಿಯಾಗಲು ಬಂದ ಇಬ್ರಾಹಿಮರಿಗೆ ಇನ್ನೊಂದು ಪರೀಕ್ಷೆ ಕಾದು ನಿಂತಿದೆ. ಮಗ ಇಸ್ಮಾಯಿಲರನ್ನು ದೇವನ ಮುಂದೆ ಬಲಿ ನೀಡಬೇಕೆಂಬ ಆದೇಶ ಸಿಗುತ್ತದೆ. ಸ್ವಪ್ನದಲ್ಲಿ ಕಂಡ ವಿಷಯವನ್ನು ಪ್ರವಾದಿ ಇಬ್ರಾಹಿಮರು ಸಾಕ್ಷಾತ್ಕರಿಸಲು ಮುಂದಾದರು. ಏಕೆಂದರೆ ಪ್ರವಾದಿಗಳಿಗೆ ಕಾಣುವ ಕನಸು ಅವರ ದಿವ್ಯ ವಾಣಿಯ ಅವತೀರ್ಣದ ಒಂದು ಮಾಧ್ಯಮವಾಗಿತ್ತು. ಈ ಹಿನ್ನೆಲೆಯಲ್ಲಿ ಮಗನಿಗೆ ವಿಷಯವನ್ನು ತಿಳಿಸಿದಾಗ 'ನಿಮಗೆ ಸಿಕ್ಕಿರುವ ಆದೇಶವನ್ನು ಶಿರಸಾ ಪಾಲಿಸಿರಿ. ದೇವನ ಅನುಗ್ರಹದಿಂದ ನೀವು ನನ್ನನ್ನು ವಿನೀತರಾಗಿ ಕಾಣುವಿರಿ,' ಎಂಬ ಉತ್ತರ ಇಸ್ಮಾಯಿಲರಿಂದ ಸಿಕ್ಕಿತು. ವಾಸ್ತವದಲ್ಲಿ ಸೃಷ್ಟಿಕರ್ತನಿಗೆ ನರಬಲಿಯ ಯಾವ ಅಗತ್ಯವೂ ಇಲ್ಲ ಎಂಬುದನ್ನು ತೋರಿಸಿದ ಚಾರಿತ್ರಿಕ ಘಟನೆ ಒಂದು ಅಲ್ಲಿ ಸಂಭವಿಸಿ ಬಿಟ್ಟಿತು. ಪವಾಡ ಸದೃಶ ರೂಪದಲ್ಲಿ ಟಗರು ಒಂದು ಬಲಿಪೀಠದಲ್ಲಿ ಪ್ರತ್ಯಕ್ಷವಾಗಿ ಇಸ್ಮಾಯಿಲರ ಬದಲಿಗೆ ಅದನ್ನು ಬಲಿ ನೀಡಲಾಯಿತು. ದೇವನ ಆದೇಶ ಮೊಳಗಿತು' ಈ ಬಲಿಪ್ರಾಣಿಯ ರಕ್ತವಾಗಲಿ, ಮಾಂಸವಾಗಲಿ, ಚರ್ಮವಾಗಲಿ ದೇವನಿಗೆ ತಲುಪುವುದಿಲ್ಲ ಆದರೆ ನಿಮ್ಮ ದೇವ ಭಯ ಭಕ್ತಿ ಮತ್ತು ವಿಶ್ವಾಸ ಖಂಡಿತವಾಗಿಯೂ ದೇವನನ್ನು ತಲುಪುತ್ತದೆ.ಟ ಇಬ್ರಾಹಿಮರ ಈ  ಚರ್ಯೆಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಚಾಂದ್ರಮಾನ ಕ್ಯಾಲೆಂಡರಿನ ಕೊನೆಯ ತಿಂಗಳಾದ ದುಲ್ ಹಜ್ ತಿಂಗಳ ಹತ್ತನೇ ದಿನ ಈದುಲ್ ಅಝ್ಹ ಹೆಸರಿನಲ್ಲಿ ಹಬ್ಬವನ್ನು ಆಚರಿಸಿ ಬಲಿದಾನವನ್ನು ನೀಡಲಾಗುತ್ತದೆ.  ಪ್ರಾಣಿ ಬಲಿ ನೀಡಿ ಅದರ ಮಾಂಸವನ್ನು ಬಡಬಗ್ಗರಿಗೆ ಹಂಚಲಾಗುತ್ತದೆ. ಅವರ ಮನೆಗಳಲ್ಲಿಯೂ ಹಬ್ಬದ ವಾತಾವರಣ ಸೃಷ್ಟಿಗೆ ಸಹಕರಿಸಲಾಗುತ್ತದೆ.

ಬಕ್ರೀದ್‌ ಪ್ರಾರ್ಥನೆ: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

 

ಈದುಲ್ ಫಿತ್ರ್‌ನಂತೆ ಇದು ಕೂಡ ಮುಸ್ಲಿಮರ ಪ್ರಮುಖ ಹಬ್ಬ. ಹಬ್ಬದ ದಿನ ಹೊಸ ಬಟ್ಟೆ ಧರಿಸುವುದು ಸುಗಂಧ ದ್ರವ್ಯ ಪೂಸುವುದು, ಈದ್ ನಮಾಜ್ ನಿರ್ವಹಿಸುವುದು, ಉತ್ತಮ ಆಹಾರ ತಯಾರಿಸುವುದು ಮನೆ ಮಂದಿಯೊಂದಿಗೆ ಸಂಭ್ರಮಾಚರಣೆಸುವುದು ಇದ್ದೇ ಇರುತ್ತದೆ. ಆದರೆ ಎಲ್ಲಿಯೂ ದೇವನ ಆದೇಶದ ಉಲ್ಲಂಘನೆಯಾಗದಂತೆ ಧರ್ಮದ ಪರಿಧಿಯು ಮೀರಿ ಹೋಗದಂತೆ ಜಾಗರೂಕತೆವಹಿಸಲಾಗುತ್ತದೆ.

ಈ ಹಬ್ಬವು ನಮಗೆ ಇಬ್ರಾಹಿಮರಿಗೆ ದೇವನ ಬಗ್ಗೆ ಇದ್ದ ದೃಢ ವಿಶ್ವಾಸ, ಶ್ರದ್ದೆ ಮತ್ತು ಜೀವನದ ಪರೀಕ್ಷೆಗಳನ್ನು ಎದುರಿಸುವ  ಮಾದರಿಯನ್ನು ನೀಡುತ್ತದೆ. ಮಾತೆ ಹಾಜಿರಾರ ಜೀವನವೂ ತ್ಯಾಗ ಮತ್ತು ಮಗನನ್ನು ಯಾವ ರೀತಿ ತಂದೆಯನ್ನು ಅನುಸರಿಸುವಂತೆ ಮತ್ತು ಗೌರವಿಸುವಂತೆ ಜೊತೆಗೆ ದೇವನ ಆದೇಶಕ್ಕೆ ತಲೆಬಾಗುವಂತೆ ತರಬೇತಿಯೊಂದಿಗೆ ಬೆಳೆಸಲು ಸಾಧ್ಯ ಎಂಬುದರ ಪ್ರಾಯೋಗಿಕ ಮಾದರಿಯನ್ನು ನೀಡುತ್ತದೆ.

ಇಂದಿಗೂ ಈ ತಿಂಗಳಲ್ಲಿ ಪವಿತ್ರ ಹಜ್ ಯಾತ್ರೆಗಾಗಿ ಜಗತ್ತಿನಾದ್ಯಂತದಿಂದ ಜನರು ಮಕ್ಕಾ ಪಟ್ಟಣಕ್ಕೆ ಬಂದು ತಲುಪುತ್ತಾರೆ. ಇಬ್ರಾಹಿಂ ಮತ್ತು ಮಗ ಇಸ್ಮಾಯಿಲ್ ಜೊತೆಯಾಗಿ ಸೇರಿ ನಿರ್ಮಿಸಿದ ಜಗತ್ತಿನ ಪ್ರಥಮ ಏಕದೇವನ ಆರಾಧನಾ ಕೇಂದ್ರ ಕಅಬಾಲಯದ ಸಂದರ್ಶನಕ್ಕೆ ಅದರದ್ದೇ ಆದ ಮಹತ್ವವಿದೆ. ಇದೊಂದು ಜಾಗತಿಕ ಸಮ್ಮೇಳನದ ರೂಪವನ್ನು ಪಡೆಯುತ್ತದೆ. ವಿಶ್ವದ ಮೂಲೆ ಮೂಲೆಯಿಂದ ಏಕದೇವನ ಮೇಲೆ ವಿಶ್ವಾಸವಿಟ್ಟ ವಿಶ್ವಾಸಿಗಳು ಇಲ್ಲಿ ಬಂದು ಸೇರಿ  ದೇವನ ಮೇಲಿನ ಅಚಂಚಲ ವಿಶ್ವಾಸದ ಒಂದು ರೂಪವನ್ನು ಪ್ರದರ್ಶಿಸುತ್ತಾರೆ.
 

Eid-ul-Adha 2023: ಎಲ್ಲ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯಗಳು

 

click me!