ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಣೆ | ಪ್ರವಾದಿ ಮೊಹಮ್ಮದ್ ಸಿದ್ಧಾಂತಗಳ ಅಧ್ಯಯನ
ಈದ್-ಇ-ಮಿಲಾದ್ ಅಥವಾ ಈದ್-ಮಿಲಾದ್-ಉಲ್-ನಬಿ ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ. ಸೂಫಿ ಅಥವಾ ಬರೆಲ್ವಿ ಪಂಥಕ್ಕೆ ಸೇರಿದವರು ಇದನ್ನುಸಂಭ್ರಮದಿಂದ ಆಚರಿಸುತ್ತಾರೆ.
ಸೂಫಿ ಬರೆಲ್ವಿ ಪಂಥದ ಜನರು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ಮಾಸ ರಬಿ-ಅಲ್-ಅವ್ವಾಲ್‌ನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಇಸ್ಲಾಂನ ಆರಂಭಿಕ ದಿನಗಳಿಂದ ಆರಂಭವಾಗುತ್ತದೆ.
21 ದಿನ ವೃತಾಚಣೆ ಮಾಡಿ ಶಾರದೆ ರೂಪದಲ್ಲಿ ಮಿಂಚಿದ ಕ್ರಿಶ್ಚಿಯನ್ ಯುವತಿ
ಒಂದಷ್ಟು ತಬಿ ಉನ್‌ಗಳು ಮೊಹಮ್ಮದ್ ಅವರಿಗೆ ಗೌರವಾರ್ಥವಾಗಿ ಕವಿತೆ, ಹಾಡು ಬರೆಯುವ ಸೆಷನ್‌ಗಳನ್ನು ನಡೆಸುತ್ತಿದ್ದರು. ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಆಚರಿಸಿದ ಮೊದಲು ಇಸ್ಲಾಂ ದೊರೆ ಮುಝಾಫರ್ ಅಲ್ ದಿನ್ ಗೋಕ್ಬೊರಿ ಎಂದು ನಂಬಲಾಗುತ್ತದೆ. ಒಟ್ಟೋಮನ್ಸ್ 1588ರಲ್ಲಿ ಇದನ್ನು ಅಧಿಕೃತ ರಜೆ ಎಂದು ಘೋಷಿಸಿದರು.
ಈದ್ ಮಿಲಾದ್ ದಿನಾಂಕ:
ರಬಿ ಅಲ್ ಅವ್ವಲ್ ತಿಂಗಳ ಚಂದ್ರ ಭಾರತದಲ್ಲಿ ಮೊದಲು, ನಂತರ ಬಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ನಂತರ ಕೆಲವು ಸಬ್ ಕಂಟಿನೆಂಟ್ ರಾಷ್ಟ್ರಗಳಲ್ಲಿ ಅಕ್ಟೋಬರ್ 18ಕ್ಕೆ ಕಾಣಿಸುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ ಭಿನ್ನವಾಗಿರುವುದರಿಂದ ಅಕ್ಟೋಬರ್ 19 ರುಬಿ ಉಲ್ ಅವ್ವಲ್‌ನ ಮೊದಲ ದಿನ.
ಸೌದಿ ಅರೆಬಿಯಾ ಮತ್ತು ಭಾರತದಲ್ಲಿ ಈ ವರ್ಷ ಈದ್ ಮಿಲಾದ್ ಅಕ್ಟೋಬರ್ 29ರಂದು ಆಚರಿಸಲಾಗುತ್ತದೆ. ಅ.29ರಂದು ಸಂಜೆ ಹಬ್ಬದ ಆಚರಣೆ ಆರಂಭವಾಗುತ್ತದೆ. ಅ.30 ಸಂಜೆ ಹಬ್ಬ ಮುಗಿಯುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ಮತ್ತು ಇತರ ರಾಷ್ಟ್ರಗಳಲ್ಲಿ ಅ.30ರಂದು ಹಬ್ಬ ಆಚರಿಸಲಾಗುತ್ತದೆ.
ಚರಿತ್ರೆ ಮತ್ತು ಮಹತ್ವ:
ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಆಚರಣೆಯನ್ನು ಇಸ್ಲಾಂ ಧರ್ಮದ ಆರಂಭಿಕ ದಿನಗಳಲ್ಲಿ ಬಹಳ ಖಾಸಗಿಯಾಗಿ ನಡೆಸಲಾಗುತ್ತಿತ್ತು. ಇದನ್ನು ಒಂದು ದಿನದ ಹಬ್ಬವಾಗಿ ಆಚರಿಸುವ ಐಡಿಯಾ ಬಂದಿದ್ದು ಫಾತಿಮಿಡ್ಸ್‌ಗಳಿಂದ. 570 ರಲ್ಲಿ ರಬಿ ಅಲ್-ಅವ್ವಾಲ್‌ನ ಹನ್ನೆರಡನೇ ದಿನದಂದು ಪ್ರವಾದಿ ಮುಹಮ್ಮದ್ ಮೆಕ್ಕಾದಲ್ಲಿ ಜನಿಸಿದರು ಎಂದು ವಿಶ್ವದಾದ್ಯಂತದ ಅನೇಕ ಮುಸ್ಲಿಮರು ನಂಬಿದ್ದಾರೆ.
ಆಚರಣೆ:
ಆಚರಣೆ ಮತ್ತು ಮೆರವಣಿಗೆಗಳೊಂದಿಗೆ ಅನೇಕ ದೇಶಗಳಲ್ಲಿ ಈ ದಿನವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ, ಪ್ರವಾದಿ ಮುಹಮ್ಮದ್ ಅವರ ಬೋಧನೆಗಳನ್ನು ಕಲಿಯಲು ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ.
ಈಜಿಪ್ಟ್‌ನಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದರೊಂದಿಗೆ ದಿನದ ಮೊದಲ ಆಚರಣೆಗಳು ಪ್ರಾರಂಭವಾಗಿತ್ತು. ಕಾಲಾನಂತರದಲ್ಲಿ, ಹೆಚ್ಚಿನ ಸೂಫಿ ಮುಸ್ಲಿಮರು ಹಬ್ಬದಲ್ಲಿ ಭಾಗಿಯಾದಾಗ ಆಚರಣೆ ಹೆಚ್ಚಾಯಿತು.
ಕೊರೋನಾಕ್ಕಿಂತ ದೊಡ್ಡ ಕಂಟಕ ಮುಂದೆ ಕಾದಿದೆ!
ಇಂದು ಈ ಹಬ್ಬದಂದು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಉಡುಗೊರೆ ಹಂಚಿ, ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಕ್ಕಳಿಗೆ ಪ್ರವಾದಿ ಮೊಹಮ್ಮದ್ ಅವರ ಕಥೆಗಳನ್ನು ಹೇಳಲಾಗುತ್ತದೆ. ಈ ಬಾರಿ ಕೊರೋನಾದಿಂದಾಗಿ ಹಬ್ಬದ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ.