ಸಂತೋಷ, ಸಮೃದ್ಧಿ ಹೆಚ್ಚಿಸುವ Diwali Remedies

By Suvarna NewsFirst Published Oct 20, 2022, 12:06 PM IST
Highlights

ದೀಪಾವಳಿಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಹಣದ ಸಮಸ್ಯೆ, ವೈವಾಹಿಕ ಸಮಸ್ಯೆ ಇತ್ಯಾದಿಗಳಿಗೆ ಪರಿಹಾರ ಕಂಡುಕೊಳ್ಳಬಹುದು. 

ದೀಪಾವಳಿ ಹಬ್ಬವು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಸಾಂತ್ವಾನ ನೀಡುತ್ತದೆ. ಕಾರ್ತಿಕ ಮಾಸದ ಅಮಾವಾಸ್ಯೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಈ ರಾತ್ರಿಯಲ್ಲಿ, ಇಡೀ ಸುತ್ತಮುತ್ತಲಿನ ಶಕ್ತಿಯು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತದೆ. ಈ ದಿನವು ಎಲ್ಲ ರೀತಿಯಲ್ಲೂ ಮುಖ್ಯವಾಗಿದೆ.

ಈ ಕತ್ತಲೆಯ ಅಮವಾಸ್ಯೆಯಲ್ಲಿ ಬೆಳಕಿನ ಆಚರಣೆಯು ಅದರ ಪ್ರಾಮುಖ್ಯತೆಯ ಸಂಕೇತಗಳಲ್ಲಿ ಒಂದಾಗಿದೆ. ವಿವಿಧ ರೀತಿಯ ತಂತ್ರ ಮತ್ತು ಮಂತ್ರಗಳಿಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಗಳಿಗೆ ಈ ಸಮಯವು ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ, ಪ್ರಕೃತಿಯ ಸಂಗಮ ಮತ್ತು ಅದರಲ್ಲಿರುವ ಶಕ್ತಿಯು ಅದ್ಭುತವಾಗಿ ಕಾಣುತ್ತದೆ.

Latest Videos

ದೀಪಾವಳಿಯ ಸಮಯದಲ್ಲಿ ಹಲವಾರು ರೀತಿಯ ಪರಿಹಾರಗಳು ಮತ್ತು ತಂತ್ರಗಳನ್ನು ತೆಗೆದುಕೊಳ್ಳಬೇಕು. ಈ ದಿನ ಅನೇಕ ರೀತಿಯ ತಾಂತ್ರಿಕ ಕಾರ್ಯಗಳನ್ನು ಸಹ ನಡೆಸಲಾಗುತ್ತದೆ. ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸಲು ಈ ರಾತ್ರಿಯನ್ನು ಬಳಸಲಾಗುತ್ತದೆ. ಜೀವನದ ದಿಕ್ಕು ಮತ್ತು ಸ್ಥಿತಿಯನ್ನು ಬದಲಾಯಿಸಬಹುದಾದ ಕೆಲವು ಸರಳ ದೀಪಾವಳಿ ಪರಿಹಾರಗಳನ್ನು ತಿಳಿಸುತ್ತೇವೆ. 

ಸಾಲದಿಂದ ಮುಕ್ತಿ ಪಡೆಯಲು ದೀಪಾವಳಿಯ ಪರಿಹಾರಗಳು
ದೀಪಾವಳಿಯ ರಾತ್ರಿಯ ಋಣಭಾರ ಪರಿಹಾರಕ್ಕಾಗಿ ಅಪಮಾರ್ಗ(ಉತ್ತರಾಣಿ)ದ ಸಸ್ಯದ ಬೇರಿನ ಬಳಕೆಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗಿದೆ. ಈ ದಿನ, ಅಪಮಾರ್ಗದ ಬೇರು ಅಥವಾ ಎಲೆಗಳನ್ನು ನಿಮ್ಮ ಹಣವನ್ನು ಎಲ್ಲಿ ಇಡುತ್ತೀರಿ, ಅಲ್ಲೆ ಹತ್ತಿರದಲ್ಲೆಲ್ಲಾದರೂ ಇರಿಸಿ. ಆಗ ಅದು ನಿಮ್ಮನ್ನು ಸಾಲಮುಕ್ತರಾಗಿಸಲು ಸಹಾಯ ಮಾಡುತ್ತದೆ.

ವಕ್ರೀ ಕುಜ ಶನಿ ಪ್ರಭಾವ; ನಾಯಕರಿಗೆ ಕಾದಿದೆ ಮರಣಭೀತಿ, ಬಂಧನ

ಋಣಭಾರದಿಂದ ಮುಕ್ತಿ ಹೊಂದಲು ದೀಪಾವಳಿಯಂದು ಕುಶಬೇರು, ಬಿಲ್ವಪತ್ರೆ, ಅದರ ಹಣ್ಣು, ಕಾಳು, ಸಿಂಧೂರ ಇವುಗಳನ್ನೆಲ್ಲ ಅಮೃತ ಚೌಘಡಿಯ ಸಮಯದಲ್ಲಿ ರುಬ್ಬಿ ಪುಡಿ ಮಾಡಿಕೊಳ್ಳಬಹುದು. ಈಗ ಈ ಮಿಶ್ರಣವನ್ನು ಗಂಗಾಜಲದೊಂದಿಗೆ ತೇವಗೊಳಿಸಿ. ನಂತರ ಭೋಜ್ ಪತ್ರದ ಮೇಲೆ ದಾಳಿಂಬೆ ಎಲೆಯೊಂದಿಗೆ ಮಿಶ್ರಣ ಮಾಡಿ -

'ಓಂ ಆಂ ಹ್ರೀ ಕ್ರೋಂ ಶ್ರೀ ಶ್ರಿಯೈ ನಮಃ ಮಮಲಕ್ಷ್ಮೀ ನಶ್ಯ ನಶ್ಯ ಮಾಮೃಣೋತ್ತಿರಿನಾಂ ಕುರು ಕುರು ಸಂಪದ್ ವರ್ಧಯ ವರ್ಧಯ ಸ್ವಾಹಾ' ಈ ಮಂತ್ರವನ್ನು ಬರೆದು ಪೂಜೆಯ ಸ್ಥಳದಲ್ಲಿ ಸ್ಥಾಪಿಸಿ.

ಸಂತೋಷ ಮತ್ತು ಸಮೃದ್ಧಿಗಾಗಿ
ಜೀವನದಲ್ಲಿನ ತೊಂದರೆ, ವೈಷಮ್ಯ ಹೋಗಲಾಡಿಸಲು ದೀಪಾವಳಿಯ ದಿನದಂದು ಸುರುಳಿಯಾಕಾರದ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಸಿಂಧೂರವನ್ನು ಹಚ್ಚಿ, ಕೆಂಪು ದಾರವನ್ನು ಕಟ್ಟಿ ಈ ತೆಂಗಿನಕಾಯಿಯ ಮೇಲೆ ಧೂಪದೀಪವನ್ನು ಹಚ್ಚಿ. ಈಗ ರಾತ್ರಿ 12 ಗಂಟೆಗೆ ತೆಂಗಿನಕಾಯಿಯನ್ನು ನಿಮ್ಮ ಸುತ್ತ ಮೂರು ಬಾರಿ ಸುಳಿದು  ಅಡ್ಡಹಾದಿಯಲ್ಲಿ ಎಸೆಯಿರಿ. ಇದು ನಿಮ್ಮ ಜೀವನದಲ್ಲಿ ಅಪಶ್ರುತಿಯನ್ನು ತೊಡೆದುಹಾಕುತ್ತದೆ ಮತ್ತು ನೀವು ಸಂತೋಷವನ್ನು ಪಡೆಯುತ್ತೀರಿ.

ವೈವಾಹಿಕ ಸಂತೋಷಕ್ಕಾಗಿ ದೀಪಾವಳಿ ಪರಿಹಾರಗಳು
ದೀಪಾವಳಿಯಂದು ಬೆಳಿಗ್ಗೆ ಲಕ್ಷ್ಮಿ ದೇವಿಗೆ ಖೀರ್ ಮತ್ತು ತಾವರೆ ಬೀಜದಿಂದ ಮಾಡಿದ ಮಲ್ಪುವಾವನ್ನು ಅರ್ಪಿಸಿ. ಈ ನೈವೇದ್ಯವನ್ನು ಬಡವರ ನಡುವೆ ಹಂಚಿ ಕುಟುಂಬ ಸಮೇತ ಕೊಂಡೊಯ್ದರೆ ದಾಂಪತ್ಯ ಜೀವನದಲ್ಲಿ ಸಂತಸ ಮೂಡುತ್ತದೆ.

ದೀಪಾವಳಿಯಂದು ಕಮಲದ ಹೂವಿನ ಹಾರವನ್ನು ತೆಗೆದುಕೊಂಡು ಅದನ್ನು ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಒಟ್ಟಿಗೆ ಅರ್ಪಿಸಿ. ಇಬ್ಬರಿಗೂ ಒಂದೇ ಮಾಲೆಯನ್ನು ಅರ್ಪಿಸಿ, ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಪ್ರಾರ್ಥಿಸಿ.

ಈ ದೀಪಾವಳಿಗೆ ಕಡಿಮೆ ಖರ್ಚಿನಲ್ಲಿ ಮನೆಯನ್ನು ಹೆಚ್ಚು ಚೆಂದ ಅಲಂಕರಿಸಿ.. ಇಲ್ಲಿವೆ 8 ಟಿಪ್ಸ್

ಸಮೃದ್ಧಿಗಾಗಿ ಪರಿಹಾರ
ದೀಪಾವಳಿಯಂದು, ಏಳು ವಿಧದ ಧಾನ್ಯಗಳನ್ನು ತೆಗೆದುಕೊಂಡು ಅವುಗಳನ್ನು ಯಾವುದೇ ಧಾರ್ಮಿಕ ಸ್ಥಳಕ್ಕೆ ದಾನ ಮಾಡಿ, ಇದು ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ ಮತ್ತು ಜೀವನದಲ್ಲಿ ಐಶ್ವರ್ಯವನ್ನು ತರುತ್ತದೆ.

ಎಲ್ಲಾ ಕೆಲಸಗಳಿಗೆ ದೀಪಾವಳಿ ಪರಿಹಾರಗಳು
ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಮುಂದಕ್ಕೆ ಕೊಂಡೊಯ್ಯಲು ಈ ದಿನವು ತುಂಬಾ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಈ ದಿನದಂದು ಮಾಡುವ ಮಂತ್ರ ಸಿದ್ಧಿಯ ಕೆಲಸ ಮತ್ತು ಯಾವುದೇ ವಿಶೇಷ ಧ್ಯಾನವೂ ಯಶಸ್ವಿಯಾಗುತ್ತದೆ. ಈ ಕಾರಣಕ್ಕಾಗಿ, ಈ ದಿನವನ್ನು ಮಂತ್ರ ಮತ್ತು ತಂತ್ರದ ಸಾಧನೆ ಮತ್ತು ಯಶಸ್ಸಿಗೆ ಬಳಸಲಾಗುತ್ತದೆ.

ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?

ಶನಿವಾರದಂದು ದೀಪಾವಳಿ ಬಂದಾಗ ಈ ದಿನ ತುಂಬಾ ವಿಶೇಷವಾಗುತ್ತದೆ. ಈ ದಿನ, ಅತ್ಯಂತ ಸರಳವಾದ ಆದರೆ ಅದ್ಭುತವಾದ ಪರಿಹಾರವೆಂದರೆ ಬೆಳಿಗ್ಗೆ ಅಶ್ವತ್ಥ ಮರಕ್ಕೆ ಹಸಿ ಹಾಲನ್ನು ಅರ್ಪಿಸಿ ಮತ್ತು ಏಳು ಬಾರಿ ಸುತ್ತು ಬನ್ನಿ. ಮತ್ತು ಸಂಜೆ, ಅಶ್ವತ್ಥ ಮರದ ಕೆಳಗೆ ಸಾಸಿವೆ ಅಥವಾ ಎಳ್ಳಿನ ಎಣ್ಣೆಯ ಚೌಕಾಕಾರದ ದೀಪವನ್ನು ಸುಟ್ಟುಹಾಕಿ. ಈ ದೀಪಾವಳಿಯಂದು ಈ ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ತುಂಬಾ ಸಹಾಯಕವಾಗಬಹುದು.

click me!