ಪಾದಾಂಕದ ಆಧಾರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ, ಭವಿಷ್ಯ ಅದೃಷ್ಟಗಳನ್ನು ತಿಳಿಯಬಹುದು. ಅಷ್ಟೇ ಅಲ್ಲದೆ ವ್ಯಕ್ತಿಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಮಾಡಿದರೆ ಸಫಲತೆ ಸಿಗುತ್ತದೆ ಎಂಬುದನ್ನು ತಿಳಿಯಬಹುದು. ಹಾಗಾದರೆ ಯಾವ ಪಾದಾಂಕದವರಿಗೆ ಯಾವ ಕ್ಷೇತ್ರ ಯಶಸ್ಸು ತಂದುಕೊಡುತ್ತದೆ ಎಂಬುದನ್ನು ತಿಳಿಯೋಣ.
ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮ ದಿನಾಂಕವನ್ನು ಆಧರಿಸಿ ಪಾದಾಂಕವನ್ನು ತಿಳಿಯಲಾಗುತ್ತದೆ. ಪಾದಾಂಕದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಗುಣ, ಭವಿಷ್ಯ, ವ್ಯಕ್ತಿತ್ವ ಮುಂತಾದ ಅನೇಕ ವಿಚಾರಗಳನ್ನು ತಿಳಿಯಲಾಗುತ್ತದೆ. ಪಾದಾಂಕದ ಆಧಾರದ ಮೇಲೆ ಯಾವ ಉದ್ಯೋಗಕ್ಷೇತ್ರ ಸರಿ ಹೊಂದುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿರುತ್ತದೆ. ಯಾವ ಪಾದಾಂಕದ ಅವರಿಗೆ ಯಾವ ಕ್ಷೇತ್ರ ಉತ್ತಮ ಎಂಬುದನ್ನು ತಿಳಿಯೋಣ.
ಪಾದಾಂಕ 1:
ಈ ಪಾದಾಂಕದವರು ಸ್ವತಂತ್ರವಾಗಿ ಉದ್ಯೋಗ ಮಾಡಲು ಬಯಸುವವರು. ಇವರಲ್ಲಿ ನೇತೃತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಈ ಪಾದಂಕದವರಿಗೆ ಕಂಪನಿಯ ಸಿಇಒ, ಸೇನಾ ಅಧಿಕಾರಿ, ರಾಜಕಾರಣಿಗಳಂತಹ ಸೇವೆಗಳು ಆಗಿ ಬರುತ್ತವೆ. ನೇತೃತ್ವದ ಗುಣ ಹೊಂದಿರುವ ಈ ಪಾದಾಂಕದ ವ್ಯಕ್ತಿಗಳು ಈ ಎಲ್ಲ ಕ್ಷೇತ್ರಗಳಲ್ಲಿ ಸಫಲತೆಯನ್ನು ಕಾಣುತ್ತಾರೆ.
ಇದನ್ನು ಓದಿ: ಸ್ಪಟಿಕ ಧರಿಸುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?
ಪಾದಾಂಕ 2:
undefined
ಪಾದಾಂಕ ಎರಡರ ವ್ಯಕ್ತಿಗಳು ಸೌಮ್ಯ ಮತ್ತು ಶಾಂತ ಸ್ವಭಾವದವರು ಆಗಿರುತ್ತಾರೆ. ರಚನಾತ್ಮಕ ಕಾರ್ಯಗಳಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಈ ವ್ಯಕ್ತಿಗಳು ಡಿಸೈನರ್, ಕಲಾಕಾರರು, ಕ್ರಿಯೇಟಿವ್ ರೈಟರ್ಸ್ ಆಗಬಹುದು. ಹೆಚ್ಚೆಚ್ಚು ಕಲಿಯುವ ಆಸಕ್ತಿಯುಳ್ಳ ಈ ವ್ಯಕ್ತಿಗಳಿಗೆ ಶಿಕ್ಷಣ ಕ್ಷೇತ್ರ, ಆಪ್ತ ಸಲಹೆ, ಮಾರಾಟ ಮುಂತಾದ ಕ್ಷೇತ್ರಗಳು ಆಗಿ ಬರುತ್ತವೆ.
ಪಾದಾಂಕ 3:
ಈ ವ್ಯಕ್ತಿಗಳು ಸಹಾಯ ಮಾಡುವ ವಿಷಯದಲ್ಲಿ ಸದಾ ಮುಂದಿರುತ್ತಾರೆ. ಮನೋರಂಜನೆಯ ಕ್ಷೇತ್ರ ಇವರಿಗೆ ಆಗಿ ಬರುತ್ತದೆ. ನಟನೆ, ಗಾಯನ ಮತ್ತು ಹಾಸ್ಯ ಮುಂತಾದ ಕಲೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನೇತೃತ್ವದ ಗುಣವನ್ನು ಹೊಂದಿರುವ ಈ ವ್ಯಕ್ತಿಗಳು ವಕೀಲರು ಶಿಕ್ಷಕರು ಸಹ ಆಗಬಹುದು.
ಪಾದಂಕ 4:
ಈ ವ್ಯಕ್ತಿಗಳನ್ನು ಸರ್ವಗುಣ ಸಂಪನ್ನರು ಎಂದು ಕರೆಯುತ್ತಾರೆ. ಆದರೂ ಈ ವ್ಯಕ್ತಿಗಳಿಗೆ ಹಣ ಸಂಪಾದಿಸಿ ಬಹಳ ಕಷ್ಟ ಆಗುತ್ತದೆ. ಪತ್ರಿಕೋದ್ಯಮ, ಕಾನೂನು, ಸಲಹೆಗಾರರು ಅಥವಾ ಇಂಜಿನಿಯರಿಂಗ್ ಕ್ಷೇತ್ರಗಳು ಆಗಿ ಬರುತ್ತದೆ.
ಇದನ್ನು ಓದಿ: ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದರ ಹಿಂದಿದೆ ರಹಸ್ಯ..!
ಪಾದಾಂಕ 5:
ಈ ಪಾದಾಂಕದ ವ್ಯಕ್ತಿಗಳು ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಈ ವ್ಯಕ್ತಿಗಳಿಗೆ ಯಶಸ್ಸು ದೊರಕುತ್ತದೆ. ನಟನೆ, ಗಾಯನ, ವಕೀಲ ವೃತ್ತಿ, ಪತ್ರಿಕೋದ್ಯಮ , ಮಾರ್ಕೆಟಿಂಗ್ ಜೊತೆಗೆ ಗುಪ್ತಚರ ಇಲಾಖೆಗಳಂತ ಕ್ಷೇತ್ರಗಳು ಹೆಚ್ಚು ಸಫಲತೆಯನ್ನು ನೀಡುತ್ತವೆ.
ಪಾದಾಂಕ 6:
ಈ ವ್ಯಕ್ತಿಗಳು ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಮತ್ತು ಸಮಾಜದಲ್ಲಿ ಪ್ರತಿಷ್ಠೆಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಆರ್ಕಿಟೆಕ್ಟ್, ಫ್ಯಾಷನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಡಾಕ್ಟರ್ ಮತ್ತು ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಕ್ಷೇತ್ರಗಳು ಆಗಿ ಬರುತ್ತವೆ.
ಪಾದಾಂಕ 7:
ಪಾದಾಂಕ 7ರ ವ್ಯಕ್ತಿಗಳ ಅಂತರ್ಮುಖಿ ಸ್ವಭಾವವನ್ನು ಹೊಂದಿರುತ್ತಾರೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚು. ಪರಿಶ್ರಮಿಗಳು ಸಹ ಆಗಿರುತ್ತಾರೆ. ಈ ವ್ಯಕ್ತಿಗಳಿಗೆ ಗುಪ್ತಚರ, ರಿಸರ್ಚ್, ಆವಿಷ್ಕಾರಿ ಕೆಲಸಗಳು, ಲೇಖಕರು , ಶಿಕ್ಷಕರು ಮುಂತಾದ ವೃತ್ತಿ ಆಗಿ ಬರುತ್ತವೆ. ಅಷ್ಟೇ ಅಲ್ಲದೆ ಧರ್ಮ ಆಧ್ಯಾತ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಗಳು ಆಗಿ ಬರುತ್ತವೆ.
ಪಾದಾಂಕ 8:
ಈ ವ್ಯಕ್ತಿಗಳು ಹುಟ್ಟಿನಿಂದಲೇ ಸಿರಿಸಂಪತ್ತನ್ನು ಹೊಂದಿರುತ್ತಾರೆ. ಗೌರವ ಪ್ರತಿಷ್ಠೆಗಳನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳಿಗೆ ಹಣಕಾಸಿಗೆ ಸಂಬಂಧಿಸಿದ ಕ್ಷೇತ್ರಗಳು, ಬ್ಯಾಂಕಿಂಗ್ ಸೇವೆಗಳು. ಅಷ್ಟೇ ಅಲ್ಲದೆ ರಿಯಲ್ ಎಸ್ಟೇಟ್, ರಾಜಕಾರಣ ಸಹ ಆಗಿ ಬರುತ್ತವೆ.
ಇದನ್ನು ಓದಿ: ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!
ಪಾದಾಂಕ 9:
ಈ ವ್ಯಕ್ತಿಗಳು ಹೆಚ್ಚು ಮಾನವೀಯತೆಯ ಗುಣವನ್ನು ಹೊಂದಿರುತ್ತಾರೆ. ನ್ಯಾಯಕ್ಕಾಗಿ ಹೋರಾಡುವ ಸ್ವಭಾವ ಇವರದ್ದಾಗಿರುತ್ತದೆ. ಈ ವ್ಯಕ್ತಿಗಳಿಗೆ ಸೇನೆ, ಪೊಲೀಸ್ ಮುಂತಾದ ಸೇವೆಗಳ ಆಗಿ ಬರುತ್ತವೆ. ಕ್ರೀಡಾ ಕ್ಷೇತ್ರದಲ್ಲಿ ಸಹ ಸಫಲತೆಯನ್ನು ಕಾಣುತ್ತಾರೆ.