ಭವಿಷ್ಯದಲ್ಲಾಗುವ ಸಂಕೇತಗಳ ಬಗ್ಗೆ ತಿಳಿಯಲು ಸ್ವಪ್ನ ಶಾಸ್ತ್ರದಲ್ಲಿ ಹಲವು ಉಲ್ಲೇಖಗಳಿವೆ. ಕನಸು ಭವಿಷ್ಯದಲ್ಲಿ ಘಟಿಸುವ ಪ್ರಸಂಗಳನ್ನು ಮುಂಚಿತವಾಗಿ ತಿಳಿಸುವ ಸಂಕೇತ ಸಹ ಆಗಿರುತ್ತದೆ. ಹೀಗಾಗಿ ಕನಸಿನಲ್ಲಿ ನೀರು ಕಂಡರೆ..? ನೀರು ಯಾವ ರೂಪದಲ್ಲಿ ಕಂಡರೆ ಏನು ಅರ್ಥ ಎಂಬುದರ ಬಗ್ಗೆ ನೋಡೋಣ...
ಮನುಷ್ಯ ಕಲ್ಪನಾ ಜೀವಿ ಎಂಬುದಂತೂ ಸತ್ಯ. ಎಲ್ಲರಿಗೂ ಒಂದು ಕನಸು (Dream) ಎಂಬುದು ಇರಲೇಬೇಕು. ಆದರೆ, ಈ ಕನಸು ಕಾಣುವುದರಲ್ಲೂ ಎರಡು ರೀತಿ ಇರುತ್ತದೆ. ಒಂದು ನಾವು ಹಾಕಿಕೊಳ್ಳುವ ಗುರಿಯನ್ನು (Target) ಸಾಧಿಸುವ ಕನಸು. ಇನ್ನೊಂದು ರಾತ್ರಿಯೋ (Night), ಹಗಲೋ (Day), ಮಧ್ಯಾಹ್ನವೋ...? ನಾವು ಮಲಗಿದಾಗ (Sleep) ಬೀಳುವ ಕನಸು..!!! ಆದರೆ, ಹೀಗೆ ನಾವು ಮಲಗಿದಾಗ ಬೀಳುವ ಎಲ್ಲ ಕನಸುಗಳಿಗೆ ವಿಶೇಷ ಅರ್ಥ (Special Meaning) ಇಲ್ಲದಿದ್ದರೂ ಕೆಲವು ಕನಸುಗಳಿಗೆ ಅರ್ಥ ಇರುತ್ತದೆ.
ಕನಸಲ್ಲಿ ಕಂಡ ವಸ್ತುಗಳಾಗಿರಬಹುದು ಇಲ್ಲವೇ ವಿಚಾರಗಳೇ ಆಗಿರಬಹುದು. ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಮೂಲಕ ಭವಿಷ್ಯದಲ್ಲಿ ಘಟಿಸಬಹುದಾದ ಕೆಲವು ವಿಚಾರಗಳನ್ನು ಸ್ವಪ್ನ ಶಾಸ್ತ್ರದ ಮೂಲಕ ಮೊದಲೇ ತಿಳಿದುಕೊಳ್ಳುವ ಮೂಲಕ ಪರಿಹಾರ ಬೇಕಿದ್ದಲ್ಲಿ ಕಂಡುಕೊಳ್ಳಬಹುದಾಗಿದೆ. ಈಗ ಕನಸಿನಲ್ಲಿ ನೀರು ಕಂಡರೆ ಯಾವುದರ ಸಂಕೇತ ಎಂಬುದರ ಬಗ್ಗೆ ನೋಡೋಣ...
ಕನಸಲ್ಲಿ ಶುದ್ಧ ನೀರು (Clean water) ಕಂಡರೆ?
ಸ್ವಪ್ನಶಾಸ್ತ್ರದ ಅನುಸಾರ ಕನಸಿನಲ್ಲಿ ಶುದ್ಧವಾಗಿರುವ ನೀರು ಕಂಡರೆ ಶುಭ ಸಂಕೇತವಾಗಿದೆ. ಆದ್ದರಿಂದ ಈ ರೀತಿಯ ಕನಸು ಬಿದ್ದರೆ ಚಿಂತಿಸುವುದು ಬೇಡ. ಇದು ಸಫಲತೆ ಹಾಗೂ ಯಶಸ್ಸಿನ (Success) ಸಂಕೇತವೆಂದು ಸ್ವಪ್ನಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಸುಖ-ಸಮೃದ್ಧಿ ನೆಲೆಸಿ, ಸಕಾರಾತ್ಮಕತೆ (Positivity) ಹೆಚ್ಚಲಿದೆ.
ಅಶುದ್ಧ ನೀರು (Impure water) ಕನಸಲ್ಲಿ ಕಂಡರೆ?
ಅಶುದ್ಧವಾದ ನೀರು ಕನಸಿನಲ್ಲಿ ಕಂಡರೆ ನಿಜಕ್ಕೂ ಯೋಚಿಸುವ ಸಂಗತಿಯಾಗಿದೆ. ಏಕೆಂದರೆ ಇದು ಅಶುಭದ ಸಂಕೇತವಾಗಿದೆ. ಬರುವ ದಿನಗಳಲ್ಲಿ ಸಂಕಷ್ಟಗಳು (Difficulties) ಎದುರಾಗುತ್ತವೆ ಎಂಬುದರ ಸೂಚನೆಯನ್ನು ಇದು ಕೊಡುತ್ತದೆ. ಒಂದು ವೇಳೆ ನೀವು ಶುಭ ಕಾರ್ಯಗಳನ್ನೋ ಇಲ್ಲವೇ ಒಳ್ಳೇ ಕೆಲಸವನ್ನು ಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದ ಸಂದರ್ಭದಲ್ಲಿ ಇಂಥ ಕನಸನ್ನು (Dream) ಕಂಡರೆ ಕೆಲವು ದಿನಗಳ ಮಟ್ಟಿಗೆ ಶುಭ ಕಾರ್ಯವನ್ನು ನಡೆಸದೇ ಇರುವುದು ಒಳಿತು ಎಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ನಿಕಟ ಸಂಬಂಧದಲ್ಲಿ ಜಗಳಗಳಾಗ್ತಿದ್ರೆ ಈ ಗ್ರಹಗಳೇ ಕಾರಣ.. ನೀವೇನು ಮಾಡಬೇಕು?
ಬಾವಿಯ ನೀರನ್ನು (Well water) ಕಂಡರೆ
ಕನಸಿನಲ್ಲಿ ಬಾವಿಯ ನೀರು ಕಂಡರೆ ಅದು ಅತ್ಯಂತ ಶುಭಕಾರವಾಗಿದೆ. ಮುಂದಿನ ದಿನಗಳಲ್ಲಿ ಧನ ಲಾಭ (Money Profit) ಆಗುವುದರ ಸಂಕೇತ ಇದಾಗಿದೆ. ಜೊತೆಗೆ ನೀವು ಮಾಡುವ ಎಲ್ಲ ಕೆಲಸದಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ ಎಂಬುದರ ಸಂಕೇತವೂ ಇದಾಗಿದೆ.
ನದಿಯ ನೀರನ್ನು (River water) ಕಂಡರೆ?
ನದಿಯ ನೀರು ಕನಸಿನಲ್ಲಿ ಕಾಣಿಸಿಕೊಂಡರೆ ಶುಭ ಸೂಚಕ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ನಿಮ್ಮ ಕನಸುಗಳು ಸಾಕಾರಗೊಳ್ಳುವುದಲ್ಲದೆ, ನೀವು ಅಂದುಕೊಂಡ ಕೆಲಸಗಳು ಶೀಘ್ರವಾಗಿ ನೆರವೇರುತ್ತವೆ. ಜೊತೆಗೆ ಸುಖ, ಶಾಂತಿ, ನೆಮ್ಮದಿ ನಿಮ್ಮದಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಯಶಸ್ಸು ಮತ್ತು ಗೌರವಗಳೂ ಪ್ರಾಫ್ತಿಯಾಗಿ ಸಮಾಜದಲ್ಲಿ ಪ್ರತಿಷ್ಠೆಯೂ ವೃದ್ಧಿಸಲಿದೆ.
ಇದನ್ನು ಓದಿ: ಮಹಿಳೆಯ ರಹಸ್ಯ ತಿಳ್ಕೊಬೇಕಾ? ಅಂದುಕೊಂಡಷ್ಟು ಕಷ್ಟವಲ್ಲ ಬಿಡಿ!
ಜಲಪಾತವನ್ನು ಕನಸಲ್ಲಿ ಕಂಡರೆ?
ನಿಮ್ಮ ಕನಸಿನಲ್ಲಿ ಜಲಪಾತ ಕಾಣಿಸಿದರೆ ನಿಮಗೆ ಪಾಸಿಟಿವ್ ಎನರ್ಜಿ ಹೆಚ್ಚಲಿದೆ ಎಂಬುದರ ಸೂಚಕವಾಗಿದೆ. ನವ ಚೈತನ್ಯ, ಶಕ್ತಿ ಮತ್ತು ಉತ್ಸಾಹವನ್ನು ನೀವು ಪಡೆಯಲಿದ್ದೀರಿ ಎಂದರ್ಥ. ಸಂತೋಷವೂ ನಿಮ್ಮದಾಗುತ್ತದೆ. ಆದರೆ, ಜಲಪಾತದಿಂದ ಬೀಳುತ್ತಿರುವಂತೆ ಏನಾದರೂ ಕನಸುಗಳು ಕಂಡರೆ ತುಸು ಎಚ್ಚರವಹಿಸುವುದು ಅಗತ್ಯ. ಇದು ಅಪಾಯದ ಮುನ್ಸೂಚನೆ ಎಂದೇ ಭಾವಿಸಬಹುದು. ಹಾಗಾಗಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಕನಸಿನಲ್ಲಿ ಮಳೆ ನೀರು ಕಂಡರೆ..?
ಕನಸಿನಲ್ಲಿ ಮಳೆ ಬರುತ್ತಿರುವುದು ಕಂಡರೆ ಸ್ವಲ್ಪ ಯೋಚಿಸಬೇಕಾದ ಅಗತ್ಯವಿದೆ. ಯಾಕೆಂದರೆ ಮಳೆ ನೀರು ಶುಭ ಹಾಗೂ ಅಶುಭಗಳ ಸಂಕೇತ ಎಂದು ಹೇಳಲಾಗಿದೆ. ಅಂದರೆ, ಮಳೆ ಕಾಣಿಸುವ ಸಂದರ್ಭದಲ್ಲಿ ಸಂತೋಷಪಡುತ್ತಿರುವ ಕನಸು ಬಿದ್ದಿದ್ದರೆ ಅದು ಶುಭದ ಸೂಚಕವಾಗಿದೆ. ಆದರೆ, ಮಳೆ ಜೊತೆಗೆ ದುಃಖಪಡುತ್ತಿರುವ ಇಲ್ಲವೇ ಅಳುತ್ತಿರುವಂತೆ ಕನಸು ಕಂಡರೆ ಅದು ಅಶುಭವಾಗಿದ್ದು, ನಕಾರಾತ್ಮಕತೆಯ ಸೂಚಕವಾಗಿದೆ.