ಕುಂಭ ರಾಶಿಯವರ ಗುಣಸ್ವಭಾವಗಳೇನು? ಅವರ ವ್ಯಕ್ತಿತ್ವ ಹೇಗಿರುತ್ತದೆ? ಅವರ ಮನೋಧರ್ಮ ಅರ್ಥ ಮಾಡಿಕೊಳ್ಬೇಕಾ?
ಕುಂಭ ರಾಶಿ(Aquarius Zodiac)ಯು ನೀರಿನ ಚಿಹ್ನೆ. ಗಾಳಿಯ ಅಂಶದಿಂದ ಆಳಲ್ಪಡುವ ಜಲಚಿಹ್ನೆ ಎಂದರೆ ಸರಿಯಾಗುತ್ತದೆ. ಈ ಕಾರಣದಿಂದ ಇವರು ಉತ್ತಮ ಅಂತಃ ಪ್ರಜ್ಞೆ ಹೊಂದಿರುತ್ತಾರೆ. ಮಹಾನ್ ಚಿಂತಕರು, ಸಂವಹನಕಾರರು ಮತ್ತು ಇತರ ಎಲ್ಲರಿಗಿಂತ ಭಿನ್ನ ಸ್ವಭಾವದವರು. ಇದರಿಂದ ಈ ರಾಶಿಯವರು ಗುಂಪಿನಲ್ಲೂ ವಿಶೇಷವಾಗಿ ಗುರುತಿಸಿಕೊಳ್ಳಬಲ್ಲರು. ಕುಂಭ ರಾಶಿಯವರ ವ್ಯಕ್ತಿತ್ವ, ಗುಣ ಸ್ವಭಾವಗಳ ಬಗ್ಗೆ ನೋಡೋಣ.
1. ದೂರದೃಷ್ಟಿಯ ಜೀವಿಗಳು(far-sighted beings)
ಕುಂಭ ರಾಶಿಯವರು ಸಮಾಜದ ಒಳಿತಿಗಾಗಿ ತಮ್ಮನ್ನು ಮತ್ತು ಜಗತ್ತನ್ನು ಬದಲಾಯಿಸಲು ಬಯಸುವ ಮಾನವತಾವಾದಿಗಳು(humanitarians). ಈ ಭವಿಷ್ಯ-ಆಧಾರಿತ ಜನರು ಜಗತ್ತನ್ನು ವಾಸಿಸಲು ಉತ್ತಮ ಸ್ಥಳವನ್ನಾಗಿ ಮಾಡಲು ಬಯಸುತ್ತಾರೆ ಮತ್ತು ಅವರು ಅದನ್ನು ಜೀವನದಲ್ಲಿ ತಮ್ಮ ಧ್ಯೇಯವೆಂದು ನೋಡುತ್ತಾರೆ. ಅವರು ಅತ್ಯಂತ ಪ್ರಗತಿಪರರು. ಸಹಾನುಭೂತಿ ಮತ್ತು ನ್ಯಾಯದ ಬಲವಾದ ಪ್ರಜ್ಞೆಯೇ ಇವರ ಎಲ್ಲ ಅಭಿಪ್ರಾಯಗಳು ಮತ್ತು ಕಾರ್ಯಗಳ ಮೇಲೆ ಪ್ರಭಾವ ಬೀರುತ್ತವೆ. ಇವರ ಸಿದ್ಧಾಂತ, ನೈತಿಕ ಪ್ರಜ್ಞೆ ಮತ್ತೊಬ್ಬರ ಮೇಲೆ ಪರಿಣಾಮ ಬೀರುವಷ್ಟು ಪ್ರಬಲವಾಗಿರುತ್ತದೆ. ಹಾಗಾಗಿ, ಇವರನ್ನು ಹತ್ತಿರದಿಂದ ನೋಡಿ ಬಲ್ಲವರು ತುಂಬಾ ಮೆಚ್ಚುತ್ತಾರೆ.
2. ಮಹಾನ್ ಸೃಜನಶೀಲರು(creative souls)
ಅವರು ಜಗತ್ತನ್ನು ಬಣ್ಣಗಳೊಂದಿಗೆ ವಿಭಿನ್ನವಾಗಿ ನೋಡುತ್ತಾರೆ. ಹೊಸ ಮತ್ತು ಸಂಕೀರ್ಣ ವಿಚಾರಗಳು ಇವರ ತಲೆಗೆ ಬರುತ್ತವೆ. ಕಲೆಯನ್ನು ತಮ್ಮ ಅಭಿವ್ಯಕ್ತಿಯ ಮಾರ್ಗವಾಗಿ ಬಳಸುವುದರಲ್ಲಿ ಅವರು ಹೆಮ್ಮೆ ಪಡುತ್ತಾರೆ. ಬರವಣಿಗೆ, ಚಿತ್ರಕತೆ, ಫೋಟೋಗ್ರಫಿ ಸೇರಿದಂತೆ ಸಾಕಷ್ಟು ಸೃಜನಾತ್ಮಕ ಕಾರ್ಯಗಳಲ್ಲಿ ಮುಂದಿರುತ್ತಾರೆ. ಇವರು ಮತ್ತೊಬ್ಬರ ತಾಳಕ್ಕೆ ಕುಣಿಯುವವರಲ್ಲ. ತಮ್ಮದೇ ಹಾಡಿಗೆ ತಮಗಿಚ್ಚೆ ಬಂದಂತೆ ಕುಣಿಯುವವರು. ಯಾವುದೇ ಕೆಲಸವನ್ನು ಮತ್ತೆ ಮತ್ತೆ ಪುನರಾವರ್ತಿಸಿ ಮಾಡಬೇಕೆಂದರೆ ಬೇಗ ಬೇಸರ ಹೊಂದುತ್ತಾರೆ. ಮಾಡಿದ್ದೇ ಮಾಡುವುದು ಇವರಿಗಿಷ್ಟವಾಗುವುದಿಲ್ಲ. ಇದರಿಂದಾಗಿಯೇ ಔಟ್ ಆಪ್ ದ ಬಾಕ್ಸ್ ಚಿಂತನೆ ಹೊರ ಬರುತ್ತದೆ.
ನೋಡೋದಾದ್ರೆ ಈ ವಸ್ತುಗಳನ್ನೇ ನೋಡಿ, ನಿಮಗೆ ಒಲಿಯತ್ತೆ ಅದೃಷ್ಟ..!
3. ಸ್ವಾತಂತ್ರ್ಯ ಪ್ರಿಯರು(love their freedom)
ಕುಂಭ ರಾಶಿಯವರು ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದರೆ ಸಹಿಸಲಾರರು. ಪ್ರೀತಿಗಿಂತಲೂ ಸ್ವಾತಂತ್ರ್ಯವೇ ದೊಡ್ಡದು ಎಂಬ ನಂಬಿಕೆಯವರು. ಸದಾ ಹೊಸತನಕ್ಕಾಗಿ, ವಿಶೇಷತೆಗಾಗಿ ತುಡಿವ ಮನಸ್ಸು ಇವರದು. ದೈನಂದಿನ ಕೆಲಸಗಳ ಹೊರತಾದ ಕೆಲಸ ಬಯಸುತ್ತಾರೆ. ಹಾಗಾಗಿ, ಯಾವುದಕ್ಕಾದರೂ ಬದ್ಧತೆ ಒದಗಿಸುವುದು ಇವರಿಗೆ ಕೊಂಚ ಕಷ್ಟವೆನಿಸುತ್ತದೆ. ಕೆಲಸದಲ್ಲಿ ಕೂಡಾ ತಮ್ಮ ಸ್ವಾತಂತ್ರ್ಯ ಕೊಡಬೇಕು ಎಂಬುದು ಇವರ ಬಯಕೆ. ಇವರ ಜುಟ್ಟು ಹಿಡಿದು ಕೆಲಸ ಮಾಡಿಸಲು ಸಾಧ್ಯವಿಲ್ಲ.
4. ಅನಿರೀಕ್ಷಿತ ಸ್ವಭಾವ(unpredictable)
ಕುಂಭ ರಾಶಿಯವರು ಯಾವಾಗ ಹೇಗಿರುತ್ತಾರೆ ಎಂದು ಹೇಳಲಾಗದು. ಅವರ ಮನಸ್ಸನ್ನು ಸುಲಭವಾಗಿ ಓದಲಾಗದು. ಮಿತಿಯನ್ನು ದಾಟಿಯೂ ಕೆಲಸ ಮಾಡಬಲ್ಲರು. ಅವರ ಮೂಡಿ ಸ್ವಭಾವ ನೋಡಿದಾಗ ಅವರು ನಿಮ್ಮನ್ನು ಬಯಸುತ್ತಾರೆಯೇ ಇಲ್ಲವೇ ಎಂದು ತಿಳಿಯುವುದೇ ಕಷ್ಟವಾಗುತ್ತದೆ. ಗುಂಪಿನ ಭಾಗವಾಗಿದ್ದಾಗಲೂ ಸ್ವತಂತ್ರರಾಗಿರುತ್ತಾರೆ ಅವರು. ಇದರಿಂದ ಕೆಲವೊಮ್ಮೆ ಯಾರೊಂದಿಗೂ ಸೇರದವರು ಎನಿಸುತ್ತದೆ. ಒಮ್ಮೆ ತುಂಬಾ ಕ್ಲೋಸ್ ಆಗಿ ಮಾತಾಡಿದವರು ಮತ್ತೊಮ್ಮೆ ಹಾಯ್ ಹೇಳಿ ಸುಮ್ಮನಾಗಬಹುದು. ಬಹಳ ಮೂಡಿ ಇವರು.
ನಿಮ್ಮ ನೆಚ್ಚಿನ ಬಣ್ಣ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತೆ!
5. ಬುದ್ಧಿವಂತರು(intelligent)
ಕುಂಭ ರಾಶಿಯವರು ಎಲ್ಲದರಲ್ಲೂ ಸಾಧ್ಯತೆಯನ್ನು ಕಾಣುವ ಬುದ್ಧಿವಂತ ನಾವೀನ್ಯಕಾರರು. ಅವರ ಮನಸ್ಸೇ ಬುದ್ಧಿವಂತವಾಗಿ ಕೆಲಸ ಮಾಡುತ್ತದೆ. ಯಾವುದೇ ವಿಷಯವಾದರೂ ಲಾಜಿಕಲಿ ಪೂರ್ತಿ ಕನೆಕ್ಟ್ ಆಗದೆ ಅವರು ಅದನ್ನು ಮುಂದುವರೆಸಲಾರರು. ಈ ಕಾರಣದಿಂದಲೇ ಮತ್ತೊಬ್ಬರ ಸುಳ್ಳನ್ನು ಬೇಗ ಕಂಡು ಹಿಡಿಯಬಲ್ಲರು. ಯಾವುದೇ ವಿಷಯಕ್ಕಾದರೂ ಕುಂಭ ರಾಶಿಯವರು ಸಲಹೆ ಕೇಳುವುದರಿಂದ ಉತ್ತಮ ಪರಿಹಾರ ಹೇಳಬಲ್ಲರು. ಏಕೆಂದರೆ ಅವರ ಅರ್ಥ ಮಾಡಿಕೊಳ್ಳುವ ಶಕ್ತಿಯೂ ಹೆಚ್ಚೇ ಇರುತ್ತದೆ.