ಕನಸಲ್ಲಿ ಈ ವಸ್ತುಗಳ ಕಂಡರೆ ಸೌಭಾಗ್ಯ...!!!

By Suvarna News  |  First Published Nov 3, 2021, 5:40 PM IST

ಕನಸಿನಲ್ಲಿ ಬರುವ ವಿಚಾರಗಳಿಗೆ ಅನೇಕ ಅರ್ಥವಿರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಣುವ ಕೆಲವು ವಸ್ತು ಅಥವಾ ಘಟನೆಗಳು ವ್ಯಕ್ತಿಯ ಭವಿಷ್ಯದ ಸಂಕೇತಗಳನ್ನು ತಿಳಿಸುತ್ತವೆ. ಇನ್ನು ಕೆಲವು ಅದೃಷ್ಟ ಬರುವ ಸಂಕೇತವಾಗಿರುತ್ತವೆ. ಅವುಗಳ ಬಗ್ಗೆ ತಿಳಿಯೋಣ..


ಸ್ವಪ್ನ ಶಾಸ್ತ್ರವು (Dream) ಜ್ಯೋತಿಷ್ಯ ಶಾಸ್ತ್ರದ (Astrology) ಒಂದು ಭಾಗವಾಗಿದೆ. ಪ್ರತಿನಿತ್ಯ ಕನಸು (Dream) ಬೀಳುವುದು ಸಹಜ (Natural) ಪ್ರಕ್ರಿಯೆ. ಕೆಲವು ನೆನಪಿನಲ್ಲಿ ಉಳಿದರೆ ಮತ್ತೆ ಕೆಲವು ಮರೆತೇ ಹೋಗಿರುತ್ತದೆ. ಇನ್ನು ಕೆಲವು ಅಸ್ಪಷ್ಟವಾಗಿ ಉಳಿಯುತ್ತವೆ. ಬೀಳುವ ಕನಸಿಗೆ ಅರ್ಥವಿರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ವಸ್ತುಗಳಾಗಲಿ, ಘಟನೆಗಳಾಗಲಿ ಕನಸಿನಲ್ಲಿ ಕಂಡರೆ ಅವು, ನಮ್ಮ ಮುಂದಿನ ಭವಿಷ್ಯದ (Future) ಕೆಲವು ವಿಚಾರಗಳನ್ನು ತಿಳಿಸುವ ಸಂಕೇತಗಳಾಗಿರುತ್ತವೆ. ಕನಸುಗಳು ಕೆಟ್ಟ ಅಥವಾ ಉತ್ತಮ ವಿಚಾರಗಳನ್ನು ಮೊದಲೇ ತಿಳಿಸುವ ಸಂಕೇತಗಳೆಂದು ಸಹ ಹೇಳಲಾಗುತ್ತದೆ. ಈ ಕನಸುಗಳು ಬಿದ್ದರೆ ಸಂಪತ್ತು (Wealth) ಬಂದು ಸೇರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಬರೀ ಸಂಪತ್ತು ಸಿಗುವುದಲ್ಲದೆ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಕನಸಿನಲ್ಲಿ ಕಂಡದ್ದು ನಿಜವಾಗುತ್ತದೆ ಎಂಬ ಬಗ್ಗೆ ಕೇಳಿರುತ್ತೇವೆ. ಕನಸಿನ ಬಗ್ಗೆ ಚಿಂತಿಸುತ್ತೇವೆ. ಅದಕ್ಕೆ ಅರ್ಥವನ್ನು ಅಥವಾ ಸೂಚನೆ ಏನಿರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಕನಸಿನಿಂದ ಕೆಲವು ಬಾರಿ ಖುಷಿಯಾದರೆ, ಇನ್ನು ಕೆಲವು ಬಾರಿ ಗಾಬರಿಯಾಗುವಂತೆ ಮಾಡುತ್ತದೆ. ಕನಸಿನಲ್ಲಿ ಕಂಡ ವಸ್ತುಗಳು ಅಥವಾ ಘಟನೆಗಳು ಶುಭಾಶುಭಗಳ ಸಂಕೇತವಾಗಿರುತ್ತವೆ ಹಾಗದರೆ ಅವು ಯಾವುವು ಎಂಬುದನ್ನು ತಿಳಿಯೋಣ....

ಇದನ್ನು ಓದಿ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯಂತೆ ಆಡಿಸ್ತಾರಂತೆ..!!!

ಕಮಲದ ಹೂವು (Lotus)
ಕನಸಿನಲ್ಲಿ (Dream) ಕಮಲದ ಹೂವು ಕಂಡರೆ ಅಂತಹ ವ್ಯಕ್ತಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಸಂಪತ್ತು (Wealth) ಸಿಗುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕಮಲವು ಲಕ್ಷ್ಮೀ ದೇವಿಯ ಪ್ರತೀಕವಾಗಿದ್ದು, ಇದರಿಂದ ಲಕ್ಷ್ಮೀಯ ಕೃಪೆ (Blessings) ಪ್ತಾಪ್ತವಾಗಲಿದೆ. ಹಾಗಾಗಿ ಕನಸಿನಲ್ಲಿ ಕಮಲದ ಹೂವು ಕಂಡರೆ ಹಣ ದೊರಕುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಗಿಳಿ (Parrot)
ಕನಸಿನಲ್ಲಿ ಗಿಳಿ ಕಂಡರೆ ಅಂತಹ ವ್ಯಕ್ತಿಗೆ ಹೆಚ್ಚು ಹಣ (Money) ಲಭಿಸಲಿದೆ ಎಂದು ಹೇಳಲಾಗುತ್ತದೆ. ಇದರಿಂದ ಸಂಬಂಧಿಗಳಿಂದ (Relatives) ಆಸ್ತಿ (Property) ಸಿಗುವ ಸಂಭವ ಸಹ ಇರುತ್ತದೆ.

ಇದನ್ನು ಓದಿ: ಈ ರಾಶಿಯವರಲ್ಲೇ ವಿಚ್ಚೇದನ ಹೆಚ್ಚು: ಅವು ಯಾವ್ಯಾವ ರಾಶಿ ಗೊತ್ತಾ..?

ಜೇನು ಗೂಡು (Honeycomb) 
ಕನಸಿನಲ್ಲಿ ಜೇನುಗೂಡು ಕಂಡರೆ ಅತ್ಯಂತ ಶುಭವೆಂದು (Good luck) ಹೇಳಲಾಗುತ್ತದೆ. ಇದರಿಂದ ಜೀವನದಲ್ಲಿ ಅತ್ಯಂತ ಖುಷಿ (Happiness) ಲಭಿಸಲಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಹಣ (Money) ಲಭಿಸಲಿದೆ ಎಂದು ಸಹ ಹೇಳಲಾಗುತ್ತದೆ. ಮನೆಯಲ್ಲಿ ಸುಖ-ಸಂತೋಷ ನೆಮ್ಮದಿ ನೆಲೆಸಲಿದೆ.

ಆನೆ (Elephant)
ಕನಸಿನಲ್ಲಿ ಆನೆಯನ್ನು ಕಂಡರೆ ಅತ್ಯಂತ ಶುಭ ಮತ್ತು ಲಾಭವಾಗುವುದೆಂದು (Profit) ಹೇಳಲಾಗುತ್ತದೆ. ಹೆಚ್ಚಿನ ಹಣ ಲಭಿಸುವುದಲ್ಲದೆ, ಮನೆಯಲ್ಲಿ ಸಂಪತ್ತು (Wealth) ಮತ್ತು ಸೌಭಾಗ್ಯ ಲಭಿಸಲಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕನಸಿನಲ್ಲಿ ಕಪ್ಪು (Black) ಆನೆಯ ಬದಲಾಗಿ ಶ್ವೇತ (White) ವರ್ಣದ (Color) ಆನೆಯನ್ನು ಕಂಡರೆ ಅದರಿಂದ ವ್ಯಕ್ತಿಗೆ (Person) ಅದೃಷ್ಟ (Luck) ಲಭಿಸಲಿದೆ ಎಂದರ್ಥ. ಹಾಗಾಗಿ ಕನಸಿನಲ್ಲಿ ಆನೆ ಕಂಡರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ.

ಹಾಲು ಕುಡಿಯುತ್ತಿರುವುದು (Drinking milk)
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಾಲು (Milk) ಕುಡಿಯುತ್ತಿರುವಂತೆ ಕಂಡರೆ ಅದರಿಂದ ಹೆಚ್ಚಿನ ಧನಲಾಭ (Profit) ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ವ್ಯಾಪಾರ (Business) ಮತ್ತು ಉದ್ಯಮದಲ್ಲಿದ್ದ ವ್ಯಕ್ತಿಗಳು ಈ ರೀತಿಯ ಕನಸು ಕಂಡರೆ ಅಂತವರಿಗೆ ವ್ಯಾಪಾರವು ಮತ್ತಷ್ಟು ಅಭಿವೃದ್ಧಿ (Improvement) ಹೊಂದುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ಹಣ್ಣಿಂದ ಕೂಡಿರುವ ಮರ (Tree)
ಹಣ್ಣು (Fruit) ಬಿಟ್ಟಿರುವ ಮರವನ್ನು ಕನಸಿನಲ್ಲಿ ಕಂಡರೆ ಇದರಿಂದ ಪರಿಶ್ರಮದ (Effort) ಫಲ (Result) ಬಹುಬೇಗ ದೊರಕುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ (Life) ಉತ್ತಮ ಪರಿಣಾಮಗಳು (Effect) ಉಂಟಾಗುತ್ತವೆ.

Tap to resize

Latest Videos

 

click me!