Diwali: ಲಕ್ಷ್ಮಿದೇವಿಯ ಕೃಪೆ ಪಡೆಯಲು ಗೂಬೆಯನ್ನು ಆರಾಧಿಸಿ!

By Suvarna News  |  First Published Nov 3, 2021, 5:32 PM IST

ಲಕ್ಷ್ಮೀದೇವಿಯ ವಾಹನ ಗೂಬೆ. ಗೂಬೆಯನ್ನು ನಿಕೃಷ್ಟವಾಗಿ ಕಾಣಬೇಡಿ. ಲಕ್ಷ್ಮಿದೇವಿ ಗೂಬೆಯನ್ನು ಯಾಕೆ ವಾಹನ ಮಾಡಿಕೊಂಡಳು, ಗೂಬೆಯ ಮೂಲಕ ದೇವಿಯ ಕೃಪೆ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.


ತುಂಬ ಹಿಂದಿನ ಕಾಲ. ಆಗಿನ್ನೂ ಪ್ರಾಣಿಗಳ ಸೃಷ್ಟಿ ಆಗಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ನಡೆದೇ ಹೋಗಬೇಕಿತ್ತು. ಆಗ ದೇವತೆಗಳು ಕಡುನೊಂದು ಬ್ರಹ್ಮನ (Brahma) ಬಳಿಗೆ ಹೋದರು. ನಡೆದೇ ಹೋಗಬೇಕಾದ ತಮ್ಮ ಬವಣೆಯನ್ನು ವಿವರಿಸಿದರು. ಏನು ಮಾಡುವುದು ಎಂದು ಬ್ರಹ್ಮನಿಗೂ ಗೊತ್ತಾಗಲಿಲ್ಲ. ಏನು ಮಾಡೋಣ ದೇವೀ ಎಂದು ಶಾರದೆಯನ್ನು ಕೇಳಿದ.ಜ್ಞಾನದ (knowledge) ಅಧಿದೇವತೆಯಾದ ಆಕೆ ಹೇಳಿದಳು- ನೀನು ಪ್ರಾಣಿಗಳನ್ನು ಸೃಷ್ಟಿಸು. ಅವುಗಳು ವಾಹನಗಳಾಗಲಿ. ಹಾಗೇ ಮುದ್ದು ಮಾಡುವುದಕ್ಕೂ ಅವು ಒದಗುವಂತಿರಲಿ.ಹಾಗೇ ಬ್ರಹ್ಮ ಪ್ರಾಣಿಗಳನ್ನು ಸೃಷ್ಟಿಸಿದ. ಅವುಗಳಲ್ಲಿ ಒಂದೊಂದೂ, ಒಂದೊಂದು ದೇವತೆಯ ವಾಹನಗಳಾದವು. ಹೀಗೆ ಬ್ರಹ್ಮನಿಗೆ ಹಂಸ, ಮಹಾವಿಷ್ಣುವಿಗೆ ಗರುಡ, ಯಮನಿಗೆ ಮಹಿಷ, ಗಣಪತಿಗೆ (Ganesha) ಇಲಿ, ಶಿವನಿಗೆ (Shiva) ನಂದಿ, ಪಾರ್ವತಿಗೆ ಸಿಂಹ, ಷಣ್ಮುಖನಿಗೆ ನವಿಲು, ಶನಿಗೆ ಕಾಗೆ ಇತ್ಯಾದಿ.

ಹೀಗೆಲ್ಲ ವಿತರಣೆ ನಡೆಯುವಾಗ ಪಾಪಚ್ಚಿ ಗೂಬೆ (Owl) ಒಂದು ಕಡೆ ಸುಮ್ಮನೇ ಕೂತು ಕೊರಗುತ್ತಿತ್ತು. ತನ್ನನ್ನು ಯಾರೂ ಆಯ್ದುಕೊಳ್ಳುತ್ತಿಲ್ಲವಲ್ಲಾ ಎಂದು ಅದಕ್ಕೆ ದುಃಖವಾಗಿತ್ತು. ಆಗ ಲಕ್ಷ್ಮಿಯ ಕಣ್ಣು ಗೂಬೆಯ ಮೇಲೆ ಬಿತ್ತು. ಆಕೆಗೆ ಅದರ ಮೇಲೆ ಪ್ರೀತಿ ಉಕ್ಕಿತು. ಕರೆದು ತನ್ನ ವಾಹನವನ್ನಾಗಿ ಮಾಡಿಕೊಂಡಳು. ಗೂಬೆ ಕತ್ತಲಲ್ಲಿ ಇರುತ್ತದೆ. ಹಗಲಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕತ್ತಲಲ್ಲೇ ಸಂಚರಿಸುತ್ತದೆ. ಹೀಗಾಗಿ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವಾಗ, ಹೇಗೆ ಹೋಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಲಕ್ಷ್ಮಿಗೆ ಬೇಕಾದದ್ದು ಇದೇ ವಾಹನ. ಈಕೆ ಕೂಡ ಹಾಗೆಯೇ. ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಾಳೋ ಗೊತ್ತೇ ಆಗುವುದಿಲ್ಲ. ಲಕ್ಷ್ಮಿ ಅನಿರೀಕ್ಷಿತೆ. ಇಂದು ಇದ್ದಲ್ಲಿ ನಾಳೆ ಇರುತ್ತಾಳೆ ಎನ್ನಲಾಗುವುದಿಲ್ಲ. ಹೀಗಾಗಿ ಲಕ್ಷ್ಮಿಗೆ ಗೂಬೆ ವಾಹನ. ಜೊತೆಗೆ, ಗೂಬೆಯ ದೊಡ್ಡ ಉರುಟಾದ ಕಣ್ಣುಗಳು, ಚಿನ್ನದ ಉರುಟಾದ ನಾಣ್ಯಗಳನ್ನು ನೆನಪಿಸುತ್ತದಲ್ಲವೇ?

Tap to resize

Latest Videos

ದೀಪಾವಳಿಗೆ ಈ ರೀತಿ ಲಕ್ಷ್ಮಿ ಗಣೇಶ ಪ್ರತಿಮೆ ಮನೆಗೆ ತರೋದು ದುರಾದೃಷ್ಟಕರ

ಗೂಬೆಯ ಮಹತ್ವವೇನು?
ಗೂಬೆಯನ್ನು ಸ್ಥಿತಿ ಪ್ರಜ್ಞಾ ಎಂದು ಕರೆಯಲಾಗುತ್ತದೆ, ಅಂದರೆ ಅಚಲ ನಿರ್ಧಾರವನ್ನು ಹೊಂದಿರುವುದು ಎಂದರ್ಥ. ಅದರ ದೊಡ್ಡ ದುಂಡಗಿನ ಕಣ್ಣುಗಳು ಕೇಂದ್ರೀಕೃತವಾಗಿರುತ್ತವೆ ಮತ್ತು ಚಲಿಸುವುದಿಲ್ಲ. ಆದ್ದರಿಂದ, ಇದು ಏಕಾಗ್ರತೆಯನ್ನು, ಜ್ಞಾನವನ್ನು ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಸಂಪತ್ತಿನ ದೇವತೆಯ ಜೊತೆಯಲ್ಲಿ, ಗೂಬೆ ಸಂಪತ್ತನ್ನು ಗಳಿಸುವ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಮತ್ತೊಂದೆಡೆ, ಗೂಬೆ ಲಕ್ಷ್ಮಿ ದೇವಿಯ ವಿರುದ್ಧವಾದ ಅಲಕ್ಷ್ಮಿಯನ್ನು ಅಂದರೆ ಲಕ್ಷ್ಮಿ ದೇವಿಯ ಸಹೋದರಿಯನ್ನು ಸಹ ಪ್ರತಿನಿಧಿಸುತ್ತದೆ. ಲಕ್ಷ್ಮಿ ದೇವಿಯು ಬುದ್ಧಿವಂತಿಕೆ, ಅದೃಷ್ಟ, ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸಿದರೆ, ಅಲಕ್ಷ್ಮಿ ದೇವಿಯು ದಾರಿದ್ರ್ಯ, ಬಡತನ, ಕಲಹ, ಜಗಳ, ಹೋರಾಟ, ದುರಾದೃಷ್ಟ ಇತ್ಯಾದಿಗಳನ್ನು ಪ್ರತಿನಿಧಿಸುತ್ತಾಳೆ. ಮತ್ತು ಗೂಬೆಯು ವಾಹನವಾಗಿ ಲಕ್ಷ್ಮಿಯನ್ನು ಕೂರಿಸಿಕೊಂಡಾಗ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತಾಳೆ. ಗೂಬೆಯು ಒಂದು ವೇಳೆ ಅಲಕ್ಷ್ಮಿಯೊಂದಿಗೆ ಪ್ರಯಾಣಿಸಿದರೆ ಅದು ಸಂಪತ್ತನ್ನು ಬುದ್ಧಿವಂತಿಕೆಯಿಂದ ಬಳಸಲು ಎಚ್ಚರ ನೀಡುತ್ತದೆ. ಮತ್ತು ನಿಮ್ಮ ಸಂಪತ್ತು ಎಲ್ಲೋ ಕಳೆದು ಹೋಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಗೂಬೆಯನ್ನು ಒಲಿಸಿಕೊಳ್ಳುವುದು ಶುಭವೆಂದು ಪರಿಗಣಿಸಲಾಗಿದೆ. ಗೂಬೆಯ ಶುಭ ದೃಷ್ಟಿಯು ನಿಮ್ಮ ಮೇಲೆ ಬಿದ್ದರೆ ಅದನ್ನು ಶುಭವೆಂದು ಹೇಳಲಾಗುತ್ತದೆ. ಗೂಬೆಯ ಶುಭ ದೃಷ್ಟಿ ಪಡೆಯುವುದು ಹೇಗೆ?

ಅಲ್ಪಾಯುಷಿ ಮಾರ್ಕಂಡೇಯ ಚಿರಂಜೀವಿ ಆದುದು ಹೇಗೆ?

- ನಿಮ್ಮ ಹಣವನ್ನು (money) ನೀವು ಯಾವ ಸ್ಥಳದಲ್ಲಿ ಇರಿಸುತ್ತೀರೋ ಆ ಸ್ಥಳದಲ್ಲಿ ಗೂಬೆಯ ಚಿತ್ರ ಅಥವಾ ಗೂಬೆಯ ಫೋಟೋವನ್ನು ಇಡಬೇಕು. ನೀವು ಇದನ್ನು ಮನೆಯಲ್ಲೂ ಇಡಬಹುದು ಅಥವಾ ಕಛೇರಿಯಲ್ಲೂ ಕೂಡ ಇಡಬಹುದು. ಪ್ರದೋಷ ಅವಧಿಯಲ್ಲಿ ಈ ಚಿತ್ರವನ್ನು ಹಣ ಇಡುವ ಸ್ಥಳದಲ್ಲಿ ಅಥವಾ ಹಣದ ಮೇಲೆ ಇಡಿ. ಮತ್ತು ಇದು ವರ್ಷದುದ್ದಕ್ಕೂ ನಿಮ್ಮ ಆದಾಯವನ್ನು ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಗೂಬೆಯ ಉಗುರನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟುಕೊಂಡರೆ ಆನಂದದಾಯಕ ಮತ್ತು ಜಗಳ ಮುಕ್ತ ದಾಂಪತ್ಯ (Marriage) ಜೀವನವನ್ನು ನಿಮಗೆ ನೀಡುತ್ತದೆ. ದಾಂಪತ್ಯ ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ.
- ದೀಪಾವಳಿ ರಾತ್ರಿಯಲ್ಲಿ, ಗೂಬೆ ಗರಿ ಮತ್ತು ನವಿಲು ಗರಿಗಳನ್ನು ಕೆಂಪು ದಾರದೊಂದಿಗೆ ಕಟ್ಟಿ ಮನೆಯ ಮುಖ್ಯ ದ್ವಾರದಲ್ಲಿ ಇಟ್ಟರೆ ಕುಟುಂಬಕ್ಕೆ ಬುದ್ಧಿವಂತಿಕೆ, ಉತ್ತಮ ಆರೋಗ್ಯ, ಸಂಪತ್ತು, ಜ್ಞಾನ ಮತ್ತು ಸಮೃದ್ಧಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

 

click me!