Dream Meaning: ಬಾಯ್ ಫ್ರೆಂಡ್ ಸತ್ತ ಕನಸು ಬಿದ್ರೆ ಟೆನ್ಷನ್ ಬೇಡ

By Suvarna NewsFirst Published Dec 14, 2022, 5:31 PM IST
Highlights

ಕೆಲವೊಂದು ಕನಸು ಭಯಾನಕವಾಗಿರುತ್ತದೆ. ಮುಂದೇನಾಗ್ಬಹುದು ಎಂಬ ಭಯ ಕಾಡುತ್ತದೆ. ಅಂಥ ಕನಸುಗಳಲ್ಲಿ ಆಪ್ತರ ಸಾವು ಕೂಡ ಒಂದು. ಪ್ರೀತಿಸಿದ ವ್ಯಕ್ತಿ ಸತ್ತಂತೆ ಕನಸು ಬಿದ್ರೆ ಆತಂಕಪಡುವ ಬದಲು ಅದರ ಅರ್ಥ ತಿಳಿದುಕೊಳ್ಳಿ. 
 

ಕನಸುಗಳು ಕೆಲವೊಮ್ಮೆ ವಿಚಿತ್ರ ಮತ್ತು ನಿಗೂಢವಾಗಿರುತ್ತವೆ. ರಾತ್ರಿ ಬಿದ್ದ ಸ್ವಪ್ನ ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಅನೇಕ ಬಾರಿ ರಾತ್ರಿ ಕಂಡ ಕನಸಿನ ಗುಂಗಿನಲ್ಲಿ ನಾವು ಆ ದಿನವನ್ನು ಕಳೆಯುತ್ತೇವೆ. ಸ್ವಪ್ನ ಶಾಸ್ತ್ರದಲ್ಲಿ ಯಾವ ಕನಸು ಬಿದ್ರೆ ಏನು ಅರ್ಥ ಎಂಬುದನ್ನು ವಿವರವಾಗಿ ಹೇಳಲಾಗಿದೆ. ಕನಸು ನಮ್ಮ ಮನಸ್ಥಿತಿ ಹಾಗೂ ಭವಿಷ್ಯದ ಜೊತೆ ಸಂಬಂಧ ಹೊಂದಿದೆ. ಆಪ್ತರು ಅದರಲ್ಲೂ ಪ್ರೇಮಿ ಸಾವನ್ನಪ್ಪಿದಂತೆ ಕನಸು ಬಿದ್ರೆ ಭಯವಾಗೋದು ಸಾಮಾನ್ಯ. ತೀವ್ರ ದುಃಖ, ತಪ್ಪಿತಸ್ಥ ಭಾವನೆ, ಭ್ರಮೆಗೆ ಒಳಗಾಗುವವರಿದ್ದಾರೆ. ಪ್ರೀತಿ ಪಾತ್ರರು ಸಾವನ್ನಪ್ಪಿದಂತೆ ಕನಸು ಬಿದ್ರೆ ಅವರು ಸಾವನ್ನಪ್ಪುತ್ತಾರೆ ಎಂದರ್ಥವಲ್ಲ. ಆದ್ರೆ ಕೆಲವೊಂದು ಘಟನೆಗೆ ಇದು ಮುನ್ಸೂಚನೆಯಾಗಿರುತ್ತದೆ. ನಾವಿಂದು ಪ್ರೇಮಿ ಸಾವನ್ನಪ್ಪಿದ ಕನಸು ಬಿದ್ರೆ ಏನು ಅರ್ಥ ಎಂಬುದನ್ನು ನಿಮಗೆ ಹೇಳ್ತೆವೆ. 

ಕನಸು (Dream) ಗಳನ್ನು ಅರ್ಥೈಸುವ ವಿಷಯಕ್ಕೆ ಬಂದಾಗ ಅದಕ್ಕೆ ಒಂದೇ ಉತ್ತರವನ್ನು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಕನಸು ಅದನ್ನು ಅನುಭವಿಸುವ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಹಾಗೆಯೇ ಬೇರೆ ಬೇರೆ ಅರ್ಥವನ್ನು ಹೊಂದಿರುತ್ತದೆ.  

ಪ್ರೇಮಿ (Lover) ಸಾವನ್ನಪ್ಪಿದಂತೆ ಕನಸು ಬಿದ್ರೆ ಏನು ಅರ್ಥ? :
ಅಸುರಕ್ಷಿತ (Insecure) ಸಂಬಂಧದ ಸೂಚನೆ :
ನಿಮ್ಮ ಸಂಗಾತಿ ಸಾವನ್ನಪ್ಪಿದಂತೆ  ಕನಸು ಕಂಡರೆ ಅದು ಸಂಬಂಧದಲ್ಲಿ ಅಭದ್ರತೆಯನ್ನು ಸೂಚಿಸುತ್ತದೆ. ಕನಸುಗಳು ಸಾಮಾನ್ಯವಾಗಿ ಆಂತರಿಕ ಆಲೋಚನೆ (Thought) ಗಳ ಪ್ರತಿಬಿಂಬವಾಗಿದೆ. ಪದೇ ಪದೇ ಸಂಗಾತಿ ಸಾಯುವ ಕನಸು ಕಂಡ್ರೆ ನಿಮ್ಮ ಸಂಗಾತಿ ನಿಮಗೆ ಬದ್ಧವಾಗಿಲ್ಲ ಅಥವಾ ಅವರು ನಿಮ್ಮನ್ನು ನಿಜವಾಗಿಯೂ ಪ್ರೀತಿ (Love) ಸುವುದಿಲ್ಲ ಎಂಬ ನೋವು ನಿಮ್ಮಲಿದೆ ಎಂದರ್ಥ. ಸಂಗಾತಿಯೊಂದಿಗೆ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ಉದ್ವೇಗ (Tension) ದಲ್ಲಿ ನೀವಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.  
ಸಂಗಾತಿಯಿಂದ ದ್ರೋಹ : ನಿಮ್ಮ ಸಂಬಂಧದಲ್ಲಿ ಆಳವಾದ ಸಮಸ್ಯೆಯಿದೆ ಎಂಬುದನ್ನು ಇದು ತೋರಿಸುತ್ತದೆ. ನೀವು ಸಂಗಾತಿಯಿಂದ ದ್ರೋಹವಾಗ್ತಿದೆ ಎಂಬ ಭಯದಲ್ಲಿದ್ದರೆ ನಿಮಗೆ ಇಂಥ ಕನಸು ಕಾಣುತ್ತದೆ. ನೀವು ಇದ್ರಿಂದ ಹೊರಬರಲು ಸಂಗಾತಿ ಜೊತೆ ಬಹಿರಂಗವಾಗಿ ಮಾತನಾಡಬೇಕು. ನಿಮ್ಮಲ್ಲಿರುವ ಹತಾಶೆ ಮತ್ತು ಸಂವಹನದ ಕೊರತೆ ಕೂಡ ನಿಮಗೆ ಇಂಥ ಕನಸು ಬೀಳಲು ಕಾರಣವಾಗುತ್ತದೆ.    

ಜೋಡಿಯಾಗಿರೋ ಕಾಗೆ ಕಂಡ್ರೆ ಅಪಶಕುನವೇ? ಇದರರ್ಥವೇನು?

ಸಂಬಂಧದಲ್ಲಿ ಒಂಟಿಯಾಗಿದ್ರೆ ಬೀಳುತ್ತೆ ಇಂಥ ಕನಸು : ಈ ಕನಸು ಶೂನ್ಯತೆಯ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಸಂಗಾತಿಯೊಂದಿಗಿನ ಭಾವನಾತ್ಮಕ ಸಂಪರ್ಕ ನೀವು ಬಯಸಿದಷ್ಟು ಬಲವಾಗಿರುವುದಿಲ್ಲ ಮತ್ತು ತೃಪ್ತಿಕರವಾಗಿಲ್ಲ ಎಂಬುದರ ಸಂಕೇತವಾಗಿದೆ.

ಸಂಬಂಧದಲ್ಲಿ ಬದಲಾವಣೆ : ಸಂಗಾತಿ ಸಾವನ್ನಪ್ಪಿದ ಕನಸು ಬಿದ್ರೆ ಸಂಗಾತಿ ಸಾವನ್ನಪ್ಪುತ್ತಾನೆ ಎಂದಲ್ಲ. ನಿಮ್ಮಿಬ್ಬರ ಸಂಬಂಧದಲ್ಲಿ ಬದಲಾವಣೆಯಾಗಿದೆ, ಸಂಬಂಧ ಅಂತ್ಯಗೊಳ್ಳಬಹುದು ಎಂಬ ಸೂಚನೆಯಾಗಿರುತ್ತದೆ. ಈ ಕನಸು ಆಂತರಿಕ ಬೆಳವಣಿಗೆಯನ್ನು ಸೂಚಿಸುತ್ತದೆ. ಸಂಬಂಧದಲ್ಲಿ ಹೊಸತನ ಬೇಕು ಎಂಬುದನ್ನು ಸೂಚಿಸುತ್ತದೆ.  

2023ಯಲ್ಲಿ ಗರ್ಭಿಣಿಯಾಗುವ ಯೋಗ ಈ ರಾಶಿಗಳಿಗಿದೆ!!

ಸಕಾರಾತ್ಮಕತೆ ಬೆಳೆಸಿಕೊಳ್ಳಿ : ಈ ಕನಸಿಗೆ ಯಾವುದೇ ನಕಾರಾತ್ಮಕ ಅರ್ಥವಿಲ್ಲ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ತದ್ವಿರುದ್ಧವಾಗಿ ನಿಮ್ಮ ಪ್ರಸ್ತುತ ಪ್ರೀತಿಯ ಜೀವನದ ಬಗ್ಗೆ ನೀವು ಆಶಾವಾದಿಗಳಾಗಿರಬೇಕು. ಕನಸುಗಳು ಸಾಮಾನ್ಯವಾಗಿ ಸಾಂಕೇತಿಕವಾಗಿರುತ್ತವೆ. ಯಾವುದೇ ಸಮಸ್ಯೆಯಿದ್ದರೂ  ನೀವು ಧನಾತ್ಮಕವಾಗಿ ಉಳಿಯಬೇಕು ಎಂಬ ಕಲ್ಪನೆಯನ್ನು ಪ್ರತಿನಿಧಿಸಬಹುದು. ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಆರೋಗ್ಯಕರ ಮತ್ತು ಸಂತೋಷದ ಸಂಬಂಧ ಮುಂದುವರಿಸಲು ನಿರ್ಧರಿಸಿ.  

ಈ ಕನಸು ಸಂಬಂಧದ ಬಗ್ಗೆ ನಿಮಗೆ ವಾರ್ನಿಂಗ್ ನೀಡುತ್ತದೆ. ಹಾಗಾಗಿ ಪ್ರೇಮಿ ಸಾವನ್ನಪ್ಪಿದಂತಹ ಕನಸು ಬಿದ್ರೆ ನೀವು ಆತ್ಮಾವಲೋಕನ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಈ ಕನಸುಗಳು ಬೀಳಲು ಕಾರಣವೇನು ಎಂಬುದನ್ನ ಪತ್ತೆ ಮಾಡಿ.

click me!