ಜಾತಕದಲ್ಲಿ ಅನೇಕ ರೀತಿಯ ಶಾಪಗ್ರಸ್ತ ಯೋಗಗಳಿವೆ. ಕಾಳ ಸರ್ಪ ಯೋಗ ಕೂಡ ಈ ದೋಷಗಳಲ್ಲಿ ಒಂದಾಗಿದೆ. ಜಾತಕದಲ್ಲಿ ಕಾಳ ಸರ್ಪದೋಷವಿದ್ದರೆ ಆ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಒಬ್ಬ ವ್ಯಕ್ತಿಯು ಹುಟ್ಟಿದ ತಕ್ಷಣ, ಅವನು ತನ್ನ ಜಾತಕದಲ್ಲಿ ಅನೇಕ ಯೋಗಗಳನ್ನು ಹೊತ್ತೇ ಬರುತ್ತಾನೆ. ಇವುಗಳಲ್ಲಿ ಕೆಲವು ತುಂಬಾ ಒಳ್ಳೆಯವಾಗಿದ್ದರೆ ಮತ್ತೆ ಕೆಲವು ತುಂಬಾ ಕೆಟ್ಟವು. ಕೆಲವು ಯೋಗಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರೂ, ವ್ಯಕ್ತಿಯು ತೊಂದರೆಗೊಳಗಾಗುತ್ತಾನೆ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಕೆಲವು ರೀತಿಯ ದೋಷವಿರುವುದರಿಂದ ಇದು ಸಂಭವಿಸುತ್ತದೆ. ಜಾತಕದಲ್ಲಿ ಅನೇಕ ರೀತಿಯ ಶಾಪಗ್ರಸ್ತ ಯೋಗಗಳಿವೆ, ಈ ದೋಷಗಳಲ್ಲಿ ಕಾಳ ಸರ್ಪ ಯೋಗವೂ ಒಂದು. ಜಾತಕದಲ್ಲಿ ಕಾಳ ಸರ್ಪ ದೋಷ(Kal Sarpa Dosha in Horoscope)ವಿದ್ದರೆ ಆ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕಾಳ ಸರ್ಪ ದೋಷದ ಲಕ್ಷಣಗಳು
ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಆ ವ್ಯಕ್ತಿ ಹಲವು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕಾಳ ಸರ್ಪ ದೋಷದಿಂದಾಗಿ, ವ್ಯಕ್ತಿಯು ಯಾವಾಗಲೂ ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಗೊಳಗಾಗುತ್ತಾನೆ. ಈ ನ್ಯೂನತೆಯಿಂದ ಕೆಲವರು ಮಕ್ಕಳ ಸಂಬಂಧಿ ಸಮಸ್ಯೆಗಳನ್ನು ಸಹ ಅನುಭವಿಸಬೇಕಾಗುತ್ತದೆ. ಅಂದರೆ ಅವನು ಮಕ್ಕಳಿಲ್ಲದವನಾಗಿರುತ್ತಾನೆ ಅಥವಾ ಮಗುವಿಗೆ ಅನಾರೋಗ್ಯವಿರುತ್ತದೆ. ಕಾಳ ಸರ್ಪ ದೋಷದಿಂದಾಗಿ, ವ್ಯಕ್ತಿಯು ಮತ್ತೆ ಮತ್ತೆ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾನೆ ಮತ್ತು ಅವನು ಅನೇಕ ಸಾಲಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಜಾತಕದಲ್ಲಿ ಕಾಳ ಸರ್ಪ ಯೋಗ ಇದ್ದರೆ ಜ್ಯೋತಿಷ್ಯದ ಸಲಹೆ ಪಡೆದು ಪರಿಹರಿಸಿಕೊಳ್ಳಬೇಕು.
Vastu Tips: ಮನೆಯ ಈ ವಸ್ತುಗಳೇ ನಿಮ್ಮ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತಿರಬಹುದು, ಕೂಡಲೇ ಹೊರ ಹಾಕಿ
ಕಾಳ ಸರ್ಪ ದೋಷ ನಿವಾರಣ ಪೂಜೆ
ಜ್ಯೋತಿಷ್ಯದಲ್ಲಿ, ಕಾಳ ಸರ್ಪ ದೋಷವನ್ನು ತೆಗೆದುಹಾಕಲು ಅನೇಕ ಸುಲಭ ಪರಿಹಾರಗಳನ್ನು ನೀಡಲಾಗಿದೆ. ಪತಿ-ಪತ್ನಿಯರ ನಡುವೆ ಸದಾ ಜಗಳ ಇದ್ದಲ್ಲಿ ನವಿಲು ಗರಿಗಳಿರುವ ಕಿರೀಟವನ್ನು ಧರಿಸಿರುವ ಶ್ರೀಕೃಷ್ಣನ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಪ್ರತಿದಿನ ಆತನನ್ನು ಪೂಜಿಸಿ ಹಾಗೆಯೇ 'ಓಂ ನಮೋ ಭಗವತೇ ವಾಸುದೇವಾಯ' ಅಥವಾ 'ಓಂ ನಮೋ ವಾಸುದೇವಾಯ ಕೃಷ್ಣಾಯ ನಮಃ ಶಿವಾಯ' ಎಂಬ ಮಂತ್ರವನ್ನು ಜಪಿಸಿ. ಹೀಗೆ ನಿತ್ಯ ಮಾಡುವುದರಿಂದ ಕಾಳ ಸರ್ಪ ದೋಷ ಶಾಂತಿ ದೊರೆಯುತ್ತದೆ.
ಉದ್ಯೋಗದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು
ಕಾಳ ಸರ್ಪ ಯೋಗದಿಂದ ಉದ್ಯೋಗದಲ್ಲಿ ಸಮಸ್ಯೆ ಉಂಟಾದರೆ ಅಥವಾ ಕೆಲಸ ಸಿಗದೇ ಇದ್ದರೆ ಅದಕ್ಕೆ ಈ ಪರಿಹಾರ ಪರಿಣಾಮಕಾರಿ. ಪಲಾಶದ ಹೂವನ್ನು ಗೋಮೂತ್ರದಲ್ಲಿ ಅದ್ದಿ ನುಣ್ಣಗೆ ಮಾಡಿ ನಂತರ ಒಣಗಿಸಿ ಅದರ ಪುಡಿಯನ್ನು ತಯಾರಿಸಿ ಶ್ರೀಗಂಧದ ಪುಡಿಯೊಂದಿಗೆ ಬೆರೆಸಿ ಶಿವಲಿಂಗದ ಮೇಲೆ ತ್ರಿಪುಂಡದ ಆಕಾರವನ್ನು ಮಾಡಿ. 21 ದಿನ ಹೀಗೆ ಮಾಡಿದರೆ ನಿಮ್ಮ ಉದ್ಯೋಗ ಸಮಸ್ಯೆ ಪರಿಹಾರವಾಗುತ್ತದೆ.
Peacock feather: ಶನಿ ದೋಷದಿಂದ ಮುಕ್ತರಾಗಲು ನವಿಲುಗರಿ ಬಳಸಿ!
ಕೆಲಸದಲ್ಲಿ ಅಡಚಣೆ ನಿವಾರಣೆಗೆ ಪರಿಹಾರ
ಜಾತಕದಲ್ಲಿ ಕಾಳ ಸರ್ಪ ದೋಷದ ಪ್ರಭಾವದಿಂದ ನಿಮ್ಮ ಕೆಲಸಗಳಿಗೆ ಪದೇ ಪದೇ ಅಡ್ಡಿಯಾಗುತ್ತಿದ್ದರೆ ಶಿವನ ಕುಟುಂಬವನ್ನು ಪ್ರತಿದಿನ ಪೂಜಿಸಬೇಕು. ಇದರೊಂದಿಗೆ ನಿಮ್ಮ ಎಲ್ಲಾ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಕೋಪಿಷ್ಠರಾಗಿದ್ದು, ಕೋಪ ತಡೆಯಲು ಸಾಧ್ಯವಾಗದಿದ್ದರೆ ಪ್ರತಿದಿನ ಶಿವಲಿಂಗಕ್ಕೆ ಸಿಹಿ ಹಾಲಿನಲ್ಲಿ ಭಾಂಗ್ ಅನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಕೋಪ ಶಮನವಾಗುತ್ತದೆ. ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಕಾಳ ಸರ್ಪ ದೋಷದ ಪರಿಣಾಮ ಕಡಿಮೆಯಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.