ಅಕ್ಟೋಬರ್ 25ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಸೂರ್ಯಗ್ರಹಣವು ಭಾಗಶಃ ಆಗಿರುತ್ತದೆ ಮತ್ತು ಭಾರತದಲ್ಲಿ ಗೋಚರಿಸುತ್ತದೆ. ಈ ದಿನ ನೀವೇನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಇರಲಿ ಗಮನ..
ಈ ವರ್ಷದ ಎರಡನೆಯ ಮತ್ತು ಕೊನೆಯ ಸೂರ್ಯಗ್ರಹಣವು ದೀಪಾವಳಿಯ ಸಂಭ್ರಮದ ಮಧ್ಯದಲ್ಲಿ ಅಂದರೆ ಅಕ್ಟೋಬರ್ 25ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಭಾಗಶಃ ಆಗಿರುತ್ತದೆ ಮತ್ತು ಭಾರತದಲ್ಲಿ ಗೋಚರಿಸುತ್ತದೆ.
ಭಾಗಶಃ ಸೂರ್ಯಗ್ರಹಣ(Solar Eclipse)ವು ಭಾರತದ ಹೊರತಾಗಿ ಯೂರೋಪ್, ಪಶ್ಚಿಮ ಸೈಬೀರಿಯಾ, ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ, ಪೂರ್ವ ಆಫ್ರಿಕಾ ಮತ್ತು ಅಟ್ಲಾಂಟಿಕ್‌ನಿಂದ ಗೋಚರಿಸುತ್ತದೆ. ಭಾಗಶಃ ಗ್ರಹಣದ ಗರಿಷ್ಠ ಹಂತವು ಪಶ್ಚಿಮ ಸೈಬೀರಿಯನ್ ಬಯಲಿನಲ್ಲಿ ರಷ್ಯಾದಲ್ಲಿ ದಾಖಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ, ಪವಿತ್ರ ಕಾರ್ತಿಕ ಮಾಸದಲ್ಲಿ ಅಕ್ಟೋಬರ್ 25ರಂದು (ಮಂಗಳವಾರ) ಎಲ್ಲಾ ರಾಜ್ಯಗಳಲ್ಲಿ ಸೂರ್ಯ ಗ್ರಹಣವನ್ನು ಕಾಣಬಹುದು.
ಗ್ರಹಣವು ಮಧ್ಯಾಹ್ನ 2.28ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 4.29ಕ್ಕೆ ಉತ್ತುಂಗದಲ್ಲಿರುತ್ತದೆ. ಇದು ಸಂಜೆ 6.32ವರೆಗೆ ಇರುತ್ತದೆ. ಆದ್ದರಿಂದ, ಗ್ರಹಣ ಮುಗಿಯುವವರೆಗೆ ದೇವಾಲಯಗಳು ಬಾಗಿಲು ಮುಚ್ಚಿರುತ್ತವೆ.
ಆದ್ದರಿಂದ, ಅಕ್ಟೋಬರ್ 25ರಂದು ಮುಂಜಾನೆ 2.28ರಿಂದ ದೇವಾಲಯಗಳಲ್ಲಿ ಯಾವುದೇ ಆಚರಣೆಗಳು ಇರುವುದಿಲ್ಲ. ಈ ಅವಧಿಯಲ್ಲಿ ಆಹಾರವನ್ನು ತಯಾರಿಸುವುದು ಮತ್ತು ಸೇವಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಅಕ್ಟೋಬರ್ 25ರಂದು ಧಾರ್ಮಿಕ ಸ್ನಾನದ ನಂತರ ಸಂಜೆ 6.32ರ ನಂತರ ಧಾರ್ಮಿಕ ಆಚರಣೆಗಳು ಪುನರಾರಂಭಗೊಳ್ಳುತ್ತವೆ.
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ, ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತೆ ತಡೆಯುತ್ತದೆ. ಇದೇ ಸೂರ್ಯಗ್ರಹಣವಾಗಿದೆ.
ಸೂರ್ಯಗ್ರಹಣವು ಖಗೋಳಶಾಸ್ತ್ರದ ಘಟನೆಯಾಗಿದ್ದರೂ ಸಹ, ಇದು ಭಾರತೀಯ ಸಂಸ್ಕೃತಿಯ ಪ್ರಕಾರ ಪೌರಾಣಿಕ ಮತ್ತು ಜ್ಯೋತಿಷ್ಯದ ಪ್ರಸ್ತುತತೆಯನ್ನು ಹೊಂದಿದೆ.
ಚುನಾವಣೆಯೊಳಗೆ ಬೊಮ್ಮಾಯಿ ಅಧಿಕಾರದಿಂದ ಕೆಳಗೆ?; ಕುತೂಹಲ ಕೆರಳಿಸಿದ ಭವಿಷ್ಯವಾಣಿ
ರಾಹು ಮತ್ತು ಗ್ರಹಣ(Rahu and Eclipse)
ಹಿಂದೂ ಪುರಾಣಗಳ ಪ್ರಕಾರ, ರಾಹು ಎಂಬ ರಾಕ್ಷಸನು ಸಮುದ್ರ ಮಂಥನ ಸಮಯದಲ್ಲಿ ಅಮೃತವನ್ನು ಪಡೆಯಲು, ದೇವನ ವೇಷದಲ್ಲಿ ಭಗವಾನ್ ಚಂದ್ರ ಮತ್ತು ಭಗವಾನ್ ಸೂರ್ಯರ ನಡುವೆ ಕುಳಿತನು. ವಿಷ್ಣುವು ಅವನಿಗೆ ಅಮೃತ ಕೊಡುತ್ತಿರುವಾಗ ಸೂರ್ಯ ಚಂದ್ರರು ಆತ ಅಸುರ ಎಂದು ಹೇಳಿಕೊಟ್ಟರಿ. ಅಮರತ್ವವನ್ನು ಪಡೆಯಲು ಅಮೃತವನ್ನು ಹೊಂದಲು ರಾಹು ಮೋಸಗೊಳಿಸಿದ್ದಾನೆಂದು ವಿಷ್ಣು(Lord Vishnu)ವು ಅರಿತುಕೊಂಡಾಗ, ಅವನು ತಕ್ಷಣವೇ ರಾಹುವಿನ ತಲೆಯನ್ನು ಕತ್ತರಿಸಿದನು. ಅಷ್ಟರಲ್ಲಾಗಲೇ ವಿಷ್ಣು ಕೊಟ್ಟಅಮೃತವು ರಾಕ್ಷಸನ ಗಂಟಲು ದಾಟಿತ್ತು. ಹೀಗಾಗಿ, ಅವನನ್ನು ಎರಡು ಭಾಗಗಳಾಗಿ ವಿಂಗಡಿಸಿದರೂ ಬದುಕುಳಿದನು. ಎರಡು ಭಾಗಗಳಾದ ತಲೆ ಭಾಗವನ್ನು 'ರಾಹು' ಎಂದೂ ಮತ್ತು ದೇಹದ ಭಾಗವನ್ನು 'ಕೇತು' ಎಂದೂ ಕರೆಯಲಾಯಿತು. ಈ ರಾಹು ಕೇತುಗಳಿಗೆ ಸೂರ್ಯ ಚಂದ್ರರು ಚಾಡಿ ಹೇಳಿದರೆಂಬ ದ್ವೇಷವಿರುವುದರಿಂದ ಗ್ರಹಣದ ಮೂಲಕ ಆಗಾಗ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ಇದೆ.
ಸೂರ್ಯ ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ಕೆಲಸಗಳು:(Do's)
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಅನುಸರಿಸುತ್ತಿರುವ ಹಲವಾರು ನಿಯಮಗಳಿವೆ. ಅವೇನೆಂದು ನೋಡೋಣ
1. ಸೂರ್ಯಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಿ.
2. ಗ್ರಹಣಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ಆಹಾರ ತೆಗೆದುಕೊಳ್ಳಿ.
3. ಸೂರ್ಯಗ್ರಹಣದ ಸಮಯದಲ್ಲಿ ಧ್ಯಾನ ಮಾಡಿ. ಸೂರ್ಯ ಗ್ರಹಣದ ಸಮಯದಲ್ಲಿ ಭಗವಾನ್ ಶಿವ, ಗುರು ಮತ್ತು ವಿಷ್ಣುವಿನ ಸ್ತೋತ್ರಗಳನ್ನು ಪಠಿಸಿ.
4. ಕೆಟ್ಟ ಪರಿಣಾಮವನ್ನು ತಪ್ಪಿಸಲು ಪವಿತ್ರ ತುಳಸಿ ಎಲೆಗಳನ್ನು ನೀರಿನ ಪಾತ್ರೆಗಳಲ್ಲಿ ಹಾಕಿ.
5. ಸೂರ್ಯ ಗ್ರಹಣದ ನಂತರ ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಮನೆಯ ಸುತ್ತಲೂ ಗಂಗಾಜಲವನ್ನು ಸಿಂಪಡಿಸಿ. ಇದು ಧನಾತ್ಮಕತೆಯನ್ನು ತರುತ್ತದೆ ಮತ್ತು ಗ್ರಹಣದ ದುಷ್ಪರಿಣಾಮಗಳಿಂದ ರಕ್ಷಿಸುತ್ತದೆ.
ಕೇತುಗ್ರಸ್ತ ಸೂರ್ಯಗ್ರಹಣ; ಈ ರಾಶಿಗಳಿಗೆ ಹೆಚ್ಚು ದೋಷ, ಪರಿಹಾರವೇನು?
ಸೂರ್ಯ ಗ್ರಹಣದ ಸಮಯದಲ್ಲಿ ಮಾಡಬಾರದ ಕೆಲಸಗಳು:(Don'ts)
1. ಗ್ರಹಣದ ಸಮಯದಲ್ಲಿ ಸೂರ್ಯನಿಗೆ ನೇರವಾಗಿ ದೇಹ ಒಡ್ಡಿಕೊಳ್ಳುವುದನ್ನು ತಪ್ಪಿಸಿ.
2. ಗ್ರಹಣದ ಸಮಯದಲ್ಲಿ ಅಡುಗೆ ಮಾಡುವುದನ್ನು ಮತ್ತು ತಿನ್ನುವುದನ್ನು ತಪ್ಪಿಸಿ.
3. ಬರಿಗಣ್ಣಿನಿಂದ ಸೂರ್ಯನನ್ನು ನೋಡಬೇಡಿ.
4. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಕಾಲಿಡಬಾರದು.
5. ಗ್ರಹಣದ ಮೊದಲು ನೀವು ಬೇಯಿಸಿದ ಆಹಾರವನ್ನು ಸೇವಿಸಬೇಡಿ. ಉಳಿದಂತೆ ನೀರು, ಅಕ್ಕಿ ಮತ್ತಿತರೆ ಆಹಾರ ಪದಾರ್ಥಗಳ ಮೇಲೆ ಗ್ರಹಣಕ್ಕೂ ಮುನ್ನವೇ ತುಳಸಿ ಹಾಕಿಡಿ.
6. ಗ್ರಹಣ ಸಮಯದಲ್ಲಿ ಮಲಗುವುದನ್ನು ಅಥವಾ ಹೊರಗೆ ಹೋಗುವುದನ್ನು ತಪ್ಪಿಸಿ.
7. ಸೂರ್ಯನ ಬೆಳಕು ನಿಮ್ಮ ಮನೆಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಮತ್ತು ನಿಮ್ಮ ಬಾಗಿಲುಗಳನ್ನು ಪರದೆಗಳಿಂದ ಮುಚ್ಚಿಕೊಳ್ಳಿ.