ಅಡುಗೆ ಮನೆಯಲ್ಲಿ ಇವು ಖಾಲಿಯಾದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ..!!

By Suvarna News  |  First Published Sep 30, 2021, 9:03 PM IST

ವಾಸ್ತುಶಾಸ್ತ್ರದಲ್ಲಿ ಅಡುಗೆಮನೆ ಮತ್ತು ದೇವರ ಕೋಣೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಲ್ಲೂ ಅಡುಗೆ ಮನೆಯಲ್ಲಿ (Kitchen) ಕೆಲವು ವಸ್ತುಗಳ ಸಂಪೂರ್ಣವಾಗಿ ಖಾಲಿಯಾದರೆ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬ ಬಗ್ಗೆ ತಿಳಿಯೋಣ...
 


ಹಿಂದೂ ಧರ್ಮದಲ್ಲಿ (Hindu Religion) ಆಚರಣೆಯಲ್ಲಿರುವ  ಸಂಪ್ರದಾಯಗಳು ಅತ್ಯಂತ ಮಹತ್ವದ್ದಾಗಿದೆ. ಎಲ್ಲ ಆಚರಣೆಗಳಿಗೆ ಅದರದ್ದೇ ಆದ ಪ್ರಮುಖ ಕಾರಣಗಳಿವೆ. ಅಂತಹ ಆಚರಣೆಗಳಿಂದ ಮನೆಯಲ್ಲಿ ಸುಖ - ಸಮೃದ್ಧಿ ನೆಲೆಸಿರುತ್ತದೆ. ಅದರಲ್ಲೂ ಮುಖ್ಯವಾಗಿ ಅಡುಗೆ ಮನೆ (Kitchen) ದೇವರ ಕೋಣೆಯನ್ನು ವಾಸ್ತುಪ್ರಕಾರ (Vaastu) ಇಟ್ಟುಕೊಂಡಲ್ಲಿ ಮನೆಯಲ್ಲಿ  ಸುಖ-ಸಂಪತ್ತು ನೆಲೆಸಿರುತ್ತದೆ. ಅಷ್ಟೇ ಅಲ್ಲದೆ ಲಕ್ಷ್ಮೀ ದೇವಿಯ ಕೃಪೆ ಸಿಗುತ್ತದೆ. 

ಅಡುಗೆ ಮನೆಯ ವಾಸ್ತುವಿನ ಬಗ್ಗೆ ಮತ್ತು ಅಡುಗೆ ಮನೆಯಲ್ಲಿ ಇರಲೇ ಬೇಕಾದ ವಸ್ತುಗಳ ಬಗ್ಗೆ ತಿಳಿಯುವುದು ಅವಶ್ಯಕ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೆ ಮನೆಯ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲದೆ ಸಂಪತ್ತು ಹೆಚ್ಚುತ್ತದೆ.ಲಕ್ಷ್ಮಿ ಕೃಪೆ ಇದ್ದರೆ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಲಕ್ಷ್ಮಿದೇವಿಯ ಅವಕೃಪೆಗೆ ಪಾತ್ರರಾದರೆ ಮನೆಯಲ್ಲಿ ಸಮಸ್ಯೆಗಳು ಸಂಕಷ್ಟಗಳು ಎದುರಾಗುತ್ತವೆ. ಹಾಗಾಗಿ ಎಲ್ಲರೂ ಲಕ್ಷ್ಮಿಯ ಅನುಗ್ರಹ ಪಡೆಯಲು ಇಚ್ಛಿಸುತ್ತಾರೆ. 

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು!

ವಾಸ್ತುಶಾಸ್ತ್ರದಲ್ಲಿ ಅಡುಗೆ ಮನೆಯ ವಾಸ್ತುವಿನ ಬಗ್ಗೆ ಮುಖ್ಯವಾಗಿ ಹೇಳಲಾಗುತ್ತದೆ. ಅಡುಗೆ ಮನೆಯಿಂದಲೇ ಆರೋಗ್ಯ (Health). ಆರೋಗ್ಯದಿಂದ ಭಾಗ್ಯ ಲಭ್ಯವಾಗುತ್ತದೆ. ಹಾಗಾಗಿ ವಾಸ್ತು ಶಾಸ್ತ್ರ ಹೇಳುವಂತೆ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಎಂದೂ ಖಾಲಿಯಾಗದಂತೆ (Empty) ನೋಡಿಕೊಳ್ಳಬೇಕು. ಹಾಗೊಮ್ಮೆ ಮುಖ್ಯವಾದ ಕೆಲವು ವಸ್ತುಗಳು ಖಾಲಿಯಾದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಆರ್ಥಿಕ ಸಂಕಷ್ಟ ಎದುರಾಗುತ್ತದೆ. 
ಅಡುಗೆ ಮನೆಯಲ್ಲಿ ಪ್ರಮುಖವಾಗಿ ಇರಲೇ ಬೇಕಾದ ಅಕ್ಕಿ, ಗೋಧಿ ಹಿಟ್ಟು, ಅರಿಶಿಣ ಮತ್ತು ಉಪ್ಪು ಈ ವಸ್ತುಗಳು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಈ ವಸ್ತುಗಳ ಬಗ್ಗೆ ಇನ್ನಷ್ಟು ತಿಳಿಯೋಣ....

ಗೋಧಿ ಹಿಟ್ಟು (Flour )
ಮನೆಯಲ್ಲಿ ಮುಖ್ಯವಾಗಿ ಬಳಸುವ ವಸ್ತು ಇದಾಗಿದೆ. ಆದರೆ ಕೆಲವೊಮ್ಮೆ ಹಿಟ್ಟು ಖಾಲಿಯಾಗಿರುತ್ತದೆ, ಅನಿವಾರ್ಯ ಕಾರಣಗಳಿಂದ ತಂದಿಟ್ಟುಕೊಂಡಿರಲು ಆಗಿರುವುದಿಲ್ಲ. ಹೀಗಾದಾಗ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದಾಗಿ ಧನ -ಧಾನ್ಯ ನಷ್ಟವಾಗುವುದಲ್ಲದೆ, ಗೌರವ ಮತ್ತು ಪ್ರತಿಷ್ಠೆಗೆ ದಕ್ಕೆ ಬರುತ್ತದೆ. ಹಾಗಾಗಿ ಮನೆಯಲ್ಲಿ ಗೋಧಿಹಿಟ್ಟು ಸಂಪೂರ್ಣ ಖಾಲಿಯಾಗದಂತೆ ನೋಡಿಕೊಳ್ಳುವುದು ಉತ್ತಮ.
 

Latest Videos



ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಅರಿಶಿಣ (Turmeric )
ಅಡುಗೆಗೆ ಮುಖ್ಯವಾಗಿ ಬಳಸುವ ವಸ್ತುಗಳಲ್ಲಿ ಅರಿಶಿಣವೂ ಒಂದು. ಅರಿಶಿಣವು ಅಡುಗೆಗೆ ಉಪಯೋಗವಾಗುವುದರ ಜೊತೆಗೆ ಔಷಧೀಯ ಗುಣವನ್ನು ಹೊಂದಿದೆ. ಅಷ್ಟೇ ಅಲ್ಲದೆ ಅರಿಶಿಣವನ್ನು ಶುಭ ಎಂದು ಸಹ ಹೇಳಲಾಗುತ್ತದೆ. ದೇವರ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅರಿಶಿಣದ ಬಳಕೆಯಿಂದ ಗುರುಗ್ರಹದ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹಾಗಾಗಿ ಮನೆಯಲ್ಲಿ ಅರಿಶಿಣ ಖಾಲಿಯಾದರೆ ಗುರು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸುಖ ಸಮೃದ್ಧಿ ನಾಶವಾಗುವುದಲ್ಲದೆ ಶುಭ ಕಾರ್ಯಗಳಿಗೆ ಅಡೆತಡೆಯುಂಟಾಗುತ್ತದೆ. ಅರಿಶಿಣ ಪೂರ್ತಿಯಾಗಿ ಖಾಲಿಯಾಗದಂತೆ ನೋಡಿಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ.
 



ಅಕ್ಕಿ(Rice)
ಅಕ್ಕಿ ಸಹ ಅಡುಗೆ ಮನೆಯಲ್ಲಿ ಇರಬೇಕಾದ ಮುಖ್ಯವಾದ ವಸ್ತುಗಳಲ್ಲೊಂದು. ಅಕ್ಕಿಯನ್ನು ಶುಕ್ರ ಗ್ರಹದ ವಸ್ತುವೆಂದು ಹೇಳಲಾಗುತ್ತದೆ. ಭೌತಿಕ ಸುಖದ ಕಾರಕ ಗ್ರಹವಾಗಿರುವ ಶುಕ್ರಗ್ರಹದ ಕೃಪೆ ಇರುವುದು ಅತ್ಯಂತ ಅವಶ್ಯಕ. ಮನೆಯಲ್ಲಿ ಅಕ್ಕಿ ಖಾಲಿಯಾಗಿದ್ದರೆ ಶುಕ್ರ ಗ್ರಹದ ದೋಷ ಉಂಟಾಗುತ್ತದೆ. ಹಾಗಾಗಿ ಪೂರ್ಣವಾಗಿ ಖಾಲಿಯಾಗದಂತೆ ನೋಡಿಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. 
 



ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಉಪ್ಪು (Salt)
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ನಾಣ್ಣುಡಿಯನ್ನು ಕೇಳಿರುತ್ತೇವೆ. ಹಾಗೆಯೇ ಉಪ್ಪಿಲ್ಲದೆ ಯಾವ ಪದಾರ್ಥಕ್ಕೂ ರುಚಿ ಬರುವುದಿಲ್ಲ. ಮನೆಯಲ್ಲಿ ಪೂರ್ಣವಾಗಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲದೆ ಬೇರೆಯವರ ಮನೆಯಿಂದ ಉಪ್ಪನ್ನು ಕೇಳಿ ತೆಗೆದುಕೊಂಡು ಬರಬಾರದು. ಇದು ಸಹ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಿದಂತೆ ಆಗುತ್ತದೆ. 
 


 

click me!