ಹಾಸ್ಯಪ್ರಿಯರಾದ ಕುಂಭ ರಾಶಿಯವರು ಬಾಳಸಂಗಾತಿಯಲ್ಲಿ ಏನಿಷ್ಟಪಡ್ತಾರೆ?

By Suvarna NewsFirst Published Sep 30, 2021, 7:15 PM IST
Highlights

ಜನ್ಮರಾಶಿಗಳಲ್ಲಿ ಹನ್ನೊಂದನೆಯದಾದ ಕುಂಭ ರಾಶಿಯವರು ಹಾಸ್ಯಪ್ರಿಯರು, ಹರ್ಷಚಿತ್ತರು. ಸದಾ ತಮ್ಮ ಬಾಳಸಂಗಾತಿಯಲ್ಲಿ ಕಾಣಲು ಇಷ್ಟಪಡುವ ಸಂಗತಿಗಳು ಯಾವುವು ಅಂತ ಇಲ್ಲಿ ನೋಡಿ.

ದ್ವಾದಶ ರಾಶಿಚಕ್ರಗಳಲ್ಲಿ ಹನ್ನೊಂದನೇ ರಾಶಿ ಕುಂಭ ರಾಶಿ (Aquarius). ಎಲ್ಲದರ ವಿಶಿಷ್ಟತೆಯ ಸಂಕೇತವೇ ಈ ಕುಂಭ ರಾಶಿ. ಮಾನವೀಯತೆಯನ್ನು (Humanity) ಇವರು ಪ್ರತಿಬಿಂಬಿಸುತ್ತಾರೆ. ಇವರು ಆಧುನಿಕತೆ (Modernity), ಸ್ವಾತಂತ್ರ್ಯವನ್ನು ಪ್ರೀತಿಸುವವರು. ಒಳ್ಳೆಯ ಹಾಸ್ಯಗಾರರೂ ಮತ್ತು ಸ್ವಭಾವತಃ ಹರ್ಷಚಿತ್ತದವರಾದ ಇವರು ನಿಮ್ಮನ್ನು ಮೋಡಿ ಮಾಡುವುದರಲ್ಲಿ ಸಂದೇಹವೇ ಇಲ್ಲ. ಈ ರಾಶಿಯ ಚಿಹ್ನೆಯು ಬುದ್ಧಿವಂತಿಕೆ, ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯವನ್ನು (Freedom) ಸೂಚಿಸುತ್ತದೆ. ಇವರು ಬಂಡಾಯಗಾರರು ಮಾತ್ರವಲ್ಲದೇ ಸೃಜನಶೀಲರು (creativity) ಕೂಡ. ಇವರು ಭಾವುಕರೂ ಕೆಲವೊಮ್ಮೆ ಭಾವನೆಗಳನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಗುಣದವರು. ಇವರ ಮನಸ್ಸು ಇತರರಿಗೆ ಅರ್ಥವಾಗದಷ್ಟು ಸಂಕೀರ್ಣವಾದುದು. ತಮ್ಮ ನಿಜವಾದ ಭಾವನೆಗಳನ್ನು ಹೊರಗೆ ತೋರ್ಪಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಗಂಭೀರವಾಗಿರುವ ಇವರು ಚಿಂತನಾಶೀಲ ಸ್ವಭಾವದವರು. ಬುದ್ಧಿವಂತರಾದ ಇವರು ಆರ್ಥಿಕವಾಗಿ ಪ್ರಾಯೋಗಿಕವಾಗಿರುತ್ತಾರೆ. ಇವರು ತುಂಬಾ ಸಾಮಾಜಿಕವಾಗಿದ್ದರೂ ತಮ್ಮ ಸಂಗಾತಿಯ ಆಯ್ಕೆಯ ಬಗ್ಗೆ ಬಹಳ ಆಲೋಚನೆ ಮಾಡುತ್ತಾರೆ. ಕಠಿಣ ಶ್ರಮಜೀವಿಗಳು, ಸಂಘಟನಾ ಸಾಮರ್ಥ್ಯವಿರುವ ಇವರು ಚಾಣಾಕ್ಷರಾಗಿದ್ದು, ಸದಾ ಎಚ್ಚರವಾಗಿರುತ್ತಾರೆ. ಸ್ವಂತ ಆಲೋಚನೆ, ವಿವೇಚನೆ ಬಳಸಿ, ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ.

ಬುದ್ಧಿವಂತರು ಆಗಿರಬೇಕು
ಕುಂಭ ರಾಶಿಯವರು ಬುದ್ಧಿವಂತರಾಗಿರುವುದರಿಂದ ಯಾವಾಗಲೂ ವಿದ್ಯಾವಂತ (Educated) ಹಾಗೂ ತಮ್ಮಷ್ಟೇ ಬುದ್ಧಿವಂತ ಸಂಗಾತಿಯನ್ನು (Intelligent Partner) ಬಯಸುತ್ತಾರೆ. ಸಮಾನ ಮನಸ್ಕರೊಡನೆ ಮಾತ್ರವೇ ಮುಕ್ತವಾಗಿ ಮಾತನಾಡುತ್ತಾರೆ. ಇವರು ಶಾಶ್ವತ ಹಾಗೂ ಬಲವಾದ ಸಂಬಂಧಗಳನ್ನು (Relationship) ಮಾತ್ರವೇ ಬಯಸುತ್ತಾರೆ. ಯಾವುದೇ ಭಯವನ್ನು ಹೊಂದಿರದ ಇವರು ತಮ್ಮ ಸಂಗಾತಿಯ (Life Partner) ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುವವರಲ್ಲ. ಸಂಗಾತಿಯ ಮನೋಸ್ಥಿತಿಯನ್ನು ಅರ್ಥಮಾಡಿಕೊಂಡ ಬಳಿಕ ನಿಧಾನವಾಗಿ ಮುಂದುವರಿಯುತ್ತಾರೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ ತಮ್ಮ ಸ್ನೇಹ ಮತ್ತು ಸಂಬಂಧವನ್ನು ಕೊನೆಗೊಳಿಸಬಹುದು. ಕುಂಭ ರಾಶಿಯವರು ತಮ್ಮ ಸಂಗಾತಿಯ ಮೇಲಿರುವ ಪ್ರೀತಿಯನ್ನು ತೋರ್ಪಡಿಸುವುದಿಲ್ಲ. ಇವರನ್ನು ಪ್ರೀತಿಸುವವರು ಕೂಡಾ ನಿಜವಾದ, ಪ್ರಾಮಾಣಿಕ (Honest), ಕರ್ತವ್ಯನಿಷ್ಠ ಹಾಗೂ ಉದಾತ್ತ ಮನೋಭಾವದ ಪ್ರೇಮಿಯಾಗಿರುತ್ತಾರೆ. ಕುಂಭ ರಾಶಿಯವರನ್ನು ಮದುವೆಯಾಗುವವರು ಅವರಲ್ಲಿ ಮಾನವೀಯತೆ, ದಯೆ, ಸಹಾನುಭೂತಿ, ಕಾಳಜಿ ಹಾಗೂ ಉದಾತ್ತತೆಯನ್ನು ಕಾಣುತ್ತಾರೆ.

​ಯಾವ ವೃತ್ತಿಯವರನ್ನು ಇಷ್ಟಪಡುತ್ತಾರೆ
ಕುಂಭ ರಾಶಿಯವರು ಅತಿಯಾಗಿ ಕೆಲಸ ಮಾಡುತ್ತಾರೆ ಹಾಗೂ ತಮ್ಮ ಸಂಗಾತಿಯೂ ಸಾಕಷ್ಟು ದುಡಿಯಬೇಕು ಎಂದು ಬಯಸುತ್ತಾರೆ. ಎರಡನೇ ಮನೆಯ ಅಧಿಪತಿಯಾದ ಗುರುವಿನಿಂದಾಗಿ ಈ ರಾಶಿಯವರು ವಿಜ್ಞಾನಿಗಳು, ಉತ್ತಮ ಕಾರ್ಯನಿರ್ವಾಹಕರು, ದೊಡ್ಡ ಕಂಪನಿಯಲ್ಲಿ ಉನ್ನತ ಸ್ಥಾನ ಪಡೆಯಬಹುದು ಹಾಗೂ ಅಂಥವರನ್ನೇ ಇಷ್ಟಪಡಬಹುದು. ಕೆಲವರು ಉಪನ್ಯಾಸಕರು, ಜ್ಯೋತಿಷಿ, ಕಾನೂನು, ಹಣಕಾಸು ಅಥವಾ ಶಿಕ್ಷಣ ಸಲಹೆಗಾರರೂ ಆಗಬಹುದು. ಆರನೇ ಮನೆಯ ಅಧಿಪತಿ ಚಂದ್ರನ ಸ್ಥಾನದಿಂದಾಗಿ ಔಷಧ ವಲಯ, ಸಾಮಾಜಿಕ ಸೇವೆ, ಹಡಗಿನಲ್ಲಿ ಸಾಗಣೆ ಮತ್ತು ರಫ್ತು ವ್ಯವಹಾರ, ನಾವಿಕರು, ದ್ರವಗಳ ರಫ್ತು ಮತ್ತು ಆಮದು ವ್ಯವಹಾರ ಮಾಡಬಹುದು. ಹತ್ತನೇ ಮನೆಯ ಅಧಿಪತಿ ಮಂಗಳನಿಂದಾಗಿ ಇವರು ನಿರ್ಮಾಣ ಕಾರ್ಯ, ರಾಸಾಯನಿಕ ಕಂಪನಿಯಲ್ಲಿ ಕೆಲಸ, ಮೆಕ್ಯಾನಿಕಲ್‌ ಇಂಜಿನಿಯರ್, ಸಿಮೆಂಟ್‌ ವ್ಯಾಪಾರಸ್ಥರು, ಶಸ್ತ್ರಚಿಕಿತ್ಸಕರು, ಸೀಸ, ತಾಮ್ರ ಅಥವಾ ಉಕ್ಕಿನ ವ್ಯಾಪಾರ ಅಥವಾ ಸಿಐಡಿ ಅಧಿಕಾರಿಯೂ ಆಗಬಹುದು. ಇವರು ಶಿಕ್ಷಣ ವಲಯ, ಉದ್ಯಮ, ಔದ್ಯಮಿಕ ಮಾಧ್ಯಮ ಸಂವಹನ, ಇತ್ಯಾದಿ ಕ್ಷೇತ್ರಗಳಲ್ಲಿ ಇರುವವರನ್ನು ಹೆಚ್ಚಾಗಿ ಸಂಗಾತಿಗಳಾಗಿ ಇಷ್ಟಪಡುತ್ತಾರೆ.

ಸೃಜನಶೀಲರು ಇಷ್ಟ
ಮೊದಲೇ ಹೇಳಿದಂತೆ ಕುಂಭ ರಾಶಿಯವರು ಸ್ವಭಾವತಃ ಮಾನವೀಯ ಗುಣವುಳ್ಳವರು. ತಮ್ಮ ಸಂಗಾತಿಯೂ ಅಂಥ ಮಾನವೀಯ ಅಂತಃಕರಣ ಹೊಂದಿರಬೇಕು ಎಂದು ಬಯಸುತ್ತಾರೆ. ತುಂಬಾ ಕರುಣಾಳು ಹಾಗೂ ಸಹಾನುಭೂತಿ ಹೊಂದಿದವರು ಎಂದರೆ ಇಷ್ಟ. ಎಲ್ಲಾ ಕೆಲಸದಲ್ಲೂ ಉತ್ಸಾಹದ ಮನೋಭಾವ ಹೊಂದಿರುವವರನ್ನು ಬಯಸುತ್ತಾರೆ. ತಮ್ಮ ಪ್ರತಿಯೊಂದು ಕೆಲಸದಲ್ಲೂ ಸೃಜನಶೀಲತೆಯನ್ನು ತೋರ್ಪಡಿಸಿಕೊಳ್ಳುತ್ತಾರೆ. ಇತರರನ್ನು ಎಂದಿಗೂ ಅನುಸರಿಸುವುದಿಲ್ಲ ಇದರಿಂದಾಗಿ ಸೃಜನಶೀಲತೆ ಹಾಗೂ ಅನನ್ಯತೆಯ ಕ್ಷೇತ್ರಗಳಲ್ಲಿ ಇದ್ದವರೆಂದರೆ ಇಷ್ಟ. ಬುದ್ದಿವಂತಿಕೆಯಲ್ಲಿ ಇತರರನ್ನು ಆಶ್ಚರ್ಯಗೊಳಿಸುತ್ತಾರೆ. ಇವರು ನೀವು ನಂಬಲಾಗದಷ್ಟು ವಿಶಾಲ ಮನಸ್ಸಿನವರು ಹಾಗೂ ಮುಕ್ತ ಸ್ವಭಾವದವರು.

ಸಾಹಸಪ್ರಿಯರಾದ ಧನುರಾಶಿಯವರಿಗೆ ಎಂಥ ಜೀವನಸಂಗಾತಿ ಸೂಕ್ತ ?

ಹೊಂದಾಣಿಕೆಯಾಗುವುದು ಕಷ್ಟ
ಇವರು ಸೃಜನಶೀಲರು ಆದರೆ ಇತರರು ಅವರ ಮನವೊಲಿಸುವುದು ಕಷ್ಟ. ಇತರರ ಮಾತನ್ನು ಅವರು ಕೇಳುವುದಿಲ್ಲ. ಬೇರೆಯವರನ್ನು ನಂಬುವುದಿಲ್ಲ ಕೂಡ. ಹೀಗಾಗಿ ಸಂಗಾತಿಗಳಾಗಿದ್ದರೂ, ತಮ್ಮನ್ನು ತಪ್ಪು ದಾರಿಗೆ ಎಳೆಯಲು ಬಯಸಿದರೆ ಅವರನ್ನು ಮೆಚ್ಚಿಸಲು ಹಾಗೆ ಮಾಡುವುದಿಲ್ಲ. ಇವರ ವಿಶಿಷ್ಟ ಗುಣ, ಸದಾ ಬದಲಾಗುವ ಸ್ವಭಾವದಿಂದಾಗಿ ಇವರು ತಮ್ಮಂತೆಯೇ ಇರುವವರನ್ನು ಹುಡುಕುತ್ತಾರೆ. ಆದ್ದರಿಂದ ಇತರರೊಂದಿಗೆ ಹೊಂದಾಣಿಕೆಯಾಗುವುದು ತುಂಬಾ ಕಷ್ಟ. ಹೊಂದಿಕೊಳ್ಳುವ ಸಂಗಾತಿಯಾಗಿದ್ದರೆ ಜೀವನ (Life) ಉತ್ತಮವಾಗಿರುತ್ತದೆ. ಇತರರನ್ನು ಗೌರವಿಸುವಾಗ ಕೆಲವೊಮ್ಮೆ ತಮ್ಮ ಮಿತಿಗಳನ್ನು ದಾಟಬಹುದು. ದುಃಖ, ಖಿನ್ನತೆ (Depression), ಆಕ್ರೋಶ ಹಾಗೂ ಒತ್ತಡವನ್ನು (Stress) ಒಂದೇ ಬಾರಿಗೆ ಹೊರಹಾಕಲು ಸಂಗಾತಿಗಳನ್ನು ಬಳಸಿಕೊಳ್ಳಬಹುದು. ಬಹಳಷ್ಟು ಹಠಮಾರಿ (Stubborn). ಏನನ್ನಾದರೂ ಬಯಸಿದರೆ ಅದು ಸಿಗಲು ಏನು ಬೇಕಾದರೂ ಮಾಡುತ್ತಾರೆ. ಸಂಗಾತಿಗಳ ವಿಷಯದಲ್ಲೂ ಅಷ್ಟೆ. ತಮ್ಮ ಅಭಿಪ್ರಾಯಗಳ ಬಗ್ಗೆ ತುಂಬಾ ಹಠಮಾರಿಯಾಗಿರುವುದರಿಂದ ಸಂಗಾತಿಗಳು ಹಠಮಾರಿಯಾಗಿದ್ದರೆ ಬದುಕು ಕಷ್ಟಕರ.

ಮಕರ ರಾಶಿಯ ಜನರು ಬಾಳಸಂಗಾತಿಗೆ ಮೇಕೆ ಹಾಗೆ ಗುಮ್ಮುತ್ತಾರಾ?

click me!