Yogi Aditynath ಈ ದೇಶದ ಲೀಡರ್‌ ಆಗ್ತಾರಾ? ಫಲಜ್ಯೋತಿಷ್ಯ ಹೀಗೆ ಹೇಳುತ್ತೆ..

By Suvarna News  |  First Published Jan 29, 2022, 2:50 PM IST

ಉತ್ತರಪ್ರದೇಶದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೋದಿಯವರ ನಂತರದ ರಾಷ್ಟ್ರನಾಯಕ ಎಂದೇ ಗುರುತಿಸಲಾಗ್ತಿರುವ ಯೋಗಿ ಆದಿತ್ಯನಾಥ್‌ ಅವರ ಜನ್ಮರಾಶಿ, ಜಾತಕ ಪ್ರಕಾರ ಅವರ ಭವಿಷ್ಯ ಹೇಗಿದೆ?
 


ಅಜಯ್ ಸಿಂಗ್ ಬಿಷ್ತ್ (Ajay singh Bishth) ಎಂಬ ಹೆಸರಿನಿಂದ ಜನಿಸಿದ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಉತ್ತರಪ್ರದೇಶದ ಗೋರಖ್‌ಪುರದಲ್ಲಿ (Gorakhur) ಮಹಾರಾಜ್ ಜಿ (Maharaj Ji) ಎಂದೂ ಕರೆಯುತ್ತಾರೆ. ಮೂಲತಃ ಉತ್ತರಾಖಂಡದ ಪೌರಿ ಘರ್ವಾಲ್‌ನಲ್ಲಿರುವ ಪಂಚೂರ್‌ನಿಂದ ಬಂದವರು. ಅವರು 5 ಜೂನ್ 1972ರಂದು ಸೋಮವಾರ ಮಧ್ಯಾಹ್ನ 12:00 ಗಂಟೆಗೆ ಜನಿಸಿದರು. ಮಹಾಯೋಗಿ ದಿ. ಮಹಂತ್ ಅವೈದ್ಯನಾಥ್ ಅವರ ಮಾರ್ಗದರ್ಶನ ಮತ್ತು ಪ್ರಭಾವ ಇವರ ಮೇಲಿದೆ. ಸನ್ಯಾಸ ಸ್ವೀಕಾರದ ಬಳಿಕ ಇವರನ್ನು ಯೋಗಿ ಆದಿತ್ಯನಾಥ್ ಎಂದು ಮರುನಾಮಕರಣ ಮಾಡಲಾಯಿತು. ಅವರ ಹೊಸ ಹೆಸರು ಅವರಿಗೆ ಖ್ಯಾತಿ ತಂದಿತು.

ರಾಜ್ಯದ ಅತ್ಯಂತ ಕಿರಿಯ ಸಿಎಂ. ಗೋರಖ್‌ಪುರ ಕ್ಷೇತ್ರದಿಂದ 26ನೇ ವಯಸ್ಸಿನಲ್ಲಿ ಸಂಸತ್ತಿನ ಕಿರಿಯ ಸಂಸದರಾಗಿದ್ದರು. 1998, 1999, 2004, 2009 ಮತ್ತು 2014ರಲ್ಲಿ ಸತತ ಐದು ಅವಧಿಗೆ ಆಯ್ಕೆಯಾಗಿದ್ದಾರೆ. ದೇಶದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯದ (Politics) ಕಡೆಗೆ ಅವರ ಒಲವು ಅವರ ವಿದ್ಯಾರ್ಥಿ ಜೀವನದಿಂದಲೇ ಗೋಚರಿಸಿತು. ಸೋಲಿಲ್ಲದ ಸರದಾರ ಎಂಬುದು ಅವರನ್ನು ಇನ್ನಷ್ಟು ಜನಪ್ರಿಯಗೊಳಿಸಿದೆ. 1998ರಿಂದ ನೇರವಾಗಿ ಅವರು ಯಾವುದೇ ಚುನಾವಣೆಯಲ್ಲಿ (Election) ಸೋತಿಲ್ಲ.

Love horoscpe: ಫೆಬ್ರವರಿಯ ಪ್ರಣಯ ಪ್ರಸಂಗ- ನಿಮ್ಮ ರಾಶಿಗೆ ಮುಂದಿನ ತಿಂಗಳು ಏನು‌ ಫಲ?

Tap to resize

Latest Videos

undefined

ನಿಸ್ಸಂದೇಹವಾಗಿ, ಇದರಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಪಾಲೂ ಇದೆ. ಆದರೆ ಈ ರಾಜಕೀಯ ಫೈರ್‌ಬ್ರಾಂಡ್‌ನ ಜಾತಕದಲ್ಲಿ ಖಂಡಿತವಾಗಿಯೂ ಆಕರ್ಷಕ ಅಂಶಗಳಿವೆ. ಗ್ರಹಗಳ ಸ್ಥಾನಗಳು ಮತ್ತು ಜಾತಕದ ಸಮಯಗಳು ಅವರನ್ನು ಅವರ ಎಲ್ಲಾ ಪ್ರತಿಸ್ಪರ್ಧಿಗಳಿಗಿಂತ ಮುಂದಕ್ಕೆ ತೆಗೆದುಕೊಂಡು ಹೋಗಿವೆ. ಜನ್ಮಸಮಯದ ಪ್ರಕಾರ ಅವರ ರಾಶಿ ಮಿಥುನ (Gemini) ಎಂದು ಹೇಳಬಹುದು. 

ಅವರ ಜನ್ಮಜಾತಕದ (Horoscope) ಮೊದಲ ವಿಶ್ಲೇಷಣೆಯಲ್ಲೇ ಅವರು ತಪಸ್ವಿ ಎಂದು ಸ್ಪಷ್ಟವಾಗಿ ಹೇಳುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ (Saturn) ಗ್ರಹವು ಚಂದ್ರ (Moon) ನೊಂದಿಗೆ ಸಂಯೋಜನೆಯನ್ನು ಮಾಡಿದಾಗ ಮಾತ್ರ ತಪಸ್ವಿ ಜನಿಸುತ್ತಾನೆ. ತಪಸ್ವಿಗಳಿಗೆ ಮತ್ತೊಂದು ಶ್ರೇಷ್ಠ ಸಂಯೋಜನೆ ಎಂದರೆ ಅವರ ನವಾಂಶದಲ್ಲಿ ಮಂಗಳನೊಂದಿಗೆ ಚಂದ್ರನ ಉಪಸ್ಥಿತಿಯಾಗಿದೆ. ಇದು ಹಿಮ್ಮುಖ ಸೂರ್ಯನಿಂದ ಮತ್ತಷ್ಟು ಪ್ರಖರವಾಗಿದೆ. ಚಂದ್ರನು ಮಂಗಳ ಗ್ರಹದೊಂದಿಗೆ ಶ್ರೇಷ್ಠ ಸಂಯೋಜನೆಯನ್ನು ಮಾಡುವ ನವಾಂಶದಲ್ಲಿ ಅವರು ಜನಿಸಿದ್ದಾರೆ. ಶನಿ, ಸೂರ್ಯ (Sun) ಮತ್ತು ಬುಧರು ಜಾತಕದ ೧2ನೇ ಮನೆಯಲ್ಲಿ ಕುಳಿತಿದ್ದಾರೆ. ಇವರು ತಮ್ಮದೇ ಆದ ಪ್ರಭಾವ ಬೀರುತ್ತಾರೆ. 

ಮಿಥುನ ರಾಶಿಯವರಿಗೆ ಶುಕ್ರವು ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ. ಮೊದಲ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ, ಇದು ಗುರು ಗ್ರಹದೊಂದಿಗೆ ಪರಸ್ಪರ ಸಂಬಂಧವನ್ನು ಮಾಡುತ್ತದೆ. ಅವರ ಜಾತಕದಲ್ಲಿ, 5ನೇ ಮನೆ ಮತ್ತು 10ನೇ ಮನೆಯ ನಡುವೆ ಹಂಚಿಕೆಯ ಅಂಶವಿದೆ. ಇದು ರಾಜಯೋಗವನ್ನು ಉತ್ಪಾದಿಸುತ್ತದೆ. ಯೋಗಿ ಆದಿತ್ಯನಾಥರ ಗುರುವು ಅವರ 7ನೇ ಮನೆಯಲ್ಲಿ ನೆಲೆಸಿದೆ ಮತ್ತು ಇದು ಅವರ ಜಾತಕದಲ್ಲಿ ದೃಢವಾದ ಹಂಸಯೋಗವನ್ನು ಸೃಷ್ಟಿಸುತ್ತದೆ. ರಾಜಕಾರಣಿಯು 10ನೇ ಮನೆಯೊಂದಿಗೆ ಬಲವಾಗಿ ಸಂಪರ್ಕ ಹೊಂದಿರುವ ಬಲವಾದ 3ನೇ ಮತ್ತು 6ನೇ ಮನೆಯನ್ನು ಹೊಂದಿರುವುದು ಅವಶ್ಯಕ. ಲಗ್ನದ ಸಂದರ್ಭದಲ್ಲಿ, ಮಂಗಳವು 6ನೇ ಗ್ರಹವಾಗಿ, ಲಾಭದಾಯಕ ಗ್ರಹವಾದ ಶುಕ್ರನೊಂದಿಗೆ ಹೇಗೆ ಇರಿಸಲ್ಪಟ್ಟಿದೆ ಎಂಬುದನ್ನು ನೀವು ನೋಡಬಹುದು. ಅದೇ ಸಮಯದಲ್ಲಿ, ಇದು 10ನೇ ಮನೆಯ ಗುರು ಜೊತೆ ಬಲವಾದ ಸಂಬಂಧವನ್ನು ಮಾಡುತ್ತದೆ.

Mythology: ಶ್ರೀಕೃಷ್ಣನಿಗೆ ಎಷ್ಟು ಶಾಪಗಳಿದ್ದವು ನಿಮಗೆ ಗೊತ್ತೆ?

ಮಿಥುನ ರಾಜ ಯೋಗವನ್ನು ಪುತ್ರಕಾರಕ ಶನಿ, ಮಾತೃಕಾರಕ ಸೂರ್ಯ ಮತ್ತು ಅಮಾತ್ಯಿಕ ಬುಧದಿಂದ ಸೂಚಿಸಲಾಗುತ್ತದೆ. ಈ ಸಂಯೋಜನೆಯಿಂದ ಅವರ ಸ್ಥಾನಮಾನ ಮತ್ತು ಧಾರ್ಮಿಕ ಪ್ರಭಾವವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಈ ಗ್ರಹಗಳು ಇವರಿಗೆ ವಿಶ್ವಾಸಾರ್ಹ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅವರ ಮಕರ ದಶಾದಲ್ಲಿ ಪ್ರಸ್ತುತ ಬುಧ-ಗುರು ಸ್ಥಾನವು ಸಾಕಷ್ಟು ಮಂಗಳಕರವಾಗಿ ಕಾಣುತ್ತದೆ.

ಹೀಗೆ ಅವರ ಜಾತಕ ನೋಡಿದರೆ, ರಾಜಕೀಯದಲ್ಲಿ ಅವರು ಇನ್ನೂ ಉನ್ನತೋನ್ನತ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಸೂಚಿಸುತ್ತದೆ. ಸನ್ಯಾಸವೇ ಇರಲಿ, ರಾಜಕೀಯ ಜೀವನವೇ ಇರಲಿ, ಅವರು ಹಿಡಿದದ್ದು ಅವರಿಗೆ ಭರ್ಜರಿ ಯಶಸ್ಸನ್ನು ತಂದುಕೊಡುವ ಯೋಗದ ಸ್ಥಾನದಲ್ಲಿ ಈಗ ಅವರು ಇದ್ದಾರೆ. ಜಾತಕದ ಯೋಗಗಳು ಅವರಿಗೆ ಶುಭ ಯೋಗ, ಯೋಗ ಕ್ಷೇಮ, ಕ್ಷೇಮ ಲಾಭಗಳನ್ನು ಖಾತರಿಪಡಿಸುತ್ತಿವೆ. ಅಂದರೆ ಈ ಚುನಾವಣೆಯಲ್ಲಿ ಅವರನ್ನು ಯಾವುದೇ ಶಕ್ತಿ ಸೋಲಿಸಲಾರದು. ಹಾಗೇ ಮುಂದೆ ದೇಶನಾಯಕನ ಸ್ಥಾನವೂ ಲಭ್ಯವಾಗಬಹುದು. ಆದರೆ ಅದಕ್ಕೆ ಇನ್ನೂ ಕೆಲವು ವರ್ಷ ಕಾಯಬೇಕು. ಮಧ್ಯೆ ಮಂಗಳ ಮತ್ತು ರಾಹುಗಳು ತಡೆ ಹಾಕದೇ ಇದ್ದರೆ, ಸೂರ್ಯನ ಹಿಮ್ಮುಖ ಚಲನೆಯು ವ್ಯತಿರಿಕ್ತವಾಗದೇ ಇದ್ದರೆ, ಅಮಾತ್ಯರು ಕಲ್ಯಾಣಕಾರಕರಾಗಿ ಇದ್ದರೆ ಇದು ಸಂಭವಿಸಬಹುದು.  



ಇದಲ್ಲದೆ, ಕೆಲವು ಗ್ರಹಗಳ ಸ್ಥಾನಗಳು ಅವರ ಭವಿಷ್ಯದ ಕೆಲವು ನಿರ್ಧಾರಗಳು ಹಿಮ್ಮುಖವಾಗಿಯೂ ಚಲಿಸಬಹುದು ಎಂದೂ ಸೂಚಿಸುತ್ತವೆ. ಅವರು ಭಾರೀ ಟೀಕೆಗಳನ್ನು ಎದುರಿಸಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಕಾಳಜಿಗಳು ಬರಬಹುದು. ಭವಿಷ್ಯದಲ್ಲಿ ಅವರ ಭದ್ರತೆಯು ಸಹ ಸಮಸ್ಯೆಗೆ ಒಳಗಾಗಬಹುದು. ಅವರು ಕೆಲವು ವಿವಾದಗಳ ಮೂಲಕವೂ ಹಾದುಹೋಗಬೇಕಾಗಬಹುದು. ಅನ್ಯದೇಶದ ಶಕ್ತಿಗಳು ಕೆಡುಕು ಉಂಟುಮಾಡಲು ಯತ್ನಿಸಬಹುದು. ಇದೆಲ್ಲವೂ ರಾಹು ಹಾಗೂ ಮಾಂದಿಯ ವಿಕಲ್ಪಗಳು. ಆದರೆ ಗುರುವಿನ ಪ್ರಭಾವವು ಅವರನ್ನು ಸದಾ ಸುರಕ್ಷಿತವಾಗಿಡುತ್ತದೆ. 

click me!