2022 Horoscope: ಹೊಸ ವರ್ಷ ಸಿಂಹ ರಾಶಿಗೆ ಅದೃಷ್ಟ, ಉಳಿದ ರಾಶಿಗಳಿಗೆ ಹೇಗಿರಲಿದೆ?

By Suvarna News  |  First Published Dec 18, 2021, 5:02 PM IST

ಹೊಸ ವರ್ಷ ನಿಮಗಾಗಿ ಏನೆಲ್ಲ ಸರ್ಪ್ರೈಸ್‌ಗಳನ್ನು ಹೊತ್ತು ಬರಲಿದೆ, ನಿಮಗೆ ಸವಾಲಾಗಿರಲಿದೆಯೋ, ಅಥವಾ ಸರಳವಾಗಿರಲಿದೆಯೋ- ಜ್ಯೋತಿಷಿಗಳೇನಂತಾರೆ?


2022 ಹೊಸ್ತಿಲಲ್ಲಿದೆ. ಹೊಸ ವರ್ಷ ಎಂದರೆ, ಎಲ್ಲರಿಗೂ ಬದುಕಲ್ಲಿ ಬಯಸಿದ್ದು ಸಿಕ್ಕಿಬಿಡುವ ನಿರೀಕ್ಷೆ, ಬದುಕು ಬದಲಾಗುವ ಆಸೆಗಳು... ಹೊಸ ವರ್ಷ ನಿಮ್ಮ ರಾಶಿಗೆ ಏನೆಲ್ಲ ಬದಲಾವಣೆಗಳನ್ನು ಹೊತ್ತು ತರಲಿದೆ, ಸವಾಲುಗಳು ಹೆಚ್ಚೋ, ಸಿಹಿ ಸುದ್ದಿಗಳು ಹೆಚ್ಚೋ ಇಲ್ಲಿ ನೋಡಿ..

ಮೇಷ(Aries)
ಹಣಕಾಸಿನ ವಿಚಾರದಲ್ಲಿ 2022 ನಿಮಗೆ ಒಳ್ಳೆಯ ವರ್ಷವಾಗಲಿದೆ. ವಿದೇಶದಿಂದ ಹಣ ದೊರಕುವ ಸಂಭವಗಳೂ ಇವೆ. 2022ರಲ್ಲಿ ಮಂಗಳನ ಸ್ಥಾನಪಲ್ಲಟದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಆ ಬಗ್ಗೆ ಎಚ್ಚರ ಅಗತ್ಯ. ಅದಲ್ಲದೆ ಖರ್ಚುಗಳೂ ಹೆಚ್ಚಬಹುದು. ಸಣ್ಣಪುಟ್ಟ ತಿರುಗಾಟಗಳು ಹೆಚ್ಚಲಿವೆ. ಜುಲೈ ನಂತರ ಲಾಭ(profit), ಆದಾಯ ಹೆಚ್ಚಲಿದೆ. ನಿಮ್ಮ ಬುದ್ದಿಶಕ್ತಿಯ ಕಾರಣದಿಂದಲೇ ಗೆಲ್ಲಲಿರುವಿರಿ. ಅದೃಷ್ಟವೂ ಜೊತೆಗೂಡಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಂಭವಗಳಿವೆ. ಒಟ್ಟಾರೆಯಾಗಿ ಸಂತೋಷ ಹಾಗೂ ಶಾಂತಿ ಇರಲಿದೆ. ಮನೆ ಕೊಳ್ಳಲು ಇಚ್ಛಿಸಿದರೆ, ಇದು ಒಳ್ಳೆಯ ವರ್ಷ.

Tap to resize

Latest Videos

ವೃಷಭ(Taurus)
2022ರ ಏಪ್ರಿಲ್‌ವರೆಗೆ ಗ್ರಹಗತಿಗಳು ನಿಮ್ಮ ಪರವಾಗಿಲ್ಲ. ಸಾಕಷ್ಟು ಅಡೆತಡೆಗಳನ್ನು ಎದುರಿಸಲಿದ್ದೀರಿ. ಈ ಸಂದರ್ಭದಲ್ಲಿ ನೀವು ಬಹಳಷ್ಟು ಪರಿಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ. ಆದಾಯದಲ್ಲಿ ಏರುಪೇರಿಲ್ಲ. ನಿಮ್ಮ ಸಹೋದ್ಯೋಗಿಗಳಿಂದ ವಂಚನೆ, ನಿಂದನೆಗಳು ಕೇಳಿ ಬರಬಹುದು. ಹೊಸ ವಾಹನ ಖರೀದಿ ಯೋಗವಿದೆ. ಆದರೆ, ಓಡಿಸುವಾಗ ಹೆಚ್ಚು ಜಾಗರೂಕತೆ ಅಗತ್ಯ. ಏಪ್ರಿಲ್ 3ರ ಬಳಿಕ ವಿಷಯಗಳು ನಿಮ್ಮ ಪರವಾಗಿ ಜರುಗಲಿವೆ. ಆರ್ಥಿಕವಾಗಿ ಲಾಭ ಹೆಚ್ಚಲಿದೆ. ಬದುಕಿಗೆ ಹೊಸ ಸಾಧನೆಗಳು(achievements) ಸೇರಿಕೊಳ್ಳಲಿವೆ. 

ಮಿಥುನ(Gemini)
ಈ ವರ್ಷ ಹಣದ ಹೊಳೆಯೇ ನಿಮ್ಮ ಹಾದಿಯಲ್ಲಿದೆ. ಶೇರು, ಬಾಂಡ್ ಹಾಗೂ ವಿದೇಶದಿಂದ ಹಣದ ಹರಿವು ಹೆಚ್ಚಲಿದೆ. ನಿಮ್ಮ ಮನೆಯ ಸದಸ್ಯರ ವಸತಿ ಸ್ಥಳ ಬದಲಾಗಬಹುದು. ಇಡೀ ವರ್ಷ ನಿಮ್ಮ ಆರೋಗ್ಯ ಸ್ಥಿರವಾಗಿರಲಿದೆ. ಜೀರ್ಣಕ್ರಿಯೆ ಹಾಗೂ ಮೂಳೆಗೆ ಸಂಬಂಧಿಸಿದ ಸಣ್ಣಪುಟ್ಟ ಕಿರಿಕಿರಿಗಳು ಕಾಡಬಹುದು. 2022 ಉದ್ಯಮಕ್ಕೆ ಒಳ್ಳೆಯ ವರ್ಷ. ಉದ್ಯಮಿ(businessmen)ಗಳಿಗೆ ಲಾಭ ಹೆಚ್ಚಲಿದೆ. ತಮ್ಮ ವಹಿವಾಟಿನಲ್ಲಿ ಬದಲಾವಣೆ ಮಾಡಲು ಅನುಕೂಲಕರ ವರ್ಷ ಇದಾಗಿದೆ. 

Vaastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿಟ್ಟುಕೊಂಡಿದ್ದರೆ ಕಾಡುವುದು ಸಮಸ್ಯೆ!

undefined

ಕಟಕ(Cancer)
ವೃತ್ತಿ, ಉದ್ಯೋಗದ ವಿಷಯಕ್ಕೆ ಬಂದರೆ ಕಟಕ ರಾಶಿಯವರಿಗೆ 2022 ಒಳ್ಳೆಯ ವರ್ಷ. ಅಭಿವೃದ್ಧಿ ಚೆನ್ನಾಗಿರಲಿದೆ, ಆರೋಗ್ಯವೂ ಸ್ಥಿರವಾಗಿರಲಿದೆ. ಆರ್ಥಿಕವಾಗಿ ನಿಮ್ಮ ಪರವಾಗಿಯೇ ಸಂಗತಿಗಳು ಘಟಿಸಲಿವೆ. ಸರ್ಕಾರಿ ಯೋಜನೆಗಳಲ್ಲಿ ಅದೃಷ್ಟಶಾಲಿಯಾಗಿ ಆಯ್ಕೆಯಾಗಬಹುದು. ಕುಟುಂಬ ಜೀವನ ಚೆನ್ನಾಗಿರುತ್ತದೆ. ಹೊಸ ಕೆಲಸ ಶುರು ಮಾಡಲು ಒಳ್ಳೆಯ ವರ್ಷ. ಕೆಲಸದಲ್ಲಿ ಭಡ್ತಿ ದೊರೆಯಬಹುದು. ಆದರೆ ಉದ್ಯಮದಲ್ಲಿ ವರ್ಷಾರಂಭದಲ್ಲಿ ಕೆಲ ಸಮಸ್ಯೆಗಳು ತಲೆದೋರಬಹುದು. ವರ್ಷದ ದ್ವಿತೀಯಾರ್ಧದಲ್ಲಿ ಎಲ್ಲ ಸರಿಯಾಗುತ್ತದೆ. 

ಸಿಂಹ(Leo)
2022ರಲ್ಲಿ ಸಿಂಹ ರಾಶಿಯವರು ಆಸ್ತಿಯ ಮೇಲೆ ಹೆಚ್ಚು ಹಣ ವ್ಯಯಿಸುತ್ತಾರೆ. ಮನೆಯ ನವೀಕರಣ ನಡೆಯುತ್ತದೆ. ಕುಟುಂಬದೊಂದಿಗೆ ವಿದೇಶ ಪ್ರಯಾಣ ಯೋಗವೂ ಇದೆ. ಮಕ್ಕಳಿದ್ದರೆ, ಅವರು ವಿದ್ಯೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ. ವೃತ್ತಿಯ ವಿಷಯಕ್ಕೆ ಬಂದರೆ, ನಿಮ್ಮ ಹಳೆಯ ಸಮಸ್ಯೆಗಳೆಲ್ಲ ಮುಗಿಯಲಿವೆ. ಹೊಸ ಹೊಸ ಸ್ಥಳಗಳಿಂದ ಹೊಸ ಆಫರ್‌ಗಳು ಬರಲಿವೆ. ಹೊಸ ಕೆಲಸಕ್ಕಾಗಿ ನೋಡುವವರಿದ್ದರೆ ಜನವರಿಯಿಂದ ಮೇಯೊಳಗೆ ಅರ್ಜಿ ಸಲ್ಲಿಸಿ. 

Vaastu for Couple Bedroom: ದಾಂಪತ್ಯ ಸುಖ ಸದಾ ಇರಬೇಕೆಂದ್ರೆ ನವವಿವಾಹಿತರ ಕೋಣೆ ಹೀಗಿರಲಿ

ಕನ್ಯಾ(Virgo)
ಜನವರಿ, ಮಾರ್ಚ್ ಹಾಗೂ ಜೂನ್ ತಿಂಗಳು ನಿಮಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ದಿನಗಳಿವೆ. ವರ್ಗಾವಣೆ ಅಥವಾ ಭಡ್ತಿ(promotion) ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. ಆರ್ಥಿಕವಾಗಿ ನಿಮ್ಮ ಪರವಾಗಿ ಗ್ರಹಗಳು ಕೆಲಸ ಮಾಡಲಿವೆ. ಆದಾಯಕ್ಕೆ ಹೊಸ ಮೂಲಗಳು ಸಿಗಬಹುದು. ಹಣ ಚೆನ್ನಾಗೇ ಬಂದರೂ, ವ್ಯಯವೂ ಹೆಚ್ಚಲಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಸಮಯದಲ್ಲಿ ಕುಟುಂಬದಲ್ಲಿ ಜಗಳ, ಮುನಿಸುಗಳು ಕಾಣಿಸಿಕೊಳ್ಳಬಹುದು. 

ತುಲಾ(Libra)
ಹಣದ ವಿಷಯದಲ್ಲಿ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಭೂಮಿ ಮಾರಿ ಒಳ್ಳೆ ಗಳಿಕೆ ಪಡೆಯುವ ಯೋಗವಿದೆ. ಆದರೆ, ನಿಮ್ಮ ಹಾಗೂ ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರಬೇಕು. ವರ್ಷಾರಂಭದಲ್ಲಿ ಪ್ರಮೋಶನ್ ನಿರೀಕ್ಷೆ ಮಾಡಬಹುದು. ಮಾರ್ಚ್ ನಂತರ ಔದ್ಯೋಗಿಕ ಬದುಕು ಚೆನ್ನಾಗಿರಲಿದೆ. ವಿದೇಶ ಪ್ರಯಾಣ ಯೋಗವಿದೆ. 

ವೃಶ್ಚಿಕ (Scorpio)
ಈ ಹಿಂದೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳು ಹೆಚ್ಚಿತ್ತು. ಈ ವರ್ಷ ಆ ಸಂಬಂಧಗಳನ್ನು ಹೇಗೆ ಮುಂದುವರಿಸುವಿರಿ ಎಂಬುದು ನಿಮಗೆ ಬಿಟ್ಟಿದ್ದು. ಉದಾಸೀನದಿಂದ ಕೆಲಸ ತೊರೆಯುವ ಸಾಧ್ಯತೆಗಳಿವೆ. ಸರ್ಕಾರಿ ಯೋಜನೆಗಳಿಂದ ಸ್ವಲ್ಪ ಆರ್ಥಿಕ ಲಾಭ ಪಡೆಯಬಹುದು. ಉದ್ಯೋಗ ಸ್ಥಳ ಬದಲಾವಣೆಯಾಗುವ ಸಾಧ್ಯತೆಯೂ ಇದೆ. 

ಧನು(Saggitarius)
ವರ್ಷಾರಂಭದಲ್ಲಿ ಒತ್ತಡ ಹಾಗೂ ಆಂತಕ ಹೆಚ್ಚಿರುತ್ತದೆ. ಕೋಪ ಹೆಚ್ಚುತ್ತದೆ. ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ. ಸಂಗಾತಿಯೊಂದಿಗೆ ಜಗಳಗಳು ಹೆಚ್ಚಲಿವೆ. ವರ್ಷವಿಡೀ ಆರೋಗ್ಯ ಚೆನ್ನಾಗಿರಲಿದೆ. ಉದ್ಯೋಗ ಸ್ಥಳದಲ್ಲಿ ಎಲ್ಲವೂ ನಿಮ್ಮ ಪರವಾಗೇ ಇರಲಿವೆ. ಹೆಚ್ಚು ಪ್ರಶಂಸೆ ಹಾಗೂ ಭಡ್ತಿ ಪಡೆಯುವಿರಿ. 

ಮಕರ(capricorn)
2022ರ ಆರಂಭ ಅಂಥ ಚೆನ್ನಾಗಿರುವುದಿಲ್ಲ. ಖರ್ಚು ಹೆಚ್ಚಿರುತ್ತದೆ. ವರ್ಷದುದ್ದಕ್ಕೂ ಜಾಣತನದಿಂದ ಹಣ ಖರ್ಚು ಮಾಡಬೇಕು. ಆದರೆ, ದಿನಗಳು ಕಳೆದಂತೆ ಆದಾಯಕ್ಕೆ ಹೊಸ ಮೂಲಗಲು ಸಿಗಲಿವೆ. ಯಶಸ್ಸು ಬೇಕೆಂದರೆ ಹೆಚ್ಚೇ ಪರಿಶ್ರಮ ಹಾಕಬೇಕು. ಮಾನಸಿಕ ಒತ್ತಡಗಳು ತಗ್ಗಲಿವೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶಗಳಿವೆ. ವಿದೇಶ ಪ್ರಯಾಣ ಯೋಗವಿದೆ. ಏಪ್ರಿಲ್ ನಂತರ ಎಲ್ಲ ಒಳಿತಾಗಲಿದೆ. ಮನೆ ಅಥವಾ ವಾಹನ ಕೊಳ್ಳಲು ಪ್ರಶಕ್ತ ವರ್ಷ. 

ಕುಂಭ(Aquarius)
ಈ ವರ್ಷ ಉದ್ಯೋಗದ ಬದುಕಿನಲ್ಲಿ ಬಹಳಷ್ಟು ಏರಿಳಿತ ಕಾಣುವಿರಿ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ದೊರಕಲಿದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿ ಕೊಡಿ. ವಿವಾಹಿತ ಜೋಡಿಯ ನಡುವೆ ಸಂಬಂಧ ಚೆನ್ನಾಗಿರಲಿದೆ. ಭಡ್ತಿ ದೊರೆಯಲಿದೆ. ಕಮಿಶನ್ ಕೆಲಸಗಳಲ್ಲಿರುವವರಿಗೆ ಲಾಭ ಹೆಚ್ಚು ಸಿಗುವುದು. 

ಮೀನ(Pisces)
ವರ್ಷಾರಂಭದಲ್ಲಿ ಕಷ್ಟಗಳು ಹೆಚ್ಚು. ಏಪ್ರಿಲ್ ನಂತರ ಎಲ್ಲ ನಿಮ್ಮ ಪರವಾಗಿ ಜರುಗಲಿವೆ. ಔದ್ಯೋಗಿಕವಾಗಿ ಅಭಿವೃದ್ಧಿ ಇರಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಲಿದೆ. ವರ್ಗಾವಣೆಯ ಅವಕಾಶವಿದೆ. ಕಾರು, ಮನೆಯಂಥ ಸೌಲಭ್ಯಗಳು ಕಚೇರಿಯಿಂದಲೇ ದೊರೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಗತಿ ಚೆನ್ನಾಗಿರಲಿದೆ. 

click me!