Vastu Tips : ದೇವರ ಪೂಜೆಗೆ ಅಗರಬತ್ತಿ ಹಚ್ಚುತ್ತಿದ್ರೆ ಇಂದೇ ನಿಲ್ಲಿಸಿ

Published : Jun 04, 2022, 11:34 AM ISTUpdated : Jun 04, 2022, 11:36 AM IST
Vastu Tips : ದೇವರ ಪೂಜೆಗೆ ಅಗರಬತ್ತಿ ಹಚ್ಚುತ್ತಿದ್ರೆ ಇಂದೇ ನಿಲ್ಲಿಸಿ

ಸಾರಾಂಶ

ಪೂಜೆಯನ್ನು ನಿಯಮಗಳ ಪ್ರಕಾರ ಮಾಡ್ಬೇಕು. ಆಗ್ಲೇ ಪೂಜೆ ಫಲ ಸಿಗಲು ಸಾಧ್ಯ. ಆದ್ರೆ ಪೂಜೆ ವಿಷ್ಯಕ್ಕೆ ಸಂಬಂಧಿಸಿದಂತೆ ಎಲ್ಲರೂ ದೊಡ್ಡ ತಪ್ಪೊಂದನ್ನು ಮಾಡ್ತಿದ್ದಾರೆ. ಅದು ಅಗರಬತ್ತಿಗೆ ಸಂಬಂಧಿಸಿದ್ದು.    

ದೇವರ (God) ಪೂಜೆ (Worship) ಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಆದ್ಯತೆಯಿದೆ. ಪ್ರತಿಯೊಬ್ಬರ ಮನೆ (Home) ಯಲ್ಲೂ ದೇವರ ಆರಾಧನೆ ನಡೆಯುತ್ತದೆ. ಅಕ್ಷತೆ, ಶ್ರೀಗಂಧ, ಕುಂಕುಮ, ಹಣ್ಣು-ಹೂಗಳು, ಅಗರಬತ್ತಿಗಳು, ಧೂಪದ್ರವ್ಯ ಸೇರಿದಂತೆ ಅನೇಕ ವಸ್ತುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಈ ಎಲ್ಲಾ ವಸ್ತುಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಬೇರೆ ಬೇರೆ ದೇವರ ಪೂಜೆಗೆ ಹಿಂದೂ ಧರ್ಮದಲ್ಲಿ ಬೇರೆ ಬೇರೆ ಪದಾರ್ಥ ಹಾಗೂ ವಸ್ತುಗಳನ್ನು ಬಳಕೆ ಮಾಡುವುದಿದೆ. ಆದ್ರೆ ಕೆಲವು ವಸ್ತುಗಳನ್ನು ಎಲ್ಲ ಪೂಜೆ ಹಾಗೂ ಮಂಗಳಕಾರ್ಯದಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿ ಅಗರಬತ್ತಿ (Agarbathi ) ಕೂಡ ಒಂದು. ಯಾವ ದೇವರ ಪೂಜೆ ಇರಲಿ, ಸಂಜೆ (Evening ) ದೇವರಿಗೆ ದೀಪ ಬೆಳಗುವುದಿರಲಿ ಇಲ್ಲ ಯಾವುದೇ ಶುಭ (Good) ಕಾರ್ಯವಿರಲಿ, ಅಗರಬತ್ತಿಯನ್ನು ಹಚ್ಚಲಾಗುತ್ತದೆ. ಅನೇಕರು ದಿನದ ಎರಡು ಸಮಯ ದೇವರಿಗೆ ಅಗರಬತ್ತಿ ಬೆಳಗುತ್ತಾರೆ. ಆದ್ರೆ ದೇವರ ಪೂಜೆಗೆ ಪ್ರತಿ ದಿನ ನೀವೂ  ಅಗರಬತ್ತಿಗಳನ್ನು ಹಚ್ಚುತ್ತಿದ್ದರೆ ಇಂದೇ ಈ ಅಭ್ಯಾಸವನ್ನು ನಿಲ್ಲಿಸಿ. ಅಗರಬತ್ತಿಯನ್ನು ಸುಡುವುದರಿಂದ ಪಿತೃ ದೋಷ (pitru dosha ) ಉಂಟಾಗುತ್ತದೆ. ಇದ್ರಿಂದ ಅನೇಕ ಹಾನಿ ಸಂಭವಿಸುತ್ತದೆ. ಅಗರಬತ್ತಿಯನ್ನು ಏಕೆ ಬೆಳಗಬಾರದು ಎಂಬುದರ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ಇದನ್ನೂ ಓದಿ: ಇದು ಮದುವೆ ವಿಷಯ, ಕುಜ ದೋಷದ ನಿರ್ಲಕ್ಷ್ಯ ಬೇಡ

ಅಗರಬತ್ತಿ ಬೆಳಗಿಸುವುದು ಅಶುಭ : ವಾಸ್ತು ಶಾಸ್ತ್ರದಲ್ಲಿ (Architecture) ಬಿದಿರ (Bamboo) ನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆ ಮತ್ತು ಕಚೇರಿ (Office) ಯಲ್ಲಿ ಈ ಬಿದಿರನ್ನು ಬೆಳೆಸಲಾಗುತ್ತದೆ. ಬಿದಿರು ಧನಾತ್ಮಕತೆ (Positivity) ಮತ್ತು ಪ್ರಗತಿಯ ಪ್ರತೀಕವಾಗಿದೆ.  ಅನೇಕ ರೀತಿಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಬಿದಿರಿನ ಗಿಡ ನೆರವಾಗುತ್ತದೆ. ಶಾಸ್ತ್ರದ ಪ್ರಕಾರ ಇಂಥ ಶುಭ ಗಿಡವನ್ನು ಸುಡುವುದು ಒಳ್ಳೆಯದಲ್ಲ. ಇದು ಮಂಗಳಕರವಲ್ಲ. ಭಾರತೀಯ (Indian ) ಸಂಪ್ರದಾಯ (Tradition) ದಲ್ಲಿಯೂ ಬಿದಿರು ಸುಡುವುದನ್ನು ನಿಷೇಧಿಸಲಾಗಿದೆ. ಅಗರಬತ್ತಿಯನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಅಗರಬತ್ತಿ ಸುಟ್ಟರೆ ಬಿದಿರನ್ನು ಸುಟ್ಟಂತೆ ಆಗುತ್ತದೆ. 

ವಂಶ ಹಾನಿ : ಬಿದಿರನ್ನು ವಂಶಾವಳಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸ್ವಂತ ಕೈಗಳಿಂದ ಬಿದಿರನ್ನು ಸುಡುವುದು ನಿಮ್ಮ ಕುಟುಂಬದ ವಂಶಕ್ಕೆ ಹಾನಿ ಮಾಡಿದಂತೆ.

ಇದನ್ನೂ ಓದಿ: ಈ ರಾಶಿಯವರು ಯಾವತ್ತೂ ತಕ್ಷಣ ರಿಪ್ಲೈ ಮಾಡಲ್ಲ, ತಮ್ಮ ಲವರ್‌ನೇ ಇಗ್ನೋರ್ ಮಾಡ್ತಾರೆ!

ಪಿತೃ ದೋಷಕ್ಕೆ ಕಾರಣ : ಹಿಂದೂ ಧರ್ಮದಲ್ಲಿ ಅಂತ್ಯಕ್ರಿಯೆಯ ವಿಧಿಗಳಿಗೆ ಭೂಮಿಯನ್ನು ಸಿದ್ಧಪಡಿಸುವಾಗ ಬಿದಿರನ್ನು ಬಳಸಲಾಗುತ್ತದೆ. ಹಾಗಾಗಿ ಬಿದಿರನ್ನು ಎಂದಿಗೂ ಸುಡಬಾರದು. ಬಿದಿರನ್ನು ಸುಡುವುದರಿಂದ ಪಿತೃ ದೋಷ ಉಂಟಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಪರಿಸರಕ್ಕೆ ಹಾನಿ: ಅಗರಬತ್ತಿಯನ್ನು ಹಚ್ಚುವುದ್ರಿಂದ ಪರಿಸರ ಕಲುಷಿತವಾಗುತ್ತದೆ. ಯಾಕೆಂದ್ರೆ ಬಿದಿರಿನ ಮೇಲೆ ಅನೇಕ ರೀತಿಯ ರಾಸಾಯನಿಕಗಳನ್ನು ಲೇಯರ್ ಮಾಡುವ ಮೂಲಕ ಅಗರಬತ್ತಿಯನ್ನು ತಯಾರಿಸಲಾಗುತ್ತದೆ. ಅಗರಬತ್ತಿ ಹಚ್ಚಿದ್ರೆ ಈ ರಾಸಾಯನಿಕಗಳು ಸುಡುತ್ತವೆ. ಇದ್ರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಜೊತೆಗೆ ಉಸಿರಾಟದ ಸಮಸ್ಯೆ, ಅಸ್ತಮ ಕಾಡುವ ಅಪಾಯವಿರುತ್ತದೆ. 

ಬ್ರಿಟಿಷರಿಂದ ಬಂದ ಪದ್ಧತಿ : ಹಿಂದೂ ಧರ್ಮದಲ್ಲಿ ಬಿದಿರನ್ನು ಸುಡುವುದನ್ನು ನಿಷೇಧಿಸಲಾಗಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಅಗರಬತ್ತಿ ಹಚ್ಚುವ ಪದ್ಧತಿ ಜಾರಿಗೆ ಬಂದಿದೆ ಎನ್ನಲಾಗಿದೆ. ನಾವು ಅವರ ನಿಯಮ ಪಾಲಿಸುತ್ತಿದ್ದೇವೆಯೇ ಹೊರತು, ಧರ್ಮ ಗ್ರಂಥಕ್ಕೆ ಸರಿಯಾಗಿ ನಡೆಯುತ್ತಿಲ್ಲ.

ಇದನ್ನೂ ಓದಿ: Numerology Today: ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಈ ದಿನ ಹೀಗಿರಲಿದೆ..

ಪೆಂಗ್ ಶೂಯಿಯಲ್ಲೂ ಇದಕ್ಕೆ ವಿರೋಧ : ಫೆಂಗ್ ಶೂಯಿಯಲ್ಲೂ ಅಗರಬತ್ತಿ ಹಚ್ಚುವುದನ್ನು ಮಂಗಳಕರವೆಂದು ಹೇಳಿಲ್ಲ. ಫೆಂಗ್ ಶೂಯಿ ಪ್ರಕಾರ, ಬಿದಿರು ಬಳಸಿರುವ ಅಗರಬತ್ತಿ ಅಥವಾ ಬಿದಿರು ಸುಡುವುದ್ರಿಂದ ವ್ಯಕ್ತಿಯ ಅದೃಷ್ಟ ನಾಶವಾಗುತ್ತದೆ. ಏಕೆಂದರೆ ಬಿದಿರಿನ ಗಿಡವು ಅದೃಷ್ಟವನ್ನು ತರುತ್ತದೆ. ನಾವು ದೇವರ ಪೂಜೆ ಹೆಸರಿನಲ್ಲಿ ಅದೃಷ್ಟ ತರುವ ಗಿಡವನ್ನು ಸುಡ್ತಿದ್ದೇವೆ.
 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ