ಈ ರಾಶಿಯವರು ಯಾವತ್ತೂ ತಕ್ಷಣ ರಿಪ್ಲೈ ಮಾಡಲ್ಲ, ತಮ್ಮ ಲವರ್‌ನೇ ಇಗ್ನೋರ್ ಮಾಡ್ತಾರೆ!

By Suvarna News  |  First Published Jun 4, 2022, 11:09 AM IST

ಕೆಲವರು ಹಾಗೆಯೇ, ಅವರಿಗೆ ಮೆಸೇಜ್ ಮಾಡಿ ಅವರದನ್ನು ನೋಡಿದ ಚಿಹ್ನೆಯೂ ಬಂದಿರುತ್ತದೆ. ಆದರೆ ತಕ್ಷಣ ರಿಪ್ಲೈ ಮಾಡುವುದಿಲ್ಲ. ಸಂದೇಶ ಕಳುಹಿಸಿದವರಿಗೆ ಕಿರಿಕಿರಿಯಾಗಲು ಅಷ್ಟೇ ಸಾಕು. ಈ ರೀತಿಯ ಸ್ವಭಾವ ಈ ನಾಲ್ಕು ರಾಶಿಯವರಲ್ಲಿ ಹೆಚ್ಚು.


ಪ್ರೇಮಿಗಳ(lovers) ಒಂದು ಸಂದೇಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವವರು ಹಲವರು. ಅರ್ಧ ರಾತ್ರಿಯಲ್ಲೂ ಪದೇ ಪದೆ ಫೋನ್ ತೆಗೆದು ನೋಡುತ್ತಿರುತ್ತಾರೆ. ಮೆಸೇಜ್(message) ಬರುತ್ತಿದ್ದಂತೆಯೇ ಹುರುಪಿನಲ್ಲಿ ರಿಪ್ಲೈ ಮಾಡುತ್ತಾರೆ. ಆದರೆ ಇಂಥವರ ಮಧ್ಯೆ ಕೆಲವು ಗುಂಪಿಗೆ ಸೇರದ ಪದದಂತಿರುತ್ತಾರೆ. ಅವರು ಸ್ನೇಹಿತರು, ಸಹೋದ್ಯೋಗಿಗಳು ಮಾತ್ರವಲ್ಲ, ತಮ್ಮ ಪ್ರೇಮಿಯೇ ಮೆಸೇಜ್ ಮಾಡಿದರೂ ಕೂಡಲೇ ರಿಪ್ಲೈ ಮಾಡುವವರಲ್ಲ. ಈ ಕಡೆಯಿಂದ ಸಂದೇಶ ಕಳುಹಿಸಿದವರಿಗೆ ತಮ್ಮನ್ನು ಇಗ್ನೋರ್ ಮಾಡುತ್ತಿದ್ದಾರೆ ಎಂದು ಕೋಪ ಹುಟ್ಟುತ್ತದೆ. ಅವರು ಅವರದೇ ಕಾರಣದಿಂದ, ವ್ಯಕ್ತಿತ್ವದ ಸ್ವಾಭಾವಿಕ ಗುಣಗಳಿಂದ ಹಾಗೆ ಪ್ರತಿಕ್ರಿಯಿಸುತ್ತಿರಬಹುದು. ಆದರೆ ಅದು ಸಂದೇಶ ಕಳುಹಿಸಿದವರಿಗೆ ಅರ್ಥವಾಗಬೇಕಲ್ಲ.. ತಮಗೆ ಇವರು ಪ್ರಾಮುಖ್ಯತೆ ಕೊಡುತ್ತಿಲ್ಲ ಎನಿಸಬಹುದು. ಹೀಗೆ ಮೆಸೇಜ್‌ಗೆ ತಕ್ಷಣ ರಿಪ್ಲೈ ಮಾಡದವರು ಯಾವ ರಾಶಿ(zodiac sign)ಗೆ ಸೇರಿರುತ್ತಾರೆ ನೋಡೋಣ. 

ಮೀನ ರಾಶಿ(Pisces)
ಮೀನ ರಾಶಿಯವರು ತಮ್ಮ ಮನಸ್ಸಿಗೆ ಇನ್ನೊಬ್ಬರಿಂದ ಬೇಜಾರಾದಾಗ ಅವರ ಸಂದೇಶವನ್ನು ನೋಡಿಯೂ ರಿಪ್ಲೈ ಮಾಡುವುದಿಲ್ಲ. ತಾವು ಇಗ್ನೋರ್ ಮಾಡುವುದು ಅವರಿಗೆ ತಿಳಿದು ಬೇಜಾರಾಗಲಿ ಎಂಬ ಹಟದಲ್ಲಿಯೇ ಹಾಗೆ ಮಾಡುತ್ತಾರೆ. ತಮಗಾದ ನೋವು ಅವರಿಗೂ ಆಗಲಿ ಎಂಬ ಹಟ ಇವರದು. ಆದರೆ, ಎಷ್ಟೋ ಬಾರಿ ಇವರಿಗೇಕೆ ಬೇಜಾರಾಗಿದೆ,  ಏಕೆ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಪ್ರೇಮಿಗೆ ತಿಳಿಯುವುದೇ ಇಲ್ಲ. ಬದಲಿಗೆ ವೃಥಾ ನೆಗ್ಲೆಕ್ಟ್ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಇದರಿಂದ ಸಂಬಂಧ ಮತ್ತಷ್ಟು ಹದಗೆಡುತ್ತದೆ. ಇದು ಆರೋಗ್ಯಕರ ಮಾರ್ಗವಲ್ಲ. ಸಂಬಂಧದಲ್ಲಿನ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಬಗೆಹರಿಸಬೇಕು. ತಮಗಾದ ನೋವು, ಬೇಜಾರನ್ನು ಬಾಯಿ ಬಿಟ್ಟು ಹೇಳಬೇಕು. ಕನಿಷ್ಠ ಪಕ್ಷ ಸಂದೇಶದಲ್ಲಿಯಾದರೂ ರವಾನಿಸಬೇಕು. 

Tap to resize

Latest Videos

ಕರ್ಕಾಟಕ ರಾಶಿ(Cancer)
ಕರ್ಕ ರಾಶಿಯು ನೀರಿನ ಚಿಹ್ನೆಯಾಗಿದ್ದು ಅದು ಮೂಡಿ ಚಂದ್ರನಂತೆ ಸೂಕ್ಷ್ಮವಾಗಿರುತ್ತದೆ. ಅಂದರೆ ಇವರು ತುಂಬಾ ಮೂಡಿಯಾಗಿರುತ್ತಾರೆ. ಅವರನ್ನು ನೋಯಿಸಿದಾಗ ಅಥವಾ ಯಾವುದೇ ಮಾತು ಅವರನ್ನು ಚುಚ್ಚಿದಾಗ ಕೂಡಲೇ ಅವರನ್ನು ದೂರವಿಡುತ್ತಾರೆ. ತಮ್ಮ ಸಂಗಾತಿಯ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುತ್ತಾರ. ಆ ಮೂಲಕ ಅವರಿಗೆ ಬಿಸಿ ಮುಟ್ಟಿಸಲು ಬಯಸುತ್ತಾರೆ. ಅದರ ಹೊರತಾಗಿಯೂ ಬೇರೆ ಯಾವುದೋ ಕಾರಣಕ್ಕೆ ಮೂಡಿಯಾದಾಗಲೂ ಸಂಗಾತಿಯ ಮೇಲೆ ಆ ಕೋಪ ತೋರುತ್ತಾರೆ. ಇದರಿಂದ ಇವರ ಪ್ರೇಮಿಯು ಗೊಂದಲಕ್ಕೊಳಗಾಗುವುದು ಸಹಜವಾಗಿರುತ್ತದೆ. ತಮ್ಮ ಮನಸ್ಸು ಸರಿಯಾದಾಗ ರಿಪ್ಲೈ ಮಾಡುತ್ತಾರೆ. ಇದು ಪದೇ ಪದೆ ಪುನರಾವರ್ತನೆಯಾದಾಗ ಸಂಬಂಧ ಹದಗೆಡಬಹುದು. 

ಲಿವಿಂಗ್ ರೂಂಗೆ ಧನಾತ್ಮಕತೆ ತರಲು ವಾಸ್ತುವಿನ 10 ಟಿಪ್ಸ್

ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರು ಜೀವನದ ಹಲವು ಅಂಶಗಳಲ್ಲಿ ಅಸಾಧಾರಣರಾಗಿದ್ದಾರೆ, ಅವರಲ್ಲಿ ಕೆಲವರು ಸ್ವಲ್ಪ ಅಹಂಕಾರವನ್ನು ಬೆಳೆಸಿಕೊಳ್ಳುತ್ತಾರೆ. ಅವರು ದಪ್ಪ ಚರ್ಮದವರು. ಆದ್ದರಿಂದ ಈ ಭೂಮಿಯ ಚಿಹ್ನೆಯ ಭಾವನೆಗಳನ್ನು ನೋಯಿಸುವುದು ಕಷ್ಟ. ಆದರೆ ಅವರು ಸುಲಭವಾಗಿ ಮುಖಭಂಗಕ್ಕೊಳಗಾಗುತ್ತಾರೆ ಮತ್ತು ಅದನ್ನು ಸಾಬೀತುಪಡಿಸಲು ತಮ್ಮ ಪ್ರೇಮಿಯನ್ನು ನಿರ್ಲಕ್ಷಿಸುತ್ತಾರೆ. ಇದಲ್ಲದೆ, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರು ಸಾಮಾನ್ಯಕ್ಕಿಂತ ತಡವಾಗಿ ಉತ್ತರಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ.

ನಿಮ್ಮ ಜಾತಕದಲ್ಲಿದೆಯಾ ಈ ಯೋಗ...? ಇದ್ದರೆ ವೃತ್ತಿ, ಉದ್ಯಮದಲ್ಲಿ ಭರ್ಜರಿ ಯಶ!!!

ವೃಷಭ ರಾಶಿ(Taurus)
ವೃಷಭ ರಾಶಿಯಂತಹ ಭೂಮಿಯ ಚಿಹ್ನೆಗಳು ಸಾಮಾನ್ಯವಾಗಿ ಸೌಹಾರ್ದಯುತ ಮತ್ತು ಇತರರ ಭಾವನೆಗಳಿಗೆ ಸೂಕ್ಷ್ಮವಾಗಿರುತ್ತವೆ. ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಹತ್ತಿರದಲ್ಲಿರುವವರನ್ನು ಹೆಚ್ಚು ಗೌರವಿಸುತ್ತಾರೆ. ಆದ್ದರಿಂದ, ವೃಷಭ ರಾಶಿಯವರು ವಿರಳವಾಗಿ ಪ್ರತಿಕ್ರಿಯಿಸುತ್ತಿದ್ದರೆ, ಅಥವಾ ನಿಮ್ಮ ಸಂದೇಶಗಳನ್ನು ನಿರ್ಲಕ್ಷಿಸುತ್ತಿದ್ದರೆ, ಅವರು ಬಹುಶಃ ನಿಮ್ಮನ್ನು ಅತಿಯಾಗಿ ಹಚ್ಚಿಕೊಂಡಿದ್ದಾರೆಂದರ್ಥ. ಇದನ್ನು ಅರ್ಥ ಮಾಡಿಕೊಂಡರೆ ಅವರೊಂದಿಗೆ ಏಗುವುದು ಸುಲಭವಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!