ಇದು ಮದುವೆ ವಿಷಯ, ಕುಜ ದೋಷದ ನಿರ್ಲಕ್ಷ್ಯ ಬೇಡ

By Suvarna News  |  First Published Jun 4, 2022, 11:32 AM IST

ಕುಜ ದೋಷವಿದ್ದ ವ್ಯಕ್ತಿಗೆ ವಿವಾಹವಾಗುವುದು ಕಷ್ಟ. ವಿವಾಹವಾಗಲು ಅನೇಕ ಅಡೆತಡೆಗಳು ಎದುರಾಗುತ್ತವೆ. ಹಾಗಿದ್ದಲ್ಲಿ ಕುಜ ದೋಷದ ಬಗ್ಗೆ ತಿಳಿದು ಪರಿಹರಿಸಿಕೊಳ್ಳುವುದು ಉತ್ತಮ. ಕೆಲವೊಮ್ಮೆ ಹುಡುಗ ಅಥವಾ ಹುಡುಗಿ ಯಾರಾದರೂ ಒಬ್ಬರಿಗೆ ಕುಜ ದೋಷವಿರುತ್ತದೆ. ಆದರೂ ತಿಳಿಯದೇ ವಿವಾಹವಾಗಿ ಹೋಗಿರುತ್ತದೆ. ಅಂತಹ ಸಂದರ್ಭದಲ್ಲಿ ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ...


ಜ್ಯೋತಿಷ್ಯ (Astrology) ಮತ್ತು ಜಾತಕಗಳನ್ನು(Horoscope) ನಂಬುವವರು ಮತ್ತು ಅದರ ಬಗ್ಗೆ ಗಮನ ಹರಿಸುವವರು ಮಾತ್ರ ಕುಜ ದೋಷದ ಬಗ್ಗೆ ತಿಳಿದು ಅದಕ್ಕೆ ಪರಿಹಾರ (Solution) ಕಂಡುಕೊಳ್ಳುತ್ತಾರೆ. ಕೆಲವು ಜನರಿಗೆ ಜಾತಕದ ಮೇಲೆ ನಂಬಿಕೆ ಇರುವುದಿಲ್ಲ. ಶಾಸ್ತ್ರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಹಾಗಂತ ಜಾತಕದ ದೋಷಗಳು ಯಾರನ್ನೂ ಬಿಡುವುದಿಲ್ಲ. ಹಾಗಾಗಿ ಕಾಲ ಕಾಲಕ್ಕೆ ಜಾತಕದಲ್ಲಿರುವ ದೋಷಗಳ (Difect) ಬಗ್ಗೆ ತಿಳಿದು ಪರಿಹರಿಸಿಕೊಳ್ಳುವುದು ಉತ್ತಮ. 

ವಿವಾಹ ಆದವರಿಗೆ ಕುಜ ದೋಷವಿದ್ದರೆ ಅದನ್ನು ತಿಳಿದು ಪರಿಹರಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ಅನೇಕ ತೊಂದರೆಗಳು ಕಾಡುತ್ತವೆ. ದಾಂಪತ್ಯ ಜೀವನದಲ್ಲಿ (Marriage Life) ಅನೇಕ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಅನಾರೋಗ್ಯ ಉಂಟಾಗುತ್ತದೆ. ಸಂಸಾರದಲ್ಲಿ ಸಾಮರಸ್ಯವಿರುವುದಿಲ್ಲ, ಧನಹಾನಿ (Money loss) ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗೆಲ್ಲ ಒಮ್ಮಿಂದೊಮ್ಮೆ ಆದಾಗ ಅದಕ್ಕೆ ಯಾವುದೋ ದೋಷವೇ ಕಾರಣವಾಗಿರುತ್ತದೆ. ಆಗ ದೋಷದ ಬಗ್ಗೆ ತಿಳಿದು ಬಂದರೆ ವಿವಾಹ ಆಗಿ ಹೋಗಿದೆ ಎಂದು ಚಿಂತಿಸುವ ಅಗತ್ಯವಿಲ್ಲ. ಕಾರಣ ವಿವಾಹದ ಬಳಿಕವೂ ಕುಜದೋಷವ್ನನು ಪರಿಹರಿಸಿಕೊಳ್ಳ ಬಹುದಾಗಿದೆ. ಆದರೆ ಕುಜ ದೋಷವನ್ನು ನಿರ್ಲಕ್ಷ್ಯ ಮಾಡುವುದು ಪ್ರಾಣಕ್ಕೆ ಕಂಟಕ ತರು ಸಾಧ್ಯತೆ ಇರುತ್ತದೆ. ಹಾಗಾಗಿ ದೋಷ ನಿವಾರಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ.

ಪುರುಷ (Man) ಅಥವಾ ಸ್ತ್ರೀಯ (Women) ಜಾತಕದ 1ನೇ, 4ನೇ, 7ನೇ, 8ನೇ ಅಥವಾ 12ನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಅದಕ್ಕೆ ಮಂಗಳ ದೋಷ ಅಥವಾ ಕುಜದೋಷವೆಂದು ಕರೆಯುತ್ತಾರೆ. ವಿವಾಹಕ್ಕೂ ಮುನ್ನ ಕುಜ ದೋಷದ ಬಗ್ಗೆ ತಿಳಿದರೆ ಕುಜ ದೋಷ ಇರುವ ಹುಡುಗ ಅಥವಾ ಹುಡುಗಿಯನ್ನೇ ವಿವಾಹವಾದರೆ ದೋಷ ನಿವಾರಣೆಯಾಗಿ ಬಿಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಕುಜ ದೋಷದ (Kuja Dosha) ಬಗ್ಗೆ ವಿವಾಹಕ್ಕೂ ಮುನ್ನ ತಿಳಿದುಕೊಂಡು ಕುಜ ದೋಷವಿರುವ ವ್ಯಕ್ತಿಯನ್ನು ಕುಜ ದೋಷ ಹೊಂದಿರುವ ಜಾತಕದೊಂದಿಗೆ ವಿವಾಹ ಮಾಡಿದರೆ ಉತ್ತಮವೆಂದು ಶಾಸ್ತ್ರ ಹೇಳುತ್ತದೆ. 

ವಿವಾಹದ ಬಳಿಕ ಇಬ್ಬರಲ್ಲಿ ಒಬ್ಬರಿಗೆ ದೋಷವಿದ್ದರೆ ಇದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ಮನಸ್ತಾಪಗಳಾಗುವ ಸಾಧ್ಯತೆ ಇದ್ದು, ಇದು ವಿಚ್ಛೇದನದ (Diverse) ಮಟ್ಟವನ್ನೂ ತಲುಪಿರೂ ಆಶ್ಚರ್ಯವಿಲ್ಲ. ಒಂದೊಮ್ಮೆ ಅನ್ಯೊನ್ಯವಾಗೇ ಇದ್ದರೂ ಸಂತಾನ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಈ ರೀತಿಯ ಸಮಸ್ಯೆಗಳು ಎದುರಾದರೆ ಸಂಸಾರದಲ್ಲಿ ನೆಮ್ಮದಿ ನಷ್ಟವಾಗುತ್ತದೆ. ಭಿನ್ನಾಭಿಪ್ರಾಯಗಳು ಉಂಟಾಗಲು ಆರಂಭವಾಗುತ್ತದೆ. ಹಾಗಾಗಿ ಕುಜ ದೋಷವನ್ನು ನಿರ್ಲಕ್ಷಿಸದೇ ಪರಿಹರಿಸಿಕೊಳ್ಳ ಬೇಕೆಂದು ಶಾಸ್ತ್ರ ಹೇಳುತ್ತದೆ. ಮಂಗಳ (Mars) ದೋಷಕ್ಕೆ ಈ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ದೋಷದಿಂದ ಉಂಟಾಗುವ ಯಾವುದೇ ತೊಂದರೆ ಬಾಧಿಸುವುದಿಲ್ಲ. ಕುಜದೋಷ ಸಂಪೂರ್ಣ ನಿವಾರಣೆಯಾಗುತ್ತದೆ.

ಮಂಗಳದೋಷ ಇರುವುದು ತಿಳಿದು ಬಂದರೆ ಹೀಗೆ ಮಾಡಿ ಪರಿಹಾರ ಕಂಡುಕೊಳ್ಳಿ 
- ಮಂಗಳ ಗ್ರಹವನ್ನು ಶಾಂತಗೊಳಿಸಲು ಶ್ರೀ ಮಂಗಳನಾಥ ಅಥವಾ ಅಂಗಾರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಬೇಕು ಮಂಗಳದೋಷವನ್ನು ಹೊಂದಿದವರಿಗೆ ದೋಷದ ಪ್ರಭಾವ ಕಡಿಮೆಯಾಗಿ, ಒಳಿತಾಗುತ್ತದೆ.
- ಮದುವೆ ಆದ ನಂತರ ದೋಷದ ಬಗ್ಗೆ ತಿಳಿದು ಬಂದರೆ, ವೈವಾಹಿಕ ಜೀವನದಲ್ಲಿ ತೊಂದರೆಯಾಗುತ್ತಿದೆ ಎಂದಾದರೆ ಶಿವನ ದೇವಾಲಯಕ್ಕೆ (Shiva Temple) ಪ್ರತಿ ಮಂಗಳವಾರ ಹೋಗಿ ಶಿವಲಿಂಗಕ್ಕೆ ಒಂದೂ ಕಾಲು ಕೆ.ಜಿ ಕೆಂಪು ಮಸೂರವನ್ನು ಅರ್ಪಿಸಬೇಕು. ಶಿವಲಿಂಗದ ರೂಪದಲ್ಲಿ ಮಂಗಳನ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಮಂಗಳನಿಗೆ ಮಸೂರವನ್ನು ಅನ್ನವೆಂದು ನೀಡಲಾಗುತ್ತದೆ.

ಇದನ್ನು ಓದಿ: ನಿಮ್ಮ ಜಾತಕದಲ್ಲಿದೆಯಾ ಈ ಯೋಗ...? ಇದ್ದರೆ ವೃತ್ತಿ, ಉದ್ಯಮದಲ್ಲಿ ಭರ್ಜರಿ ಯಶ!!!

- ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ಪರಿಹಾರವಾಗಬೇಕಾದರೆ ಶಿವನ ಜೊತೆಯಲ್ಲಿ ಪಾರ್ವತಿಯನ್ನು ಆರಾಧಿಸಬೇಕು. ಮಂಗಳ ದೋಷ ನಿವಾರಣೆಗೆ ಪಾರ್ವತಿಯ (Goddess Parvati) ಉಪಾಸನೆ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿ ವಿಚ್ಛೇದನದ ಹಂತಕ್ಕೆ ಬಂದಿರುವ ದಂಪತಿಗಳು ಈ ಪರಿಹಾರವನ್ನು ಮಾಡುವುದರಿಂದ ಸಂಬಂಧ ಸರಿಹೋಗುವ ಸಾಧ್ಯತೆ ಇರುತ್ತದೆ.
- ಕುಜ ದೋಷವಿರುವವರು ಮಂಗಳ ಗ್ರಹಕ್ಕೆ ಸಂಬಂಧಿಸಿದ ಹವಳ ರತ್ನವನ್ನು ತಿಳಿದವರ ಸಲಹೆಯ ಮೇರೆಗೆ ಪಡೆದು ಧಾರಣೆ ಮಾಡಿದರೆ ಕುಜ ದೋಷ ನಿವಾರಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ಮನೆ-ಮನದಲ್ಲಿ ನೆಮ್ಮದಿ ಮತ್ತು ಸಂತೋಷ (Happy) ನೆಲೆಸುತ್ತದೆ.
- ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಸುಮಾರು ಜನರಿಗೆ ಇಪ್ಪತ್ತೆಂಟು ವರ್ಷದ ನಂತರ ಕುಜ ದೋಷ ತಾನಾಗಿಯೇ ನಿವಾರಣೆಯಾಗಿರುತ್ತದೆ. ಅನೇಕ ಜ್ಯೋತಿಷಿಗಳು ಹೇಳುವ ಪ್ರಕಾರ ಮೇಷ (Aries), ಕಟಕ (Cancer), ವೃಶ್ಚಿಕ (Scorpio) ಅಥವಾ ಮಕರ (Capricorn) ರಾಶಿಯಾಗಿದ್ದರೂ ಸಹ 28 ವರ್ಷದ ನಂತರ ಕುಜ ದೋಷದ ಪ್ರಭಾವ ತೀರಾ ಕಡಿಮೆಯಾಗಿರುತ್ತದೆ, ಹಾಗಾಗಿ ತೊಂದರೆ ಕೊಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ಜಾತಕವನ್ನು ಪರಿಶೀಲಿಸಿಕೊಂಡಲ್ಲಿ ದೋಷದ ಪ್ರಭಾಭದ ಬಗ್ಗೆ ತಿಳಿಯುತ್ತದೆ ಎನ್ನಲಾಗುತ್ತದೆ.

ಇದನ್ನು ಓದಿ: ದುಡ್ಡು ಮಾಡೋದಷ್ಟೇ ಈ ರಾಶಿಯವರ ಟಾರ್ಗೆಟ್, ಧನಯೋಗ ಯಾರಿಗಿದೆ?

- ಮಂಗಳ ಯಂತ್ರದ ಬಗ್ಗೆ ಕೇಳಿ ಅದನ್ನು ಹಾಗೆಯೇ ಧರಿಸಿಕೊಳ್ಳುವುದು ಸರಿಯಲ್ಲ. ಅತ್ಯಂತ ಸಂಕಷ್ಟದ ಸಂದರ್ಭದ್ಲಲಿ ಮಾತ್ರ ಮಂಗಳ ಯಂತ್ರವನ್ನು ಬಳಸಬೇಕು. ಅಂತಹ ಸಂದರ್ಭಗಳೆಂದರೆ ಸಂತಾನವಾಗಲು ಸಮಸ್ಯೆ ಎದುರಾಗುವುದು, ವಿಚ್ಛೇದನ ತೆಗೆದುಕೊಳ್ಳುವ ಹಂತಕ್ಕೆ ದಾಂಪತ್ಯ ಜೀವನ ಬಿರುಕು ಬಿಟ್ಟಿದ್ದರೆ, ಈ ಯಂತ್ರವನ್ನು ತೆಗೆದುಕೊಳ್ಳಬೇಕು. ತೀರಾ ಸಣ್ಣ ಸಮಸ್ಯೆಗಳಿಗೆ ಈ ಯಂತ್ರವನ್ನು ಉಪಯೋಗಿಸುವುದಕ್ಕೆ ಜ್ಯೋತಿಷ್ಯ ಶಾಸ್ತ್ರ ಸಮ್ಮತಿಸುವುದಿಲ್ಲ. ಈ ಯಂತ್ರವು ಹೆಚ್ಚು ಶಕ್ತಿಯನ್ನು ಹೊಂದಿರುವ ಕಾರಣ ಬಳಸುವಾಗ ಜಾಗರೂಕರಾಗಿರಬೇಕು.

click me!