
ನವರಾತ್ರಿ (Navratri) ಹಬ್ಬದಲ್ಲಿ ತಾಯಿ ದುರ್ಗೆಯ ಆರಾಧನೆ ನಡೆಯುತ್ತಿದೆ. ಭಕ್ತರು ತಮ್ಮ ಕೋರಿಕೆಗಳನ್ನು ತಾಯಿ ಮುಂದಿಡ್ತಿದ್ದಾರೆ. ತಮ್ಮೆಲ್ಲ ಬಯಕೆ ಬೇಗ ಈಡೇರಲಿ ಅಂತ ಪ್ರಾರ್ಥನೆ ಮಾಡಿ, ನಾನಾ ಹರಕೆಗಳನ್ನು ತೀರಿಸ್ತಿದ್ದಾರೆ. ದುರ್ಗೆ (Durga) ಮೂರ್ತಿಯನ್ನು ಮನೆ ಅಥವಾ ದೇವಸ್ಥಾನಗಳಲ್ಲಿ ಸ್ಥಾಪಿಸಿ, ಪೂಜೆ, ಉಪವಾಸದಲ್ಲಿ ಜನರು ನಿರತರಾಗಿದ್ದಾರೆ. ಸಂಪೂರ್ಣ 9 ದಿನ ತಾಯಿಯ ಪೂಜೆ ನಡೆಯುತ್ತದೆ. ನವರಾತ್ರಿಯಲ್ಲಿ ನೀವು ಮಾಡುವ ಒಂದೇ ಒಂದು ಉಪಾಯ ನಿಮ್ಮ ಅದೃಷ್ಟವನ್ನು ಬದಲಿಸಬಲ್ಲದು. ಅದಕ್ಕೆ ನೀವು ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ. ಮನೆಯಲ್ಲಿ ನಿತ್ಯ ಪೂಜೆಗೆ ಬಳಸುವ ವಸ್ತುವಿನಿಂದಲೇ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು. ಸಂಪತ್ತು, ಉದ್ಯೋಗವನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು.
ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಅತಿ ಮುಖ್ಯ ಸ್ಥಾನವಿದೆ. ಪ್ರತಿಯೊಂದು ಹಬ್ಬ, ಪೂಜೆಯಲ್ಲಿ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ವೀಳ್ಯದೆಲೆ ಇಲ್ದೆ ಪೂಜೆ ಸಂಪೂರ್ಣಗೊಳ್ಳುವುದಿಲ್ಲ. ವೀಳ್ಯದೆಲೆ ಮೇಲೆ ಅಡಿಕೆ ಹಾಗೂ ನಾಣ್ಯವನ್ನು ಇಟ್ಟು, ಕಲಶ ಸ್ಥಾಪನೆ, ಪೂಜೆ, ದಾನ ಮಾಡುವ ಪದ್ಧತಿ ನಮ್ಮಲ್ಲಿದೆ. ಈ ವೀಳ್ಯದೆಲೆ ಮೂಲಕವೇ ನೀವು ನಿಮ್ಮೆಲ್ಲ ಬಯಕೆಯನ್ನು ನವರಾತ್ರಿ ಸಂದರ್ಭದಲ್ಲಿ ಈಡೇರಿಸಿಕೊಳ್ಳಬಹುದು.
ಮಹಾನವಮಿಯಂದು ಗ್ರಹಗಳ ಮಹಾ ಸಂಯೋಗ, 6 ದೊಡ್ಡ ರಾಜಯೋಗದಿಂದ ಈ ರಾಶಿಗೆ ಅದೃಷ್ಟ ಮಳೆ
ನೌಕರಿಯಲ್ಲಿ ಸಮಸ್ಯೆ ಆಗ್ತಿದೆ, ನೌಕರಿ ಸಿಗ್ತಿಲ್ಲ ಎನ್ನುವವರು ಹಾಗೆಯೇ ಬ್ಯುಸಿನೆಸ್ ನಲ್ಲಿ ನಷ್ಟವಾಗ್ತಿದೆ, ಬ್ಯುಸಿನೆಸ್ ಮಾಡಲು ಕಷ್ಟವಾಗ್ತಿದೆ ಎನ್ನುವವರು ವೀಳ್ಯದೆಲೆಯಿಂದ ಪರಿಹಾರ ಕಂಡುಕೊಳ್ಳಬಹುದು. ನೀವು ವೀಳ್ಯದೆಲೆ ಪಾನನ್ನು ತಾಯಿ ದುರ್ಗೆಗೆ ಅರ್ಪಿಸಬೇಕು. ನವರಾತ್ರಿಯಲ್ಲಿ ಸಂಜೆ ತಾಯಿ ದುರ್ಗೆಗೆ ವೀಳ್ಯದೆಲೆಯಲ್ಲಿ ಮಾಡಿದ ಪಾನನ್ನು ತಾಯಿಗೆ ಅರ್ಪಿಸಿ ಪೂಜೆ ಮಾಡಿ. ಇದ್ರಿಂದ ನೌಕರಿ ಹಾಗೂ ವ್ಯಾಪಾರದಲ್ಲಿನ ಅಡೆತಡೆ ದೂರವಾಗಲಿದೆ.
ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಕಾಣಲು :
ಕೌಟುಂಬಿಕ ಸಮಸ್ಯೆಯಿಂದ ಹಿಡಿದು ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡ್ರೆ ನವರಾತ್ರಿಯಲ್ಲಿ ಇದೊಂದು ಉಪಾಯ ಮಾಡಿದ್ರೆ ಸಾಕು. ಅದಕ್ಕೂ ನೀವು ವೀಳ್ಯದೆಲೆ ಬಳಸಬೇಕು. ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಅದ್ರ ಎರಡೂ ಕಡೆ ಸಾಸಿವೆ ಎಣ್ಣೆಯನ್ನು ಹಚ್ಚಿ. ನವರಾತ್ರಿಯ ಶುಭ ಸಂದರ್ಭದಲ್ಲಿ ಸಂಜೆ ತಾಯಿ ದುರ್ಗೆಗೆ ಈ ವೀಳ್ಯದೆಲೆಯನ್ನು ಅರ್ಪಿಸಿ. ಹೀಗೆ ಮಾಡಿದ್ರೆ ನಿಮ್ಮ ಕ್ಷೇತ್ರದಲ್ಲಿ ಬಂದ ಒತ್ತಡ ಕಡಿಮೆಯಾಗಲಿದೆ. ಎಲ್ಲ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ.
ನವೆಂಬರ್ 12 ರ ನಂತರ ಗಜಕೇಸರಿ ಯೋಗ, ಈ ರಾಶಿಗೆ ಹೆಜ್ಜೆ-ಹೆಜ್ಜೆಗೂ ತೊಂದರೆ.. ಕಷ್ಟ ಹಿಂಬಾಲಿಸಲಿದೆ!
ನಕಾರಾತ್ಮಕ ಶಕ್ತಿ ದೂರ ಮಾಡೋದು ಹೀಗೆ :
ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದೆ ಎಂದಾಗ ನೀವು ವೀಳ್ಯದೆಲೆಯ ಇನ್ನೊಂದು ಉಪಾಯವನ್ನು ನವರಾತ್ರಿಯಲ್ಲಿ ಮಾಡ್ಬಹುದು. ನೀವು ನವರಾತ್ರಿಯ ಒಂಭತ್ತೂ ದಿನ ಇದನ್ನು ಮಾಡ್ಬಹುದು. ಇಲ್ಲ ಮೂರ್ನಾಲ್ಕು ದಿನ ಮಾಡಿದ್ರೂ ಸಾಕು. ವೀಳ್ಯದೆಲೆ ಮೇಲೆ ಕೇಸರಿ ಎಸಳನ್ನು ಹಾಕಿ, ತಾಯಿ ದುರ್ಗೆಗೆ ಅರ್ಪಿಸಿ. ಇದನ್ನು ನಿಯಮಿತವಾಗಿ ಮಾಡಿದ್ರೆ ತಾಯಿ ಆಶೀರ್ವಾದ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಬೀಳಲಿದೆ. ನಕಾರಾತ್ಮಕ ಶಕ್ತಿ ದೂರವಾಗಲಿದೆ. ಮನೆಯ ವಾತಾವರಣ ಸಕಾರಾತ್ಮಕಗೊಳ್ಳಲಿದೆ. ಕುಟುಂಬಸ್ಥರ ಮಧ್ಯೆ ಇರುವ ಭಿನ್ನಾಭಿಪ್ರಾಯ, ನೋವು, ದುಃಖಗಳು ದೂರವಾಗಲಿವೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಕುಟುಂಬಸ್ಥರ ಮಾನಸಿಕ ಶಾಂತಿ ಹಾಗೂ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಆರ್ಥಿಕ ವೃದ್ಧಿ :
ನವರಾತ್ರಿ ಸಮಯದಲ್ಲಿ ನೀವು ಪ್ರತಿ ದಿನ ವೀಳ್ಯದೆಲೆಯನ್ನು ತಾಯಿ ದುರ್ಗೆಗೆ ಅರ್ಪಿಸುತ್ತ ಬಂದ್ರೆ ಆರ್ಥಿಕ ವೃದ್ಧಿಯಾಗಲಿದೆ. ನೀವು ವೀಳ್ಯದೆಲೆ ಮೇಲೆ ತಾಯಿ ದುರ್ಗೆಯ ಬೀಜ ಮಂತ್ರವನ್ನು ಬರೆದು ಅರ್ಪಿಸಿದ್ರೆ ಒಳ್ಳೆಯದು.