ಕೆಲಸದಲ್ಲಿ ಯಶಸ್ಸು ಬೇಕಂದ್ರೆ ಗುರುವಾರ ಈ ಕೆಲಸ ಮಾಡಿ ನೋಡಿ..

By Suvarna NewsFirst Published Jul 21, 2022, 11:19 AM IST
Highlights

ಗುರುವಾರದಂದು ಯಾವ ಕೆಲಸವನ್ನು ಮಾಡುವುದರಿಂದ ಗುರು ಗ್ರಹ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದು ತಿಳಿಯಿರಿ.

ಗುರುವಾರವು ಭಗವಾನ್ ವಿಷ್ಣು ಮತ್ತು ಬೃಹಸ್ಪತಿಗೆ ಸಮರ್ಪಿತವಾದ ದಿನವಾಗಿದೆ. ಗುರುವು ಎಲ್ಲಾ ಒಂಬತ್ತು ಗ್ರಹಗಳಲ್ಲಿ ದೊಡ್ಡದಾಗಿದೆ ಮತ್ತು ಎಲ್ಲ ದೇವರುಗಳ ಗುರು ಎನಿಸಿಕೊಂಡಿದೆ. ಈ ದಿನದಂದು ಭಗವಾನ್ ವಿಷ್ಣು ಮತ್ತು ಗುರು ಬೃಹಸ್ಪತಿಯನ್ನು ನಿಜವಾದ ಹೃದಯದಿಂದ ಪೂಜಿಸುವ ವ್ಯಕ್ತಿಯ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ವ್ಯಕ್ತಿಯ ಜೀವನದಲ್ಲಿ, ಗುರು ಗ್ರಹವು ಸಂಪತ್ತು, ಉದ್ಯೋಗ, ಗೃಹ ಜೀವನ ಮತ್ತು ಉನ್ನತ ಶಿಕ್ಷಣದ ಕಾರಣ ಗ್ರಹವಾಗಿದೆ. ಗುರುವಾರದಂದು ಯಾವ ಕೆಲಸಗಳನ್ನು ಮಾಡುವುದರಿಂದ ಗುರು ದೇವ ಮತ್ತು ಭಗವಾನ್ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು ಎಂದು ಇಲ್ಲಿ ನಿಮಗೆ ಹೇಳುತ್ತೇವೆ.

ಈ ಮಂತ್ರ ಜಪಿಸಿ
ಗುರುವಾರ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ, ಸ್ನಾನದ ನಂತರ 'ಓಂ ಬೃಹಸ್ಪತೇ ನಮಃ' ಮಂತ್ರವನ್ನು ಜಪಿಸಿ. ಗುರುವಾರ ವ್ರತವನ್ನು ಆಚರಿಸಿ ಮತ್ತು ಹಳದಿ ಬಟ್ಟೆಗಳನ್ನು ಧರಿಸಿ. ಹಳದಿ ವಸ್ತುಗಳನ್ನು ಸಹ ದಾನ ಮಾಡಿ. ಇದನ್ನು ಮಾಡುವುದರಿಂದ ವ್ಯಕ್ತಿಯ ಎಲ್ಲ ಸಮಸ್ಯೆಗಳು ಕೊನೆಗೊಳ್ಳುತ್ತವೆ.

ವಿವಾಹಕ್ಕಾಗಿ
ಗುರುವಾರದಂದು ಬಾಳೆಗಿಡಕ್ಕೆ ನೀರು ಅರ್ಪಿಸಿದ ನಂತರ ಶುದ್ಧ ತುಪ್ಪದ ದೀಪವನ್ನು ಹಚ್ಚಿ ಗುರುವಿನ 108 ನಾಮಗಳನ್ನು ಜಪಿಸಿ. ಹೀಗೆ ಮಾಡುವುದರಿಂದ ನಿಜವಾದ ಪ್ರೀತಿ ಸಿಗುತ್ತದೆ ಎಂದು ನಂಬಲಾಗಿದೆ. ನೀವು ಶೀಘ್ರದಲ್ಲೇ ಮದುವೆ(Marriage)ಯಾಗಲು ಬಯಸಿದರೆ, ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ ಮತ್ತು ಹಳದಿ ವಸ್ತುಗಳನ್ನು ತಿನ್ನಿರಿ.

ವ್ಯಾಪಾರ ಸಮಸ್ಯೆ ನಿವಾರಣೆಗೆ
ವ್ಯಾಪಾರದಲ್ಲಿ ತೊಂದರೆಯಿದ್ದರೆ, ಗುರುವಾರದಂದು ಪೂಜಾ ಕೋಣೆಯಲ್ಲಿ ಅರಿಶಿನದ ಮಾಲೆಯನ್ನು ನೇತು ಹಾಕಿ. ಅಲ್ಲದೆ, ನಿಮ್ಮ ಕೆಲಸದ ಸ್ಥಳದಲ್ಲಿ ಹಳದಿ ಬಣ್ಣದ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಿ. ಈ ದಿನ ಲಕ್ಷ್ಮೀ ನಾರಾಯಣನ ದೇವಸ್ಥಾನದಲ್ಲಿ ಲಡ್ಡುವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ವ್ಯಾಪಾರ(business)ದಲ್ಲಿ ಪ್ರಗತಿ ಕಂಡುಬರುವುದು.

ಜ್ಯೋತಿರ್ಲಿಂಗ ಸರಣಿ: 6 ಬಾರಿ ದಾಳಿಗೂ ಜಗ್ಗದೆ ನಿಂತ ಸೋಮನಾಥ, ಪುರಾಣ ಪುಣ್ಯ ಕತೆ ಕೇಳಿ..

ಇವುಗಳನ್ನು ದಾನ ಮಾಡಿ
ಈ ದಿನ ಹಸುವಿಗೆ ಬೇಳೆ, ಬೆಲ್ಲ ಮತ್ತು ಅರಿಶಿನ ಬೆರೆಸಿದ ಹಿಟ್ಟನ್ನು ತಿನ್ನಿಸಿ. ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನ(turmeric) ಸೇರಿಸಿ ಸ್ನಾನ ಮಾಡಿ. ಹಾಗೆಯೇ ಬೇಳೆ, ಬಾಳೆಹಣ್ಣು, ಹಳದಿ ಬಟ್ಟೆ ಇತ್ಯಾದಿಗಳನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವವರಿಗೆ ದಾನ ಮಾಡಿ.

ಅರಿಶಿನ
ಪ್ರತಿ ಗುರುವಾರ ಪೂಜೆಯ ನಂತರ, ನಿಮ್ಮ ಮಣಿಕಟ್ಟಿಗೆ ಅಥವಾ ಕುತ್ತಿಗೆಗೆ ಸಣ್ಣ ಅರಿಶಿನ ತಿಲಕವನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಗುರು ಗ್ರಹ(Jupiter) ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳು ವ್ಯಕ್ತಿಯಲ್ಲಿ ಹೆಚ್ಚಾಗುತ್ತವೆ.

ಗುರು ಬಲಕ್ಕಾಗಿ
ವಿದ್ವಾಂಸರು ಬರೆದ ಒಳನೋಟವುಳ್ಳ ಪುಸ್ತಕಗಳನ್ನು ಗುರುವಾರ ದಾನ ಮಾಡುವ ಮೂಲಕ ಗುರುವಿನ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು. ಗುರು ಗ್ರಹಕ್ಕೆ ಬಲ ತುಂಬಬಹುದು. 

ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಅರ್ಪಿಸುವಾಗ ಈ ತಪ್ಪು ಮಾಡ್ಬೇಡಿ

ಗುರು ದೋಷ ನಿವಾರಣೆಗೆ
ಗುರುದೋಷವನ್ನು ಹೋಗಲಾಡಿಸಲು, ನಿಮ್ಮ ಗುರುವಾರದ ಸ್ನಾನದ ನೀರಿಗೆ ಚಿಟಿಕೆ ಅರಿಶಿನವನ್ನು ಹಾಕಿ. ಜೊತೆಗೆ ಸ್ನಾನ ಮಾಡುವಾಗ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸಿ ಮತ್ತು ಹಣೆಗೆ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿ.

click me!