ಶ್ರಾವಣ ಪೌರ್ಣಿಮೆ: ಲಕ್ಷ್ಮೀ ಒಲುಮೆಗಾಗಿ ಮಾಡಿ ಈ 5 ಕೆಲಸ

By Suvarna News  |  First Published Aug 10, 2022, 11:34 AM IST

ಶ್ರಾವಣ ಪೂರ್ಣಿಮೆಯಂದು ಈ 5 ವಿಶೇಷ ಕೆಲಸಗಳನ್ನು ಮಾಡಿದರೆ ತಾಯಿ ಲಕ್ಷ್ಮಿ ಒಲಿಯುತ್ತಾಳೆ. ಹಣದ ಅಡಚಣೆಗಳು ನೀಗುತ್ತವೆ. 


ಶ್ರಾವಣ ಪೂರ್ಣಿಮೆಯು 11ನೇ ಆಗಸ್ಟ್ 2022ರಂದು. ರಕ್ಷಾಬಂಧನವನ್ನು ಶ್ರಾವಣ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯು 11 ಆಗಸ್ಟ್ 2022, ಗುರುವಾರ ಬೆಳಿಗ್ಗೆ 10:38ಕ್ಕೆ ಪ್ರಾರಂಭವಾಗಿ, 12ರ ಬೆಳಗ್ಗೆ 7.05ರವರೆಗೆ ಇರುತ್ತದೆ.  ಆಗಸ್ಟ್ 11ರ ಮಧ್ಯಾಹ್ನ 12ರಿಂದ 12:53 ನಿಮಿಷಗಳವರೆಗೆ ಅಭಿಜೀತ್ ಮುಹೂರ್ತ ಇರುತ್ತದೆ. ಅಮೃತ ಕಾಲವು- ಸಂಜೆ 6.55ರಿಂದ 8.20ರವರೆಗೆ ಇರುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಪೂರ್ಣಿಮೆಯನ್ನು ಶ್ರಾವಣ ಶುಕ್ಲ ಪೂರ್ಣಿಮೆ ಎಂದೂ ಕರೆಯುತ್ತಾರೆ. ಈ ದಿನ ದಾನ, ಸ್ನಾನ, ಪಿತೃ ತರ್ಪಣ, ಶ್ರಾವಣ ಹುಣ್ಣಿಮೆ ಉಪಕರ್ಮ ಜೊತೆಗೆ ರಕ್ಷಾಬಂಧನವೂ ಇದೆ. 

ಈ ದಿನ ಚಂದ್ರನನ್ನು ಪೂಜಿಸಬೇಕು. ಪೂರ್ಣಿಮೆಯಂದು ಸಂಜೆ ಚಂದ್ರೋದಯದ ನಂತರ ಬೆಳ್ಳಿಯ ತಾವರೆಯಿಂದ ಚಂದ್ರ ದೇವರಿಗೆ ಹಾಲನ್ನು ಅರ್ಪಿಸಬೇಕು. ಈ ಸಮಯದಲ್ಲಿ 'ಓಂ ಸೋಮಾಯ ನಮಃ' ಎಂಬ ಮಂತ್ರವನ್ನು ಜಪಿಸಿ. ಶ್ರಾವಣ ಪೂರ್ಣಿಮೆಯಂದು ಬಡವರು ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. 

Tap to resize

Latest Videos

ಈ ದಿನ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವನ್ನು ಕಾಣಬಹುದು. ಶ್ರಾವಣ ಪೂರ್ಣಿಮೆಯ ಪರಿಹಾರಗಳನ್ನು ತಿಳಿಯೋಣ.

ರಂಗೋಲಿ(Rangoli)
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಶ್ರಾವಣ ಪೂರ್ಣಿಮೆಯಂದು ಮನೆಯ ಮುಖ್ಯ ದ್ವಾರದ ಎದುರು ರಂಗೋಲಿ ಮತ್ತು ಬಾಗಿಲಿನ ಮೇಲೆ ಅರಿಶಿನದಿಂದ ಸ್ವಸ್ತಿಕ್ ಬರೆಯಿರಿ. ಇದು ಮನೆಗೆ ತಾಯಿ ಲಕ್ಷ್ಮಿಗೆ ಅತ್ಯುತ್ತಮ ಆಹ್ವಾನವಾಗಿದೆ. ಆಕೆ ಬೇಗ ಒಲಿದು ಮನೆಯೊಳಗೆ ಬಲಗಾಲಿಟ್ಟು ಬರುತ್ತಾಳೆ. 

Raksha Bandhan 2022: ನೀವು ತಿಳಿದಿರಬೇಕಾದ 7 ವಿಷಯಗಳು

ಅಶ್ವತ್ಥ ಮರದ ಪೂಜೆ(worship peepal tree)
ತಾಯಿ ಲಕ್ಷ್ಮಿ ಮತ್ತು ವಿಷ್ಣು ಅಶ್ವತ್ಥ ಮರದಲ್ಲಿ ನೆಲೆಸಿದ್ದಾರೆ. ಶ್ರಾವಣ ಪೂರ್ಣಿಮೆಯ ದಿನದಂದು ಅಶ್ವತ್ಥ ಮರವನ್ನು ಯಥಾವತ್ತಾಗಿ ಪೂಜಿಸಿ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಹಣದ ಹರಿವು ಹೆಚ್ಚುತ್ತದೆ ಎಂದು ನಂಬಲಾಗಿದೆ. 

ಶಂಖ(Conch)
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಶ್ರಾವಣ ಪೂರ್ಣಿಮೆಯಂದು ಕೆಂಪು ಚಂದನದಿಂದ ದಕ್ಷಿಣದ ಶಂಖದ ಮೇಲೆ 'ಓಂ ಶ್ರೀ ಹ್ರೀಂ ಶ್ರೀ ಕಮಲೇ ಕಮಲ್ಲಯೇ ಪ್ರಸೀದ್ ಶ್ರೀ ಹ್ರೀಂ ಶ್ರೀ ಓಂ ಮಹಾಲಕ್ಷ್ಮಾಯೈ ನಮಃ' ಎಂಬ ಮಂತ್ರವನ್ನು ಬರೆದು ಮನೆಯ ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸಬೇಕು. ತಾಯಿ ಲಕ್ಷ್ಮಿಯ ಈ ಮಂತ್ರವು ಸಂಪತ್ತು ಮತ್ತು ಅದೃಷ್ಟವನ್ನು ನೀಡಲಿದೆ.

ಕವಡೆ
ಸಾವನ ಪೂರ್ಣಿಮೆಯಂದು, ಹಳದಿ ಹೂವುಗಳು, 11 ಹಳದಿ ಕವಡೆಗಳನ್ನು ಲಕ್ಷ್ಮಿ ಮತ್ತು ಶ್ರೀಹರಿಯ ಆರಾಧನೆಯಲ್ಲಿ ಅರ್ಪಿಸಬೇಕು. ಮರುದಿನ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ವಾಲ್ಟ್ ಅಥವಾ ಹಣದ ತಜೋರಿಯಲ್ಲಿ ಇರಿಸಿ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. 

Chanakya Niti: ಮಹಿಳೆ ಈ ಕೆಲಸ ಮಾಡುವಾಗ ಪುರುಷರು ನೋಡ್ಬಾರದು

ಶ್ರೀ ಯಂತ್ರ
ಶ್ರಾವಣ ಪೂರ್ಣಿಮೆಯ ದಿನದಂದು ಮನೆಯ ದೇವಸ್ಥಾನದಲ್ಲಿ ಒಂದು ತೆಂಗಿನಕಾಯಿ, ವ್ಯಾಪಾರ ವೃದ್ಧಿ ಯಂತ್ರ, ಕುಬೇರ ಯಂತ್ರವನ್ನು ಪ್ರತಿಷ್ಠಾಪಿಸಿದರೆ ತಾಯಿ ಲಕ್ಷ್ಮಿ ದಯೆ ತೋರುತ್ತಾಳೆ. ಹಣ ಸಮಸ್ಯೆಯಾಗುವುದಿಲ್ಲ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!