Raksha Bandhan 2022: ನೀವು ತಿಳಿದಿರಬೇಕಾದ 7 ವಿಷಯಗಳು

By Suvarna News  |  First Published Aug 10, 2022, 10:28 AM IST

ಈ ವರ್ಷ ಆಗಸ್ಟ್ 11ರಂದು ರಕ್ಷಾ ಬಂಧನ. ಈ ಸಂದರ್ಭದ ಪ್ರಮುಖ ಆಚರಣೆಗಳು, ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ತಿಳಿಯೋಣ. 


ರಕ್ಷಾ ಬಂಧನ, ಸಹೋದರ ಮತ್ತು ಸಹೋದರಿಯ ನಡುವಿನ ಸುಂದರವಾದ ಬಾಂಧವ್ಯವನ್ನು ಆಚರಿಸುವ ದಿನ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ದಿನ ಅಥವಾ ಹುಣ್ಣಿಮೆಯ ದಿನದಂದು ರಾಖಿ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ, ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತದೆ. 
ದೃಕ್ಪಂಚಾಂಗ ಪ್ರಕಾರ, ನಿಮ್ಮ ಸಹೋದರನ ಮಣಿಕಟ್ಟಿಗೆ ರಾಖಿ ಕಟ್ಟಲು ಉತ್ತಮ ಸಮಯವು ಆಗಸ್ಟ್ 11ರ ಬೆಳಿಗ್ಗೆ 9.28ರಿಂದ ಪ್ರಾರಂಭವಾಗಲಿದೆ. ಅಮೃತ ಕಾಲವು ಸಂಜೆ 8.20ರವರೆಗೆ ಇರುತ್ತದೆ. ರಾಖಿ ಕಟ್ಟಲು ಉತ್ತಮ ಸಮಯ ಬೆಳಿಗ್ಗೆ 9:28 ರಿಂದ ರಾತ್ರಿ 9:14ರವರೆಗೆ ಇರುತ್ತದೆ. ಈ ದಿನ  ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುತ್ತಾರೆ ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ ಮತ್ತು ನಂತರದವರು ಅವರನ್ನು ಜೀವನಪರ್ಯಂತ ರಕ್ಷಿಸುವುದಾಗಿ ಭರವಸೆ ನೀಡುತ್ತಾರೆ.

ಅಕ್ಷತೆ, ಕುಂಕುಮ, ಚಂದನ, ಸಿಹಿತಿಂಡಿಗಳು, ತೆಂಗಿನಕಾಯಿ, ಸುಂದರವಾದ ರಾಖಿಗಳು, ದೀಪ ಮತ್ತು ಕಲಶಗಳೊಂದಿಗೆ ವಿಶೇಷ ರಕ್ಷಾ ಬಂಧನ ಥಾಲಿಯನ್ನು ಸಹೋದರಿಯರು ತಯಾರಿಸುತ್ತಾರೆ. ರಕ್ಷಾ ಬಂಧನಕ್ಕೆ ಒಂದು ದಿನ ಮುಂಚಿತವಾಗಿ, ಅನೇಕ ಹುಡುಗಿಯರು ಸುಂದರವಾದ ಮೆಹಂದಿ ವಿನ್ಯಾಸಗಳಿಂದ ತಮ್ಮ ಕೈಗಳನ್ನು ಅಲಂಕರಿಸುತ್ತಾರೆ. ರಕ್ಷಾ ಬಂಧನವನ್ನು ಆಚರಿಸಲು ಇತರ ಆಚರಣೆಗಳು, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಇಲ್ಲಿವೆ:

Tap to resize

Latest Videos

1. ಈ ದಿನ ಸಹೋದರಿಯರು ಮುಂಜಾನೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿದ ನಂತರ ಹಬ್ಬದ ತಯಾರಿ ಪ್ರಾರಂಭಿಸುತ್ತಾರೆ. ಅಗತ್ಯವಿರುವ ಎಲ್ಲ ಸಾಮಾಗ್ರಿಗಳೊಂದಿಗೆ ಪೂಜೆ ಥಾಲಿಯನ್ನು ತಯಾರಿಸಲಾಗುತ್ತದೆ ಮತ್ತು ದೀಪ ಬೆಳಗಿಸಲಾಗುತ್ತದೆ. ವಿವಾಹಿತ ಸಹೋದರಿಯರು ಸಾಮಾನ್ಯವಾಗಿ ರಕ್ಷಾ ಬಂಧನ ಆಚರಣೆಗಳನ್ನು ಮಾಡಲು ತಮ್ಮ ಸಹೋದರನ ಮನೆಗೆ ಭೇಟಿ ನೀಡುತ್ತಾರೆ.

2. ಆಚರಣೆಗಳನ್ನು ಪ್ರಾರಂಭಿಸಲು, ನಿಮ್ಮ ಸಹೋದರನನ್ನು ಮರದ ಚೌಕಿಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವಂತೆ ಹೇಳಿ. ನಿಮ್ಮ ಸಹೋದರನ ಹಣೆಯ ಮೇಲೆ ತಿಲಕವನ್ನು ಹಚ್ಚಿದ ನಂತರ, ಅವನ ಬಲಗೈ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಿ ಮತ್ತು ಅವನ ದೀರ್ಘಾಯುಷ್ಯವನ್ನು ಬಯಸಿ.

3. ರಾಖಿಯನ್ನು ಕಟ್ಟಿದ ನಂತರ ಆರತಿ ಮಾಡಿ. ಕಿರಿಯರು ತಮ್ಮ ಹಿರಿಯ ಸಹೋದರರ ಆಶೀರ್ವಾದವನ್ನು ಪಡೆಯಬಹುದು. ಅವರು ಥಾಲಿಯಿಂದ ಸಿಹಿ ಅಥವಾ ಮಿಠಾಯಿಯನ್ನು ಪರಸ್ಪರ ಹಂಚಿಕೊಂಡು ತಿನ್ನಬೇಕು.

ಮಂತ್ರಾಲಯ: ಇಂದಿನಿಂದ ರಾಯರ 351ನೇ ಆರಾಧಾನಾ ಮಹೋತ್ಸವ

4. ಇದರ ನಂತರ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡಿ ಆಕೆಯ ರಕ್ಷಣೆಯ ಪಣ ತೊಡಬೇಕು.

5. ಭದ್ರಾ ಸಮಯದಲ್ಲಿ ರಕ್ಷಾ ಬಂಧನ ಆಚರಣೆಗಳನ್ನು ಮಾಡಬಾರದು. ಭದ್ರಾ ಸಮಯವು ದುರುದ್ದೇಶಪೂರಿತ ಸಮಯವಾಗಿದ್ದು, ದೃಕ್ಪಂಚಾಂಗದ ಪ್ರಕಾರ ಎಲ್ಲಾ ಶುಭ ಕಾರ್ಯಗಳಿಗೆ ಇದನ್ನು ತಪ್ಪಿಸಬೇಕು.

6. ರಕ್ಷಾ ಬಂಧನ ಆಚರಣೆಗಳನ್ನು ಸೋಫಾ ಅಥವಾ ಕುರ್ಚಿಯ ಮೇಲೆ ಕುಳಿತು ಮಾಡಬಾರದು ಮತ್ತು ಸಂಪ್ರದಾಯದ ಪ್ರಕಾರ ಸಹೋದರನನ್ನು ಮರದ ಚೌಕಿಯ ಮೇಲೆ ಕೂರಿಸಬೇಕು. ಈ ದಿನ ಅಣ್ಣ ತಂಗಿ, ಅಕ್ಕ ತಮ್ಮಂದಿರು ಜಗಳವಾಡಬಾರದು. ಪರಸ್ಪರ ಕೆಟ್ಟ ಮಾತುಗಳನ್ನಾಡಿಕೊಳ್ಳಬಾರದು. ಇಬ್ಬರೂ ಪರಸ್ಪರರ ಶ್ರೇಯೋಭಿವೃದ್ಧಿ ಬಯಸಬೇಕು. 

ಸಹೋದರ ಸಾಯುವಂತೆ ಸಹೋದರಿಯ ಶಾಪ: ಭಾರತದ ಈ ರಾಜ್ಯದಲ್ಲಿದೆ ವಿಶಿಷ್ಟ ಸಂಪ್ರದಾಯ

7. ರಕ್ಷಾ ಬಂಧನದಂದು ರಾಖಿ ಕಟ್ಟಲು ಉತ್ತಮ ಸಮಯ ಅಪರಾಹ್ನದ ಸಮಯ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!