ಜೀವನದಲ್ಲಿ ಯಾವುದಾದರೂ ಸಮಸ್ಯೆ ಇದ್ದಾಗ ಅಥವಾ ದೊಡ್ಡ ಆಸೆಯೊಂದಿದ್ದಾಗ, ಭಕ್ತಿಯಿಂದ ಪ್ರತಿ ಸೋಮವಾರ ಹೀಗೆ ರುದ್ರಾಭಿಷೇಕ ಮಾಡಿ. ಫಲಿತಾಂಶ ನೀವೇ ನೋಡಿ.
ಹಿಂದೂಗಳು ಪೂಜೆ ನಡೆಸುವಾಗ ಅಭಿಷೇಕಕ್ಕೆ ಮಹತ್ವವಿದೆ. ಅಭಿಷೇಕವೆಂದರೆ ನೀರು, ಹಾಲು, ತುಪ್ಪ, ಮೊಸರು, ಜೇನುತುಪ್ಪ, ಅರಿಶಿನ, ಕುಂಕುಮದ ನೀರು ಎಲ್ಲವನ್ನೂ, ಇಲ್ಲದಿದ್ದರೆ ಯಾವೊಂದನ್ನಾದರೂ ದೇವರ ವಿಗ್ರಹದ ಮೇಲೆ ಹರಿಸಲಾಗುತ್ತದೆ. ಹೀಗೆ ಅಭಿಷೇಕ ನಡೆಸುವುದರಿಂದ ಬಹಳ ಒಳಿತಾಗುತ್ತದೆ. ಅದರಲ್ಲೂ ಶಿವನಿಗೆ ಅಭಿಷೇಕ, ವಿಶೇಷವಾಗಿ ಜಲಾಭಿಷೇಕವಿಷ್ಟ. ಶಿವಪುರಾಣದ ರುದ್ರಸಂಹಿತೆಯ ಪ್ರಕಾರ, ಮಹಾಶಿವರಾತ್ರಿ(Mahashivratri), ಮಾಸಿಕ ಪ್ರದೋಶ ವ್ರತ, ಮಾಸಿಕ ಶಿವರಾತ್ರಿ ಹಾಗೂ ಸೋಮವಾರಗಳಂದು ರುದ್ರಾಭಿಷೇಕ(Rudrabhishek)ವನ್ನು ತಪ್ಪದೇ ಮಾಡಿದರೆ, ಅದು ವಿಶೇಷವಾಗಿ ಫಲಪ್ರದವಾಗಲಿದೆ.
'ಸರ್ವದೇವಾತ್ಮಕೋ ರುದ್ರಃ ಸರ್ವೇ ದೇವಃ ಶಿವಾತ್ಮಕಾಃ' - ಅಂದರೆ ಎಲ್ಲ ದೇವರ ಆತ್ಮದಲ್ಲಿ ರುದ್ರನಿರುತ್ತಾನೆ. ಹಾಗೆಯೇ ಎಲ್ಲ ದೇವರೂ ಶಿವನ ಆತ್ಮವೇ ಆಗಿದ್ದಾರೆ. ಅಂದರೆ ಶಿವ ಎಲ್ಲ ದೇವರಿಗಿಂತ ಪರಮ ಶಕ್ತಿಶಾಲಿ. ಅವನನ್ನು ಒಲಿಸುವುದು ಸುಲಭ. ರುದ್ರಾಭಿಷೇಕವನ್ನು ಪ್ರತಿ ಸೋಮವಾರ ನಡೆಸುವುದರಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ. ಗರಿ ತಲುಪುವ ಹಾದಿ ಸುಗಮವಾಗುತ್ತದೆ, ಜೀವನದಲ್ಲಿ ನೆಮ್ಮದಿ, ಸಂತೋಷ, ಸಮೃದ್ಧಿ ಹೆಚ್ಚುತ್ತದೆ. ಏಕೆಂದರೆ, ಶಿವನನ್ನು ಒಲಿಸಲು ಇರುವ ಅತಿ ಪರಿಣಾಮಕಾರಿ ಮಾರ್ಗ ರುದ್ರಾಭಿಷೇಕವಾಗಿದೆ. ಮನೆಯಲ್ಲೇ ರುದ್ರಾಭಿಷೇಕ ಮಾಡುವಾಗ ಏನೆಲ್ಲ ವಿಷಯಗಳನ್ನು ಗಮನಿಸಬೇಕು, ಹೇಗೆ ಮಾಡಬೇಕು ಮುಂತಾದ ವಿವರಗಳನ್ನು
ಇಲ್ಲಿ ಕೊಡಲಾಗಿದೆ.
undefined
ಮನೆಯಲ್ಲೇ ರುದ್ರಾಭಿಷೇಕ(Shivling Abhishek) ಮಾಡುವುದು ಹೀಗೆ
ಮನೆಯಲ್ಲೇ ರುದ್ರಾಭಿಷೇಕ ಮಾಡಬೇಕೆಂದರೆ ಮೊದಲು ಪಂಚಲೋಹದ ಇಲ್ಲವೇ ಅಷ್ಟಲೋಹದ ಅದಲ್ಲದಿದ್ದರೆ ಕಂಚಿ(brass)ನಿಂದ ತಯಾರಿಸಿದ ಶಿವಲಿಂಗವನ್ನು ತಂದು ದೇವರ ಮನೆಯಲ್ಲಿಟ್ಟುಕೊಳ್ಳಿ.
ಸೋಮವಾರ ಬೆಳಗ್ಗೆ ಸ್ನಾನ ಮಾಡಿ ಬಂದು ಭಸ್ಮ ಧರಿಸಿ, ಹಣೆಗೆ ವಿಭೂತಿ ಇಟ್ಟುಕೊಂಡು ದೇವರ ಕೋಣೆಯಲ್ಲಿ ಮಣೆಯ ಮೇಲೆ ಕುಳಿತುಕೊಳ್ಳಿ.
ಪೀಠದ ಮೇಲೆ ಹಿತ್ತಾಳೆ ಅಥವಾ ತಾಮ್ರದ ತಟ್ಟೆಯನಿಟ್ಟು, ಅದರ ಮೇಲೆ ಶಿವಲಿಂಗವನ್ನು ಇರಿಸಿ. ನೀವು ಶಿವಲಿಂಗ(Lord Shiva)ದ ಮುಂದೆ ನಂದಿ ವಿಗ್ರಹವನ್ನು ಸಹ ಇರಿಸಬಹುದು. ಶಿವನ ಸವಾರಿಯಾದ ನಂದಿಗೆ ನಮಸ್ಕರಿಸುವುದು ಸಹ ಅಗತ್ಯವಾಗಿದೆ.
ನಂತರ ಎಣ್ಣೆಯ ದೀಪವನ್ನು ಹಚ್ಚಿಕೊಳ್ಳಿ.
Chanakya Niti: ನಿಮ್ಮ ಇಂಥ ನಡತೆಯಿಂದಾಗಿ ಕುಟಂಬಕ್ಕೇ ಶತ್ರುವಾದೀರಿ, ಹುಷಾರ್!
ಶಿವಲಿಂಗಕ್ಕೆ ನೀರ(water)ನ್ನು ಅರ್ಪಿಸುವ ಮೂಲಕ ಅಭಿಷೇಕವನ್ನು ಪ್ರಾರಂಭಿಸಿ. ಅಭಿಷೇಕ ಮಾಡಲು ಪಂಚಪಾತ್ರದ ಚಮಚವನ್ನು ಇಲ್ಲವೇ ಬೆಳ್ಳಿ ಅಥವಾ ಹಿತ್ತಾಳೆ ಚಮಚ ಬಳಸಬಹುದು. ಆದರೆ ಸ್ಟೀಲ್ ಪಾತ್ರೆಗಳನ್ನು(steel utensils) ಬಳಸಬೇಡಿ.
ಅಭಿಷೇಕ ಮಾಡುವಾಗ, 'ಓಂ ನಮಃ ಶಿವಾಯ'ವನ್ನು 108 ಬಾರಿ ಇಲ್ಲವೇ ಶಿವನ 108 ಹೆಸರುಗಳನ್ನು ಪಠಿಸಿ.
ನಂತರ ಶಿವಲಿಂಗಕ್ಕೆ ಹಸಿ ಹಾಲ(raw milk)ನ್ನು ಅರ್ಪಿಸಿ. ಅದರ ನಂತರ ಸ್ವಲ್ಪ ನೀರನ್ನು ಹಾಕಿ. ಶಿವಲಿಂಗವನ್ನು ಶುದ್ಧೀಕರಿಸಲು ಇದನ್ನು ಮಾಡಲಾಗುತ್ತದೆ.
ಇದಾದ ಬಳಿಕ ಮೊಸರ(yogurt)ನ್ನು ಶಿವಲಿಂಗದ ಮೇಲೆ ಚಮಚದ ಸಹಾಯದಿಂದ ಹಾಕಿ. ಮತ್ತೆ ಒಂದೆರಜು ಚಮಚ ನೀರನ್ನು ಹಾಕಿ.
ಬಳಿಕ ಶಿವಲಿಂಗಕ್ಕೆ ತುಪ್ಪ(ghee)ವನ್ನು ಅರ್ಪಿಸಿ, ತುಪ್ಪದಲ್ಲೇ ಮಿಂದೆದ್ದ ಶಿವನಿಗೆ ನೀರನ್ನು ಅರ್ಪಿಸಿ.
Vastu Tips : ಬೆಳ್ ಬೆಳ್ಗೆ ಇವನ್ನೆಲ್ಲ ನೋಡಿ ದಿನ ಹಾಳು ಮಾಡ್ಕೋಬೇಡಿ!
ಇದರ ನಂತರ ಜೇನುತುಪ್ಪ(honey)ವನ್ನು ಅರ್ಪಿಸಿ, ಮತ್ತೆ ನೀರನ್ನು ಅರ್ಪಿಸಿ.
ಇದರ ನಂತರ ನೀವು ಶ್ರೀಗಂಧ(sandalwood)ದ ಜೊತೆಗೆ ಜಲಾಭಿಷೇಕವನ್ನು ಸಹ ಮಾಡಬಹುದು.
ಈಗ ನೀವು ಪಂಚಾಮೃತ ಅಭಿಷೇಕವನ್ನು ಶಿವನಿಗೆ ನೆರವೇರಿಸಿದ್ದೀರಿ. ಜಲಾಭಿಷೇಕವೂ ಆಗಿದೆ. ಭಕ್ತಿಯಿಂದ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ಕೈಲಿ ಎತ್ತಿಕೊಂಡು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.
ಅಭಿಷೇಕದ ತಟ್ಟೆಯನ್ನು ತೆಗೆದುಹಾಕಿ ಮತ್ತು ಶಿವಲಿಂಗ ಮತ್ತು ನಂದಿಯನ್ನು ಮತ್ತೊಮ್ಮೆ ಪೀಠದ ಮೇಲೆ ಇರಿಸಿ.
ಶ್ರೀಗಂಧ, ಅಕ್ಷತೆ, ಧತುರ ಹೂವುಗಳು, ಬಿಲ್ವಪತ್ರೆ ಏರಿಸಿ.
ಹಣ್ಣುಗಳು, ಧೂಪದ್ರವ್ಯಗಳು ಮತ್ತು ತೆಂಗಿನ ಕಾಯಿಯನ್ನು ಅರ್ಪಿಸಿ. ಆರತಿ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ. ಬಳಿಕ ಮನದ ಬಯಕೆಯನ್ನು ಲಿಂಗದೆದುರು ನಿಂತು ನಿವೇದಿಸಿಕೊಳ್ಳಿ.