ಜಗತ್ತಿನಲ್ಲಿ ಎಲ್ಲರಿಗೂ ಅವರ ಕುಟುಂಬವೇ ಮೊದಲು. ಕುಟುಂಬದಲ್ಲಿ ಒಗ್ಗಟ್ಟು, ಪ್ರೀತಿ ಇದ್ದರೆ ಜಗತ್ತನ್ನೇ ಗೆಲ್ಲಬಹುದು. ಆದರೆ, ಕುಟುಂಬಸ್ಥರೇ ಶತ್ರುಗಳಂತೆ ವರ್ತಿಸಿದರೆ? ಕುಟುಂಬದಲ್ಲಿ ಒಬ್ಬ ಸದಸ್ಯ ದಾರಿ ತಪ್ಪಿದರೂ ಉಳಿದೆಲ್ಲರೂ ಅದರ ಅವಮಾನ, ನೋವನ್ನು ಅನುಭವಿಸಬೇಕು. ಆಗ ಆತ ಕುಟುಂಬಕ್ಕೇ ಶತ್ರುವಾಗಿ ಬದಲಾಗುತ್ತಾನೆ.
ಜೀವನದಲ್ಲಿ ಕೆಲವು ಸನ್ನಿವೇಶಗಳು ಕುಟುಂಬ ಸದಸ್ಯರನ್ನೇ ಶತ್ರುಗಳಾಗಿ ಬದಲಿಸಿ ಬಿಡುತ್ತವೆ. ಅಂಥ ಸಂದರ್ಭದಲ್ಲಿ ವ್ಯಕ್ತಿಯು ಅಸಹಾಯಕನಾಗುತ್ತಾನೆ. ತಾನಂದುಕೊಂಡಿದ್ದೇನನ್ನೂ ಮಾಡಲಾಗದೆ ಒದ್ದಾಡುತ್ತಾನೆ. ಕೆಲವೊಮ್ಮೆ ಇಂಥ ಸನ್ನಿವೇಶಗಳು ನಮ್ಮ ಕೈ ಮೀರಿ ಸೃಷ್ಟಿಯಾಗಬಹುದು. ಆದರೆ, ಬಹುತೇಕ ಬಾರಿ ಇಂಥದ್ದೊಂದು ಆಗಲು ನಾವೇ ಕಾರಣಕರ್ತರಾಗಿರುತ್ತೇವೆ. ನಮ್ಮ ಯಾವೆಲ್ಲ ತಪ್ಪುಗಳಿಂದಾಗಿ ಕುಟುಂಬ ಸದಸ್ಯರೇ ನಮ್ಮನ್ನು ಶತ್ರುಗಳಂತೆ ನೋಡುತ್ತಾರೆ ಎಂಬ ಬಗ್ಗೆ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ವಿಷಯಗಳನ್ನರಿತು, ಅಂಥ ತಪ್ಪುಗಳನ್ನು ಮಾಡದೆ ಇರೋಣ.
ಮಕ್ಕಳು(children) ಶತ್ರುಗಳಾಗುವುದು ಹೀಗೆ
ಮಕ್ಕಳು ಹೇಳಿದ ಮಾತು ಕೇಳುತ್ತಾರೆ, ಉತ್ತಮ ಗುಣದಲ್ಲಿ ಸಾಗುತ್ತಿದ್ದಾರೆ, ಅತ್ಯುತ್ತಮ ಶಿಕ್ಷಣ ಪಡೆದು ವಿನಯವಂತರಾಗಿ ತಮ್ಮ ಕರ್ತವ್ಯಗಳನ್ನು ಪಾಲಿಸುತ್ತಿದ್ದಾರೆ ಎಂದಾಗ ಅವರಂಥ ಆಸ್ತಿ ಪೋಷಕರಿಗೆ ಬೇರಿಲ್ಲ. ಅದೇ ಮಕ್ಕಳು ಕೆಟ್ಟವರ ಸಹವಾಸ(bad company) ಮಾಡಿ ಕೆಟ್ಟ ದಾರಿ ತುಳಿದರೆ, ಚಟಗಳನ್ನು ಮೈಗಂಟಿಸಿ(addiction)ಕೊಂಡರೆ, ಪೋಷಕರನ್ನು ಕಡೆಗಾಲದಲ್ಲಿ ಬೀದಿಗೆ ತಂದು ನಿಲ್ಲಿಸಿಯೋ, ವೃದ್ಧಾಶ್ರಮಕ್ಕೆ ಸೇರಿಸಿಯೋ ತನ್ನ ಬದುಕೊಂದೇ ಮುಖ್ಯ ಎಂಬ ಸ್ವಾರ್ಥ ತೋರಿದಾಗ ಅದೇ ಮಕ್ಕಳೇ ಶತ್ರುಗಳಾಗಿ ಬಿಡುತ್ತಾರೆ. ಬೇರೆಲ್ಲ ವೈರಿಗಳಿಗಿಂತ ಹೆಚ್ಚು ನೋವು ಕೊಡುತ್ತಾರೆ.
ಸಾಲಗಾರ ತಂದೆ(Father)
ತಂದೆ ಎಂದರೆ ಮನೆಯ ಯಜಮಾನ. ಮಕ್ಕಳನ್ನು ಎಲ್ಲ ಆಪತ್ತುಗಳಿಂದ ರಕ್ಷಿಸುವವ, ಜಗತ್ತಲ್ಲಿ ಹೇಗೆ ವ್ಯವಹರಿಸಬೇಕೆಂದು ಹೇಳಿಕೊಡುವವ. ಆದರೆ, ಯಾವಾಗ ಈ ತಂದೆ ಎನಿಸಿಕೊಂಡವನು ಮಕ್ಕಳ ಜವಾಬ್ದಾರಿ ತನ್ನದಲ್ಲ ಎಂಬಂತೆ ವರ್ತಿಸುತ್ತಾನೋ, ಅಥವಾ ಚಟಗಳ ದಾಸನಾಗುತ್ತಾನೋ ಇಲ್ಲವೇ ದುಡಿಮೆ ಬಿಟ್ಟು ಸೋಮಾರಿಯಾಗಿ ಮನೆಯಲ್ಲಿ ಎಲ್ಲರಿಗೂ ಭಾರವಾಗಿರುತ್ತಾನೋ, ಇದ್ಯಾವುದೂ ಇಲ್ಲದಿದ್ದರೆ ಸಿಕ್ಕಾಪಟ್ಟೆ ಸಾಲ(debt) ಮಾಡಿ ಆ ಸಾಲದ ಹೊರೆಯನ್ನು ಮಕ್ಕಳ ತಲೆಗೆ ದಾಟಿಸುತ್ತಾನೋ - ಅಂಥ ತಂದೆ ಮಕ್ಕಳ ಪಾಲಿಗೆ ಶತ್ರುವಾಗಿರುತ್ತಾನೆ.
Vastu Tips : ಬೆಳ್ ಬೆಳ್ಗೆ ಇವನ್ನೆಲ್ಲ ನೋಡಿ ದಿನ ಹಾಳು ಮಾಡ್ಕೋಬೇಡಿ!
ಪತ್ನಿ(wife)ಯ ಅನೈತಿಕ ಸಂಬಂಧ
ಅತ್ಯಂತ ಚಾಣಾಕ್ಷೆಯಾದ ಸುಶಿಕ್ಷಿತ ಸಂಸಾರವಂತೆ ಪತ್ನಿಯಾಗಿ ಸಕ್ಕರೆ ಆ ಪತಿ ನಿಜಕ್ಕೂ ಅದೃಷ್ಟವಂತನೇ ಆಗಿರಬೇಕು. ಪತ್ನಿಯಾದವಳು ಇಡೀ ಮನೆಯ ಚುಕ್ಕಾಣಿ ಹಿಡಿದು ಅದನ್ನು ಸರಿಯಾದ ಪಥದಲ್ಲಿ ನಡೆಸುವವಳಾಗಬೇಕು. ಅದು ಬಿಟ್ಟು ಆಕೆ ಮತ್ತೊಬ್ಬನ ಮೇಲೆ ಆಕರ್ಷಿತಳಾಗಿ, ಅನೈತಿಕ ದಾರಿ ತುಳಿದರೆ,- ಆಗ ಆಕೆ ಪತಿ, ಮಕ್ಕಳು ಹಾಗೂ ಕುಟುಂಬಕ್ಕೇ ಶತ್ರುವಾಗಿ ಬಿಡುತ್ತಾಳೆ. ಇದರಿಂದ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ.
ತಾಯಿ(Mother)ಯ ಬೇಧಭಾವ
ತಾಯಿಯ ಪ್ರೀತಿ ಜಗತ್ತಿನಲ್ಲಿ ಅತಿ ದೊಡ್ಡದೆನಿಸಿಕೊಂಡಿದೆ. ತಾಯಿಯೊಬ್ಬಳ ಬಲವಿದ್ದರೆ ಮಕ್ಕಳು ಏನು ಬೇಕಾದರೂ ಸಾಧಿಸಿಯಾರು. ಅವರನ್ನು ಸರಿಯಾದ ಪಥದಲ್ಲಿ ನಡೆಸಬೇಕಾದವಳು ಆಕೆ. ಆದರೆ, ಈ ತಾಯಿಯೇ ತನ್ನ ಮಕ್ಕಳ ನಡುವೆ ಬೇಧಭಾವ ತೋರಿ ಬೆಳೆಸಿದರೆ, ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಿದರೆ ಆಗ ಆಕೆಯೇ ಮಕ್ಕಳ ಅತಿ ದೊಡ್ಡ ಶತ್ರುವಾಗುತ್ತಾಳೆ.
Virgo Personality traits: ಪರಿಪೂರ್ಣತೆ, ರಚನಾತ್ಮಕತೆ- ಇದು ಕನ್ಯಾ ರಾಶಿಯ ಸ್ವಭಾವ
ಪತಿಯ ಅನೈತಿಕತೆ
ಪ್ರೀತಿ, ಗೌರವ, ಕಾಳಜಿ ತೋರುವ ಪತಿ ಇದ್ದರೆ ಪತ್ನಿಯ ಸುಖ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದರೆ, ಪತಿ ಬೇರೆ ಹೆಣ್ಣಿನೊಂದಿಗೆ ಸಂಬಂಧ ಬೆಳೆಸಿದರೆ ಅಥವಾ ಕೆಟ್ಟ ಗೆಳೆಯರ ಸಹವಾಸದಿಂದ ಜೂಜು, ಕುಡಿತ ಮುಂತಾದ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ, ಸುಳ್ಳಿನ ಅರಮನೆಯನ್ನೇ ಕಟ್ಟಿ ಅಲ್ಲಿ ಪತ್ನಿಯನ್ನಿಟ್ಟಿದ್ದರೆ, ಅಂಥ ಪತಿ ಪತ್ನಿಯ ಪಾಲಿಗೆ ಶತ್ರುವೇ ಆಗಿರುತ್ತಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.