Latest Videos

ಭಾನುವಾರ, ಏಕಾದಶಿ ದಿನ ತುಳಸಿಗೆ ನೀರು ಹಾಕಬಾರದು, ಏಕೆ ಗೊತ್ತಾ?

By Suvarna NewsFirst Published Jun 6, 2022, 5:21 PM IST
Highlights

ತುಳಸಿಯು ಪವಿತ್ರವಾದ ಸಸ್ಯವಾಗಿದ್ದು. ಎಲ್ಲರ ಮನೆಮುಂದೆಯೂ ತುಳಸಿ ಗಿಡವನ್ನು ಕಾಣಬಹುದಾಗಿದೆ. ತುಳಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರೆ ತುಳಸಿ ಗಿಡಕ್ಕೆ ಭಾನುವಾರ ಮತ್ತು ಏಕಾದಶಿಯಂದು ನೀರು ಹಾಕಬಾರದು. ಹಾಗೆ ನೀರು ಹಾಕುವುದರಿಂದ ಆಗುವ ತೊಂದರೆ ಮತ್ತು ಅದಕ್ಕೆ ಇರುವ ಕಾರಣವೇನು ಎಂಬುದನ್ನು ತಿಳಿಯೋಣ...

ತುಳಸಿ ಗಿಡಕ್ಕೆ (Tulsi plant) ಅತ್ಯಂತ ಪವಿತ್ರವಾದ ಸ್ಥಾನವಿದೆ. ಮನೆಯ ಎದುರಿಗೆ ತುಳಸಿಯನ್ನು ನೆಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿಯ (Positive energy) ಹರಿವು ಹೆಚ್ಚುವುದಲ್ಲದೇ, ಮನೆಯಲ್ಲಿ ನೆಮ್ಮದಿ ಮತ್ತು ಸುಖ- ಸಮೃದ್ಧಿ ನೆಲೆಸುತ್ತದೆ. ತುಳಸಿ ಗಿಡದಲ್ಲಿ ಮಹಾಲಕ್ಷ್ಮೀ (Goddess Lakshmi) ವಾಸವಿರುತ್ತಾಳೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ತುಳಸಿ ಇರುವ ಮನೆಯು ಶ್ರೀ ಮಹಾ ವಿಷ್ಣುವಿನ ಕೃಪೆಗೆ ಪಾತ್ರವಾಗಿರುತ್ತದೆ.

ತುಳಸಿ ಗಿಡವನ್ನು ಜೌಷಧೀಯ ಗುಣವನ್ನು ಹೊಂದಿರುವ ಪ್ರಮುಖವಾದ ಸಸ್ಯ ಸಹ ಆಗಿದೆ. ಈ ಗಿಡಕ್ಕೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ (Vastu Shastra) ಹೆಚ್ಚಿನ ಮಹತ್ವವನ್ನು ನೀಡಿರುವುದಲ್ಲದೆ, ಈ ಸಸ್ಯದ ಬಗ್ಗೆ ಇನ್ನೂ ಹಲವು ವಿಷಯಗಳನ್ನು ತಿಳಿಸಿದೆ. ಪುರಾಣ ಕಾಲದಿಂದಲೂ ತುಳಸಿ ಗಿಡವನ್ನು ಪೋಷಿಸುವುದು, ಅದಕ್ಕೆ ನೀರೆರೆಯುವುದು (Watering) ಮತ್ತು ನಿತ್ಯ ತುಳಸಿದೇವಿಯನ್ನು ಪೂಜಿಸುವುದು ರೂಢಿಯಲ್ಲಿದೆ. ಅಷ್ಟೇ ಅಲ್ಲದೆ, ಶಾಸ್ತ್ರ ಹೇಳುವ ಪ್ರಕಾರ ಭಾನುವಾರ (Sunday) ಮತ್ತು ಏಕಾದಶಿಯಂದು (Ekadashi) ತುಳಸಿ ಗಿಡಕ್ಕೆ ನೀರು ಹಾಕುವುದು ನಿಷಿದ್ಧವಾಗಿದೆ. ಹಾಗೊಮ್ಮೆ ಆ ದಿನಗಳಂದು ತುಳಸಿಗೆ ನೀರು ಹಾಕಿದರೆ ಗಿಡಕ್ಕೆ ಹಾನಿಯಾಗುತ್ತದೆ. ಜೊತೆಗೆ ಮನೆಗೂ ಮತ್ತು ಮನೆಯವರಿಗೂ ಸಮಸ್ಯೆ (Problem) ಉಂಟಾಗುತ್ತದೆ.  ಹಾಗಾಗಿ ತುಳಸಿ ಗಿಡಕ್ಕೆ ಭಾನುವಾರ ಮತ್ತು ಏಕಾದಶಿಯಂದು ನೀರು ಹಾಕಬಾರದು ಏಕೆ...? ಎಂಬುದನ್ನು ತಿಳಿಯೋಣ...

ಭಾನುವಾರ ತುಳಸಿಗೆ ನೀರು ಹಾಕಬಾರದು...
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಪವಿತ್ರ (Auspicious) ಎಂದು ಪರಿಗಣಿಸುವದಲ್ಲದೆ, ಅದಕ್ಕೆ ನಿತ್ಯವೂ ನೀರೆರೆದು ಪೂಜೆ ಸಲ್ಲಿಸುತ್ತಾರೆ. ಇದರಿಂದ ಇಷ್ಟಾರ್ಥ ಸಿದ್ಧಿಸುವುದಲ್ಲದೆ.. ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಯಾವುದೇ ಕೆಟ್ಟ ಶಕ್ತಿಗಳು (Bad effects) ಮನೆಯನ್ನು ಪ್ರವೇಶಿಸುವುದಿಲ್ಲ. ಹಾಗಾಗಿ ಮನೆಯ ಮುಖ್ಯ ದ್ವಾರದ ಬಳಿ ತುಳಸಿ ಗಿಡವನ್ನು ನೆಟ್ಟು, ಪ್ರತಿ ನಿತ್ಯ ನೀರು ಹಾಕುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ತುಳಸಿ ಗಿಡಕ್ಕೆ ಭಾನುವಾರ ನೀರನ್ನು ಹಾಕಬಾರದು ಎಂದು ಶಾಸ್ತ್ರ ಉಲ್ಲೇಖಿಸುತ್ತದೆ. ಭಾನುವಾರದಂದು ಲಕ್ಮೀದೇವಿಯು, ಮಹಾವಿಷ್ಣುವಿಗಾಗಿ ಉಪವಾಸ ವ್ರತವನ್ನು ಆಚರಿಸುತ್ತಾಳೆ. ಹಾಗಾಗಿ ಆ ದಿನ ತುಳಸಿಗೆ ನೀರು ಹಾಕಿದರೆ ಅದು ಲಕ್ಮೀದೇವಿಯ ಉಪವಾಸಕ್ಕೆ ಭಂಗ ತಂದ ಹಾಗಾಗುತ್ತದೆ. ಹಾಗಾಗಿ ಭಾನುವಾರ ತುಳಸಿಗೆ ನೀರು ಹಾಕಬಾರದು.

ಅಷ್ಟೇ ಅಲ್ಲದೆ ಭಾನುವಾರ ತುಳಸಿ ಗಿಡಕ್ಕೆ ನೀರನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಯ (Negative) ವಾಸ ಮನೆಯಲ್ಲಿ ಆಗುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುವುದಲ್ಲದೇ, ಲಕ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಏಕಾದಶಿಯಂದು ನೀರು ಹಾಕುವುದು ನಿಷಿದ್ಧ
ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿ ದೇವಿ ಮತ್ತು ಶಾಲಿಗ್ರಾಮದ (Shaligrama) ವಿವಾಹವು (Marriage) ಏಕಾದಶಿಯಂದೇ ಆಗಿತ್ತು. ಶಾಲಿಗ್ರಾಮವು ವಿಷ್ಣುವಿನ ಸ್ವರೂಪವೇ ಆಗಿದೆ. ಹಾಗಾಗಿ ಆ ದಿನ ತುಳಸಿ ದೇವಿಯು ಉಪವಾಸ ವ್ರತವನ್ನು ಆಚರಿಸುವ ಕಾರಣಕ್ಕೆ ತುಳಸಿಗೆ ನೀರು ಹಾಕುವುದು ನಿಷಿದ್ಧವಾಗಿದೆ. ಅಷ್ಟೇ ಅಲ್ಲದೆ ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಹಾಕಿದರೆ (Watering), ಗಿಡ ಒಣಗಲು ಆರಂಭಿಸುತ್ತದೆ.

ಇದನ್ನು ಓದಿ: ಲಕ್ಷ್ಮೀ ದೇವಿಯ ಈ ಫೋಟೋಗಳು ಮನೆಯಲ್ಲಿ ಬೇಡ!

ಸಮೃದ್ಧಿ (Prosperity) ತರುವ ತುಳಸಿಯನ್ನು ನೆಡುವುದು ಎಲ್ಲಿ?
• ತುಳಸಿಯನ್ನು ಉತ್ತರ (North), ಪೂರ್ವ (East) ಅಥವಾ ಈಶಾನ್ಯ (North - east) ದಿಕ್ಕಿನಲ್ಲಿ (Direction) ನೆಡಬೇಕು.
• ಸೂರ್ಯನ ಬೆಳಕು ಚೆನ್ನಾಗಿ ಬರುವಂಥ ಜಾಗದಲ್ಲಿರಬೇಕು.
• ತುಳಸಿ ಗಿಡವಿರುವ ಜಾಗದ ಸುತ್ತ ಮುತ್ತಲೂ ಶುಚಿಯಾಗಿರುವಂತೆ (Clean) ನೋಡಿಕೊಳ್ಳಬೇಕು.
• ಡಸ್ಟ್‌ಬಿನ್, ಶೂಗಳು, ಪೊರಕೆಗಳನ್ನು ತುಳಸಿ ಗಿಡದ ಬಳಿ ಇಡಬಾರದು.
• ಕ್ಯಾಕ್ಟಸ್ ಮತ್ತು ಮುಳ್ಳಿನ ಗಿಡದ (Thorny plants) ಬಳಿ ಸಹ ತುಳಸಿ ಗಿಡವನ್ನು ಇಡಬಾರದು. ಹೀಗೆ ಇಡುವುದರಿಂದ ಇದು ನಕಾರಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದೃಷ್ಟವನ್ನು ನಾಶ ಪಡಿಸುತ್ತದೆ. 
• ತುಳಸಿಯನ್ನು ಬೆಸ ಸಂಖ್ಯೆಯ (Odd number) ಲೆಕ್ಕದಲ್ಲಿ ನೆಡಬೇಕು ಅಂದರೆ, ಒಂದು, ಮೂರು, ಐದು ಹೀಗೆ...

ಇದನ್ನು ಓದಿ: ಮನೆಯಲ್ಲಿ ಶಿವಲಿಂಗವಿದ್ದರೆ ಈ ತಪ್ಪನ್ನೆಲ್ಲಾ ಮಾಡಬೇಡಿ..

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಡೆದುಕೊಂಡರೆ ತುಳಸಿಯಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಪ್ರವಹಿಸುತ್ತದೆ.

click me!