Astro Remedy: ಭೂ ವಿವಾದ ಬಗೆಹರಿಯಲು ಈ ಪರಿಹಾರ ಕೈಗೊಳ್ಳಿ..

By Suvarna News  |  First Published Jun 6, 2022, 3:53 PM IST

ನಿಮ್ಮ ಸ್ವಂತ ಮನೆಯಾಗಲಿ, ಪೂರ್ವಜರ ಭೂಮಿ ವಿವಾದವಾಗಲಿ ಅಥವಾ ಭೂಮಿಯನ್ನು ಕಳೆದುಕೊಳ್ಳುವ ಭಯವಾಗಲಿ, ಪ್ರತಿ ಸಮಸ್ಯೆಗೆ ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ನಿಮ್ಮದೂ ಲ್ಯಾಂಡ್ ಡಿಸ್ಪ್ಯೂಟ್ ಇದ್ದರೆ ಈ ಕ್ರಮಗಳನ್ನು ಅನುಸರಿಸಿ.


ಹೊತ್ತು ಹೊತ್ತಿಗೆ ಆಹಾರ, ಮೈ ಮುಚ್ಚಲು ಬಟ್ಟೆ, ವಾಸಿಸಲು ಮನೆ- ಪ್ರತಿಯೊಬ್ಬ ಮನುಷ್ಯನ ದೈನಂದಿನ ಜೀವನದಲ್ಲಿ 3 ಮೂಲಭೂತ ಅವಶ್ಯಕತೆಗಳಿವು. ಪ್ರತಿ ವ್ಯಕ್ತಿಯ ದೊಡ್ಡ ಆಸೆ ಎಂದರೆ ಸ್ವಂತ ಮನೆಯದು. ಅದಕ್ಕಾಗಿ ಆತ ಹಗಲಿರುಳೂ ದುಡಿದು, ಸಣ್ಣಪುಟ್ಟ ಆಸೆಗಳನ್ನು ಕಟ್ಟಿಟ್ಟು ಹಣ ಉಳಿಸುತ್ತಾನೆ. ಆದರೆ, ಬಹಳಷ್ಟು ಬಾರಿ ಆಸ್ತಿ ವಿವಾದ, ಭೂಮಿ ವಿವಾದ, ಪೂರ್ವಜರ ಸ್ವತ್ತು ವರ್ಗಾವಣೆಯ ಸಂಕಷ್ಟದಲ್ಲಿ ಬಳಲುತ್ತಾರೆ. ಅದು ಹಕ್ಕಿನ ಪ್ರಕಾರ ತನಗೇ ಸೇರಿದ್ದಾದರೂ ಅದನ್ನು ಪಡೆಯಲು ಸಾಕಷ್ಟು ಒದ್ದಾಡಬೇಕಾಗುತ್ತದೆ. ಅದು ಕೈ ತಪ್ಪಿ ಹೋಗುವ ಆತಂಕಕ್ಕೆ ಸಾಕಷ್ಟು ರಾತ್ರಿಯ ನಿದ್ದೆಗೆಡಬೇಕಾಗುತ್ತದೆ. ಈ ಹೋರಾಟವು ವ್ಯಕ್ತಿಯನ್ನು ಮಾನಸಿಕವಾಗಿ, ದೈಹಿಕವಾಗಿ ದಣಿಸುತ್ತದೆ. ಆತ ಹತಾಶನಾಗುತ್ತಾನೆ. ಈ ವಾದ ವಿವಾದ ಮುಗಿಯದೆ ತಾನು ಸ್ವಂತ ಮನೆ ಹೊಂದುವುದು ಸಾಧ್ಯವಿಲ್ಲ ಎಂಬುದು ಅವನನ್ನು ಸಾಕಷ್ಟು ಕಾಡುತ್ತದೆ. ಈ ತೊಂದರೆಯಿಂದ ಹೊರಬರುವುದು ಅಥವಾ ಅದನ್ನು ತೊಡೆದುಹಾಕುವುದು ಹೇಗೆ ಎಂದು ಚಿಂತಿಸುತ್ತಾನೆ. 

ನೀವು ಸಹ ಇಂಥ ತೊಂದರೆಗೆ ಸಿಲುಕಿದ್ದರೆ, ಶಾಸ್ತ್ರಗಳಲ್ಲಿ ಬರೆದಿರುವ ಕೆಲವು ಪರಿಹಾರಗಳಿಂದ, ಇಂಥ ಸಮಸ್ಯೆಗಳನ್ನು ನಿವಾರಿಸಬಹುದು. ಹಿಂದೂ ಧರ್ಮಗ್ರಂಥಗಳಲ್ಲಿ, ಮನೆ ಮತ್ತು ಭೂಮಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಅವನ್ನು ಪ್ರಯತ್ನಿಸುವ ಮೂಲಕ ನೀವು ಒತ್ತಡ ಮುಕ್ತ ಮತ್ತು ಶಾಂತಿಯುತ ಜೀವನದತ್ತ ದಾಪುಗಾಲಿಡಬಹುದು. 

Tap to resize

Latest Videos

ದುರ್ಗಾ ಮಾತೆಯ ಆರಾಧನೆ(Worship of Maa Durga)
ಜಮೀನು-ಮನೆಗೆ ಸಂಬಂಧಿಸಿದ ವಿಚಾರದಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರಲಾಗದೆ, ಗೊಂದಲದಲ್ಲಿದ್ದರೆ ದುರ್ಗೆಯನ್ನು ಪೂಜಿಸಿ. ದುರ್ಗೆಯ ಬಳಿ ಮನದಾಳದ ಮಾತನ್ನು ಹೇಳಿದರೆ, ಅಂಬೆಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ನೀವು ತಾಯಿ ದುರ್ಗೆಯನ್ನು ಪೂಜಿಸುವ ಜೊತೆಗೆ ಪ್ರತಿದನ 'ಓಂ ಹ್ಲೀಂ ಕ್ಲಿಂ ಚಾಮುಂಡೈ ಛಾಯೇ ನಮಃ' ಎಂದು ಪಠಿಸಬೇಕು. ಇದರಿಂದ ಶೀಘ್ರ ನೀವು ಎದುರಿಸುತ್ತಿರುವ ಭೂ ವಿವಾದ ಇತ್ಯರ್ಥವಾಗುತ್ತದೆ. 

ಈ ರತ್ನಗಳನ್ನು ತಪ್ಪಿಯೂ ಜೊತೆಯಾಗಿ ಧರಿಸಬೇಡಿ!

ಹಸುವಿಗೆ ಬೆಲ್ಲ ತಿನ್ನಿಸುವುದು(Feeding jaggery to a cow)
ಸನಾತನ ಧರ್ಮದಲ್ಲಿ ಗೋವಿಗೆ ಮಾತೃ ಸ್ಥಾನವನ್ನು ನೀಡಲಾಗಿದ್ದು, ಗೋವಿನ ಸೇವೆಯ ಫಲ ಸದಾ ಉತ್ತಮವಾಗಿರುತ್ತದೆ. ಜಮೀನು ಮತ್ತು ಮನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಮತ್ತು ವಿವಾದವು ಬಗೆಹರಿಯದಿದ್ದರೆ, ಅಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಪ್ರತಿ ಗುರುವಾರ ಅಥವಾ ಶುಕ್ರವಾರ ಅಥವಾ ವಾರದ ಎರಡು ದಿನ ರೊಟ್ಟಿ ಅಥವಾ ಚಪಾತಿಯಲ್ಲಿ ಬೆಲ್ಲವನ್ನು ಇಟ್ಟು ಹಸುವಿಗೆ ತಿನ್ನಿಸಿ. 

ಆಂಜನೇಯ(Hanuman Ji)
ಆಂಜನೇಯನನ್ನು ಹಿಂದೂ ಗ್ರಂಥಗಳಲ್ಲಿ ಸಂಕಟಮೋಚನ ಎಂದು ಕರೆಯಲಾಗುತ್ತದೆ. ಆತ ಎಲ್ಲ ತೊಂದರೆಗಳನ್ನು ನಿವಾರಿಸುವವನು. ಭಕ್ತರಿಗೆ ಬೇಗ ಒಲಿಯುವವನು. ಪ್ರತಿ ಮಂಗಳವಾರ ಸಂಜೆ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆತನ ಮುಂದೆ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ. ನಂತರ ಹನುಮಾನ್ ಚಾಲೀಸಾವನ್ನು ಪಠಿಸಿ, ನೀವು ಆತನಿಗೆ ಸಿಂಧೂರವನ್ನು ಅರ್ಪಿಸುವುದು ಕೂಡಾ ಒಳ್ಳೆಯದು. ಅಲ್ಲದೆ, ಆಂಜನೇಯನಿಗೆ ಲಡ್ಡುಗಳನ್ನು ಅರ್ಪಿಸಿ, ಉಳಿದವನ್ನು ಬಡವರಿಗೆ ಹಂಚಿ.

Vastu Remedies 2022: ಈ ವಿಗ್ರಹ ಮನೆಯಲ್ಲಿದ್ರೆ ಬಯಸಿದ್ದೆಲ್ಲ ಸಿದ್ದಿಸುತ್ತೆ!

ಅನ್ನದಾನ(Food donation)
ಅನ್ನದಾನವನ್ನು ಮಹಾದಾನ ಎನ್ನಲಾಗುತ್ತದೆ. ಮಹಾಭಾರತದಲ್ಲಿ ಕರ್ಣನು ಬಡವರಿಗೆ ಅನ್ನ, ಬಟ್ಟೆ ಮತ್ತು ಇತರ ವಸ್ತುಗಳನ್ನು ದಾನ ಮಾಡುತ್ತಿದ್ದರಿಂದ ಆತನನ್ನು ದಾನಶೂರ ಎಂದು ಕರೆಯಲಾಗುತ್ತದೆ. ವಿವಾದ ಮತ್ತು ಭೂಮಿಯ ಸ್ವಾಧೀನದಂತಹ ಪರಿಸ್ಥಿತಿಯು ನಿಯಂತ್ರಣದಲ್ಲಿಲ್ಲದಿದ್ದರೆ, ಪ್ರತಿ ದಿನ ನಿರ್ಗತಿಕರಿಗೆ ಅನ್ನದಾನ ಮಾಡಿ. ವಿಶೇಷವಾಗಿ ಶುಕ್ರವಾರದಂದು ಬಡವರಿಗೆ ಆಹಾರವನ್ನು ನೀಡಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರವನ್ನು ನೀಡಬಹುದು. ಹೀಗೆ ಮಾಡುವುದರಿಂದ ಆ ಜನರ ತೃಪ್ತಿಯ ಆಶೀರ್ವಾದವನ್ನು ಅನುಭವಿಸುವಿರಿ ಮತ್ತು ನಿಮ್ಮ ಸಮಸ್ಯೆಗಳೂ ಕಡಿಮೆಯಾಗುತ್ತವೆ.

click me!