Astrology Tips : ಗಂಡ ಮನೆಯಿಂದ ಹೊರ ಹೋದ ತಕ್ಷಣ ಇವೆಲ್ಲಾ ಮಾಡ್ಬೇಡಿ

Published : May 24, 2022, 05:20 PM IST
Astrology Tips : ಗಂಡ ಮನೆಯಿಂದ ಹೊರ ಹೋದ ತಕ್ಷಣ ಇವೆಲ್ಲಾ ಮಾಡ್ಬೇಡಿ

ಸಾರಾಂಶ

ಜ್ಯೋತಿಷ್ಯ ಶಾಸ್ತ್ರದಲ್ಲಿ ದಿನ ನಿತ್ಯದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಪತಿ – ಪತ್ನಿ ಸಂತೋಷದಿಂದ ಹಿಡಿದು, ಆಯಸ್ಸು ವೃದ್ಧಿಗೆ ಏನ್ಮಾಡ್ಬೇಕು ಎಂಬುದನ್ನೂ ಹೇಳಲಾಗಿದೆ. ಅನೇಕ ಬಾರಿ ನಿತ್ಯ ಕೆಲಸದಲ್ಲಿ ತಿಳಿಯದೆ ಮಹಿಳೆಯರು ಮಾಡುವ ತಪ್ಪುಗಳು ಪತಿ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಅದೇನು ಗೊತ್ತಾ?  

ಪ್ರತಿಯೊಬ್ಬ ಮಹಿಳೆ (Woman) ಯೂ ತನ್ನ ಕುಟುಂಬ (Family) ದ ಸುಖ (Happy) – ಶಾಂತಿಯನ್ನು ಬಯಸ್ತಾಳೆ. ಮಕ್ಕಳು, ಕುಟುಂಬಸ್ಥರ ಜೊತೆಗೆ ಪತಿ (Husband) ಯ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾ (Health) ಗಿ ದೇವರ (God) ನ್ನು ಪ್ರಾರ್ಥಿಸುತ್ತಾಳೆ. ಅನೇಕ ಮಹಿಳೆಯರು ಪತಿಯ ಆಯಸ್ಸು ವೃದ್ಧಿಯಾಗ್ಲಿ, ಸದಾ ಆರೋಗ್ಯವಿರಲಿ, ಆರ್ಥಿಕ ಸ್ಥಿತಿ ಸುಧಾರಿಸಲಿ ಎನ್ನುವ ಕಾರಣಕ್ಕೆ ಉಪವಾಸ ಮಾಡ್ತಾರೆ. ದೇವರಿಗೆ ವಿಶೇಷ ಹರಕೆಗಳನ್ನು ಹೊತ್ತುಕೊಂಡು ವೃತ ಮಾಡ್ತಾರೆ. ಶಾಸ್ತ್ರದಲ್ಲಿ ಬರೀ ಉಪವಾಸ, ವೃತ,ಪೂಜೆ ಬಗ್ಗೆ ಮಾತ್ರವಲ್ಲ ಕೆಲ ಕೆಲಸಗಳ ಬಗ್ಗೆಯೂ ಹೇಳಲಾಗಿದೆ. ಪತ್ನಿಯಾದವಳು ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡಬಾರದು. ಆಕೆ ಮಾಡುವ ತಪ್ಪಿನಿಂದ ಅಶುಭ ಘಟನೆಗಳು ನಡೆಯುತ್ತವೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಪತಿ ಮನೆಯಿಂದ ಹೊರಗೆ ಹೋಗುವಾಗ ಅಥವಾ ಹೊರಟ ವೇಳೆ ಕೆಲವೊಂದು ಕೆಲಸ ಮಾಡದಂತೆ ಹಿರಿಯರು ತಡೆಯುತ್ತಾರೆ. ಆ ಕೆಲಸಗಳು ಗಂಡನ ವಯಸ್ಸು ಮತ್ತು ಅವನ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ನಂಬಲಾಗಿದೆ. ಇಂದು, ಪತ್ನಿಯಾದವಳು ಪತಿ ಮನೆಯಿಂದ ಹೊರಗೆ ಹೋಗುವ ವೇಳೆ ಏನು ಮಾಡ್ಬಾರದು ಎಂಬುದನ್ನು ನಾವು ಹೇಳ್ತೇವೆ. 

ಪತಿ ಮನೆಯಿಂದ ಹೊರ ನಡೆಯುವ ವೇಳೆ ಅಥವಾ ಹೊರ ಹೋದ್ಮೇಲೆ ಈ ಕೆಲಸ ಮಾಡ್ಬೇಡಿ : 
ತಲೆ ಸ್ನಾನ (Head bath) :
ಪತಿಯು ಕೆಲಸದ ಮೇಲೆ ಮನೆಯಿಂದ ಹೊರಗೆ ಹೋದಾಗ ಪತ್ನಿಯಾದವಳು ತಲೆ ಸ್ನಾನ ಮಾಡಬಾರದು ಎಂಬ ನಂಬಿಕೆಯಿದೆ. ಹಾಗೆ ತಲೆ ಕೂದಲನ್ನು ಹರಡಿಕೊಂಡು ಮನೆಯ ಕಸವನ್ನು ತೆಗೆಯಬಾರದು ಎನ್ನಲಾಗುತ್ತದೆ. ಹೀಗೆ ಮಾಡಿದರೆ  ಇದು ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ.  ಹಾಗಾಗಿ ಪತಿ ಮನೆಯಿಂದ ಹೊರಗೆ ಹೋಗುವ  ಸಂದರ್ಭದಲ್ಲಿ ತಲೆ ಕೂದಲನ್ನು ಬಿಚ್ಚಿ, ಪೊರಕೆಯಲ್ಲಿ ಮನೆ ಸ್ವಚ್ಛಗೊಳಿಸಬೇಡಿ.

ಎಣ್ಣೆ ಬಳಕೆ (Using Oil) : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪತಿ ಮನೆಯಿಂದ ಹೊರ ಹೋದ ತಕ್ಷಣ ಪತ್ನಿಯಾದವಳು ತನ್ನ ದೇಹಕ್ಕೆ ಎಣ್ಣೆ ಹಚ್ಚಬಾರದು. ಹಾಗೆಯೇ ತನ್ನ ಕೂದಲಿಗೂ ಎಣ್ಣೆ ಹಚ್ಚಬಾರದು. ಹಾಗೆ ಮಾಡುವುದು ಒಳ್ಳೆಯದಲ್ಲ. ಮಹಿಳೆ ಹೀಗೆ ಮಾಡಿದರೆ ಗಂಡನ ವಯಸ್ಸು ಕಡಿಮೆಯಾಗುತ್ತದೆ. ಪತಿ ಹೋದ ಕೆಲವು ಗಂಟೆಗಳ ನಂತರ ತಲೆಗೆ ಎಣ್ಣೆ ಹಚ್ಚಬಹುದು.

ಮನೆಯ ಸ್ವಚ್ಛತೆ (Cleaning House) : ಪತಿ ಮನೆಯಿಂದ ಹೊರಗೆ ಹೋದ ತಕ್ಷಣ, ಮನೆಗೆಲ್ಲ ನೀರು ಹಾಕಿ ಸ್ವಚ್ಛಗೊಳಿಸಬೇಡಿ. ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಶವ ತೆಗೆದುಕೊಂಡು ಹೋದ ತಕ್ಷಣ ಮನೆ ಸ್ವಚ್ಛಗೊಳಿಸಲಾಗುತ್ತದೆ. ಇದು ಅಶುಭ ಸಂಕೇತ. ಆದ ಕಾರಣ, ಪತಿ ಮನೆಯಿಂದ ಹೊರ ಹೋದ ತಕ್ಷಣ, ಮನೆಗೆ ನೀರು ಹಾಕಿ, ಮನೆಯನ್ನು ಸ್ವಚ್ಛಗೊಳಿಸಬಾರದು.  

ಸ್ವಪ್ನದಲ್ಲಿ ಬಿಳಿ ಪ್ರಾಣಿ ಕಂಡವರೇ ಲಕ್ಕಿ!
 
ಒದ್ದೆಯಾದ ಕೂದಲಿಗೆ ಕುಂಕುಮ ಇಡ್ಬೇಡಿ : ಸ್ನಾನ ಮಾಡಿದ ನಂತ್ರ ಮಹಿಳೆಯರು ಮೇಲಿನ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ತಾರೆ. ತಲೆ ಸ್ನಾನ ಮಾಡಿದಾಗಲೂ ಅನೇಕರು ಕುಂಕುಮ ಇಟ್ಟುಕೊಳ್ತಾರೆ. ಆದ್ರೆ ಕೂದಲು ಒದ್ದೆಯಾಗಿರುವ ಕಾರಣ ಕುಂಕುಮ ಹರಿಯುವ ಸಾಧ್ಯತೆಯಿರುತ್ತದೆ. ಕುಂಕುಮ ಹರಿಯುವುದು ಶುಭ ಸಂಕೇತವಲ್ಲ. ಇದು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಕೂದಲು ಸರಿಯಾಗಿ ಒಣಗಿದ ನಂತರವೇ ಕುಂಕುಮವನ್ನು ಹಚ್ಚಿಕೊಳ್ಳಿ. 

ಬಳೆ,ಉಂಗುರ, ತಾಳಿ – ಬಿಂದಿ : ಬಳೆ,ತಾಳಿ, ಬಿಂದಿಯನ್ನು ಸೌಭಾಗ್ಯದ ಸಂಕೇತ ಎನ್ನಲಾಗುತ್ತದೆ. ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಬಳೆ, ಬಿಂದಿ, ಉಂಗುರ ಅಥವಾ ಮಾಂಗಲ್ಯ ಸರವನ್ನು ತೆಗೆಯಬಾರದು. ಇದ್ರ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ವಿವಾಹಿತ ಮಹಿಳೆಯರು ಇದನ್ನು ಮಾಡುವುದು ಒಳ್ಳೆಯದಲ್ಲ. ಪತಿಯ ಜೀವನದಲ್ಲಿ ಸಮಸ್ಯೆ ಕಾಡಲು ಇದು ಕಾರಣವಾಗುತ್ತದೆ.

ಚಪ್ಪಲಿ ಕಳುವಾದ್ರೆ ಖುಷಿ ಪಡಿ
 

PREV
Read more Articles on
click me!

Recommended Stories

2026 ರಲ್ಲಿ ಶನಿಯ ಧನ ರಾಜಯೋಗ, ಈ 40 ದಿನ ಈ 3 ರಾಶಿಗೆ ಕರೆನ್ಸಿ, ನೋಟು ಮಳೆ
ಈ ರಾಶಿಗೆ ತೊಂದರೆ ಹೆಚ್ಚಾಗಬಹುದು, ರಾಹು ಕಾಟದಿಂದ ಉದ್ಯೋಗ, ವ್ಯವಹಾರದ ಮೇಲೆ ಪರಿಣಾಮ