ಚಪ್ಪಲಿ ಕಳುವಾದ್ರೆ ಖುಷಿ ಪಡಿ, ಕಾರಣ ಇಲ್ನೋಡಿ!

Published : May 24, 2022, 01:26 PM IST
ಚಪ್ಪಲಿ ಕಳುವಾದ್ರೆ ಖುಷಿ ಪಡಿ, ಕಾರಣ ಇಲ್ನೋಡಿ!

ಸಾರಾಂಶ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾದರಕ್ಷೆ ಕಳವು ಆಗುವುದು ಶುಭ. ಇದಕ್ಕೆ ವಿವರಣೆಗಳೇನು ನೋಡೋಣ. 

ನಮಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಯಾವುದೇ ರೀತಿಯ ಕಳ್ಳತನವೂ ಅಶುಭ(inauspecious)ವೆಂದೇ ನೋಡಲಾಗುತ್ತದೆ. ಆದರೆ ಇದಕ್ಕೊಂದು ಅಪವಾದವೆಂದರೆ ಚಪ್ಪಲಿ(footware) ಕಳುವು. ಹೌದು, ಜ್ಯೋತಿಷ್ಯದಲ್ಲಿ ಚಪ್ಪಲಿ, ಶೂ ಕಳೆದುಕೊಂಡರೆ ಮಂಗಳಕರ(auspecious)ವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಈ ಕಳುವು ಶನಿವಾರದಂದೇ ಆದರೆ ಮತ್ತೂ ಶುಭವೆನ್ನಲಾಗುತ್ತದೆ. ಇದಕ್ಕೆ ಕಾರಣವೇನು ನೋಡೋಣ. 

ಕಳ್ಳತನವು ನಿಮ್ಮ ಹಣದ ನಷ್ಟವನ್ನು ಸೂಚಿಸುತ್ತದೆಯಾದರೂ, ಶೂಗಳು ಮತ್ತು ಚಪ್ಪಲಿಗಳ ಕಳ್ಳತನ ಮಂಗಳಕರ. ಹೌದು, ಈಗೀಗ ಶೂ, ಚಪ್ಪಲಿಗಳಿಗೂ ಸಾವಿರಾರು ರೂಪಾಯಿ ಖರ್ಚು ಮಾಡಿರುತ್ತೇವೆ. ಹಾಗಿದ್ದೂ, ಅವು ಕಳುವಾದಾಗ ಬೇಸರ ಪಡುವ ಅಗತ್ಯವಿಲ್ಲ. ಅದರಲ್ಲೂ ಶನಿವಾರದಂದು ಚರ್ಮದ ಬೂಟುಗಳು ಕದ್ದಿದ್ದರೆ, ಅದಕ್ಕಾಗಿ ನೀವು ಕುಣಿದು ಕುಪ್ಪಳಿಸಬೇಕು. ಇಷ್ಟಕ್ಕೂ ಪಾದರಕ್ಷೆ, ಚಪ್ಪಲಿ ಕಳವು ಮಾಡುವುದರಿಂದ ಆಗುವ ಜ್ಯೋತಿಷ್ಯದ ಲಾಭ ತಿಳಿದವರು ತಮ್ಮ ಪಾದುಕೆ, ಚಪ್ಪಲಿಯನ್ನು ಶನಿದೇವರ ದೇವಸ್ಥಾನಗಳಲ್ಲಿ ಬಿಡುತ್ತಾರೆ.

ಶನಿವಾರ(Saturday) ಪಾದರಕ್ಷೆ ಕದ್ದರೆ, ಚರ್ಮದ ಬೂಟುಗಳನ್ನು ಕದ್ದರೆ ತಮ್ಮ ಎಲ್ಲ ಸಮಸ್ಯೆಗಳು ಕದ್ದವನೊಂದಿಗೆ ಹೋಗುತ್ತವೆ ಎಂದು ನಂಬಲಾಗಿದೆ. ವಾಸ್ತವದಲ್ಲಿ ಈ ನಂಬಿಕೆಯು ಜ್ಯೋತಿಷ್ಯ(Astrology)ದ ಆಧಾರದ ಮೇಲೆ ಪ್ರಚಲಿತವಾಗಿದೆ. ಜ್ಯೋತಿಷ್ಯದಲ್ಲಿ, ಶನಿಗ್ರಹ(Saturn)ವನ್ನು ಕ್ರೂರ ಮತ್ತು ಕಠಿಣ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ಒಬ್ಬ ವ್ಯಕ್ತಿಗೆ ಅಹಿತಕರ ಫಲಿತಾಂಶಗಳನ್ನು ನೀಡಿದಾಗ, ಅವನು ಅವನಿಂದ ಕಠಿಣ ಕೆಲಸವನ್ನು ಮಾಡಿಸುತ್ತಾನೆ ಮತ್ತು ನಾಮಮಾತ್ರದ ಪ್ರತಿಫಲವನ್ನು ನೀಡುತ್ತಾನೆ. ಜಾತಕ(horoscope)ದಲ್ಲಿ ಸದಾಶತಿ ಅಥವಾ ಶನಿ ದಯ್ಯಾ ಇರುವವರು ಅಥವಾ ಶನಿ ಸಾಡೇಸಾತಿ ನಡೆಯುತ್ತಿರುವವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

Vastu Tips: ಹಾಲು ಉಕ್ಕುವುದು ಶುಭ ಶಕುನವೋ ಅಪಶಕುನವೋ?

ಶನಿ ಕಾಟದಿಂದ ಮುಕ್ತಿ
ಜ್ಯೋತಿಷ್ಯದ ಪ್ರಕಾರ, ಶನಿಯು ದೇಹದ ಕೆಳಭಾಗಕ್ಕೆ, ವಿಶೇಷವಾಗಿ ಪಾದಗಳ ಜೊತೆ ಸಂಬಂಧ ಹೊಂದಿದ್ದಾನೆ. ಶೂ ಮತ್ತು ಚಪ್ಪಲಿಯೊಂದಿಗೆ ಶನಿ ಮತ್ತು ರಾಹು(Shani and Rahu)ವಿಗೆ ಸಂಬಂಧವಿದೆ. ಶನಿ ಮತ್ತು ರಾಹು ಉತ್ತಮ ಸ್ಥಾನದಲ್ಲಿದ್ದವರು, ಪಾದರಕ್ಷೆ ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. 

ಶನಿವಾರ ಶನಿಯ ದಿನ. ನಮ್ಮ ದೇಹದ ಅಂಗಾಂಗಗಳೂ ಗ್ರಹಗಳ ಪ್ರಭಾವಕ್ಕೆ ಒಳಗಾಗುತ್ತವೆ. ಶನಿಯು ಚರ್ಮ(Skin), ಕೂದಲು ಮತ್ತು ಪಾದಗಳಿಗೆ ಸಂಬಂಧಿಸಿದ ವಿಷಯ ನಿಯಂತ್ರಿಸುತ್ತಾನೆ. ಶನಿಗೆ ಪಾದ ಮತ್ತು ಚರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಅನೇಕ ಶುಭ ಫಲಗಳು ಲಭಿಸುತ್ತವೆ ಮತ್ತು ಪಾದ ಮತ್ತು ಚರ್ಮ ಸಂಬಂಧಿ ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ.

ಹಾಗಾಗಿ ಶನಿವಾರದಂದು ಚರ್ಮದ ಬೂಟುಗಳನ್ನು ಯಾರಾದರೂ ಕದ್ದರೆ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ನಾವು ಪರಿಗಣಿಸಬೇಕು. ಶನಿಯು ಇನ್ನು ಮುಂದೆ ತೊಂದರೆ ಕೊಡುವುದಿಲ್ಲ. ಶನಿದೇವರ ದೇವಸ್ಥಾನಗಳಲ್ಲಿ ಪಾದರಕ್ಷೆ ಬಿಡುವುದರಿಂದ ಶನಿಯ ಬಾಧೆಗಳು ಕಡಿಮೆಯಾಗುತ್ತವೆ.

ಶನಿವಾರದಂದು ಬೂಟುಗಳು ಮತ್ತು ಚಪ್ಪಲಿಗಳು ಕಳ್ಳತನವಾದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಬೇಕು. ಮತ್ತು ಪಾದರಕ್ಷೆಗಳೊಂದಿಗೆ ನಿಮ್ಮ ಸಮಸ್ಯೆಗಳು ಸಹ ದೂರ ಹೋಗಿವೆ ಎಂದು ಅರ್ಥ ಮಾಡಿಕೊಳ್ಳಬೇಕು.

ಈ ನಾಲ್ಕು ರಾಶಿಯವರು ಅತ್ಯುತ್ತಮ ಪ್ರೇಮಿಯಾಗಬಲ್ಲರು!

ಎಕ್ಸ್ಟಾ ಟಿಪ್ಸ್
ಅಂದ ಹಾಗೆ, ಮಂಗಳವಾರ(Tueday), ಶನಿವಾರ(Saturday) ಮತ್ತು ಗ್ರಹಣದ ದಿನಗಳಲ್ಲಿ ಎಂದಿಗೂ ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬೇಡಿ. ಅಮಾವಾಸ್ಯೆ(New moon day)ಯ ದಿನ ಪಾದರಕ್ಷೆಗಳನ್ನು ಖರೀದಿಸುವ ತಪ್ಪನ್ನು ಮಾಡಬೇಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ