love rejection: ಪ್ರೀತಿಯ ತಿರಸ್ಕಾರವನ್ನು ಯಾವ ರಾಶಿಯವರು ಹೇಗೆ ಎದುರಿಸುತ್ತಾರೆ?

Published : Jan 18, 2022, 03:47 PM IST
love rejection: ಪ್ರೀತಿಯ ತಿರಸ್ಕಾರವನ್ನು ಯಾವ ರಾಶಿಯವರು ಹೇಗೆ ಎದುರಿಸುತ್ತಾರೆ?

ಸಾರಾಂಶ

ಒಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಂಡು ಅದಕ್ಕೆ ನಕಾರಾತ್ಮಕ ಉತ್ತರ ಬಂದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅವರ ರಾಶಿಯ ಆಧಾರದ ಮೇಲೆ ಗ್ರಹಿಸಬಹುದು. 

ಪ್ರೇಮಿಗಳ ದಿನ ಇನ್ನೇನು ಹತ್ತಿರ ಬಂದೇ ಬಿಡ್ತು. ಪ್ರೇಮ ನಿವೇದನೆಗಳು, ವಿವಾಹಕ್ಕೆ ನಿವೇದನೆಗಳನ್ನು ಮಾಡೋಕೆ ಸಾಕಷ್ಟು ಯುವಕ, ಯುವತಿಯರು ಈಗಾಗ್ಲೇ ತಯಾರಿ ಮಾಡಿಕೊಳ್ತಿರ್ತಾರೆ. ಹೇಗೆ ಮಾಡಿದ್ರೆ ಒಪ್ಪಿಕೊಳ್ಬೋದು ಎಂಬ ಯೋಜನೆ ರೂಪಿಸ್ತಿರ್ತಾರೆ. ಬಹಳಷ್ಟು ಜನರಿಗೆ ಈ ನಿರೀಕ್ಷೆಗಳು ಇರುತ್ತವೆ. ತಮ್ಮನ್ನು ಮತ್ತೊಬ್ಬರು ಇಷ್ಟ ಪಡುತ್ತಿದ್ದಾರೆ ಎಂಬುದು ಮನಸ್ಸಿಗೆ ಗೊತ್ತಾಗ್ತಾ ಇರುತ್ತೆ. ಆದ್ರೆ ಅವರಿಗಿಷ್ಟ ಇಲ್ದೆ ಇರುವಾಗ ಅದನ್ನು ಹೇಳಿದ್ರೆ ಹೇಗೆ ಪ್ರತಿಕ್ರಿಯಿಸ್ತಾರೋ ಅನ್ನೋ ಭಯ ಕಾಡುತ್ತಿರುತ್ತೆ. ಇಂಥವರಿಗೆ ಸಹಾಯ ಆಗ್ಲಿ ಅಂತಾನೇ ರಾಶಿ ಪ್ರಕಾರ, ಯಾವ ರಾಶಿಯವರು ಲವ್ ರಿಜೆಕ್ಷನ್‌ನ ಹೇಗೆ ತಗೊಳ್ತಾರೆ ಅನ್ನೋದನ್ನು ಇಲ್ಲಿ ಕೊಡ್ತಾ ಇದೀವಿ. 

ಮೇಷ(Aries): ಮೇಷ ರಾಶಿಯವರನ್ನು ಯಾರಾದರೂ ತಿರಸ್ಕರಿಸಿದಾಗ ಅವರು ಅಷ್ಟು ಬೇಗ ಸೋಲೊಪ್ಪಿಕೊಳ್ಳುವುದಿಲ್ಲ. ಸಮಾಧಾನವಾಗಿದ್ದು, ತಾಳ್ಮೆಯಿಂದ ಇನ್ನಷ್ಟು ಸಮಯ ಕಾಯಲು ಯೋಚಿಸುತ್ತಾರೆ. ಸಮಯ ಕೊಟ್ಟರೆ ಎಲ್ಲ ಸರಿ ಹೋಗುವ ಭರವಸೆ ಇಟ್ಟುಕೊಳ್ಳುತ್ತಾರೆ. 

ವೃಷಭ(Taurus): ತಮ್ಮನ್ನು ತಿರಸ್ಕರಿಸಿದವರಿಗೆ ತಮ್ಮನ್ನು ಪಡೆದುಕೊಳ್ಳುವ ಅರ್ಹತೆ ಇಲ್ಲ ಎಂದುಕೊಂಡು ಜೀವನದಲ್ಲಿ ಇನ್ನೂ ಉತ್ತಮವಾದದ್ದು ತಮಗೆ ಸಿಗಲಿದೆ ಎಂದು ಎದುರು ನೋಡುತ್ತಾರೆ. 

ಮಿಥುನ(Gemini): ಇವರ ಭಾವನೆಗಳು ಬೇಗ ಮುದುಡಿ ಬಿಡುತ್ತವೆ. ರಿಜೆಕ್ಷನ್ ಒಪ್ಪಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಪ್ರೀತಿಯ ತಿರಸ್ಕಾರವನ್ನು ಸ್ವಲ್ಪ ಹೆಚ್ಚೇ ಮನಸ್ಸಿಗೆ ಹಚ್ಚಿಕೊಳ್ಳುವ ಇವರು, ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. 

ಕಟಕ(Cancer): ಕಟಕ ರಾಶಿಯವರು ಪ್ರೇಮ ತಿರಸ್ಕಾರವನ್ನು ಬಹಳ ನಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಇಲ್ಲಿಗೇ ಬದುಕೇ ಮುಗಿಯಿತು ಎಂಬಂತೆ ಭರವಸೆ ಕಳೆದುಕೊಳ್ಳುತ್ತಾರೆ. ಭವಿಷ್ಯದಲ್ಲಿ ಸಾಧಿಸಬೇಕಾದ ಗುರಿಗಳೆಲ್ಲ ಅರ್ಥಹೀನವಾಗಿ ಕಾಣಿಸಲಾರಂಭಿಸುತ್ತದೆ. 

Zodiac Signs: ನಿಮ್ಮ ಹುಡುಗನಿಗೆ ಸ್ವಲ್ಪವೂ ಸಹಿಸಲಾಗದ ವಿಷಯವಿದು..

ಸಿಂಹ(Leo): ತಾವು ಇಷ್ಟ ಪಟ್ಟವರಿಗೆ ಆಯ್ಕೆ ಮಾಡಲೇ ಬರುವುದಿಲ್ಲ, ಹಾಗಾಗಿಯೇ ತನ್ನನ್ನು ತಿರಸ್ಕರಿಸಿದರು ಎಂದು ಭಾವಿಸುತ್ತಾರೆ. ತನ್ನ ಸಾಧನೆಗಳನ್ನು ಗೌರವಿಸದ ವ್ಯಕ್ತಿ ತನಗೂ ಬೇಡ ಎಂದು ಸಮಾಧಾನ ತಂದುಕೊಳ್ಳುತ್ತಾರೆ. 

ಕನ್ಯಾ(Virgo): ಇವರು ತಮ್ಮ ಪ್ರೇಮ ತಿರಸ್ಕಾರಗೊಂಡಿದ್ದು ಒಳ್ಳೆಯದೇ ಆಯಿತೆಂದುಕೊಳ್ಳಲು ಸಾಕಷ್ಟು ಕಾರಣಗಳನ್ನು ಹುಡುಕುತ್ತಾರೆ. ತಿರಸ್ಕಾರದ ನೋವಿನಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. 

ತುಲಾ(Libra): ಇವರನ್ನು ಪ್ರೀತಿಯಲ್ಲಿ ಯಾರಾದರೂ ತಿರಸ್ಕರಿಸಿದರೆ, ತಮ್ಮನ್ನು ತಿರಸ್ಕರಿಸಿದವರು ಹೊಟ್ಟೆ ಉರಿದುಕೊಳ್ಳುವಷ್ಟು ಬೆಳೆಯಬೇಕು ಎಂದು ಕೆಲಸಕ್ಕೆ ಹೆಚ್ಚಿನ ಶ್ರಮ ಹಾಕಲು ಶುರು ಮಾಡುತ್ತಾರೆ. ಮನಸ್ಸಿನಲ್ಲಿ ನೋವಿದ್ದರೂ ಅದಕ್ಕೆ ಛಲದ ಮುಲಾಮ್ ಹಚ್ಚುತ್ತಾರೆ. 

ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

ವೃಶ್ಚಿಕ(Scorpio): ಇವರಿಂದ ಪ್ರೇಮ ತಿರಸ್ಕಾರ ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಯಶಸ್ಸು ಸಿಗುವವರೆಗೂ ಮತ್ತೆ ಮತ್ತೆ ತಾವು ಪ್ರೀತಿಸಿದವರ ಹಿಂದೆ ದುಂಬಾಲು ಬೀಳುತ್ತಾರೆ. 

ಧನುಸ್ಸು(Sagittarius): ಇವರು ಇದೇ ತಮ್ಮ ಹಣೆಬರಹವಾಗಿದ್ದರೆ ಏನು ಮಾಡಲಾಗುತ್ತದೆ ಎಂದುಕೊಂಡು ಬದುಕಿನಲ್ಲಿ ಯಶಸ್ಸು ಕಾಣುವತ್ತ ಗಮನ ಹರಿಸುತ್ತಾರೆ. 

ಮಕರ(Capricorn): ಇವರನ್ನು ಯಾರಾದರೂ ತಿರಸ್ಕರಿಸಿದರೆ, ಇದಕ್ಕಿಂತ ಉತ್ತಮವಾದುದು ತಮಗಾಗಿ ಕಾದಿರಬೇಕು, ಅದಕ್ಕೇ ಹೀಗಾಗಿದೆ ಎಂದುಕೊಳ್ಳುತ್ತಾರೆ. 

ಕುಂಭ(Aquarius): ಪ್ರತಿಯೊಂದು ತಿರಸ್ಕಾರವೂ ತಮ್ಮ ಬದುಕಿಗೆ ಅನುಭವದ ಪಾಠ ಕೊಡಲು ಆಗುತ್ತದೆ ಎಂದು ನಂಬುತ್ತಾರೆ. ಇದನ್ನು ಪಾಸಿಟಿವ್ ಆಗಿ ನೋಡಿ, ಪ್ರೀತಿಸದವರನ್ನೇ ಇಷ್ಟು ಪ್ರೀತಿಸುವ ತಾನು, ಇನ್ನು ಪ್ರೀತಿಸುವವರು ಸಿಕ್ಕರೆ ಎಷ್ಟು ಪ್ರೀತಿಸಬಹುದು ಎಂದುಕೊಂಡು ಮುನ್ನಡೆಯ ಬಯಸುತ್ತಾರೆ. 

ಮೀನ(Pisces): ಆ ವ್ಯಕ್ತಿ ತನಗೆ ಸರಿಯಾದವರಾಗಿಲ್ಲದ ಕಾರಣದಿಂದಲೇ ತನ್ನನ್ನು ಒಪ್ಪಿಲ್ಲ. ಅವರಿಂದ ತನಗೆ ಸಂತೋಷ ಸಿಗುತ್ತಲೂ ಇರಲಿಲ್ಲ ಎಂದುಕೊಳ್ಳುವ ಮೀನ ರಾಶಿಯವರು ಶಾಂತಿಯನ್ನು ಅರಸಲು ಶುರು ಮಾಡುತ್ತಾರೆ. 

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ