ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ಒಳ್ಳೆಯದು ಎಂಬುದು ಬಹುತೇಕರಿಗೆ ತಿಳಿದಿದೆ. ಕೆಲವರು ನಿತ್ಯ ಈ ಸಮಯದಲ್ಲಿ ಎದ್ದು ಕೆಲಸ ಶುರು ಮಾಡ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಜನರು ಆ ಸಮಯದಲ್ಲಿ ಏನೆಲ್ಲ ಮಾಡ್ಬಾರದು ಎಂಬುದನ್ನು ಕೂಡ ತಿಳಿದಿರಬೇಕು.
ಬ್ರಹ್ಮ ಮುಹೂರ್ತ ಅಂದ್ರೆ ಜ್ಞಾನದ ಸಮಯ. ಬ್ರಹ್ಮ ಅಂದ್ರೆ ಜ್ಞಾನ. ಮುಹೂರ್ತ ಅಂದ್ರೆ ಸಮಯ ಎಂದಾಗುತ್ತದೆ. ಜ್ಞಾನದ ಅವಧಿ ಅಥವಾ ಸಮಯಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಬ್ರಹ್ಮ ಮುಹೂರ್ತದಲ್ಲಿ ಪ್ರತಿ ದಿನ ಏಳಬೇಕು ಎಂದು ಹಿರಿಯರು ಹೇಳೋದನ್ನು ನೀವು ಕೇಳಿರಬಹುದು.
ಶಾಸ್ತ್ರಗಳಲ್ಲಿ ಬ್ರಹ್ಮ ಮುಹೂರ್ತ (Brahma Muhurta) ದ ಸಮಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಲ್ಲಿ ಜನರು ಮತ್ತು ಋಷಿಮುನಿಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ದೇವರನ್ನು ಪೂಜಿಸುತ್ತಿದ್ದರು. ಅನೇಕರ ಮನೆಯಲ್ಲಿ ಈಗ್ಲೂ ಹಿರಿಯರು ಬ್ರಹ್ಮ ಮುಹೂರ್ತದಲ್ಲಿ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ ದೇವರ ಪೂಜೆ (Worship), ಪ್ರಾರ್ಥನೆ, ಧ್ಯಾನದಲ್ಲಿ ನಿರತರಾಗ್ತಾರೆ. ಬ್ರಹ್ಮ ಮುಹೂರ್ತವನ್ನು ಕೆಲ ಕಾರ್ಯಗಳಿಗೆ ಅತ್ಯುತ್ತಮವೆಂದು ಕರೆಯಲಾಗುತ್ತದೆ. ಬ್ರಹ್ಮ ಮುಹೂರ್ತವನ್ನು ಧರ್ಮಗ್ರಂಥಗಳ ದೃಷ್ಟಿಕೋನದಿಂದ ಮಾತ್ರವಲ್ಲದೆ ಆಯುರ್ವೇದ (Ayurveda) ಮತ್ತು ಆಧುನಿಕ ವೈದ್ಯಕೀಯದಲ್ಲಿಯೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಸೂರ್ಯನ ಉದಯಿಸುವ ಒಂದೂವರೆ ಗಂಟೆ ಮೊದಲ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನಲಾಗುತ್ತದೆ. ಇದಕ್ಕೆ ನಿರ್ದಿಷ್ಟ ಸಮಯವಿಲ್ಲ. ಪ್ರತಿ ದಿನ ಸೂರ್ಯ ಉದಯಿಸುವು ಸಮಯದ ಆಧಾರದ ಮೇಲೆ ಬ್ರಹ್ಮ ಮುಹೂರ್ತ ನಿರ್ಧಾರವಾಗುತ್ತದೆ. ಈ ಬ್ರಹ್ಮ ಮುಹೂರ್ತವನ್ನು ಬ್ರಾಹ್ಮಿ ಮುಹೂರ್ತ ಎಂದೂ ಕರೆಯಲಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಆತನು ರೋಗಗಳಿಂದ ಮುಕ್ತನಾಗುತ್ತಾನೆ. ಆತನ ವಯಸ್ಸು ಹೆಚ್ಚಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಕೆಲ ಕೆಲಸಗಳನ್ನು ಅಗತ್ಯವಾಗಿ ಮಾಡ್ಬೇಕು. ಆದ್ರೆ ಕೆಲ ಕೆಲಸವನ್ನು ಎಂದಿಗೂ ಮಾಡ್ಬಾರದು.
BUDHADITYA YOG: 3 ರಾಶಿಗೆ ಧನಬಲ, ಬಯಸಿದ್ದೆಲ್ಲ ಎಟುಕುವ ಭಾಗ್ಯ
ಬ್ರಹ್ಮ ಮುಹೂರ್ತದಲ್ಲಿ ಮಾಡ್ಬೇಡಿ ಈ ಕೆಲಸ
ಯಾವುದೇ ನಕಾರಾತ್ಮಕ ಆಲೋಚನೆ ಬೇಡ : ಬ್ರಾಹ್ಮಿ ಮುಹೂರ್ತದಲ್ಲಿ ವ್ಯಕ್ತಿಯ ಮೆದುಳು ಜಾಗೃತವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ನೀವು ರೂಪಿಸಬಹುದು. ಆದ್ರೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ಬರದಂತೆ ನೋಡಿಕೊಳ್ಳಬೇಕು. ನೀವು ಈ ಸಮಯದಲ್ಲಿ ನಕಾರಾತ್ಮಕ ಆಲೋಚನೆ ಮಾಡಿದ್ರೆ ಇಡೀ ದಿನ ನಿಮ್ಮ ಮನಸ್ಸು ಉದ್ವಿಗ್ನಗೊಳ್ಳುತ್ತದೆ. ಮಾನಸಿಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಶಾರೀರಿಕ ಸಂಬಂಧ (Physical Contact) ಬೆಳೆಸಬೇಡಿ : ಬ್ರಹ್ಮ ಮುಹೂರ್ತವನ್ನು ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯವನ್ನು ದೇವರ ಪೂಜೆ, ಆರಾಧನೆ, ಪ್ರಾರ್ಥನೆಗೆ ಮೀಸಲಿಡಲಾಗಿದೆ. ಈ ಸಮಯದಲ್ಲಿ ಅಪ್ಪಿತಪ್ಪಿಯೂ ಶಾರೀರಿಕ ಸಂಬಂಧ ಬೆಳೆಸಬಾರದು. ಆಯುರ್ವೇದದಲ್ಲೂ ಈ ಸಮಯದಲ್ಲಿ ಸಂಭೋಗ ಬೆಳೆಸುವುದನ್ನು ನಿಷೇಧಿಸಲಾಗಿದೆ. ಇದ್ರಿಂದ ದೇಹ ರೋಗಕ್ಕೆ ತುತ್ತಾಗುತ್ತದೆ, ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ದುರ್ಯೋಧನನ ಏಕೈಕ ಸಹೋದರಿಯ ಪತಿ ಅರ್ಜುನನಿಂದ ಮಡಿದ! ಯಾರಾತ?
ಬ್ರಹ್ಮ ಮುಹೂರ್ತದಲ್ಲಿ ಆಹಾರ (Food) ಸೇವಿಸ್ಬೇಡಿ : ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಆಹಾರ ಸೇವನೆ ಮಾಡ್ತಾರೆ. ಟೀ ಕುಡಿಯುತ್ತಾರೆ. ಆಯುರ್ವೇದದ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಅದ್ರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಆಹಾರ ಸೇವನೆ ಮಾಡೋದು ನಿಷಿದ್ಧ. ಇದ್ರಿಂದ ಅನೇಕ ರೋಗ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಬ್ರಹ್ಮ ಮುಹೂರ್ತದಲ್ಲಿ ಏಳುವುದ್ರಿಂದ ಆಗುವ ಲಾಭವೇನು ಗೊತ್ತಾ? :
• ಧಾರ್ಮಿಕ ನಂಬಿಕೆಯ ಪ್ರಕಾರ, ಈ ಸಮಯದಲ್ಲಿ ದೇವಾನುದೇವತೆಗಳು, ಪೂರ್ವಜರು ಮನೆಗೆ ಬರುವ ಕಾರಣ ಮನೆಯಲ್ಲಿ ಪ್ರಗತಿಯಾಗುತ್ತದೆ.
• ಬ್ರಹ್ಮ ಮುಹೂರ್ತದಲ್ಲಿ ಇಡೀ ಪರಿಸರ ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಇದು ನಮಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಜೀವನದಲ್ಲಿ ಉತ್ಸಾಹ ಹೆಚ್ಚಾಗುತ್ತದೆ.
• ಬ್ರಹ್ಮ ಮುಹೂರ್ತದಲ್ಲಿ ಏಳುವ ವ್ಯಕ್ತಿ ಸದಾ ಸಂತೋಷದಿಂದಿರುತ್ತಾನೆ.
• ಬ್ರಹ್ಮ ಮುಹೂರ್ತದಲ್ಲಿ ಧ್ಯಾನ ಮಾಡುವುದ್ರಿಂದ ಜ್ಞಾನ ವೃದ್ಧಿಯಾಗುತ್ತದೆ.
• ಬ್ರಹ್ಮ ಮುಹೂರ್ತದಲ್ಲಿ ನೀವು ಏಳುವುದ್ರಿಂದ ದೈಹಿಕ ಶಕ್ತಿ ಮತ್ತು ತ್ರಾಣ ಹೆಚ್ಚಾಗುತ್ತದೆ.
• ಬ್ರಹ್ಮ ಮುಹೂರ್ತದಲ್ಲಿ ಎದ್ದು ವಾಕಿಂಗ್ ಮಾಡುವುದ್ರಿಂದ ಶುದ್ಧವಾದ ಗಾಳಿ ನಮ್ಮ ದೇಹ ಸೇರಿ, ನಮಗೆ ಹೊಸ ಶಕ್ತಿ ಸಿಗುತ್ತದೆ.
• ಬ್ರಹ್ಮ ಮುಹೂರ್ತದಲ್ಲಿ ಏಳುವುದ್ರಿಂದ ಉತ್ತಮ ಆರೋಗ್ಯ, ಬುದ್ಧಿವಂತಿಕೆ ದೊರೆಯುತ್ತದೆ.
• ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಮಾನಸಿಕ ಒತ್ತಡ, ಆತಂಕ, ನಿದ್ರಾಹೀನತೆ ಮತ್ತು ಖಿನ್ನತೆಯಂತಹ ವಿವಿಧ ಮಾನಸಿಕ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.
• ಈ ಸಮಯದಲ್ಲಿ ಮಾಡುವ ಪೂಜೆ ಮತ್ತು ಪ್ರಾರ್ಥನೆಗಳು ನೇರವಾಗಿ ದೇವರನ್ನು ತಲುಪುತ್ತವೆ ಎಂದು ನಂಬಲಾಗಿದೆ.