Ugadi 2023 Horoscope: 4 ರಾಶಿಗಳಿಗೆ ಅದೃಷ್ಟ ತರುವ ಹಿಂದೂ ಹೊಸ ವರ್ಷ

By Suvarna News  |  First Published Mar 14, 2023, 2:57 PM IST

ಹಿಂದೂ ಹೊಸ ವರ್ಷ ಎನಿಸಿದ ಯುಗಾದಿಯು ಈ ವರ್ಷ ಮಾರ್ಚ್ 22ರಂದು ಬರುತ್ತದೆ. ಈ ದಿನವು ಅತ್ಯಂತ ಅಪರೂಪದ ಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಈ ಯೋಗಗಳು ಕೆಲ ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ.


ಹಿಂದೂ ಹೊಸ ವರ್ಷ ಅಂದರೆ 2080ರ ವಿಕ್ರಮ್ ಸಂವತ್ಸರ ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಇದನ್ನು ಕರ್ನಾಟಕದಲ್ಲಿ ಯುಗಾದಿ ಎಂದು ಆಚರಿಸುತ್ತೇವೆ. ಹಿಂದೂ ಹೊಸ ವರ್ಷ 2023 ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಅನುಗುಣವಾದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದವು ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನವಾಗಿದೆ. ಯುಗಾದಿಯ ದಿನವೇ ಚೈತ್ರ ನವರಾತ್ರಿಯೂ ಪ್ರಾರಂಭವಾಗಲಿದೆ. ಉತ್ತರ ಭಾರತೀಯರು ಈ ಸಮಯದಲ್ಲಿ ದುರ್ಗೆಯನ್ನು ಆರಾಧಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಈ ಬಾರಿ ಯುಗಾದಿಯಂದು ಅತ್ಯಂತ ಮಂಗಳಕರ ಮತ್ತು ಅಪರೂಪದ ಕಾಕತಾಳೀಯ ನಡೆಯುತ್ತಿದೆ. ಅಶನಿಯು 30 ವರ್ಷಗಳ ನಂತರ ಈ ವರ್ಷ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಅದೇ ಸಮಯದಲ್ಲಿ ಗುರು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಇಂತಹ ಅಪರೂಪದ ಸನ್ನಿವೇಶದಲ್ಲಿ ಈ ಹೊಸ ವರ್ಷ ಹುಟ್ಟಿದೆ.

ಈ ಹಿಂದೂ ಹೊಸ ವರ್ಷದಲ್ಲಿ ಬುಧನು ರಾಜನಾಗುತ್ತಾನೆ ಮತ್ತು ಶುಕ್ರನು ಮಂತ್ರಿಯಾಗುತ್ತಾನೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.  ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ ಶುಭ ಹಾಗೂ ಕೆಲವರಿಗೆ ಅಶುಭವಾಗಲಿದೆ. ಹೊಸ ವರ್ಷವು ಯಾರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ತಿಳಿಯೋಣ.

Tap to resize

Latest Videos

ಈ ರಾಶಿಗಳಿಗೆ ಸಂಗಾತಿ ಬಗ್ಗೆ ವೃತಾ ಅನುಮಾನ; ಸುಂದರ ದಾಂಪತ್ಯ ಹಾಳು ಮಾಡೋ ಸ್ವಭಾವ

ಮೇಷ ರಾಶಿ (Aries)
ಮೇಷ ರಾಶಿಯವರು ಹೊಸ ವರ್ಷದಲ್ಲಿ ತಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಬಹಳ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಕಾರ್ಯ ರೂಪಕ್ಕೆ ಬರುತ್ತವೆ. ಅದೇ ಸಮಯದಲ್ಲಿ, ಈ ಅವಧಿಯಲ್ಲಿ ನಿಮ್ಮ ದೀರ್ಘ ಕಾಲದ ಕಾಯಿಲೆಗಳನ್ನು ನೀವು ತೊಡೆದು ಹಾಕುತ್ತೀರಿ. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಇರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಮಿಥುನ ರಾಶಿ (Gemini)
ಈ ಹಿಂದೂ ಹೊಸ ವರ್ಷವು ಮಿಥುನ ರಾಶಿಯವರಿಗೆ ತುಂಬಾ ಅದೃಷ್ಟ ಮತ್ತು ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ, ಈ ಸ್ಥಳೀಯರು ಹಳೆಯ ಹೂಡಿಕೆಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅವರ ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳನ್ನು ಆಯೋಜಿಸಬಹುದು. ಅದೃಷ್ಟ ಯಾವಾಗಲೂ ಈ ಸ್ಥಳೀಯರೊಂದಿಗೆ ಇರುತ್ತದೆ. ನೀವು ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸಿದರೆ, ಯಶಸ್ವಿಯಾಗುತ್ತೀರಿ.

Budhaditya Yog: 3 ರಾಶಿಗೆ ಧನಬಲ, ಬಯಸಿದ್ದೆಲ್ಲ ಎಟುಕುವ ಭಾಗ್ಯ

ಕರ್ಕಾಟಕ ರಾಶಿ (Cancer)
ಈ ಸ್ಥಳೀಯರಿಗೆ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಇಷ್ಟು ಮಾತ್ರವಲ್ಲದೆ ಉನ್ನತ ಸ್ಥಾನಗಳನ್ನು ಪಡೆಯಬಹುದು. ಸಂಬಂಧಗಳಲ್ಲಿ ಪ್ರಗತಿಯು ಗೋಚರಿಸುತ್ತದೆ. ಕುಟುಂಬ ಸದಸ್ಯರ ಸಲಹೆಯನ್ನು ಪಡೆದ ನಂತರವೇ ವ್ಯಾಪಾರ ವಿಷಯಗಳಲ್ಲಿ ಕೆಲಸ ಮಾಡಲು ಜಾಗರೂಕರಾಗಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಆರೋಗ್ಯ ಸುಧಾರಿಸಲಿದೆ.

ತುಲಾ ರಾಶಿ (Libra)
ಈ ಹೊಸ ವರ್ಷ ತುಲಾ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಈ ಸ್ಥಳೀಯರ ಮೇಲೆ ಶನಿಯ ಪ್ರಭಾವವು ನಿಲ್ಲುತ್ತದೆ. ಈ ಸ್ಥಳೀಯರ ವಿವಾಹದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!