Makar Sankranti: ಯಾವ ರಾಶಿಯವರು ಏನು ದಾನ ಮಾಡಿದರೆ ಒಳ್ಳೆಯದು?

By Suvarna NewsFirst Published Jan 13, 2022, 4:55 PM IST
Highlights

ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೆಲ್ಲ ತಿನ್ನುವುದಷ್ಟೇ ಅಲ್ಲ, ದಾನಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ದಿನ ಮಾಡುವ ದಾನ ಬಹಳ ಶುಭಪ್ರದವಾಗಿರಲಿದೆ. 

ಮಕರ ಸಂಕ್ರಾಂತಿ(Makar Sankranti)ಯು ಸುಗ್ಗಿಯ ಹಬ್ಬ. ರೈತ ಬೆಳೆದ ಬೆಳೆಗಳನ್ನು ಸಂಭ್ರಮಿಸುವ ಈ ಹಬ್ಬದ ದಿನವೂ ಎಷ್ಟೋ ಜನ ಬಡವರು ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿ ಉಳಿಯಬಹುದು. ಮತ್ತೆಷ್ಟೋ ಮನೆಗಳಲ್ಲಿ ದಿನಸಿ ಮುಗಿದಿರಬಹುದು. ಮತ್ತೆ ಕೆಲವರು ಹೊದಿಕೆಗಳು, ಬಟ್ಟೆಗಳ ಕೊರತೆಯನ್ನು ಅನುಭವಿಸುತ್ತಿರಬಹುದು. ನಾವೆಲ್ಲ ಸಂಭ್ರಮದಲ್ಲಿ ಹಬ್ಬ ಆಚರಿಸುವಾಗ ಬಡವರು ಹಸಿವಿನಲ್ಲಿ ಉಳಿಯುವುದೆಷ್ಟು ಸರಿ? ಕೇವಲ ಅವರ ಹಸಿವು, ಅಗತ್ಯ ನೀಗಿಸುವುದಷ್ಟೇ ಅಲ್ಲ, ಮಾನವೀಯತೆ ದೃಷ್ಟಿಯಿಂದಲೂ ದಾನ ಮಾಡಬೇಕು. ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು, ಗ್ರಹಗತಿಗಳ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಕೂಡಾ ಹಬ್ಬದ ದಿನ ಅಗತ್ಯ ಇರುವವರಿಗೆ ದಾನ ನೀಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. 

ವಿಶೇಷವಾಗಿ ಮಕರ ಸಂಕ್ರಾಂತಿಯ ದಿನ ಸೂರ್ಯದೇವನನ್ನು ಮೆಚ್ಚಿಸಲು ಭಕ್ತರು ಹಲವಾರು ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಅದರಲ್ಲಿ ದಾನವೂ ಒಂದು. ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಸೂರ್ಯನಿಗೆ ನಮಸ್ಕರಿಸಿ, ದೇವರ ಪೂಜೆ ಮುಗಿಸಿ, ದಾನ ಮಾಡುವ ವಸ್ತುಗಳನ್ನು ಪೂಜಾ ಸಮಯದಲ್ಲಿ ಎದುರಿಟ್ಟುಕೊಳ್ಳಬೇಕು. ನಮ್ಮಿಂದ ದಾನ ತೆಗೆದುಕೊಂಡವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ತೀರ್ಥ ಪ್ರೋಕ್ಷಣೆ ಮಾಡಬೇಕು.

ಹಾಗಾದರೆ ಯಾವ ರಾಶಿಯವರು ಇಂದು ಏನು ದಾನ ಮಾಡಿದರೆ ಒಳ್ಳೆಯದು ಎಂದು ನೋಡೋಣ. 

ಮೇಷ(Aries): ಈ ರಾಶಿಯವರು ಎಳ್ಳು, ಸಿಹಿ ತಿನಿಸುಗಳು, ಕಿಚಡಿ, ರೇಶ್ಮೆ ವಸ್ತ್ರ, ಸಿಹಿ ಅನ್ನ, ಬೇಳೆಗಳು, ವುಲನ್ ಬಟ್ಟೆಗಳನ್ನು ಅಗತ್ಯ ಇರುವವರಿಗೆ ದಾನ ಕೊಡಬೇಕು. 

ವೃಷಭ(Taurus): ಸಂಕ್ರಾಂತಿಯ ದಿನ ವೃಷಭ ರಾಶಿಯವರು ಎಳ್ಳೆಣ್ಣೆ, ಕಪ್ಪು ಬಟ್ಟೆಗಳು, ಕಪ್ಪು ಎಳ್ಳು, ಕಿಚಡಿ, ಕಪ್ಪು ಹೆಸರು ಬೇಳೆಯನ್ನು ಬಡವರಿಗೆ ದಾನ ಮಾಡಬೇಕು. 

ಮಿಥುನ(Gemini): ಕಿಚಡಿ, ಕರಿ ಎಳ್ಳು, ಛತ್ರಿ(umbrella), ಉದ್ದಿನ ಬೇಳೆ, ಉಂಡೆಗಳು, ಎಳ್ಳೆಣ್ಣೆಯನ್ನು ಮಿಥುನ ರಾಶಿಯವರು ಬಡ ಜನರಿಗೆ ದಾನ ಕೊಡಬೇಕು. 

ಕಟಕ(Cancer): ಕಿಚಡಿ, ಪುಟಾಣಿ, ಹಳದಿ ಬಣ್ಣದ ವಸ್ತ್ರಗಳು, ಅರಿಶಿನ ಕೊಂಬು, ಹಿತ್ತಾಳೆ ಮತ್ತು ಕಂಚಿನ ಪಾತ್ರೆಗಳು, ಹಣ್ಣುಗಳನ್ನು ಬಡಬಗ್ಗರಿಗೆ ದಾನ ನೀಡಬೇಕು. 

ಸಿಂಹ(Leo): ಸಂಕ್ರಾಂತಿಯ ದಿನ ಸಿಂಹ ರಾಶಿಯವರು ಕೆಂಪು ಬಟ್ಟೆಗಳು, ಕಿಚಡಿ, ಮಸೂರ, ರೇವಾರಿಯನ್ನು ಬೆಳಗ್ಗೆ ತಿಂಡಿ ತಿನ್ನುವ ಮೊದಲು ದಾನ ನೀಡಬೇಕು. 

Makar Sankranti 2022: ಸೂರ್ಯನ ಚಲನೆಯಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ..

ಕನ್ಯಾ(Virgo): ಈ ರಾಶಿಯವರು ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ದೇವರ ಪೂಜೆಯ ಬಳಿಕ ಹೆಸರು ಬೇಳೆ(moong daal), ಹಸಿರು ಬಟ್ಟೆಗಳು, ಕಿಚಡಿ, ಶೇಂಗಾಬೀಜವನ್ನು ಬಡವರಿಗೆ ದಾನ ನೀಡಬೇಕು. 

ತುಲಾ(Libra): ಮಕರ ಸಂಕ್ರಾಂತಿಯ ಶುಭ ದಿನದಂದು ಕಿಚಡಿ, ಹಣ್ಣುಗಳು(fruits), ಸಕ್ಕರೆ, ಸಿಹಿ ತಿನಿಸುಗಳು, ಬೆಚ್ಚನೆಯ ಬಟ್ಟೆಗಳನ್ನು ಬಡವರಿಗೆ ನೀಡಬೇಕು. 

ವೃಶ್ಚಿಕ(Scorpio): ಈ ರಾಶಿಯವರು ಕಿಚಡಿ, ಎಳ್ಳು-ಬೆಲ್ಲ, ಹೊದಿಕೆಗಳು ಮುಂತಾದವನ್ನು ಅಗತ್ಯವಿರುವವರಿಗೆ ಮಕರ ಸಂಕ್ರಾಂತಿಯ ದಿನ ನೀಡಬೇಕು. 

ಧನುಸ್ಸು(Sagittarius): ನೀವು ಹಬ್ಬದ ದಿನ ಶೇಂಗಾ, ಎಳ್ಳು, ರಕ್ತಚಂದನ(red sandalwood), ಕೆಂಪು ಬಟ್ಟೆಗಳನ್ನು ಬಡವರಿಗೆ, ಅಗತ್ಯವಿರುವವರಿಗೆ ನೀಡುವುದರಿಂದ ಒಳಿತಾಗಲಿದೆ. 

ಪುತ್ರ ಶನಿಯೊಂದಿಗೆ ಸೂರ್ಯ ಮುನಿಸು ಮರೆತ ದಿನವೇ ಸಂಕ್ರಾಂತಿ

ಮಕರ(Capricorn): ಸೂರ್ಯನು ಮಕರ ರಾಶಿಗೇ ಬರುತ್ತಿರುವುದರಿಂದ ಈ ರಾಶಿಯವರಿಗೆ ಈ ಸಂಕ್ರಾಂತಿ ಹಬ್ಬವು ವಿಶಿಷ್ಠ ಪ್ರಾಮುಖ್ಯತೆ ಹೊಂದಿದೆ. ನೀವು ಈ ದಿನ ಕಿಚಡಿ, ಹೊದಿಕೆಗಳು, ಬಟ್ಟೆಗಳನ್ನು ದಾನ ಮಾಡುವುದು ಉತ್ತಮ. 

ಕುಂಭ(Aquarius): ನೀವು ಸಂಕ್ರಾಂತಿಯ ದಿನ ಕಿಚಡಿ, ಎಣ್ಣೆ ಹಾಗೂ ಉಣ್ಣೆಯ ಬಟ್ಟೆಗಳನ್ನು ಬಡವರಿಗೆ ದಾನ ಮಾಡುವುದು ಶ್ರೇಯಸ್ಕರವಾಗಿದೆ. 

ಮೀನ(Pisces): ಈ ರಾಶಿಯವರು ಶೇಂಗಾ(groundnut), ಎಳ್ಳು, ಬೆಲ್ಲ, ಕಿಚಡಿಯನ್ನು ಮಕರ ಸಂಕ್ರಾಂತಿಯ ದಿನ ದಾನ ಮಾಡಬೇಕು.

click me!