Birthday Celebration: ಹುಟ್ಟಿದ ದಿನ ಹೀಗ್ ಮಾಡಿ ಫೀಲ್ ಆಗ್ಬೇಡಿ..!

By Suvarna NewsFirst Published Dec 31, 2021, 9:11 PM IST
Highlights

ಎಲ್ಲರಿಗೂ ಅವರವರ ಹುಟ್ಟಿದ ದಿನ ವಿಶೇಷವಾದದ್ದೇ ಆಗಿರುತ್ತದೆ. ಅದೊಂದು ರೀತಿಯ ಸಂಭ್ರಮ ಕೂಡ. ಆದರೆ, ಆ ದಿನ ಸಂತೋಷದಲ್ಲಿರುವಾಗ ನಾವು ಏನು ಮಾಡುತ್ತೇವೆ ಎಂಬುದನ್ನೇ ಮರೆತುಬಿಡುತ್ತೇವೆ. ಇಂತಹ ವೇಳೆ ಕೆಲವೊಂದು ತಪ್ಪುಗಳು ನಡೆದುಬಿಡುತ್ತವೆ. ಆದರೆ, ಜಾಗ್ರತೆಯಿಂದ ಹುಟ್ಟಿದ ದಿನವನ್ನು ಆಚರಿಸಿ. ಇಂಥ ತಪ್ಪುಗಳನ್ನು ಮಾಡದಿರಿ... 

ವರ್ಷಕ್ಕೊಮ್ಮೆ ಬರುವ ಹುಟ್ಟಿದ ದಿನ (Birth Day) ಅಂದರೆ ಅದೊಂಥರ ಹಬ್ಬದ (Festival) ಸಂಭ್ರಮ. ಅದಕ್ಕೇ ಅದನ್ನು ಹುಟ್ಟಿದಬ್ಬ ಅಂತಾನೂ ಕರೀತಾರೆ. ಇದು ಒಬ್ಬರ ಸಂಭ್ರಮವಾಗಿರದೇ, ಹಲವರ ಖುಷಿಗೆ ಕಾರಣವಾಗುತ್ತೆ. ಕೇಕ್ (Cake) ಕಟ್ (Cut) ಮಾಡುವುದು, ಸಿಹಿ (Sweet) ಹಂಚುವುದು, ದೇವಸ್ಥಾನಕ್ಕೆ (Temple) ಹೋಗಿ ಪೂಜೆ ಮಾಡುವುದು, ಹಿರಿಯರ ಆಶೀರ್ವಾದ (Blessing) ಪಡೆಯುವುದು.. ಹೀಗೆ ಅನೇಕ ಕಾರ್ಯಗಳು ಇಡೀ ದಿನ ನಡೆಯಲಿದೆ. ಇದರ ಜೊತೆಗೆ ಮೋಜು – ಮಸ್ತಿ ಸೇರಿದಂತೆ ಇನ್ನೊಂದಿಷ್ಟು ಚಟುವಟಿಕೆಯೂ ನಡೆಯಲಿದೆ. ಆದರೆ, ನಿಮ್ಮದೇ ದಿನ ಎಂದು ಅಂದು ಮನಸ್ಸಿಗೆ ಬಂದಂತೆ ವರ್ತಿಸಬೇಡಿ. ಕೆಲವು ವಿಷಯಗಳಲ್ಲಂತೂ ಜಾಗ್ರತೆಯಿಂದ (Careful) ಇದ್ದರೆ ಭವಿಷ್ಯಕ್ಕೆ ಒಳ್ಳೆಯದು. ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ನೀವು ಏನು ಮಾಡಬೇಕು..? ಮಾಡಬಾರದು ಎಂಬುದ ತಿಳಿಯೋಣ.. 

ಹುಟ್ಟಿದ ದಿನದಂದು ಶುಭ ಕೆಲಸಗಳನ್ನು ಕೈಗೊಂಡರೆ ಎಲ್ಲ ಕೆಲಸಗಳೂ ಶುಭವಾಗಿಯೇ ಇರುತ್ತದೆ. ಆದರೆ, ನಮಗೆ ಗೊತ್ತಿದ್ದೂ, ಗೊತ್ತಿಲ್ಲದೆಯೂ ಮಾಡುವಂತಹ ಕೆಲಸಗಳು ಸಮಸ್ಯೆಯನ್ನು (Problem) ತರಬಲ್ಲದು. ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ. ಸಾಧ್ಯವಾದಷ್ಟು ಅಂತಹ ಕೆಲಸಗಳನ್ನು ಮಾಡದೇ ಇರೋಣ.

ಮದ್ಯಪಾನ (Alcohol)  ಭವಿಷ್ಯದ ಒಳಿತಿಗೆ ಹಾನಿಕರ
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಜನ್ಮದಿನದಂದು ಮದ್ಯ ಸೇವಿಸಬಾರದು. ಕಾರಣ ಮದ್ಯ ಸೇವಿಸಿದರೆ ಶನಿದೇವರಿಗೆ ಕೋಪ (Angry) ಬರುತ್ತದೆ. ಶನಿದೇವನಿಗೆ (Saturn) ಬೇಸರವಾದರೆ ಸಾಡೇಸಾಥ್‌ಗೆ ಗುರಿಯಾದರೆ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ವರ್ಷವಿಡೀ ತೊಂದರೆಗೆ ಸಿಲುಕುವಂತಾಗುತ್ತದೆ.

ಬೇಡ ಮಾಂಸಾಹಾರ (Meat) 
ಹುಟ್ಟುಹಬ್ಬದ ದಿನ ಮಾಂಸಾಹಾರ ಸೇವಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕಾರಣ, ಇದು ತಾಮಸ ಬುದ್ಧಿಯನ್ನು ಹೆಚ್ಚು ಮಾಡುತ್ತದೆ. ಜೊತೆಗೆ ಮನಸ್ಸಿನಲ್ಲಿ ನಕಾರಾತ್ಮಕತೆ (Negativity) ಮೂಡುತ್ತದೆ. ಜೊತೆಗೆ ವರ್ಷವಿಡೀ ಅನಾರೋಗ್ಯ (Illness) ಕಾಡುವ ಸಾಧ್ಯತೆಗಳಿದ್ದು, ವಿವಾದಗಳು ಎದುರಾಗಲಿದೆ.
 
ಇದನ್ನು ಓದಿ: Name And Luck: ಈ ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಸಖತ್ ಟ್ಯಾಲೆಂಟೆಡ್!

ಯಾರೊಂದಿಗೂ ಬೇಡ ಜಗಳ (Fight)
ಬರ್ತ್ ಡೇ ದಿನ ಸಂತೋಷದಿಂದ (Happy) ಇರಿ. ಹೀಗಾಗಿ ನೀವು ತಾಳ್ಮೆ (Patience) ವಹಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಂಗಡಿಗರೊಂದಿಗೆ ಸೇರಿ ಮಸ್ತಿ ಮಾಡುವ ವೇಳೆ ಎಂಥ ತಕರಾರಾದರೂ ನೀವು ಮಾತ್ರ ತಂಟೆಗೆ ಹೋಗಬೇಡಿ. ಒಂದು ವೇಳೆ ನೀವು ತಾಳ್ಮೆಗೆಟ್ಟು ಮನಸ್ಥಾಪಗಳನ್ನು ಮಾಡಿಕೊಂಡರೆ ಆ ವರ್ಷವಿಡೀ ಯಾವುದಾದರೊಂದು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಜೊತೆಗಿದು ಮಾನಸಿಕ (Mental) ನೆಮ್ಮದಿ ಮೇಲೂ ಪರಿಣಾಮ ಬೀರುತ್ತದೆ. 

ಯಾರನ್ನೂ ಅವಮಾನಿಸಬೇಡಿ (Don't insult)
ಹುಟ್ಟಿದ ದಿನ ಮನೆಯ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ದಾನಗಳನ್ನು ಹೆಚ್ಚೆಚ್ಚು ಮಾಡಬೇಕು. ಈ ದಿನ ನಿಮ್ಮ ಮನೆ ಬಳಿ ಯಾರಾದರೂ ಸಹಾಯ (Help) ಕೇಳಿ ಬಂದರೆ ಅಂಥವರನ್ನು ಅವಮಾನಿಸದೇ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಿ. ಅಂಥವರ ಹಾರೈಕೆಗಳು (Wish) ನಿಮಗೆ ಒಳಿತನ್ನುಂಟು ಮಾಡುತ್ತದೆ. ಅವರಿಗೆ ಅವಮಾನ ಮಾಡಿದರೆ ಅವರಿಗಾಗುವ ನೋವು ನಿಮಗೆ ಸಮಸ್ಯೆಯನ್ನು ತರಬಲ್ಲದು. 

ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಈ ಕೆಲಸವನ್ನು ಮಾಡಿ : ಹುಟ್ಟುಹಬ್ಬದ ದಿನ ಏನು ಮಾಡಬೇಕೆಂಬ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರ ಹೇಳಿದೆ. 

- ಆಲದ ಗಿಡವನ್ನು (Banyan plant) ನೆಟ್ಟರೆ ಒಳ್ಳೆಯದು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದವು ಈ ಮರದ ನೆರಳಿನಂತೆ ಇರುತ್ತದೆ. ಇದನ್ನು ಸಾರ್ವಜನಿಕ ಪ್ರದೇಶದಲ್ಲಿ (Public Place) ನೆಟ್ಟರೆ (Plant) ಒಳ್ಳೆಯದು. 
- ಅಂದು ಬೆಳಗ್ಗೆ ಹೊಸ ಬಟ್ಟೆ (New Dress) ಧರಿಸಿ ದೇವಸ್ಥಾನಕ್ಕೆ (Temple) ಹೋಗಿ ಪೂಜೆ ಸಲ್ಲಿಸಿ.
- ಹುಟ್ಟಿದ ದಿನದಂದು ಉಗುರು (Nail), ಕೂದಲು (Hair) ಕತ್ತರಿಸಬೇಡಿ. ಹೀಗೆ ಮಾಡಿದರೆ ಜ್ಯೋತಿಷ್ಯದ ಪ್ರಕಾರ ಆಯಸ್ಸು ಕಡಿಮೆಯಾಗುತ್ತದೆ.

click me!